ಹೆಸರಲ್ಲೇನಿದೆ ? ಒಂದು ಊರಿನಲ್ಲಿ ಶಾಂತೇಶ್ವರ ಎನ್ನುವ ಗುರುಗಳೊಬ್ಬರಿದ್ದು, ಅವರಿಗೆ ದುಷ್ಟ ಎಂಬ ಶಿಷ್ಯನೊಬ್ಬ ಇದ್ದ. ಆತನಿಗೆ ತನ್ನ ಹೆತ್ತವರು ತನಗಿಟ್ಟಿದ್ದ ಹೆಸರಿನ ಬಗ್ಗೆ ತೀವ್ರ ನೋವಿತ್ತು. ತಾನು ಜೀವನದಲ್ಲಿ ಯಾವುದೇ ಕೆಟ್ಟದಾದ ಕೆಲಸವನ್ನು ಮಾಡದೇ ಇದ್ದರೂ ಲೋಕದ ದೃಷ್ಟಿಯಲ್ಲಿ ನಾನು ದುಷ್ಟನಾದೆನಲ್ಲ ಎಂಬ ನೋವು ಆತನನ್ನು ಕಾಡುತಿತ್ತು. ಸಂಕಟ ತಡೆಯಲಾರದೆ ಒಂದು ದಿನ ಆತ ಶಾಂತೇಶ್ವರ ಗುರುಗಳ ಬಳಿಗೆ ತೆರಳಿ ತನ್ನ ಮನದಾಳದ ನೋವನ್ನು ಹೇಳಿಕೊಂಡ. ಶಿಷ್ಯನ ಸಮಸ್ಯೆ ಅರಿತ ಶಾಂತೇಶ್ವರ ಗುರುಗಳು ಮುಗುಳ್ನಕ್ಕು, ಹೊರಗಿನ […]Read More
ನಮ್ಮಮ್ಮನ ಮನಸು ನವಮಾಸದಲಿ ಅಮ್ಮನ ಗರ್ಭದಿಇದ್ದೆವು ನಾವು ಹೇಗಯ್ಯ,,?ಒದೆಯುತಲಿದ್ದರು,ಉರುಳುತಲಿದ್ದರುಅವಳ ತಾಯ್ತನ ನೊಡಯ್ಯಅಮ್ಮನ ಮನಸೆ ಹೀಗೆಋಣತೀರಿಸುವುದು ನಾ ಹೇಗೆ.?!!೧!! ಭೂಮಿಗೆ ನಾವು ಕಾಲಿಡುವಾಗತಾಯಿಗೆ ನರಕದ ದರ್ಶನವುನಮ್ಮನು ಕಂಡ ಕೂಡಲೆ ಅವಳಿಗೆಎಲ್ಲವ ಮರೆಯುವ ತನುಮನವುಅಮ್ಮನ ಮನಸೆ ಹೀಗೆಋಣತೀರಿಸುವುದು ನಾ ಹೇಗೆ.?!!೨!! ಎಲ್ಲಿಗೆ ಬಂದೊ, ಏತಕೆ ಬಂದೊಯಾವುದು ನಮಗೆ ಅರಿವಿಲ್ಲಹಸಿವಾದಾಗ ಹರುಚಿತಲಿದ್ದೊಮೊಲೆಹಾಲಿಟ್ಟರೆ ಸದ್ದಿಲ್ಲಅಮ್ಮನ ಮನಸೆ ಹೀಗೆಋಣತೀರಿಸುವುದು ನಾ ಹೇಗೆ.?!!೩!! ಮೈಯನು ತೊಳೆದು,ಕಸವನು ಬಳಿದುಮಾಡುವಳಲ್ಲ ಸಿಂಗಾರ,,ಹೇಗೆ ಇದ್ದರು, ಹೆಗ್ಗಣವಾದರುನಾವೆ, ಅವಳಿಗೆ ಬಂಗಾರಅಮ್ಮನ ಮನಸೆ ಹೀಗೆ,,,ಋಣತೀರಿಸುವುದು ನಾ ಹೇಗೆ.?!!೪!! ಅಮ್ಮನ ಮಡಿಲಲಿ ಮಲಗುವುದೆಂದರೆಆಹಾ ಏನೊ […]Read More
ಮಕ್ಕಳ ಪ್ರವಾಸ ಹೊರಟಿಹರು ಮಕ್ಕಳು ಉತ್ತಮ ಪ್ರವಾಸಕೆಆಯ್ಕೆ ಮಾಡಿಹರು ಮೈಸೂರು ನಗರಕೆ |ಇದು ಆಡುoಬೊಲದ ಉತ್ತಮ ತಿಳುವಳಿಕೆಇದು ವಿಹಾರವೂ ಅಹುದು ಕ್ಷೇತ್ರ ದರ್ಶನಕೆ || ||೧|| ಮೊದಲ ದರ್ಶನ ಶ್ರೀರಂಗಪಟ್ಟಣಕೇಅಲ್ಲಿ ಮನಸೋತರು ಆ ಸ್ಥಳದ ಪರಿಸರಕೆ |ನಂತರದ ದರ್ಶನ ಚಾಮುಂಡಿ ಬೆಟ್ಟಕೇಅಲ್ಲಿ ಬೆರಗಾದರೂ ಮಹಿಷಾಸುರನ ರೂಪಕೆ || ||೨|| ಮುಂದೆ ನೆಡೆದಿಹರು ಪ್ರಾಣಿಸಂಗ್ರಹಾಲಯಕೆಅಲ್ಲಿ ವಿಧವಿಧದ ಕಾಡುಪ್ರಾಣಿಗಳ ನೋಡಲಿಕೆ |ಅಲ್ಲದೆ ನಾನಾ ವಿಧದ ಪಕ್ಷಿಗಳ ವೀಕ್ಷಣೆಗೆಜಲಚರ, ಉರಗಗಳ ವೃಕ್ಷಗಳ ಚೆಂದಕೆ || ||೩|| ಎಲ್ಲಾ ಆಡುಂಬೊಲದ ಸಂತಸಊಟ ತಿಂಡಿ […]Read More
ಇಳೆಯ ಸವಿ ಬೆಳಗು ನೇಸರನ ಆಗಮನವು ನೀಡಿದೆನಿಲ್ಲದ ಉತ್ಸಾಹ ಜಗಕೆ..!ಹೊಂಬೆಳಗಿದು ಸ್ಫೂರ್ತಿ ತಂದಿದೆ..ಕವಿಮನದಿ ಮಿಡಿವ ಭಾವಕೆ!! ಭಾಸ್ಕರನಿರದ ಈ ಬುವಿಗೆಸಹನೀಯವಾಗದು ಬದುಕು..!ನಿಶೆಯಮಲಲಿ ಮಲಗಿಹ ಜನಕೆ..ನೀಡಿಹನು ಹೊಂಗಿರಣದಿ ಬೆಳಕು!! ಹುಲ್ಲಹಾಸಿನಲಿಹ ಇಬ್ಬನಿಯುಹೊಳೆದಿದೆ ತಾ ಮುತ್ತಿನಂತೆ.. !ವಸುಧೆಗೆ ರವಿಯ ಬರುವಿಕೆಯು..ಆಸರೆಗೆ ಬಳ್ಳಿ ಮರವ ಸುತ್ತಿದಂತೆ!! ತೆನೆಗಳು ಹೊಂಬಣ್ಣದಿ ವಿಜೃಂಭಿಸಿಹಸಿರದು ನಳನಳಿಸಿ ಚಿಗುರಿದೆ..!ದಿನಕರನ ಕಿರಣದ ಚುಂಬನಕೆ..ಧರೆಯ ಮೊಗವು ನಾಚಿ ಅರಳಿದೆ!! ಅಹಸ್ಕರನ ಹೊನ್ನ ದೀಪದಿಕವಿದ ಅಂಧಕಾರವು ಕಳೆದಿದೆ..!ಜಗದ ಭಾರ ನಿತ್ಯ ಹೊರುವ..ಮಹಿಯ ಬಾಳು ಚೆಂದದಿ ಬೆಳಗಿದೆ!! ಸುಮನಾ ರಮಾನಂದRead More
ಸುರಹೊನ್ನೆ ಕಂಡೆ ನಾನೊಂದುಅಪರೂಪ ಕುಸುಮವನು,ಬಳಿಸಾರಿ ಕೇಳಿದೆನದನುನಿನ್ನ ಹೆಸರೇನೆಂದು ; ಬರಿದೆ ತಲೆಯಾಡಿಸುತ,ನಗುವೇ ಅದರಾ ಮೊಗದಹೆಗ್ಗುರುತು ತಾನಾಗಿರಲುಹೆಸರಲಿನ್ನೇನಿಹುದು : ಹೃದಯದಾ ಬಳಿ ತಂದುಕೇಳಿದೆನು ಅದ ನಾನುಬಂದೆ ನೀನೆಲ್ಲಿಂದ,ನಿನ್ನ ನೆಲೆಯಾವುದು ? ಹೃದಯಕ್ಕೊರಗಿದ ಹೂವಿನಾಮುಗುಳುನಗೆಯೆನಗರುಹಿತ್ತು,ನನ್ನನರಿತವರ ಮನವೆನ್ನಚಂದದರಮನೆಯು : ಹೂಮೊಗವನು ಎತ್ತಿಬಗ್ಗಿ ಪಿಸುದನಿಯಲ್ಲಿ,ನಿನ್ನದೆಂತಹ ಭಾಷೆಎಂದು ನಾ ಕೇಳುತಿರೆ: ಸುಗಂಧ ಸೌರಭವೇನನ್ನ ಮಾತಾಗಿಹುದೆಂದ,ಅದರ ಮೌನದಿಂದಲೇನನ್ನ ಉಸಿರಿಗರಿವಾಯ್ತು! ನನ್ನ ನೀ ಮರೆಯುವೆಯಾ ?ಎಂದು ಕೇಳಲು ನಾನುಬರಿದೇ ನಗುತಲಿ ಸುಮವುತಲೆ ಬಾಗಿ ನಿಂದಿರಲು; ಅರಿವಾಯ್ತು ನನಗಾಗಮುಂದೊಮ್ಮೆ ಇಲ್ಲಿಂದ ನಾಹೊರಟು ಬಂದಾಗ, ಸುಮದಕನಸಿನಲಿ ನಾನಿರುವೆನೆಂದು! ಶ್ರೀವಲ್ಲಿ ಮಂಜುನಾಥ(ರವೀಂದ್ರರ […]Read More
ಚಿತ್ತದೊಳಗೊಂದು ಚಿತ್ರರಂಗ ಶ್ರೀಮತಿ ಆಶಾ ರಘು ರವರು ತಮ್ಮ ಕೃತಿಗಳಿಗೆ ಆಯ್ದುಕೊಳ್ಳುವ ವಿಷಯಗಳೇ ಬಹು ಭಿನ್ನತೆಗೊಳೊಂದಿಗೆ ಕೂಡಿರುತ್ತದೆ. ವೇದೋತ್ತರ ಕಾಲದ ವಿಷಯಗಳು ಕಾಲ್ಪನಿಕವಾಗಿ ಆವರ್ತ ದಲ್ಲಿ ಮೂಡಿಬಂದರೆ ಪುನರ್ಜನ್ಮದ ಪರಿಕಲ್ಪನೆ “ಗತ” ಕಾದಂಬರಿಯಲ್ಲಿ ಚಿತ್ರಿತವಾಗಿದೆ, 12 ನೇ ಶತಮಾನದಲ್ಲಿನ ಕಥೆಯೊಂದಿಗೆ ಅಲ್ಲಮನ ವಚನದಲ್ಲಿ ಬರುವ ಹೊನ್ನು, ಹೆಣ್ಣು, ಮಣ್ಣು “ಮಾಯೆ” ಯಾಗಿ ರಚಿತವಾಗಿದೆ. ಹಾಗೆಯೇ ತಮ್ಮ ಹೊಸ ಕಾದಂಬರಿ “ಚಿತ್ತರಂಗ” ದಲ್ಲಿ ಚಲನಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಹಾಗು ಅವನ ಬದುಕಿನಲ್ಲಿ ಬರುವ ಮೂರು ಹೆಣ್ಣುಗಳ ಮೂಲಕ ನೈಜ […]Read More
ನಂಬಿಕೆಯ ಮುನ್ನುಡಿ ಕುಳಿರ್ಗಾಳಿಗೆ ಬಳುಕುವ ತರುಲತೆಗಳುಅಪ್ಪಿಹವು ಮರಗಳನು ನಂಬಿಕೆಯಲಿ!ಎಂದಿಗೂ ತಮ್ಮನು ನಡುಹಾದಿಯಲಿ..ಕೈಬಿಡಲಾರವವು ಎಂಬ ವಿಶ್ವಾಸದಲಿ!! ಅಳವ ಕಂದನೆಂದಿಗೂ ನಂಬಿಹುದುತನ್ನಮ್ಮನ ಬೆಚ್ಚನೆಯ ಅಪ್ಪುಗೆ!ತನ್ನನೆಂದೂ ಶಿಕ್ಷಿಸಲವಳು ಮಾಡದ ತಪ್ಪಿಗೆ…ನಗಿಸುವಳವಳು ತಾನೆಂದಾದರೂ..ಕುಳಿತಾಗ ಬೇಸರದಲಿ ಸಪ್ಪಗೆ!! ವಸುಧೆಯೂ ನಂಬಿಹಳು ರವಿ-ಶಶಿಯನಲ್ಮೆಯಲಿ ಕಾಯ್ವ ಗೆಳೆಯರಿವರೆಂದು!ಚಂದ್ರಿಕೆಗಿರುವಂತೆ ಚಂದಿರನಲಿ ನಂಬಿಕೆ…ತಾರೆಗಳ ಸಮ್ಮಿಲನಕೆ ನಭವೇ ಕಾಣಿಕೆ!! ಜೀವನದಲಿರಲಿ ನಂಬಿಕೆಯ ಮುನ್ನುಡಿವಾಸ್ತವ ಬದುಕಲಿ ಅದುವೇ ಕೈಗನ್ನಡಿ!ಬಾಳಲಿರುವ ಸವಿನಂಬುಗೆಯ ಚೈತನ್ಯಕೆ..ಒಲವಿನ ಸಾಕ್ಷಾತ್ಕಾರಕೆ..ಬೇರೆ ಸಾಕ್ಷಿಯೇತಕೆ !! ಸುಮನಾ ರಮಾನಂದRead More
ಜೀವಂತ ಬಳ್ಳಿಗಳ ಸೇತುವೆಗಳು – ಮೇಘಾಲಯ ಸೇತುವೆಗಳನ್ನು ಸಾಮಾನ್ಯವಾಗಿ ಕಾಂಕ್ರೀಟ್ ಅಥವಾ ಕಬ್ಬಿಣದಿಂದ ನಿರ್ಮಿಸುತ್ತಾರೆ. ಆದರೆ ಜೀವಂತ ಬಳ್ಳಿಗಳ ಸೇತುವೆಗಳು ಈಶಾನ್ಯ ಭಾರತದ ರಾಜ್ಯವಾದ ಮೇಘಾಲಯದ ದಕ್ಷಿಣ ಭಾಗದಲ್ಲಿ ಕಾಣಸಿಗುತ್ತವೆ. ಶಿಲ್ಲಾಂಗ್ ಪ್ರಸ್ಥಭೂಮಿಯ ದಕ್ಷಿಣ ಭಾಗದಲ್ಲಿರುವ ಪರ್ವತ ಭೂಪ್ರದೇಶದ ಖಾಸಿ ಮತ್ತು ಜೈಂಟಿಯಾ ಪಂಗಡದ ಜನರು ‘ಫಿಕಸ್‌ಎಲಾಸ್ಟಿಕ್’ ಪ್ರಬೇಧಕ್ಕೆ ಸೇರಿದ ರಬ್ಬರ್ ಅಂಜೂರದ ಮರಗಳ ತೂಗಾಡುವ ಬೇರುಗಳನ್ನು ಸೇರಿಸಿ ಗಟ್ಟಿಯಾಗಿ ಬೆಸೆದು ತಯಾರಿಸುತ್ತಾರೆ. ಈಶಾನ್ಯ ಭಾರತದ ಮತ್ತೊಂದು ರಾಜ್ಯ ನಾಗಾಲ್ಯಾಂಡ್‌ನಲ್ಲೂ ಇಂತಹ ಜೀವಂತ ಬಳ್ಳಿಗಳ ಸೇತುವೆಗಳು ಕಾಣಲು […]Read More
ಹಾಡು ಹಳೆಯದಾದರೇನು- ಕಣಗಾಲ್ ಪ್ರಭಾಕರ ಶಾಸ್ತ್ರಿ ಭಾರತೀಯ ಚಿತ್ರರಂಗದಲ್ಲಿ ಕನ್ನಡಕ್ಕೆ ತನ್ನದೇ ಆದ ವಿಶೇಷವಾದ ಸ್ಥಾನವಿದೆ.ಅದರಲ್ಲೂ ಕನ್ನಡದ ಚಿತ್ರಗೀತೆಗಳು ಬಹುತೇಕರ ಜೀವನದಲ್ಲಿ ಪ್ರಭಾವವನ್ನು ಬೀರಿ ಅವರ ಬದುಕಿನ ತಿರುವುಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದನ್ನೂ ಕೇಳಿರುತ್ತೇವೆ. ಮೂರು ದಶಕದ ಹಿಂದಿನ ಮಾತು,ನಮ್ಮ ಹಳ್ಳಿಯ ಚಿತ್ರಮಂದಿರದಲ್ಲಿ ಚಲನಚಿತ್ರ ಪ್ರದರ್ಶನ ಪ್ರಾರಂಭ ಆಗುವುದಕ್ಕೆ ಮುಂಚೆ ಬಿತ್ತರಿಸಲಾಗುತ್ತಿದ್ದ ಹಾಡು… “ಕೊಡಗಿನ ಕಾವೇರಿ ನೀ ಬೆಡಗಿನ ವೈಯಾರಿಕನ್ನಡ ಕುಲನಾರಿ ಕಾವೇರಿ ನೀ ಒಲವಿನ ಸಿಂಗಾರಿ ||ಪ|| ಋಷಿಜನ ಜೀವನ ತಪೋನಿಧಿಕಾವೇರಿ, ನೀನೇ ಜೇನಿನ ಜೀವನದಿರೈತರ […]Read More
ಸುಮಧುರ ಮುಕ್ತಕ – ಮಧುರಾ ಮೂರ್ತಿ ಪುಸ್ತಕ: ಸುಮಧುರ ಮುಕ್ತಕಲೇಖಕರು:ಮಧುರಾ ಮೂರ್ತಿಪ್ರಕಾಶಕರು:ಸಮರ್ಥ ಪ್ರಕಾಶನಸಂಪರ್ಕ:7892090956 ಒಂದು ವಸ್ತು ಅಥವಾ ಉದ್ದೇಶವನ್ನು ಗುರಿಯಾಗಿ ಇಟ್ಟುಕೊಂಡು ಹೇಳಬೇಕಾದ ವಿಷಯಗಳನ್ನ ಕೇವಲ ನಾಲ್ಕು ಸಾಲುಗಳಲ್ಲಿ ಹಿಡಿದಿಟ್ಟುಕೊಂಡು ಹೇಳುವುದು ಅಷ್ಟು ಸುಲಭದ ಮಾತಲ್ಲ . ಮುಕ್ತಕ ಪ್ರಕಾರದಲ್ಲಿ ಡಿವಿಜಿ ಅವರದು ಬಹುದೊಡ್ಡ ಪ್ರಯೋಗ ಮತ್ತು ಅವರ ಮಂಕುತಿಮ್ಮನ ಕಗ್ಗ,ಮರುಳ ಮುನಿಯನ ಕಗ್ಗಗಳು ಅಪಾರ ಜನಪ್ರೀತಿ ಮತ್ತು ಜನಪ್ರಿಯತೆಯನ್ನು ಪಡೆದಿವೆ. ಡಿವಿಜಿ ಅವರನ್ನು ಅನುಸರಿಸಿದ ಹಲವರು ಮುಕ್ತಕ ರಚನೆಯಲ್ಲಿ ಯಶಸ್ಸನ್ನೂ ಸಾಧಿಸಿದ್ದಾರೆ . ಈ ಸಾಲಿಗೆ […]Read More