ಇಳೆಯ ಸವಿ ಬೆಳಗು

ಇಳೆಯ ಸವಿ ಬೆಳಗು ನೇಸರನ ಆಗಮನವು ನೀಡಿದೆನಿಲ್ಲದ ಉತ್ಸಾಹ ಜಗಕೆ..!ಹೊಂಬೆಳಗಿದು ಸ್ಫೂರ್ತಿ ತಂದಿದೆ..ಕವಿಮನದಿ ಮಿಡಿವ ಭಾವಕೆ!! ಭಾಸ್ಕರನಿರದ ಈ ಬುವಿಗೆಸಹನೀಯವಾಗದು ಬದುಕು..!ನಿಶೆಯಮಲಲಿ ಮಲಗಿಹ ಜನಕೆ..ನೀಡಿಹನು ಹೊಂಗಿರಣದಿ ಬೆಳಕು!! ಹುಲ್ಲಹಾಸಿನಲಿಹ ಇಬ್ಬನಿಯುಹೊಳೆದಿದೆ ತಾ ಮುತ್ತಿನಂತೆ.. !ವಸುಧೆಗೆ ರವಿಯ ಬರುವಿಕೆಯು..ಆಸರೆಗೆ ಬಳ್ಳಿ ಮರವ ಸುತ್ತಿದಂತೆ!! ತೆನೆಗಳು ಹೊಂಬಣ್ಣದಿ ವಿಜೃಂಭಿಸಿಹಸಿರದು ನಳನಳಿಸಿ ಚಿಗುರಿದೆ..!ದಿನಕರನ ಕಿರಣದ ಚುಂಬನಕೆ..ಧರೆಯ ಮೊಗವು ನಾಚಿ ಅರಳಿದೆ!! ಅಹಸ್ಕರನ ಹೊನ್ನ ದೀಪದಿಕವಿದ ಅಂಧಕಾರವು ಕಳೆದಿದೆ..!ಜಗದ ಭಾರ ನಿತ್ಯ ಹೊರುವ..ಮಹಿಯ ಬಾಳು ಚೆಂದದಿ ಬೆಳಗಿದೆ!! ಸುಮನಾ ರಮಾನಂದRead More

ಸುರಹೊನ್ನೆ

ಸುರಹೊನ್ನೆ ಕಂಡೆ ನಾನೊಂದುಅಪರೂಪ ಕುಸುಮವನು,ಬಳಿಸಾರಿ ಕೇಳಿದೆನದನುನಿನ್ನ ಹೆಸರೇನೆಂದು ; ಬರಿದೆ ತಲೆಯಾಡಿಸುತ,ನಗುವೇ ಅದರಾ ಮೊಗದಹೆಗ್ಗುರುತು ತಾನಾಗಿರಲುಹೆಸರಲಿನ್ನೇನಿಹುದು : ಹೃದಯದಾ ಬಳಿ ತಂದುಕೇಳಿದೆನು ಅದ ನಾನುಬಂದೆ ನೀನೆಲ್ಲಿಂದ,ನಿನ್ನ ನೆಲೆಯಾವುದು ? ಹೃದಯಕ್ಕೊರಗಿದ ಹೂವಿನಾಮುಗುಳುನಗೆಯೆನಗರುಹಿತ್ತು,ನನ್ನನರಿತವರ ಮನವೆನ್ನಚಂದದರಮನೆಯು : ಹೂಮೊಗವನು ಎತ್ತಿಬಗ್ಗಿ ಪಿಸುದನಿಯಲ್ಲಿ,ನಿನ್ನದೆಂತಹ ಭಾಷೆಎಂದು ನಾ ಕೇಳುತಿರೆ: ಸುಗಂಧ ಸೌರಭವೇನನ್ನ ಮಾತಾಗಿಹುದೆಂದ,ಅದರ ಮೌನದಿಂದಲೇನನ್ನ ಉಸಿರಿಗರಿವಾಯ್ತು! ನನ್ನ ನೀ ಮರೆಯುವೆಯಾ ?ಎಂದು ಕೇಳಲು ನಾನುಬರಿದೇ ನಗುತಲಿ ಸುಮವುತಲೆ ಬಾಗಿ ನಿಂದಿರಲು; ಅರಿವಾಯ್ತು ನನಗಾಗಮುಂದೊಮ್ಮೆ ಇಲ್ಲಿಂದ ನಾಹೊರಟು ಬಂದಾಗ, ಸುಮದಕನಸಿನಲಿ ನಾನಿರುವೆನೆಂದು! ಶ್ರೀವಲ್ಲಿ ಮಂಜುನಾಥ(ರವೀಂದ್ರರ […]Read More

ಚಿತ್ತದೊಳಗೊಂದು ಚಿತ್ರರಂಗ

ಚಿತ್ತದೊಳಗೊಂದು ಚಿತ್ರರಂಗ ಶ್ರೀಮತಿ ಆಶಾ ರಘು ರವರು ತಮ್ಮ ಕೃತಿಗಳಿಗೆ ಆಯ್ದುಕೊಳ್ಳುವ ವಿಷಯಗಳೇ ಬಹು ಭಿನ್ನತೆಗೊಳೊಂದಿಗೆ ಕೂಡಿರುತ್ತದೆ. ವೇದೋತ್ತರ ಕಾಲದ ವಿಷಯಗಳು ಕಾಲ್ಪನಿಕವಾಗಿ ಆವರ್ತ ದಲ್ಲಿ ಮೂಡಿಬಂದರೆ ಪುನರ್ಜನ್ಮದ ಪರಿಕಲ್ಪನೆ “ಗತ” ಕಾದಂಬರಿಯಲ್ಲಿ ಚಿತ್ರಿತವಾಗಿದೆ, 12 ನೇ ಶತಮಾನದಲ್ಲಿನ ಕಥೆಯೊಂದಿಗೆ ಅಲ್ಲಮನ ವಚನದಲ್ಲಿ ಬರುವ ಹೊನ್ನು, ಹೆಣ್ಣು, ಮಣ್ಣು “ಮಾಯೆ” ಯಾಗಿ ರಚಿತವಾಗಿದೆ. ಹಾಗೆಯೇ ತಮ್ಮ ಹೊಸ ಕಾದಂಬರಿ “ಚಿತ್ತರಂಗ” ದಲ್ಲಿ ಚಲನಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಹಾಗು ಅವನ ಬದುಕಿನಲ್ಲಿ ಬರುವ ಮೂರು ಹೆಣ್ಣುಗಳ ಮೂಲಕ ನೈಜ […]Read More

ನಂಬಿಕೆಯ ಮುನ್ನುಡಿ

ನಂಬಿಕೆಯ ಮುನ್ನುಡಿ ಕುಳಿರ್ಗಾಳಿಗೆ ಬಳುಕುವ ತರುಲತೆಗಳುಅಪ್ಪಿಹವು ಮರಗಳನು ನಂಬಿಕೆಯಲಿ!ಎಂದಿಗೂ ತಮ್ಮನು ನಡುಹಾದಿಯಲಿ..ಕೈಬಿಡಲಾರವವು ಎಂಬ ವಿಶ್ವಾಸದಲಿ!! ಅಳವ ಕಂದನೆಂದಿಗೂ ನಂಬಿಹುದುತನ್ನಮ್ಮನ ಬೆಚ್ಚನೆಯ ಅಪ್ಪುಗೆ!ತನ್ನನೆಂದೂ ಶಿಕ್ಷಿಸಲವಳು ಮಾಡದ ತಪ್ಪಿಗೆ…ನಗಿಸುವಳವಳು ತಾನೆಂದಾದರೂ..ಕುಳಿತಾಗ ಬೇಸರದಲಿ ಸಪ್ಪಗೆ!! ವಸುಧೆಯೂ ನಂಬಿಹಳು ರವಿ-ಶಶಿಯನಲ್ಮೆಯಲಿ ಕಾಯ್ವ ಗೆಳೆಯರಿವರೆಂದು!ಚಂದ್ರಿಕೆಗಿರುವಂತೆ ಚಂದಿರನಲಿ ನಂಬಿಕೆ…ತಾರೆಗಳ ಸಮ್ಮಿಲನಕೆ ನಭವೇ ಕಾಣಿಕೆ!! ಜೀವನದಲಿರಲಿ ನಂಬಿಕೆಯ ಮುನ್ನುಡಿವಾಸ್ತವ ಬದುಕಲಿ ಅದುವೇ ಕೈಗನ್ನಡಿ!ಬಾಳಲಿರುವ ಸವಿನಂಬುಗೆಯ ಚೈತನ್ಯಕೆ..ಒಲವಿನ ಸಾಕ್ಷಾತ್ಕಾರಕೆ..ಬೇರೆ ಸಾಕ್ಷಿಯೇತಕೆ !! ಸುಮನಾ ರಮಾನಂದRead More

ಜೀವಂತ ಬಳ್ಳಿಗಳ ಸೇತುವೆಗಳು – ಮೇಘಾಲಯ

ಜೀವಂತ ಬಳ್ಳಿಗಳ ಸೇತುವೆಗಳು – ಮೇಘಾಲಯ ಸೇತುವೆಗಳನ್ನು ಸಾಮಾನ್ಯವಾಗಿ ಕಾಂಕ್ರೀಟ್ ಅಥವಾ ಕಬ್ಬಿಣದಿಂದ ನಿರ್ಮಿಸುತ್ತಾರೆ. ಆದರೆ ಜೀವಂತ ಬಳ್ಳಿಗಳ ಸೇತುವೆಗಳು ಈಶಾನ್ಯ ಭಾರತದ ರಾಜ್ಯವಾದ ಮೇಘಾಲಯದ ದಕ್ಷಿಣ ಭಾಗದಲ್ಲಿ ಕಾಣಸಿಗುತ್ತವೆ. ಶಿಲ್ಲಾಂಗ್ ಪ್ರಸ್ಥಭೂಮಿಯ ದಕ್ಷಿಣ ಭಾಗದಲ್ಲಿರುವ ಪರ್ವತ ಭೂಪ್ರದೇಶದ ಖಾಸಿ ಮತ್ತು ಜೈಂಟಿಯಾ ಪಂಗಡದ ಜನರು ‘ಫಿಕಸ್‌ಎಲಾಸ್ಟಿಕ್’ ಪ್ರಬೇಧಕ್ಕೆ ಸೇರಿದ ರಬ್ಬರ್ ಅಂಜೂರದ ಮರಗಳ ತೂಗಾಡುವ ಬೇರುಗಳನ್ನು ಸೇರಿಸಿ ಗಟ್ಟಿಯಾಗಿ ಬೆಸೆದು ತಯಾರಿಸುತ್ತಾರೆ. ಈಶಾನ್ಯ ಭಾರತದ ಮತ್ತೊಂದು ರಾಜ್ಯ ನಾಗಾಲ್ಯಾಂಡ್‌ನಲ್ಲೂ ಇಂತಹ ಜೀವಂತ ಬಳ್ಳಿಗಳ ಸೇತುವೆಗಳು ಕಾಣಲು […]Read More

ಹಾಡು ಹಳೆಯದಾದರೇನು- ಕಣಗಾಲ್ ಪ್ರಭಾಕರ ಶಾಸ್ತ್ರಿ

ಹಾಡು ಹಳೆಯದಾದರೇನು- ಕಣಗಾಲ್ ಪ್ರಭಾಕರ ಶಾಸ್ತ್ರಿ ಭಾರತೀಯ ಚಿತ್ರರಂಗದಲ್ಲಿ ಕನ್ನಡಕ್ಕೆ ತನ್ನದೇ ಆದ ವಿಶೇಷವಾದ ಸ್ಥಾನವಿದೆ.ಅದರಲ್ಲೂ ಕನ್ನಡದ ಚಿತ್ರಗೀತೆಗಳು ಬಹುತೇಕರ ಜೀವನದಲ್ಲಿ ಪ್ರಭಾವವನ್ನು ಬೀರಿ ಅವರ ಬದುಕಿನ ತಿರುವುಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದನ್ನೂ ಕೇಳಿರುತ್ತೇವೆ. ಮೂರು ದಶಕದ ಹಿಂದಿನ ಮಾತು,ನಮ್ಮ ಹಳ್ಳಿಯ ಚಿತ್ರಮಂದಿರದಲ್ಲಿ ಚಲನಚಿತ್ರ ಪ್ರದರ್ಶನ ಪ್ರಾರಂಭ ಆಗುವುದಕ್ಕೆ ಮುಂಚೆ ಬಿತ್ತರಿಸಲಾಗುತ್ತಿದ್ದ ಹಾಡು… “ಕೊಡಗಿನ ಕಾವೇರಿ ನೀ ಬೆಡಗಿನ ವೈಯಾರಿಕನ್ನಡ ಕುಲನಾರಿ ಕಾವೇರಿ ನೀ ಒಲವಿನ ಸಿಂಗಾರಿ ||ಪ|| ಋಷಿಜನ ಜೀವನ ತಪೋನಿಧಿಕಾವೇರಿ, ನೀನೇ ಜೇನಿನ ಜೀವನದಿರೈತರ […]Read More

ಸುಮಧುರ ಮುಕ್ತಕ – ಮಧುರಾ ಮೂರ್ತಿ

ಸುಮಧುರ ಮುಕ್ತಕ – ಮಧುರಾ ಮೂರ್ತಿ ಪುಸ್ತಕ: ಸುಮಧುರ ಮುಕ್ತಕಲೇಖಕರು:ಮಧುರಾ ಮೂರ್ತಿಪ್ರಕಾಶಕರು:ಸಮರ್ಥ ಪ್ರಕಾಶನಸಂಪರ್ಕ:7892090956 ಒಂದು ವಸ್ತು ಅಥವಾ ಉದ್ದೇಶವನ್ನು ಗುರಿಯಾಗಿ ಇಟ್ಟುಕೊಂಡು ಹೇಳಬೇಕಾದ ವಿಷಯಗಳನ್ನ ಕೇವಲ ನಾಲ್ಕು ಸಾಲುಗಳಲ್ಲಿ ಹಿಡಿದಿಟ್ಟುಕೊಂಡು ಹೇಳುವುದು ಅಷ್ಟು ಸುಲಭದ ಮಾತಲ್ಲ . ಮುಕ್ತಕ ಪ್ರಕಾರದಲ್ಲಿ ಡಿವಿಜಿ ಅವರದು ಬಹುದೊಡ್ಡ ಪ್ರಯೋಗ ಮತ್ತು ಅವರ ಮಂಕುತಿಮ್ಮನ ಕಗ್ಗ,ಮರುಳ ಮುನಿಯನ ಕಗ್ಗಗಳು ಅಪಾರ ಜನಪ್ರೀತಿ ಮತ್ತು ಜನಪ್ರಿಯತೆಯನ್ನು ಪಡೆದಿವೆ. ಡಿವಿಜಿ ಅವರನ್ನು ಅನುಸರಿಸಿದ ಹಲವರು ಮುಕ್ತಕ ರಚನೆಯಲ್ಲಿ ಯಶಸ್ಸನ್ನೂ ಸಾಧಿಸಿದ್ದಾರೆ . ಈ ಸಾಲಿಗೆ […]Read More

ದಾನಶೂರ ಕರ್ಣ

ದಾನಶೂರ ಕರ್ಣ ಕೌoತೆಯ ದೇಶದಲ್ಲಿ ಜನಿಸಿದಕುಂತಿ ದೇವಿಯು ದೂರ್ವಾಸ ರಿಂದ ;ಪಡೆದ ಪುತ್ರ ಸಂತಾನ ವರದಿಂದಹುಟ್ಟಿದ ರವಿಯ ವರ ಬಲದಿಂದ || ಕಿವಿಯಲ್ಲಿ ಕರ್ಣಕುಂಡಲಗಳಿದ್ದರಿಂದಹೆಸರಾದ ಕರ್ಣಎಂಬ ನಾಮದಿಂದ |ಕುಂತಿ ಅವಿವಾಹಿತೆ ಯಾಗಿದ್ದರಿಂದತೇಲಿಬಿಟ್ಟಳು ಗಂಗೆಗೆ ಮರ್ಯಾದೆಯಿಂದ || ಸಿಕ್ಕಿದ ಮಗುವು ಸೂತ ದಂಪತಿಗೆವಸು ಸೇನ ಎಂದು ಕರೆದರು ಆ ಮಗುವಿಗೆ |ಬೆಳೆದು ನಿಂತ ಬಾಲ ಕಲಿಯಲು ವಿದ್ಯೆಗೆತ್ಯಜಿಸಿದರು ದ್ರೋಣರು ಸೂತ ಬಾಲಗೆ || ಪರಶುರಾಮರಲಿಬಂದು ವಿದ್ಯೆ ಕಲಿತಕೌರವರಲ್ಲಿ ದುರ್ಯೋದನನು ದೊರೆತ |ಪಾoಡವರಲ್ಲಿ ದ್ವೇಷ ಸಾಧಿಸಿದ ನೀತದುಷ್ಟ ಕಾರ್ಯಗಳಿಗೆ ಪಣವಾಗಿ […]Read More

ಭಾನು – ಬಾನು

ಭಾನು – ಬಾನು ನಿಗಿ ನಿಗಿ ಹೊಳೆಯುತಿಹನು ಭಾನುಮೂಡಣದಿ ಬೇಗ ಉದಯಿಸಿಹನುದಿನವಿಡೀ ಚೆಂದದಿ ಹೊಳೆಯುತಿಹನುಇಳಿಸಂಜೆ ಪಡುವಣದಿ ಮುಳುಗುತಿಹನು ಭಾನಿನ ತಾಪಕೆ ನಡುಗುತಿಹರು ದಿಕ್ಪಾಲಕರುಅವಿತು ಕುಳಿತಿಹನು ವಾಯುದೇವನುಬಲು ದೂರ ಓಡಿಹನು ವರುಣದೇವನುಹಿರಿಯಕ್ಕನ ಸೆರಗಂಚಿನಲಿ ಅಡಗಿಹ ಚಂದಿರನು ಗ್ರಹಣಕೆ ಬೆಚ್ಚಿನಿಂತಂತೆ ನಿಂತ ಗಿಡಮರಗಳುಬೀಸುವುದನೇ ಮರೆತ ರೆಂಬೆ ಕೊಂಬೆಗಳುಕಣ್ತಪ್ಪಿ ಓಡುತಿಹ ಮಳೆ ಮೋಡಗಳುಮಳೆರಾಯನ ನಿರೀಕ್ಷೆಯಲಿ ಕೆರೆತೊರೆಗಳು ಪಡುವಣದಿ ತಣ್ಣನೇ ಮುಳುಗುವ ಈ ಭಾನುಮೆಲ್ಲನೇ ಹೊರಬರುತಿಹ ಚಂದಿರನುತಾರೆ ಚುಕ್ಕಿಗಳ ಸಾಗರದಿ ಕಾಣುವ ಬಾನುಇದ ಕಾಣಲು ಹಂಬಲಿಸುತಿಹೆ ನಾನು ಸಿ.ಎನ್‌. ಮಹೇಶ್Read More

ಹಾವು ಕಡಿತ – ಮಿಥ್ಯ – ಸತ್ಯ – ಚಿಕಿತ್ಸೆಗಳು

ಹಾವು ಕಡಿತ – ಮಿಥ್ಯ – ಸತ್ಯ – ಚಿಕಿತ್ಸೆಗಳು ಇತ್ತೀಚೆಗೆ ಪುತ್ತೂರಿನಲ್ಲಿ ವಿಷಪೂರಿತ ಹಾವಿಂದ ಕಚ್ಚಲ್ಪಟ್ಟ ತಾಯಿಯ ದೇಹಕ್ಕೆ ವಿಷವೇರುವ ಮುನ್ನ ತನ್ನ ಬಾಯಿಯಿಂದ ಆ ವಿಷವನ್ನು ತೆಗೆದು ತಾಯಿಯ ಜೀವ ಉಳಿಸಿದ ಮಗಳಿಗೆ ಅನೇಕ ಕಡೆಯಿಂದ ಪ್ರಶಂಸೆ ವ್ಯಕ್ತವಾಗಿ ಸನ್ಮಾನ ಇತ್ಯಾದಿಗಳು ನಡೆದಿವೆ. ಆದರೆ ಈ ರೀತಿಯ ಚಿಕಿತ್ಸೆಗಳು ವೈಜ್ಞಾನಿಕವಾಗಿ ಎಷ್ಟರ ಮಟ್ಟಿಗೆ ಪರಿಣಾಮಕಾರಿ? ಎನ್ನುವುದನ್ನು ನೋಡಲು ಹೋದಾಗ ಅನೇಕ ವಿಷಯಗಳು ತಿಳಿಯುತ್ತವೆ. ಹಾವು ಕಡಿದ ಜಾಗದಲ್ಲಿ ಬಾಯಿಂದ ವಿಷವನ್ನು ಹೀರುವುದು ಕೇವಲ ಸಿನಿಮಾಗಳಲ್ಲಿ […]Read More