ಪ್ರತ್ಯಗಾತ್ಮ ಚಿಂತನ (ನೇನಂಶಿ) – 61

ಬಗೆಬಗೆಯ ಕರ್ಮಫಲ ಭೋಗಿಪುದು ಜೀವಾತ್ಮಜಗದ ಸುಖ ದುಃಖಗಳ ದ್ವಂದ್ವಕೊಳಗಾಗಿನಗು ಅಳುವಿನಿಂ ದೂರ ಪರಮಾತ್ಮ ನಿರ್ಲಿಪ್ತನಿಗಮ ಸಾರುವುದಿಂತು- || ಪ್ರತ್ಯಗಾತ್ಮ || ಜೇಡಿ ಮಣ್ಣನು ತಂದು ಬಗೆಬಗೆಯ ಬೊಂಬೆಗಳಮಾಡಿರಲು ಇದು ಆನೆ, ಅವು ನಾಯಿ-ಕುದುರೆಕೂಡಿಸಿದರೆಲ್ಲವನು ಮತ್ತೆ ಮಣ್ಣಿನ ಮುದ್ದೆನೋಡು ಒಂದೇ ಸತ್ಯ- || ಪ್ರತ್ಯಗಾತ್ಮ || ಒಂದರಿಂ ಹಲವಾರು ಹಣತೆಗಳ ಹೊತ್ತಿಸಿರೆಒಂದೊಂದು ಬೇರೆಂಬ ಮಾಯೆ ಕವಿಯುವುದುಒಂದೆ ಹಣತೆಯೊಳೆಲ್ಲ ಬತ್ತಿ ಸೇರಿಸೆ ಜ್ಯೋತಿಒಂದೆ ತಾನ್ ಎರಡಿಲ್ಲ- || ಪ್ರತ್ಯಗಾತ್ಮ || ಎಚ್ಚರಾಗುವವರೆಗೂ ದಿಟದಂತೆ ತೋರುವುದುಎಚ್ಚೆತ್ತು ಕಂದೆರೆಯೆ ಕನಸು ಬರಿ ಮಿಥ್ಯೆಎಚ್ಚೆತ್ತ […]Read More

ವಿಶಿಷ್ಟ ಪ್ರಾಣಿ ಘೇಂಡಾಮೃಗ

ವಿಶಿಷ್ಟ ಪ್ರಾಣಿ ಘೇಂಡಾಮೃಗ ಸಾಮಾನ್ಯವಾಗಿ ಪ್ರಾಣಿಗಳಿಗೆ ತಲೆಯಲ್ಲಿ ಕೋಡುಗಳಿದ್ದು, ಈ ಕೋಡುಗಳಿಂದ ತಮ್ಮ ವೈರಿಗಳನ್ನು ಹಿಮ್ಮೆಟ್ಟಿಸುತ್ತವೆ. ಆದರೆ ಇಲ್ಲೊಂದು ವಿಭಿನ್ನವಾಗಿ ಮುಖದ ಮುಂಭಾಗದಲ್ಲಿ ಚೂಪಾದ ಕೋಡುಗಳಿರುವ ಮತ್ತು ನೀರನ್ನು ಹೆಚ್ಚು ಇಷ್ಟಪಡುವ ಪ್ರಾಣಿಯೊಂದಿದ್ದು, ಈ ಕೋಡಿನ ಮೂಲಕ ತಿವಿದು ಶತ್ರುಗಳನ್ನು ಹಿಮ್ಮೆಟ್ಟಿಸುತ್ತದೆ. ಅದುವೇ ಘೇಂಡಾಮೃಗ. ಇದು ಆಫ್ರಿಕ ಮತ್ತು ಏಷ್ಯಾ ಖಂಡಗಳ ಉಷ್ಣ ಹಾಗೂ ಸಮಶೀತೋಷ್ಣವಲಯಗಳಲ್ಲಿ ವಾಸಿಸುವ ಬೃಹತ್ ಗಾತ್ರದ ಸಸ್ತನಿ. ಘೇಂಡಾಮೃಗ ಪರ್ಯಾಯನಾಮ. ಇದು ‘ಮ್ಯಾಮೇಲಿಯ’ ಪ್ರಬೇಧಕ್ಕೆ ಸೇರಿದ ‘ಪೆರಿಸೊಡ್ಯಾಕ್ಟಿಲ’ ಜಾತಿಯ ‘ರೈನೊಸೆರಾಟಿಡೀ’ ಕುಟುಂಬಕ್ಕೆ ಸೇರಿದೆ. […]Read More

ಕೋಟೆಯ ಜಾಡು – ಭಾಗ – 2

ಕೋಟೆಯ ಜಾಡು – ಭಾಗ – 2 ಹಿಂದಿನ ಸಂಚಿಕೆಯಿಂದ… ಭಾಗ – 1 https://bit.ly/3ju8P7v ಕೇವಲ ಹತ್ತು ಅಡಿಗಳ ಆಳದಲ್ಲೇ ಜೀವಜಲವಿದೆ. ಆ ಬೆಟ್ಟಗುಡ್ಡಗಳ ನಡುವೆ ಹೇಗೋ ಎಲ್ರೂ ಆಶ್ರಯ ಪಡೆದು ಕೊಂಡ್ರು… ಸುತ್ತಮುತ್ತ ಯಾರೂ ವಾಸಿಸುತ್ತಿಲ್ಲ… ದನಕರುಗಳಿಗೆ ಮೇವು ಹೇಗೋ ದೊರೆಯುತ್ತಿತ್ತು… ಆದರೆ ಇವರಿಗೆ ತಿನ್ನಲು ಏನೂ ಸಿಗುತ್ತಿಲ್ಲ… ಸುತ್ತಮುತ್ತಲಿನ ಹಳ್ಳಿಗಳನ್ನು ಹುಡುಕುತ್ತಾ ಹೊರಟು ಒಂದಷ್ಟು ಜನ ಹೊರಟರು.ಹತ್ತಾರು ಮೈಲುಗಳ ದೂರ ನಡೆದರೂ ಜನಸಂಚಾರ ಕಾಣುತ್ತಿಲ್ಲ…. ಪಿಡ್ಡನಾಯಕನು ತಾನಿದ್ದ ಸ್ಥಳದಿಂದ ಈಶಾನ್ಯ ದಿಕ್ಕಿನ ಕಡೆ […]Read More

ಮಂಡ್ಯ ಜಿಲ್ಲೆಯ ಶಾಸನ ಮತ್ತು ಸಂಸ್ಕೃತಿ

ಮಂಡ್ಯ ಜಿಲ್ಲೆಯ ಶಾಸನ ಮತ್ತು ಸಂಸ್ಕೃತಿ ಲೇಖಕರು: ಡಾ||ಸಂತೇಬಾಚಹಳ್ಳಿ ನಂಜುಂಡಸ್ವಾಮಿಪ್ರಕಾಶಕರು: ಸುಮೇರು ಪ್ರಕಾಶನ ಸಾಕಷ್ಟು ಸಮಯ ಮತ್ತು ಶ್ರಮ ಬೇಡುವ ಕೆಲಸವೆಂದರೆ ಪ್ರಾಗೈತಿಹಾಸಿಕ ಅಧ್ಯಯನ.ಶಾಸನಗಳ ಅಧ್ಯಯನ ಮಾಡುತ್ತಾಅವುಗಳು ನೀಡುವ ಸಾಂಸ್ಕೃತಿಕ ಒಳನೋಟಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಾ ಸುದೀರ್ಘವಾದ ಅಧ್ಯಯನ ಮಾಡಿ ಸಿದ್ಧಪಡಿಸಿದ ಅಧ್ಯಯನ ಪ್ರಬಂಧವೇ ಮಂಡ್ಯ ಜಿಲ್ಲೆಯ ಶಾಸನ ಮತ್ತು ಸಂಸ್ಕೃತಿ.ಒಂದು ಭೌಗೋಳಿಕ ಪ್ರದೇಶದ ರಾಜಕೀಯ,ಸಾಮಾಜಿಕ,ಆರ್ಥಿಕ ಪರಿಸ್ಥಿತಿಯನ್ನು ಆಯಾ ಪ್ರದೇಶದಲ್ಲಿ ಲಭ್ಯವಿರುವ ಶಿಲಾಶಾಸನಗಳು ತಿಳಿಸುತ್ತವೆ ಎಂಬುದಕ್ಕೆ ಈ ಪ್ರೌಢ ಪ್ರಬಂಧವೇ ಸಾಕ್ಷಿ. ಆಂಗ್ಲ ಭಾಷೆಯ passion ಎಂಬ ಪದಕ್ಕೆ […]Read More

ಪಶ್ಚಿಮ ಘಟ್ಟದಲ್ಲೊಂದು ಇಣುಕು – 3

ಪಶ್ಚಿಮ ಘಟ್ಟದಲ್ಲೊಂದು ಇಣುಕು – 3 ಪಶ್ಚಿಮ ಘಟ್ಟಗಳಲ್ಲಿ ಇರುವ ಸಾವಿರಾರು ಬಗೆಯ ಪ್ರಾಣಿ ಮತ್ತು ಸಸ್ಯ ಸಂಕುಲಗಳು ಅತ್ಯಂತ ಮಹತ್ವ ಪಡೆದುಕೊಂಡಿವೆ. ಅತ್ಯಂತ ಸೂಕ್ಷ್ಮ ಪರಿಸರ ವ್ಯವಸ್ಥೆ ಇರುವ ಇಲ್ಲಿ ಹಲವಾರು ಜೀವಿಗಳು ಅಳಿವಿನಂಚಿನಲ್ಲಿವೆ. ಸಿಂಗಳೀಕ ಇದರ ಬಾಲ ಸಿಂಹದ ಬಾಲದಂತಿರುವುದರಿಂದ ಇದಕ್ಕೆ ಸಿಂಹ ಬಾಲದ ಕೋತಿ (ಲಯನ್ ಟೈಲ್ಡ್‌ ಮಕಾಕ್) ಎಂದು ಹೆಸರು. ಇದರ ವೈಜ್ಞಾನಿಕ ನಾಮ ಮಕಾಕ ಸೈಲ್ನಸ್. ಇದರ ತಲೆ ಮತ್ತು ದೇಹದ ಉದ್ದ ಸುಮಾರು ೫೦-೬೦ ಸೆಂ ಮೀ ಬಾಲ […]Read More

ತಾಳ್ಮೆಯ ಭಾವದಲೆಯಲಿ..

ತಾಳ್ಮೆಯ ಭಾವದಲೆಯಲಿ.. ಉರಿ ಕೋಪದ ತಾಪದಿಬಾಳಲಿ ತಾ ಸಾಧಿಸುವುದೇನಿದೆ!ತಾಳ್ಮೆಯ ಮೆಲು ಭಾವದಿ..ಮನವ ಗೆದ್ದು ಬಾಳಲಾಗದೇ!! ಕೋಪದ ದಳ್ಳುರಿಗೆ ಮನವಕೊಡಲು ದಕ್ಕುವ ಭಾವವು ಶೂನ್ಯ!ತುಸುತಾಳ್ಮೆಯಲಿ ವ್ಯವಹರಿಸಿರೆ..ದೊರೆವ ಸಂತಸವು ಎಂದಿಗೂ ಮಾನ್ಯ!! ಸಿಟ್ಟಿನ ಉರಿ ಜೋಳಿಗೆ ಬಗಲಲಿರೆಸುಡುವುದು ಬದುಕು ನಿತ್ಯ!ತಾಳ್ಮೆಯ ಪನ್ನೀರಲಿ ಮಿಂದರೆ…ಬಾಳಲಿ ಸಿಗುವ ನೆಮ್ಮದಿಯು ಸತ್ಯ!! ಕಡುಕೋಪದಿ ಬದುಕು ಸವೆಯಲುಮುಳ್ಳಿನ ಹಾದಿಯಲಿ ನಡೆದಂತೆ!ಸಹನೆಯ ಮಂತ್ರವ ನಿತ್ಯ ಜಪಿಸಿರೆ..ದಾರಿಯಲಿ ಹೂ ಹಾಸಿದಂತೆ!! ಸುಮನಾ ರಮಾನಂದRead More

ಇರುಳ ಹಕ್ಕಿಯ ಅಳಿವು ಉಳಿವು  – ಜೆರ್ಡನ್ಸ್ ಚಿಟವ

ಇರುಳ ಹಕ್ಕಿಯ ಅಳಿವು ಉಳಿವು  – ಜೆರ್ಡನ್ಸ್ ಚಿಟವ “ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ” ನಮ್ಮ ಭಾರತದಲ್ಲಿನ ಪ್ರಕೃತಿ ಸಂರಕ್ಷಣೆ ಹಾಗು ವನ್ಯಜೀವಿ ಸಂಶೋಧನೆಯ ಒಂದು ಪ್ರಖ್ಯಾತ ಸರ್ಕಾರೇತರ ಸಂಸ್ಥೆ (NGO). ನಮ್ಮ ಪ್ರಕೃತಿಯ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ಹಾಗು ಜಾಗೃತಿ ಮೂಡಿಸಿ, ಅಳಿವಿನಂಚಿನ ಜೀವಿಗಳನ್ನು ಗುರುತಿಸುತ್ತ ಅವುಗಳ ಸಂರಕ್ಷಣೆಗೆ ಹಲವಾರು ಕ್ರಮಗಳನ್ನು ಅಳವಡಿಸಿ ಅದರಲ್ಲಿ ಬಹುಪಾಲು ಯಶಸ್ವಿಯನ್ನು ಕಂಡಿರುವ ಈ ಸಂಸ್ಥೆಯಲ್ಲಿ ಪ್ರಖ್ಯಾತ ವನ್ಯ ವಿಜ್ಞಾನಿಗಳು, ಹಾಗು ಪ್ರಕೃತಿ ಪ್ರಿಯರು ಕೆಲಸ ಮಾಡುತ್ತಾ ಬಂದಿದ್ದಾರೆ. ನಮ್ಮ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 46

ಹಿಂದಿನ ಸಂಚಿಕೆಯಿಂದ….. ರಾತ್ರಿ ಊಟವಾದ ಮೇಲೆ, ಮೊದಲ ಯಾಮದಲ್ಲಿಯೇ, ಚಿತ್ರಕನು ರಟ್ಟಾಳನ್ನು ಭೇಟಿ ಮಾಡಲು ಬಂದನು. ಮರುದಿನ ಬೆಳಿಗ್ಗೆ ಪ್ರಯಾಣ ಹೊರಡಬೇಕು. ಕೊಠಡಿಯಲ್ಲಿ ಬೇರೆ ಯಾರು ಇರಲಿಲ್ಲ. ದೀಪದ ಕಂಬದಲ್ಲಿ ಬತ್ತಿಯ ದೀಪ ಉರಿಯುತ್ತಿತ್ತು. ರಟ್ಟಾ ಬಂದು ಚಿತ್ರಕದ ಕೈ ಹಿಡಿದು ಪಕ್ಕದಲ್ಲಿ ನಿಂತು ‘ನಾನು ನಿಮ್ಮ ಜೊತೆ ಬರುವ ಹಾಗಿಲ್ಲ’ ಎಂದಳು. ತಗ್ಗಿದ ದನಿಯಲ್ಲಿ ಮಾತಾಡುತ್ತಿದ್ದಾರೆ. ಚಿತ್ರಕ ‘ಇದೇ ಒಳ್ಳೆಯದು ಇಲ್ಲಿ ನೀನು ಸುರಕ್ಷಿತವಾಗಿರಬಹುದು’ ಎಂದನು. ರಟ್ಟಾ- ನೀವು ಜೊತೆಯಲ್ಲಿ ಇರದಿದ್ದಾಗ ಸುರಕ್ಷತೆ ಎಲ್ಲಿ ಬಂತು? […]Read More

ಹಾವೇರಿ ಜಿಲ್ಲೆ ಆಶಯ ಕವನ

ಹಾವೇರಿ ಜಿಲ್ಲೆ ಆಶಯ ಕವನ ಮತ್ತೊಂದು ಜನ್ಮ ಎಂಬುದೊಂದಿದ್ದರೆಆಗಲಿ ಇಲ್ಲೆ ಹಾವೇರಿ ನೆಲದಲ್ಲೇ,ಸರ್ವಜ್ಞನ ನಾಡು ಸದಾ ಶಾಂತಿಯಿಂದಿರಲಿಗೋವಿಂದ ಭಟ್ಟರ ಕೃಪೆಯೂ ಎಮಗಿರಲಿ ಶರೀರ ವಾಣಿ ಸದಾ ಮೊಳಗುತಲಿರಲಿಕನಕ ಭಕ್ತಿಯದು ಅಮರವಾಗಿರಲಿಗಾನಯೋಗಿಯ ಗಾನ ಸದಾ ಗುನುಗುತಿರಲಿ“ಗೋಕಾಕ”ರ ಚಳುವಳಿ ಮಾದರಿಯಾಗಿರಲಿ ವರದೆ ತುಂಗಭದ್ರೆಯರು ಜನರ ದಾಹ ನೀಗಿಸುತಿರಲಿನಾಗನೂರು ಕೆರೆಯು ತುಂಬಿ ತುಳುಕುತಲಿರಲಿಶಾಂತೇಶ, ಕಾಂತೇಶರು ನಾಡ ಕಾಯುತಲಿರಲಿ.ತಾರಕೇಶ್ವರನ ಕೃಪೆಯು ಸದಾ ಜನರ ಮೇಲಿರಲಿ ಸವಣೂರು ಖಾರದ ರುಚಿ ಕೆಡದೆ ಇರಲಿಬ್ಯಾಡಗಿ ಮೆಣಸಿಗೆ ಎಂದೂ ಬೆಲೆಯಿರಲಿಶಿವಶರಣರ ನಾಡಿದು ಸದಾ ಕಲ್ಪವೃಕ್ಷವಾಗಿರಲಿಕುಡಿತ ಬ್ರಷ್ಠಾಚಾರ ಗಡಿಯಾಚೆಗಿರಲಿ […]Read More

ನಾಚಿಕೆಯ ಮುಟ್ಟಿದರೆ ಮುನಿ

ನಾಚಿಕೆಯ ಮುಟ್ಟಿದರೆ ಮುನಿ ಪ್ರಕೃತಿಯಲ್ಲಿ ಹಲವು ವಿಧದ ಮರ ಗಿಡಗಳು ಮತ್ತು ಜೀವಿಗಳಿದ್ದು, ಅವುಗಳ ಪೈಕಿ ಮುಟ್ಟಿದರೆ ಮುನಿ ಎನ್ನುವ ಗಿಡವು ವಿಭಿನ್ನವಾದ ವೈಶಿಷ್ಟ್ಯತೆಯನ್ನು ಹೊಂದಿದೆ. ಇದಕ್ಕೆ ಆಡುಭಾಷೆಯಲ್ಲಿ ನಾಚಿಗೆ ಮುಳ್ಳು, ಮುಟ್ಟಿದರೆ ಮುಚಕ, ಮುಚ್ಗನ್ ಮುಳ್ಳು, ಪತಿವ್ರತೆ, ಮುಟ್ಟಿದರೆ ಮುನಿ, ಲಜ್ಜಾವತಿ, ಸಂಸ್ಕೃತದಲ್ಲಿ ‘ಅಂಜಲೀ ಕಾರಿಕೆ’ ಆಂಗ್ಲದಲ್ಲಿ ‘ಟಚ್ ಮಿ ನಾಟ್’, ಹಿಂದಿಯಲ್ಲಿ ಚುಯ್ ಮುಯ್, ಸಸ್ಯಶಾಸ್ತ್ರೀಯ ಹೆಸರು ‘ಮಿಮೊಸ ಪುಡಿಕಾ’ (Mimosa Pudica) ಎಂದೆಲ್ಲಾ ಕರೆಸಿಕೊಂಡು ((Touch me not) ಯಾರಿಗೂ ಬೇಡವಾಗಿ ಬೆಳೆಯುವ […]Read More