ಚಿತ್ರಲೋಕದ ಅಭಿಜಾತ ಮೇರು ಹುಣಸೂರು ಕೃಷ್ಣಮೂರ್ತಿ

ಚಿತ್ರಲೋಕದ ಅಭಿಜಾತ ಮೇರು ಹುಣಸೂರು ಕೃಷ್ಣಮೂರ್ತಿ ಲೇಖಕರು: ಡಾ.ಡಿ.ಸತೀಶ ಚಂದ್ರಪ್ರಕಾಶಕರು:ಪ್ರಗತಿ ಪ್ರಕಾಶನ, ಮೈಸೂರು0821-42875589482640555 ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗವು ಕೂಡ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿವೆ ಮೂಕಿ ಚಲನಚಿತ್ರ ಯುಗದಿಂದ ಪ್ರಾರಂಭವಾದಂತ ಚಲನಚಿತ್ರ ರಂಗವು ಟಾಕಿ ಚಿತ್ರಗಳವರೆಗೆ ವಿವಿಧ ಮಜಲುಗಳನ್ನು ಕಂಡಿದೆ. ಪ್ರಸ್ತುತ ,ಹುಣಸೂರು ಕೃಷ್ಣಮೂರ್ತಿಯವರ ಕುರಿತಾದ ಪುಸ್ತಕ “ಚಿತ್ರಲೋಕದ ಅಭಿಜಾತ ಮೇರು ಹುಣಸೂರು ಕೃಷ್ಣಮೂರ್ತಿ” ಕೇವಲ ಹುಣಸೂರು ಕೃಷ್ಣಮೂರ್ತಿಯವರ ಕುರಿತಾದ ವ್ಯಕ್ತಿ ಚಿತ್ರಣವನ್ನು ಅಷ್ಟೇ ಅಲ್ಲದೆ ;ಚಲನಚಿತ್ರ ,ಅದರ ಮಹತ್ವ ;ಮೂಕಿಯಿಂದ ಟಾಕಿಯವರೆಗಿನ ಚಿತ್ರರಂಗದ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 62

ಪ್ರತ್ಯಗಾತ್ಮ ಚಿಂತನ ಇಳಿಹೊತ್ತು ಸಂಜೆಯಲಿ ಮಬ್ಬುಗತ್ತಲೆಯಲ್ಲಿಹುಲು ಸರವಿ ಬಿದ್ದಿರಲು ಹುತ್ತವನು ಬಳಸಿಎಲರುಣಿಯ ಭ್ರಮೆ ಬರಲು ಅದನು ಪರಿಕಿಸಬೇಕುಬಳಿಕವೇ ದಿಟದರಿವು !- || ಪ್ರತ್ಯಗಾತ್ಮ || ಬ್ರಹ್ಮನೆಂದರೆ ನಾಲ್ಕು ಮೊಗದ ಬ್ರಹ್ಮನು ಅಲ್ಲಬ್ರಹ್ಮಾಂಡವ್ಯಾಪಿ ಆ ಬ್ರಹ್ಮ ಪರವಸ್ತುಬ್ರಹ್ಮ ಚಿದ್ಘನ ವಸ್ತು; ನಿರ್ಗುಣ, ನಿರಾಕಾರ,ಬ್ರಹ್ಮ ಚೈತನ್ಯವೈ- || ಪ್ರತ್ಯಗಾತ್ಮ || ಬಳ್ಳಿ ಮಿಂಚಿನ ಹೊಳಪು; ಬಣ್ಣ ಬಣ್ಣದ ಮುಗಿಲುಹುಲ್ಲ ಮೇಲಿನ ಹನಿಯು; ಮಳೆಬಿಲ್ಲ ಸೊಬಗುಎಲ್ಲ ಕ್ಷಣ ಭಂಗರವು, ವೈರಾಗ್ಯ ಸಹಕಾರಿಬಲ್ಲ ಜ್ಞಾನಿಯೆ ಬಲ್ಲ ! – || ಪ್ರತ್ಯಗಾತ್ಮ || […]Read More

ಮುಗ್ಧ ನಗುವಿನ ಸೆಲೆ

ಮುಗ್ಧ ನಗುವಿನ ಸೆಲೆ ಮಗುವು ನಗುವ ನಿಷ್ಕಲ್ಮಶನಗುವಿಗೆ ಬೇರೆ ಸಾಟಿ ಎಲ್ಲಿದೆ!ಕಗ್ಗಂಟಿನಲಿ ನಿತ್ಯ ಸಾಗುವ..ಬಾಳಿನ ಸಂತಸವೇ ಅದರಲಿದೆ!! ಮನದಲಿಣುಕಿ ನೋಡುವನೋವುಗಳು ನಿತ್ಯ ನೂರಿದೆ!ಎಲ್ಲ ಸಂಕಟವ ಮರೆಸುವ..ಮನವ ನಗಿಸುವ ಶಕ್ತಿ ಅದರಲಡಗಿದೆ!! ಕಿಲಕಿಲ ನಗುವಿನ ಕಂದನಮುಗ್ಧತೆಯಲಿ ಸುಳಿಮಿಂಚಿದೆ!ಆ ಮಿಂಚಿನ ನಗುವ ಬೆಳಕಲಿ..ತಾಯ್ತಂದೆಯರ ಸಂತಸವು ಅರಳಿದೆ!! ಜಗದ ಆಗುಹೋಗುಗಳರಿವಿರದಮೊಗದಿ ಸ್ಪಟಿಕದ ತಿಳಿನಗುವಿದೆ!ಮುಗ್ಧತೆಯಲಿ ನಲಿವ ಮಗುವಿನ..ಸಿಹಿನಗುವಲಿ ಸವಿ ಜೇನಿದೆ!! ಸುಮನಾ ರಮಾನಂದRead More

ಜೀವಜಲ

ಜೀವಜಲ ರಸ್ತೆಯ ತುಂಬೆಲ್ಲಾ ಕರೆಕಟ್ಟಿದ ಸಗಣಿಯ ರಾಶಿ, ಅಲ್ಲೇ ಒಣಗಿಹೋದ ಗೋಮೂತ್ರದ ಕರೆಗಳು, ರಸ್ತೆಯ ಇಕ್ಕೆಲಗಳಲ್ಲಿ ನಿಂತ ಅಸಹಾಯಕರಂತೆ , ಅಮಾಯಕರಂತೆ ಕಾಣುವ ಮಂದಿ. ಬಾನಿನಲ್ಲಿ ನಿಗಿನಿಗಿ ಹೊಳಿಯುತಿಹ ಸೂರ್ಯ.. ಅಲ್ಲಲ್ಲಿ ಓಡಾಡುತ್ತಿರುವ ವಾಹನಗಳು. ರಸ್ತೆಯ ಕೂಡು ಸ್ಥಳಗಳಲ್ಲಿ ನಿಂತ ಯುವಕರ ಹತಾಶ ಮುಖಗಳು. ಕೊಳೆ ಬಟ್ಟೆಗಳನ್ನು ಧರಿಸಿದ್ದಾರೆ. ಎಣ್ಣೆ ಕಾಣದ ಕೂದಲು, ಹಾಗೆಯೇ ಊರಿನ ಒಳ ಹೊಕ್ಕರೆ ಪ್ರತಿ ಮನೆಯ ಎದುರಿನಲ್ಲೂ ಹತ್ತಾರು ಕೊಡಪಾನಗಳು, ಪ್ಲಾಸ್ಟಿಕ್ ಬಿಂದಿಗೆಗಳು.. ರಾತ್ರಿಯ ಹನ್ನೆರಡೂವರೆ ಸುಮಾರು, ಬೀದಿಗಳಲ್ಲಾ ನಿರ್ಮಾನುಷವಾಗಿದೆ. ಬೀದಿ […]Read More

ವಿಶ್ವ ಪ್ಯಾಂಗೋಲಿಯನ್ ದಿನ

ವಿಶ್ವ ಪ್ಯಾಂಗೋಲಿಯನ್ ದಿನ ವಿಶ್ವ ಪ್ಯಾಂಗೋಲಿನ್ ದಿನವನ್ನು ಪ್ರತಿವರ್ಷ ಫೆಬ್ರವರಿ ಮೂರನೇ ಶನಿವಾರ ಆಚರಿಸಲಾಗುತ್ತದೆ.ವಿಶ್ವದಲ್ಲಿ ಅತೀ ಹೆಚ್ಚು ಕಳ್ಳಸಾಗಣೆಗೆ ಬಲಿಯಾಗಿ ವಿನಾಶವಾಗುವ ಹಂತ ತಲುಪಿದ ಪ್ಯಾಂಗೋಲಿನ್ಗಳ ಬಗೆಗೆ ಅರಿವು ಹಾಗು ನಿಸರ್ಗದಲ್ಲಿ ಅವುಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2012 ರಿಂದ ವಿಶ್ವ ಪ್ಯಾಂಗೋಲಿನ್ ದಿನವನ್ನು ಆಚರಿಸಲಾಗುತ್ತಿದೆ. ಪ್ಯಾಂಗೋಲಿನ್ ಅಥವಾ ಚಿಪ್ಪುಹಂದಿ ಬಗೆಗೆ ಕೆಲವು ಕುತೂಹಲಕರ ಮಾಹಿತಿ ಇಲ್ಲಿವೆ. 🔸ಚಿಪ್ಪು ಹಂದಿಗಳು ಆಫ್ರಿಕಾ ಹಾಗು ಏಷಿಯಾ ಖಂಡಗಳಿಗೆ ಸೀಮಿತವಾಗಿದ್ದು ಇವುಗಳಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಎಂಟು […]Read More

ಚುಟುಕುಗಳು – ಸುಮನಾ ರಮಾನಂದ

ಚುಟುಕುಗಳು ಅಂದದ ವಿಸ್ತಾರ ಆಸರೆಯ ಸೆಲೆ ತಾಯಿಯ ಮಡಿಲುಪ್ರೀತಿಯ ನೆಲೆ ತಂದೆಯ ಹೆಗಲುಆಲದಮರದ ಚೆಲುವು ಬಿಳಲಲಿನದಿಗಳಿಗಿರದ ವಿಸ್ತಾರ ಕಡಲಲಿ ಹೆತ್ತವರ ಹೆಮ್ಮೆ ಮಡಿಲಲಿ ಬೆಳೆದ ಕಂದತಮ್ಮ ಹೆಗಲಿ ಗೆ ಆಸರೆಯಾದ(ಳು)!ಕಡಲಿ ನಷ್ಟು ಪ್ರೀತಿ ತೋರುತಾಬದುಕಲಿ ಬಿಳಲಿ ನಂತೆ ಊರುಗೋಲಾದ(ಳು)!! ಅಗಾಧ ಪ್ರೀತಿ ಕಡಲಿನಂತಹ ಒಲವಿಗೆ ಹೆಗಲಾಗಿಮರಕೆ ಜೋತುಬೀಳುವ ಬಿಳಲಿನಂತೆ..ಅಮ್ಮನ ಮಡಿಲು ಬದುಕಿನ ವಿಸ್ತಾರ ಮರಕಿರುವಂತೆ ಗಟ್ಟಿ ಬಿಳಲುಸಂಸಾರದಲಿ ತಂದೆಯ ಹೆಗಲು!ಜಗ್ಗಿದರೂ ಅದೆಂದಿಗೂ ಕುಗ್ಗದು..ಹಾಂ..ಅದೊಂದು ವಿಶಾಲ ಕಡಲು!!ಇದ ಕಂಡು ಸಂತಸಪಡುವುದುತಾಯಿಯ ಮಡಿಲು!!!! ಸುಮನಾ ರಮಾನಂದRead More

ತಲೆಮಾರಿನ ಅಂತರ

ತಲೆಮಾರಿನ ಅಂತರ ಓಬೀರಾಯನ ಕಾಲದ ಪ್ರತಿನಿಧಿಗಳಿವರಂತೆ….ಶುರುವಾದರೆ ಸಾಕು ಇವರ ಮಾತು ,ಹೇಳುವರು ಬಗೆ ಬಗೆಯ ಕತೆಗಳ ಕಂತೆ…ನೂರು ರೂಪಾಯಿ ಸಂಬಳದ ಕತೆಯ ವ್ಯಥೆ… ಮಳೆ ಬೆಳೆಗಳ ಹಸಿರು ಸಿರಿಗಳ ಮನ ಸೆಳೆಯುವ, ಕತೆ ಹೇಳುವರು ಇವರು…ದೋಣಿಯಲಿ ತೇಲಿದ,ಬೆಟ್ಟವನು ಹತ್ತಿದ, ನೀರಿನಲಿ ಆಡಿದ ಕತೆ ಹೇಳುವರು ಇವರು.. ಇಳಿಜಾರಿನಲ್ಲಿ ಜಾರಿದ, ಗಾಯಕೆ ಅರಿಶಿನ ಹಚ್ಚಿದ ,ರಾಜಣ್ಣನ ಸಿನಿಮಾ ನೋಡಿಗದ್ಗದಿತರಾದ , ನಾನೇ ರಾಜಕುಮಾರನೆಂದು ಬೀಗಿದ ಕತೆ ಹೇಳುವರು ಇವರು… ತುತ್ತು ಅನ್ನಕ್ಕೂ ಪರದಾಡಿದರಂತೆ..ಎಲ್ಲಿಂದೆಲ್ಲಿಗೆ ಹೋಗುವುದಾದರೂ ಆಗ ಬರೀ ನಡಿಗೆಯಂತೆ…ಮೋಟಾರು […]Read More

ಇಪ್ಪತ್ತು ವರ್ಷಗಳಾದರೂ ಕೊಳೆಯದ ನಾಯಿಯ ಕಳೇಬರ

ಇಪ್ಪತ್ತು ವರ್ಷಗಳಾದರೂ ಕೊಳೆಯದ ನಾಯಿಯ ಕಳೇಬರ ಈ ಜಗತ್ತಿನಲ್ಲಿ ಯಾವುದೇ ಜೀವಿಯು ಸತ್ತರೂ ಕೆಲವು ದಿನಗಳ ನಂತರ ಅದು ಕೊಳೆತು ದುರ್ವಾಸನೆ ಬೀರಲಾರಂಭಿಸುವುದು ಇಲ್ಲಿನ ನಿಯಮ. ಆದರೆ 1980 ರಲ್ಲಿ ಜಾರ್ಜಿಯಾ ದೇಶದ ಕಾಡೊಂದರಲ್ಲಿ ಓಕ್ ಮರಗಳನ್ನು ಕತ್ತರಿಸುತ್ತಿದ್ದ ಸಂದರ್ಭ ಮರದ ಟೊಳ್ಳಾದ ಒಳಮೈಯಲ್ಲಿ 20 ವರ್ಷಗಳ ಹಿಂದೆ ಸತ್ತಿದ್ದ ನಾಯಿಯ ಕಳೇಬರವು ದೊರೆತಿದ್ದು, ಅದರ ದೇಹವು ಕೊಳೆಯದೇ ಸಂರಕ್ಷಿತ ಸ್ಥಿತಿಯಲ್ಲೇ ಪತ್ತೆಯಾಗಿತ್ತು. ಹೀಗೆ ದೊರೆತ ನಾಯಿಯನ್ನು ಮರದ ಸಮೇತವಾಗಿ ಕತ್ತರಿಸಿ ತಂದು ಇಲ್ಲಿನ ‘ಫಾರೆಸ್ಟ್ ವರ್ಲ್ಡ್ […]Read More

ನೇಪಾಳದಲ್ಲಿ ಮಾಗಡಿ ಗಂಗಮ್ಮನ ಸಾಹಸ ಕಥೆ

ನೇಪಾಳದಲ್ಲಿ ಮಾಗಡಿ ಗಂಗಮ್ಮನ ಸಾಹಸ ಕಥೆ ನಮ್ಮ ಕನ್ನಡ ನಾಡಲ್ಲಿ ಜನಿಸಿ ನೇಪಾಳ ರಾಷ್ಟ್ರದಲ್ಲಿ ಸಾಧನೆಗಳ ಮೂಲಕ ಗುರುತಿಸಲ್ಪಟ್ಟ ಮಹಿಳೆಯ ಜೀವಗಾಥೆ ಇದು. ಬಹಳ ಹಿಂದೆ 2012 ರಲ್ಲಿ ಈ ವರದಿಯು ಲೇಖನ ರೂಪದಲ್ಲಿ ಉದಯವಾಣಿಯ “ಅವಳು” ಸಂಚಿಕೆಯಲ್ಲಿ ಪ್ರಕಟವಾಗಿತ್ತು ಆನಂತರ ಅಂತರ್ಜಾಲದಲ್ಲಿ ಎಷ್ಟು ಹುಡುಕಿದರೂ ಇದರ ಬಗ್ಗೆ ಮಾಹಿತಿ ಹಾಗು ಫೋಟೋಗಳು ಲಭ್ಯವಿಲ್ಲ. ಯಾವುದೊ ಒಂದು ಕಳ್ಳತನದ ಪ್ರಕರಣದ ಬೆನ್ನತ್ತಿದ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಳಾದ ಕೆ. ಪಿ. ಸತ್ಯನಾರಾಯಣ್, ಮಲ್ಲಿಕಾರ್ಜುನ್, ಸಿರಾಜುದ್ದೀನ್, […]Read More

ವಿಭಿನ್ನ ಪ್ರವಾಸ ಕೃತಿ “ಕಗ್ಗತ್ತಲೆಯ ಖಂಡದಲ್ಲಿ” ಕೃತಿ ಲೋಕಾರ್ಪಣೆ

ವಿಭಿನ್ನ ಪ್ರವಾಸ ಕೃತಿ “ಕಗ್ಗತ್ತಲೆಯ ಖಂಡದಲ್ಲಿ” ಕೃತಿ ಲೋಕಾರ್ಪಣೆ ಫೆಬ್ರವರಿ 5 ನೇ ತಾರೀಕು ಭಾನುವಾರ ಮೈಸೂರಿನ “ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್” ಸಭಾಂಗಣದಲ್ಲಿ ಡಾ. ಅರಕಲಗೂಡು ನೀಲಕಂಠಮೂರ್ತಿ ಯವರ ಕೃತಿ ಲೋಕಾರ್ಪಣೆಯ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ  ಶ್ರೀಯುತ ಡಾ.ಕೆ ಎಸ್. ರಂಗಪ್ಪ ನವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. “ಸಾಮಾನ್ಯವಾಗಿ ಪ್ರವಾಸ ಕಥನಗಳಲ್ಲಿ ಲೇಖಕರು ಆಯಾ ದೇಶದ ಸಂಸ್ಕೃತಿ ಪರಂಪರೆಯನ್ನು ವೈಭವೀಕರಿಸುವುದೇ ಹೆಚ್ಚು, ಆದರೆ ಡಾ. ಅರಕಲಗೂಡಿನ ನೀಲಕಂಠಮೂರ್ತಿಯವರು ಆಫ್ರಿಕಾ ಖಂಡದಲ್ಲಿ ತಮ್ಮ […]Read More