ಮಂಡ್ಯ ಜಿಲ್ಲೆಯ ಶಾಸನ ಮತ್ತು ಸಂಸ್ಕೃತಿ ಲೇಖಕರು: ಡಾ||ಸಂತೇಬಾಚಹಳ್ಳಿ ನಂಜುಂಡಸ್ವಾಮಿಪ್ರಕಾಶಕರು: ಸುಮೇರು ಪ್ರಕಾಶನ ಸಾಕಷ್ಟು ಸಮಯ ಮತ್ತು ಶ್ರಮ ಬೇಡುವ ಕೆಲಸವೆಂದರೆ ಪ್ರಾಗೈತಿಹಾಸಿಕ ಅಧ್ಯಯನ.ಶಾಸನಗಳ ಅಧ್ಯಯನ ಮಾಡುತ್ತಾಅವುಗಳು ನೀಡುವ ಸಾಂಸ್ಕೃತಿಕ ಒಳನೋಟಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಾ ಸುದೀರ್ಘವಾದ ಅಧ್ಯಯನ ಮಾಡಿ ಸಿದ್ಧಪಡಿಸಿದ ಅಧ್ಯಯನ ಪ್ರಬಂಧವೇ ಮಂಡ್ಯ ಜಿಲ್ಲೆಯ ಶಾಸನ ಮತ್ತು ಸಂಸ್ಕೃತಿ.ಒಂದು ಭೌಗೋಳಿಕ ಪ್ರದೇಶದ ರಾಜಕೀಯ,ಸಾಮಾಜಿಕ,ಆರ್ಥಿಕ ಪರಿಸ್ಥಿತಿಯನ್ನು ಆಯಾ ಪ್ರದೇಶದಲ್ಲಿ ಲಭ್ಯವಿರುವ ಶಿಲಾಶಾಸನಗಳು ತಿಳಿಸುತ್ತವೆ ಎಂಬುದಕ್ಕೆ ಈ ಪ್ರೌಢ ಪ್ರಬಂಧವೇ ಸಾಕ್ಷಿ. ಆಂಗ್ಲ ಭಾಷೆಯ passion ಎಂಬ ಪದಕ್ಕೆ […]Read More
ಪಶ್ಚಿಮ ಘಟ್ಟದಲ್ಲೊಂದು ಇಣುಕು – 3 ಪಶ್ಚಿಮ ಘಟ್ಟಗಳಲ್ಲಿ ಇರುವ ಸಾವಿರಾರು ಬಗೆಯ ಪ್ರಾಣಿ ಮತ್ತು ಸಸ್ಯ ಸಂಕುಲಗಳು ಅತ್ಯಂತ ಮಹತ್ವ ಪಡೆದುಕೊಂಡಿವೆ. ಅತ್ಯಂತ ಸೂಕ್ಷ್ಮ ಪರಿಸರ ವ್ಯವಸ್ಥೆ ಇರುವ ಇಲ್ಲಿ ಹಲವಾರು ಜೀವಿಗಳು ಅಳಿವಿನಂಚಿನಲ್ಲಿವೆ. ಸಿಂಗಳೀಕ ಇದರ ಬಾಲ ಸಿಂಹದ ಬಾಲದಂತಿರುವುದರಿಂದ ಇದಕ್ಕೆ ಸಿಂಹ ಬಾಲದ ಕೋತಿ (ಲಯನ್ ಟೈಲ್ಡ್ ಮಕಾಕ್) ಎಂದು ಹೆಸರು. ಇದರ ವೈಜ್ಞಾನಿಕ ನಾಮ ಮಕಾಕ ಸೈಲ್ನಸ್. ಇದರ ತಲೆ ಮತ್ತು ದೇಹದ ಉದ್ದ ಸುಮಾರು ೫೦-೬೦ ಸೆಂ ಮೀ ಬಾಲ […]Read More
ತಾಳ್ಮೆಯ ಭಾವದಲೆಯಲಿ.. ಉರಿ ಕೋಪದ ತಾಪದಿಬಾಳಲಿ ತಾ ಸಾಧಿಸುವುದೇನಿದೆ!ತಾಳ್ಮೆಯ ಮೆಲು ಭಾವದಿ..ಮನವ ಗೆದ್ದು ಬಾಳಲಾಗದೇ!! ಕೋಪದ ದಳ್ಳುರಿಗೆ ಮನವಕೊಡಲು ದಕ್ಕುವ ಭಾವವು ಶೂನ್ಯ!ತುಸುತಾಳ್ಮೆಯಲಿ ವ್ಯವಹರಿಸಿರೆ..ದೊರೆವ ಸಂತಸವು ಎಂದಿಗೂ ಮಾನ್ಯ!! ಸಿಟ್ಟಿನ ಉರಿ ಜೋಳಿಗೆ ಬಗಲಲಿರೆಸುಡುವುದು ಬದುಕು ನಿತ್ಯ!ತಾಳ್ಮೆಯ ಪನ್ನೀರಲಿ ಮಿಂದರೆ…ಬಾಳಲಿ ಸಿಗುವ ನೆಮ್ಮದಿಯು ಸತ್ಯ!! ಕಡುಕೋಪದಿ ಬದುಕು ಸವೆಯಲುಮುಳ್ಳಿನ ಹಾದಿಯಲಿ ನಡೆದಂತೆ!ಸಹನೆಯ ಮಂತ್ರವ ನಿತ್ಯ ಜಪಿಸಿರೆ..ದಾರಿಯಲಿ ಹೂ ಹಾಸಿದಂತೆ!! ಸುಮನಾ ರಮಾನಂದRead More
ಇರುಳ ಹಕ್ಕಿಯ ಅಳಿವು ಉಳಿವು – ಜೆರ್ಡನ್ಸ್ ಚಿಟವ “ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ” ನಮ್ಮ ಭಾರತದಲ್ಲಿನ ಪ್ರಕೃತಿ ಸಂರಕ್ಷಣೆ ಹಾಗು ವನ್ಯಜೀವಿ ಸಂಶೋಧನೆಯ ಒಂದು ಪ್ರಖ್ಯಾತ ಸರ್ಕಾರೇತರ ಸಂಸ್ಥೆ (NGO). ನಮ್ಮ ಪ್ರಕೃತಿಯ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ಹಾಗು ಜಾಗೃತಿ ಮೂಡಿಸಿ, ಅಳಿವಿನಂಚಿನ ಜೀವಿಗಳನ್ನು ಗುರುತಿಸುತ್ತ ಅವುಗಳ ಸಂರಕ್ಷಣೆಗೆ ಹಲವಾರು ಕ್ರಮಗಳನ್ನು ಅಳವಡಿಸಿ ಅದರಲ್ಲಿ ಬಹುಪಾಲು ಯಶಸ್ವಿಯನ್ನು ಕಂಡಿರುವ ಈ ಸಂಸ್ಥೆಯಲ್ಲಿ ಪ್ರಖ್ಯಾತ ವನ್ಯ ವಿಜ್ಞಾನಿಗಳು, ಹಾಗು ಪ್ರಕೃತಿ ಪ್ರಿಯರು ಕೆಲಸ ಮಾಡುತ್ತಾ ಬಂದಿದ್ದಾರೆ. ನಮ್ಮ […]Read More
ಹಿಂದಿನ ಸಂಚಿಕೆಯಿಂದ….. ರಾತ್ರಿ ಊಟವಾದ ಮೇಲೆ, ಮೊದಲ ಯಾಮದಲ್ಲಿಯೇ, ಚಿತ್ರಕನು ರಟ್ಟಾಳನ್ನು ಭೇಟಿ ಮಾಡಲು ಬಂದನು. ಮರುದಿನ ಬೆಳಿಗ್ಗೆ ಪ್ರಯಾಣ ಹೊರಡಬೇಕು. ಕೊಠಡಿಯಲ್ಲಿ ಬೇರೆ ಯಾರು ಇರಲಿಲ್ಲ. ದೀಪದ ಕಂಬದಲ್ಲಿ ಬತ್ತಿಯ ದೀಪ ಉರಿಯುತ್ತಿತ್ತು. ರಟ್ಟಾ ಬಂದು ಚಿತ್ರಕದ ಕೈ ಹಿಡಿದು ಪಕ್ಕದಲ್ಲಿ ನಿಂತು ‘ನಾನು ನಿಮ್ಮ ಜೊತೆ ಬರುವ ಹಾಗಿಲ್ಲ’ ಎಂದಳು. ತಗ್ಗಿದ ದನಿಯಲ್ಲಿ ಮಾತಾಡುತ್ತಿದ್ದಾರೆ. ಚಿತ್ರಕ ‘ಇದೇ ಒಳ್ಳೆಯದು ಇಲ್ಲಿ ನೀನು ಸುರಕ್ಷಿತವಾಗಿರಬಹುದು’ ಎಂದನು. ರಟ್ಟಾ- ನೀವು ಜೊತೆಯಲ್ಲಿ ಇರದಿದ್ದಾಗ ಸುರಕ್ಷತೆ ಎಲ್ಲಿ ಬಂತು? […]Read More
ಹಾವೇರಿ ಜಿಲ್ಲೆ ಆಶಯ ಕವನ ಮತ್ತೊಂದು ಜನ್ಮ ಎಂಬುದೊಂದಿದ್ದರೆಆಗಲಿ ಇಲ್ಲೆ ಹಾವೇರಿ ನೆಲದಲ್ಲೇ,ಸರ್ವಜ್ಞನ ನಾಡು ಸದಾ ಶಾಂತಿಯಿಂದಿರಲಿಗೋವಿಂದ ಭಟ್ಟರ ಕೃಪೆಯೂ ಎಮಗಿರಲಿ ಶರೀರ ವಾಣಿ ಸದಾ ಮೊಳಗುತಲಿರಲಿಕನಕ ಭಕ್ತಿಯದು ಅಮರವಾಗಿರಲಿಗಾನಯೋಗಿಯ ಗಾನ ಸದಾ ಗುನುಗುತಿರಲಿ“ಗೋಕಾಕ”ರ ಚಳುವಳಿ ಮಾದರಿಯಾಗಿರಲಿ ವರದೆ ತುಂಗಭದ್ರೆಯರು ಜನರ ದಾಹ ನೀಗಿಸುತಿರಲಿನಾಗನೂರು ಕೆರೆಯು ತುಂಬಿ ತುಳುಕುತಲಿರಲಿಶಾಂತೇಶ, ಕಾಂತೇಶರು ನಾಡ ಕಾಯುತಲಿರಲಿ.ತಾರಕೇಶ್ವರನ ಕೃಪೆಯು ಸದಾ ಜನರ ಮೇಲಿರಲಿ ಸವಣೂರು ಖಾರದ ರುಚಿ ಕೆಡದೆ ಇರಲಿಬ್ಯಾಡಗಿ ಮೆಣಸಿಗೆ ಎಂದೂ ಬೆಲೆಯಿರಲಿಶಿವಶರಣರ ನಾಡಿದು ಸದಾ ಕಲ್ಪವೃಕ್ಷವಾಗಿರಲಿಕುಡಿತ ಬ್ರಷ್ಠಾಚಾರ ಗಡಿಯಾಚೆಗಿರಲಿ […]Read More
ನಾಚಿಕೆಯ ಮುಟ್ಟಿದರೆ ಮುನಿ ಪ್ರಕೃತಿಯಲ್ಲಿ ಹಲವು ವಿಧದ ಮರ ಗಿಡಗಳು ಮತ್ತು ಜೀವಿಗಳಿದ್ದು, ಅವುಗಳ ಪೈಕಿ ಮುಟ್ಟಿದರೆ ಮುನಿ ಎನ್ನುವ ಗಿಡವು ವಿಭಿನ್ನವಾದ ವೈಶಿಷ್ಟ್ಯತೆಯನ್ನು ಹೊಂದಿದೆ. ಇದಕ್ಕೆ ಆಡುಭಾಷೆಯಲ್ಲಿ ನಾಚಿಗೆ ಮುಳ್ಳು, ಮುಟ್ಟಿದರೆ ಮುಚಕ, ಮುಚ್ಗನ್ ಮುಳ್ಳು, ಪತಿವ್ರತೆ, ಮುಟ್ಟಿದರೆ ಮುನಿ, ಲಜ್ಜಾವತಿ, ಸಂಸ್ಕೃತದಲ್ಲಿ ‘ಅಂಜಲೀ ಕಾರಿಕೆ’ ಆಂಗ್ಲದಲ್ಲಿ ‘ಟಚ್ ಮಿ ನಾಟ್’, ಹಿಂದಿಯಲ್ಲಿ ಚುಯ್ ಮುಯ್, ಸಸ್ಯಶಾಸ್ತ್ರೀಯ ಹೆಸರು ‘ಮಿಮೊಸ ಪುಡಿಕಾ’ (Mimosa Pudica) ಎಂದೆಲ್ಲಾ ಕರೆಸಿಕೊಂಡು ((Touch me not) ಯಾರಿಗೂ ಬೇಡವಾಗಿ ಬೆಳೆಯುವ […]Read More
ಪಶ್ಚಿಮ ಘಟ್ಟದಲ್ಲೊಂದು ಇಣುಕು – 2 ಕುದುರೆಮುಖ ಇನ್ನಷ್ಟು…. ಕುದುರೆಯ ಮುಖದ ಹಾಗೆ ಪರ್ವತ ಶ್ರೇಣಿಯು ಕಾಣಿಸುವುದರಿಂದ ‘ಕುದುರೆ ಮುಖ’ ಎಂಬ ಹೆಸರು ಬಂದಿದೆ.ವಿಶಾಲವಾದ ಹಾಗೂ ಸುಂದರವಾದ ಪರ್ವತ ಶ್ರೇಣಿಗಳು, ಗುಹೆಗಳು, ಕಂದಕ, ಹಳ್ಳಕೊಳ್ಳಗಳು ಮತ್ತು ಚಿಕ್ಕದೊಡ್ಡ ಬೆಟ್ಟಗಳಿಂದ ಕೂಡಿರುವುದು ಕುದುರೆಮುಖದ ವೈಶಿಷ್ಟ್ಯ. ಕಿರಿದಾದ ಬೆಟ್ಟಗಳ ಕವಲು ದಾರಿಯಲ್ಲಿ ನಡೆಯುತ್ತಿದ್ದರೆ ಪಕ್ಕದಲ್ಲಿ ಜುಳುಜುಳು ಹರಿಯುವ ಶುದ್ಧ ತಿಳಿನೀರಿನ ಝರಿಗಳು, ಎಲ್ಲೆಡೆ ಕಾಣುವ ಹಸಿರು ಹುಲ್ಲು ಗಿಡಮರಗಳು ಮತ್ತು ಚಿಲಿಪಿಲಿಗುಟ್ಟುವ ಪಕ್ಷಿ ಸಂಕುಲಗಳು ಇಲ್ಲಿ ಹೇರಳವಾಗಿವೆ. ಹೆಸರು ಗೊತ್ತಿಲ್ಲದಿರುವ […]Read More
ಕೋಟೆಯ ಜಾಡು ಕಣ್ಮುಂದೆ ಎದ್ದು ನಿಂತ ಬೃಹತ್ ಬಂಡೆಗಳ ವಿಶಾಲ ಕೋಟೆ. ಒಂದೊಂದು ಕಲ್ಲೂ ಏನನ್ನೋ ಹೇಳಬಯಸುತ್ತಿವೆ.. ಕಲ್ಲುಗಳ ಸಂದಿಯಲಿ ಪಿಸು ಪಿಸು ಮಾತು.. ಉಸಿರು ಬಿಗಿಹಿಡಿಯುತ್ತಿರುವ ಸದ್ದು.. ಕಳ್ಳ ಹೆಜ್ಜೆಯಲಿ ಪಲಾಯನ ಮಾಡುತ್ತಿರುವ ಹೆಜ್ಹೆಗಳ ಸಪ್ಪಳ. ಇದ್ದಕ್ಕಿಂದಂತೇ ಪಕ್ಕದಲ್ಲೇ ಭಾರೀ ಆಸ್ಪೋಟ. ಅವಿತು ಕುಳಿತವರ ಆರ್ತನಾದ, ಜೀವಕ್ಕಾಗಿ ಪರಿತಪಿಸುತ್ತಿರುವ ನರಳಾಟ. ಅದೆಲ್ಲಿ ಅಡಗಿದ್ರೋ ಅಸಹಾಯಕ ಹೆಣ್ಣುಮಕ್ಕಳ ಚೀರಾಟ.. ಮಕ್ಕಳ ಜೋರುದನಿಯ ಅಳು ಎಲ್ಲವೂ ಸ್ಪಷ್ಟವಾಗಿ ಕೇಳುತ್ತಿದೆ. ಕೋಟೆಯ ಹೊರಭಾಗದಲ್ಲಿ ಕುದುರೆಗಳ ಖರಪುಟ ಶಬ್ದ ಹೆಚ್ಚಾಗುತ್ತಿದೆ. ಮೇಲಿಂದ […]Read More
ಸಂತಸದ ಚಿಗುರು ಚಂಚಲತೆಯ ಮನಕೆಮೌನವು ಬೀಗದಂತೆ..!ಬಾಡುತಿಹ ಕಾನನಕೆ..ಮುಸಲಧಾರೆ ಜೀವಾಮೃತದಂತೆ!! ಬರದ ಬವಣೆಯ ಕಾಲಕೆಮತ್ತೆ ಸಂತಸದ ಚಿಗುರು..!ಕಡುತಾಪಕೆ ಮುರುಟಿದರೂ..ಮತ್ತೆ ಚಿಗುರಿತು ಎಲ್ಲೆಲ್ಲೂ ಹಸಿರು!! ಇರಬೇಕು ಕಮಲದೆಲೆಯ ತೆರದಿನೀರಿಗಂಟಿಯೂ ಅಂಟದಂತೆ..!ಎಲ್ಲೊ ಮುದುಡಿ ಬೇರೆಲ್ಲೋಚಿಗುರುವ ಕೊರಡಂತೆ!! ಬೀಗದಲಿ ಬಂಧಿಸಿಯೂಅಂತರಾಳವು ಪುಟಿದಿದೆ..!ನನಗೆ ಸಾಟಿ ಯಾರೆನುತಾ..ಹಚ್ಚಹಸಿರು ತಾ ನಗುತಿದೆ!! ಸುಮನಾ ರಮಾನಂದRead More