ಪಯಣದ ಹಾದಿಯಲಿ ಮುಸ್ಸಂಜೆ ವೇಳೆಯ ತಂಪಿನಲಿಸಾಗಿರಲು ದೂರದೂರಿನ ಪಯಣಕೆ..! ಕರಗಳ ಹಿಡಿದು ಜೊತೆಯಲಿ ನಡೆದಿರೆ…ಭಯವು ಇನ್ನೆಲ್ಲಿಹುದು ಮನಕೆ!! ಸಾಗುವ ಹಾದಿಯು ಬಲು ದೂರವಿರಲುಆಪ್ತವೆನಿಸಿದೆ ಭರವಸೆಯ ನೋಟ..!ಗಗನದಿ ನೀಲಿಮೋಡದ ಚಿತ್ತಾರವಿರಲು..ಹೊಂಬಿಸಿಲಲರಳಿದೆ ಹಸಿರ ಭೂಪಟ!! ರೈಲಿನ ಹಳಿಯಂತೆ ಬದುಕಿನ ಚಿತ್ತಜೊತೆಯಲಿ ಸಾಗಿಯೂ ಅಂತರ..!ಅರಳಿ ಮರಳುತಾ ಮರಳಿ ಅರಳುತಾ…ಕಲ್ಲುಮುಳ್ಳಿನ ಇರಿತ ಕಾಲಿಗೆ ನಿರಂತರ!! ಹಸಿರ ಕಾನನದಿ ನಡೆದಿರೆ ಹೀಗೆಪಯಣವಿದು ಸಾಗಿದೆ ಅನವರತ!ಸಂಕಟವನರಿತ ಮನವಿರಲು ಜೊತೆಗೆ..ಬೇಸರವೇ ಓಡುವುದು ನಗುನಗುತ!! ಸುಮನಾ ರಮಾನಂದRead More
ನನಗೊಂದಾಸೆ ಭಾರತಾಂಬೆಯೇ ಎಷ್ಟು ಚೆಂದ ನಿನ್ನ ಮೈಮಾಟಹೊತ್ತಿರುವೆ ಗಿರಿ, ಶಿಖರ, ನದಿ, ಸಮುದ್ರ, ಕಾಡು, ಪಟ್ಟಣ ಭಾರತಾಂಬೆಯೇ ಕೇಳು, ನನಗೊಂದಾಸೆನಿನ್ನ ಮೈಯ ತೊಳೆದು, ಹಸಿರನುಡಿಸಲು ನಿನ್ನೊಡಲಲ್ಲಿರುವುದು ಹಲವು ದೇವಾಲಯ, ಆಶ್ರಮಗಳುಇರುವುದಲ್ಲಿ ಚೆಂದದ ಉದ್ಯಾನವನ, ಹೂದೋಟಗಳು ಎಷ್ಟು ಚೆಂದ ನೆಲವ ಉಜ್ಜಿ ಥಳಥಳಿಸುವಂತೆ ಮಾಡುವರಲ್ಲಿನಿನ್ನ ಮೈಯ ಮಲಿನ ಮಾಡುವರು ನೋಡಲೇ ಕಷ್ಟವಿಲ್ಲಿ ತೋರುವುದೇನು ಸೌಜನ್ಯ, ಸೇವಾ ಮನೋಭಾವಗಳಲ್ಲಿತೋರುವರು ನಿನಗೆ ಅಸಡ್ಡೆ, ಅನಾದರ, ಅನಾಚಾರಗಳಿಲ್ಲಿ ಕೈಯ, ಕಾಲ ತೊಳೆದದ್ದೇನು, ಸ್ವಚ್ಛತೆಯ ಕಾಪಾಡುವಲ್ಲಿಕ್ಯಾಕರಿಸಿ ಉಗಿದು, ಮಲಮೂತ್ರಗಳ ಮಾಡಿ ಮಲಿನಗೊಳಿಸುವರಿಲ್ಲಿ ಮಾತೇ ಮುತ್ತಾಗಿ, […]Read More
ಮಲ್ಲಿಗೆ ಸುಮ ಘಮ ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೇ….. ಈ ಹಾಡು ಯಾರು ಕೇಳಿರಲ್ಲ. ಬಂಗಾರದ ಮನುಷ್ಯ ಚಲನಚಿತ್ರದ ಜನಪ್ರಿಯ ಗೀತೆ ಇದು. ಈ ಹಾಡು ಯಾಕೆ ಬಂತು ಅಂತ ಕೇಳಿದ್ರಾ… ಇಲ್ಲೊಂದು ಸ್ವಾರಸ್ಯಕರ ಕಥೆ ಇದೆ ನೋಡಿ. ಮೈಸೂರು ಮಲ್ಲಿಗೆ ವಿಶ್ವವಿಖ್ಯಾತಿಯನ್ನು ಗಳಿಸಿದೆ. ಮೈಸೂರಿನಿಂದ ಸುಮಾರು ನೂರ ನಲ್ವತ್ತು ಕಿಲೋಮೀಟರ್‌ಗಳ ದೂರದಲ್ಲಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಕೂಡಾ ಈ ಮಲ್ಲಿಗೆ ಹೂವಿನ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತದೆ. ದಿನಬಳಕೆ ಮತ್ತು ಹಬ್ಬ ಹರಿದಿನಗಳಲ್ಲಿ ಮಲ್ಲಿಗೆ […]Read More
ಉಕ್ಕಿನ ಮನುಷ್ಯನಿಗೊಂದು ಏಕತೆಯ ಪ್ರತಿಮೆ ದೇಶದ ಮತ್ತು ಪ್ರಪಂಚದ ವಿವಿಧ ಸ್ಥಳಗಳಲ್ಲಿ ಹಲವಾರು ಮಹಾನ್ ಸಾಧಕರ ಹಾಗೂ ವಿಶೇಷ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸುವುದು ನಾವೆಲ್ಲರೂ ನೋಡಿದ್ದೇವೆ. ಅವುಗಳ ಪೈಕಿ ಅಮೇರಿಕಾದ ನ್ಯೂಯಾರ್ಕ್ ನಗರದ ಲಿಬರ್ಟಿ ಪ್ರತಿಮೆಯು ಅತ್ಯಂತ ವಿಶೇಷವಾದ ಹಾಗೂ ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಪ್ರತಿಮೆಯೆಂದು ಇದುವರೆಗೂ ಹೆಗ್ಗಳಿಕೆಯನ್ನು ಪಡೆದಿತ್ತು. ಆದರೆ ಈ ಹೆಗ್ಗಳಿಕೆಯು 31 ಅಕ್ಟೋಬರ್ 2018 ರ ನಂತರ ಗುಜರಾತ್ ರಾಜ್ಯದಲ್ಲಿ ನಿರ್ಮಿಸಲಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 142 ನೇ ಜನ್ಮದಿನದಂದು ಉಕ್ಕಿನ […]Read More
ಮತ್ತೆ ಬಂತು ಸಂಕ್ರಾಂತಿ.. ಮತ್ತೆ ಬಂದಿದೆ ನೋಡು ಮಕರ ಸಂಕ್ರಾಂತಿಎಳ್ಳು ಬೆಲ್ಲದ ಸವಿಯ ಜೊತೆಯಲಿ ತಂದುಎಲ್ಲರ ಮೊಗದಲ್ಲಿ ಮೂಡಿಸಿದೆ ಕಾಂತಿ ಹೊಲಗದ್ದೆಯಲಿ ತುಂಬಿದೆ ಕಾಳುರೈತನ ಜೀವಕೆ ತಂದಿದೆ ಹೊಸಬಾಳುಕಬ್ಬಿನ ಜಲ್ಲೆಯು ನಿಂತಿದೆ ಹೊಲದಲಿಬೆಲ್ಲದ ಸವಿಯನು ನೀಡಲು ಬಂದಿದೆ ಭತ್ತದ ಪೈರು ನೀಡಿದೆ ಧಾನ್ಯಬೆಳೆದ ರೈತನಿಗೆ ಅದುವೆ ಭಾಗ್ಯ ಎತ್ತುಗಳ ಸಿಂಗರಿಸಿ ಬೀಗಿಹ ರೈತದೇಶದ ಬದುಕಿನ ಭಾಗ್ಯದಾತ ಲೋಕದಾ ಕಾರಿರುಳ ಕಳೆಯುವನೀತಸುಗ್ಗಿಯ ಸಡಗರವ ಎಲ್ಲೆಡೆ ಬೀರುತ್ತಬಂದಿದೆ ನೋಡಿರಿ ಈ ಸಂಕ್ರಾತಿಎಲ್ಲರ ಮನದಲಿ ತುಂಬಿದೆ ಶಾಂತಿ…. ಸುನೀಲ್ ಹಳೆಯೂರುRead More
ಪ್ರತ್ಯಗಾತ್ಮ ಚಿಂತನ ಕಾಲ ಕಾಲಕೆ ಮೋಡ ಮಳೆಯ ಸುರಿಸುತ್ತಿರಲಿಆಗೆಲ್ಲ ಬೆಳೆಯು ಸಾಕಷ್ಟು ಬರಲಿಸಾಲಗಾರನ ಕೈಗೆ ಸಿಲುಕದೆ ಕೃಷೀವಲನಬಾಳು ಹಸನಾಗಿರಲಿ- || ಪ್ರತ್ಯಗಾತ್ಮ || ಜೀವ ಜಂತುಗಳೆಲ್ಲ ಜೀವಿಸಲಿ ಸುಖವಾಗಿದೇವೇಂದ್ರ ವರ್ಷಿಸಲಿ ಕಾಲ ಕಾಲಕ್ಕೆಬೇವೊಂದೆ ಬಾಳಿನಲಿ ಇರದೆ, ಬೆಲ್ಲವೂ ಇರಲಿನೋವಿರದೆ ಸುಖವಿರಲಿ- || ಪ್ರತ್ಯಗಾತ್ಮ || ಮನೆಯ ಅಂಗಳದಲ್ಲಿ ಮಕ್ಕಳಾಡುತಲಿರಲಿಮನೆಯೊಳಗೆ ನಡೆದಿರಲಿ ನಿತ್ಯ ಶುಭಕಾರ್ಯಮನೆ ಮಂದಿ ಅನ್ಯೋನ್ಯ ಭಾವದಲಿ ಬಾಳಿರಲಿಮನೆ ತುಂಬ ನಗುವಿರಲಿ- || ಪ್ರತ್ಯಗಾತ್ಮ || ಎನ್. ಶಿವರಾಮಯ್ಯ (ನೇನಂಶಿ)ವಾಚನ: ಗೌರಿದತ್ತRead More
ಹೆಳವರು ಮನೆಯ ಮಗನೆಂದು ಬಂದವರುತಾತ ಮುತ್ತಾತ ಮರಿತಾತನ ಕಥೆ ಹೇಳುವರುಗತಕಾಲದ ಇತಿಹಾಸ ಬಿಚ್ಚಿಡುವವರು ಪ್ರತಿ ಊರು ಪ್ರತಿ ಕೇರಿಗಳ ಕಥೆ ತಿಳಿದವರುಬ್ರಹ್ಮಗಂಟು ಮೋಡಿ ಭಾಷೆಯ ಪಂಡಿತರುವರ್ಷಕೊಮ್ಮೆ ಮನೆಯ ಕಡೆ ಬರುವವರು ಹಳದಿ ರುಮಾಲು ಕರಿ ಕೋಟು ಧರಿಸಿದವರುಕೈಯ್ಯಲ್ಲಿ ಗುಲಾಬಿ ಬಣ್ಣದ ಚೀಲ ಹಿಡಿದವರುಕಂಕುಳಲ್ಲಿ ಜೋಳಿಗೆಯ ನೇತಾಡಿಸಿಕೊಂಡವರು ಮನೆ ಮನೆಯ ಪ್ರತಿಯೊಬ್ಬರ ಹೊಗಳುವವರುಹಿಡಿ ಜೋಳ, ಹಳೆಬಟ್ಟೆ ಪಡೆಯುವವರುಕುರಿ ಕೊಟ್ಟರೂ ಸರಿ ಕೋಳಿಯಾದರೂ ಸರಿ ಹೆಗಲಿನ ಚೀಲದಲಿ ಕುಳಿತ ಪುಸ್ತಕವಾ ಬಿಡಿಸಿತಲೆಮಾರುಗಳ ಕಥೆ ಹೇಳಿ ಖುಷಿಪಡಿಸಿನಾ ನಿಮ್ಮ ಮನೆ ಮಗನೆಂದು […]Read More
ಪರಿಚ್ಛೇದ – 17 ಹೂಣರಕ್ತ ಮೀನಿನಾಕಾರದ ಒಂದು ತಪ್ಪಲಿನಲ್ಲಿ ಚಷ್ಟನ ದುರ್ಗ ಇದ್ದಿತು. ಉತ್ತರ ದಿಕ್ಕಿನಿಂದ ಆರ್ಯಾವರ್ತವನ್ನು ಪ್ರವೇಶಿಸುವ ಕಣಿವೆ ಮಾರ್ಗಗಳಲ್ಲಿ ಇದೂ ಒಂದು. ಆದುದರಿಂದಲೇ ಈ ದುರ್ಗಕ್ಕೆ ವಿಶೇಷ ಸ್ಥಾನವಿದೆ. ಈ ಮಾರ್ಗದಿಂದಲೇ ಹಿಂದಿನ ಕಾಲದಲ್ಲಿ ಯುದ್ಧ ವೀರರು ದಂಡಯಾತ್ರೆ ಮಾಡಲು ಆರ್ಯಭೂಮಿಗೆ ಬಂದಿದ್ದರು, ವ್ಯಾಪಾರ ಮಾಡುವ ಸಲುವಾಗಿ ವಿದೇಶಿ ವ್ಯಾಪಾರಿಗಳು ಬಹುಮೂಲ್ಯ ವಸ್ತುಗಳನ್ನು ತೆಗೆದುಕೊಂಡು ಬಂದು ಹೋಗಿ ಮಾಡುತ್ತಿದ್ದರು. ಚೀನಾ ದೇಶದ ಯಾತ್ರಿಕರು ತೀರ್ಥಯಾತ್ರೆಗಾಗಿ ಬರುತ್ತಿದ್ದರು. ಈ ತಪ್ಪಲಿನ ಪ್ರದೇಶವು ಉತ್ತರ ದಕ್ಷಿಣವಾಗಿ ಐದು […]Read More
ಕಾಲಮಾನದ ಸತ್ಯ ಕಾಲವು ನಿಂತಲಿ ನಿಲ್ಲದೆಓಡಿ ವರುಷವೊಂದು ಉರುಳಿದೆ!ಕಂಡ ಕನಸುಗಳು ಕರಗದೆ..ಮನದಲಿ ಹಾಗೇ ಉಳಿದಿದೆ!! ಕಾಲವದು ಕಾಲಿಲ್ಲದೆಯೂ ಸಾಗಿಗಮ್ಯದೆಡೆಗೆ ರೊಯ್ಯನೆ ಓಡಿದೆ!ತನ್ನದೇ ಹಠವೆಂಬಂತೆ ನುಗ್ಗಿ..ಅದನು ತಡೆದ ಕರಗಳನು ದಾಟಿದೆ!! ಕಾಲವೆನ್ನಲು ಅದು ನಡೆದು ಓಡಿಸಮಯವೆನಲು ಮತ್ತೆ ಕಾಡಿದೆ!ಹೊಸತನವನರಸಿ ದಿಕ್ಕುಗಳಲಿ ಸುತ್ತಾಡಿ..ಕಡೆಗೆ ಬಿಡದೆ ಗುರಿಯ ಮುಟ್ಟಿದೆ!! ಕಾಲವನು ತಡೆವ ಶಕ್ತಿನೀ ಹೇಳು ಜಗದಿ ಯಾರಿಗಿದೆ!ಮುಂದಡಿಯಿರಿಸಿ ಸಾಗಿದೆ ಅಳುಕದೆ…ಹಿಂದಕೆ ಕಾಲವೆಂದೂ ಚಲಿಸಲಾರದೆ!! ಸುಮನಾ ರಮಾನಂದRead More
ಮತ್ತೆ ಸಂಕ್ರಾಂತಿ ಇರುವುದೆಲ್ಲವು ಹೋಗಿ ಮತ್ತೆ ಬೆತ್ತಲೆಯಾಗಿ|ಕುರುಡಾಗಿ ಕಿವುಡಾಗಿ ಮೂಕ ನೀನಾಗಿ||ಸರಿಯುತಿರೆ ಕತ್ತಲೊಳು ಬೆಳಕನ್ನು ಅರಸುತ್ತ|ಮರಳಿ ಬರುವುದೆ ಬದುಕು – ನವ್ಯಜೀವಿ|| ಬದುಕೆಂಬುದು ನಿರಂತರ…ನಾವು ನಮ್ಮ ನಂತರ ಮತ್ತೊಬ್ಬರು. ಕಾಲದೋಟದಲ್ಲಿ ಸಾಗುತ್ತ ಸಿಹಿಕಹಿಗಳ ಮಿಶ್ರಣವನ್ನು ಸವಿಯುತ್ತಾ ಬದುಕಿನಲ್ಲಿ ಸಾರ್ಥಕ್ಯ ಕಾಣಬೇಕು. ಬಾಳಿನ ಎಲ್ಲಾ ನೋವು,ದುಃಖ ದುಮ್ಮಾನಗಳಿಂದ ಹೊರಬಂದು ಸಂತಸದಿಂದ ಮನಃ ಶಾಂತಿ ಹೊಂದಿರುವ ಜೀವನವನ್ನು ನಡೆಸುವಂತಾಗಿ…ನಾವು ದಿಟ್ಟ ಹೆಜ್ಜೆಯನ್ನು ಇಡುತ್ತ ಗುರು ಹಿರಿಯರು ಕಲಿಸಿದ ಮಾರ್ಗದಲ್ಲಿ ಆತ್ಮವಿಶ್ವಾಸದಿಂದ ನಡೆದು ಗುರಿ ಮುಟ್ಟಿ ಯಶಸ್ಸು ಸಾಧಿಸುವಂತಾಗಬೇಕು… ಬದುಕಿನ ಹಣತೆಯನ್ನು […]Read More