ಮುಖಾಮುಖಿ – ಮಂಜುನಾಥ ಅಜ್ಜಂಪುರ ಪುಸ್ತಕ ಬಿಡುಗಡೆ

ಮುಖಾಮುಖಿ – ಮಂಜುನಾಥ ಅಜ್ಜಂಪುರ ಪುಸ್ತಕ ಬಿಡುಗಡೆ ಕೃತಿ : ನಿಜ-ಇತಿಹಾಸದೊಂದಿಗೆ – ಮುಖಾಮುಖಿಲೇಖಕರು : ಮಂಜುನಾಥ ಅಜ್ಜಂಪುರಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ “ವಾಡಿಯಾ ಸಭಾಂಗಣ”,6 ಬಿ.ಪಿ.ವಾಡಿಯಾ ರೋಡ್, ಬಸವನಗುಡಿ, ಬೆಂಗಳೂರು 560004ಸಮಯ: ಬೆಳಗ್ಗೆ 10.00ಕ್ಕೆ ಇತಿಹಾಸ ಅಂದಕೂಡಲೇ ಅದೊಂದು ಬೋರಿಂಗ್ ಸಬ್ಜೆಕ್ಟ್ ಅನ್ನುವ ಮಾತೇ ಹೆಚ್ಚಾಗಿ ಕೇಳಿಬರುತ್ತದೆ. ನಾವು ಪಠ್ಯ ಪುಸ್ತಕಗಳಲ್ಲಿ ಓದುವ ಇತಿಹಾಸ ನಮ್ಮ ಮನಸ್ಸನ್ನು ತಟ್ಟದೇ ಇರುವುದೇ ಇಂಥದ್ದೊಂದು ಅಭಿಪ್ರಾಯ ಮೂಡಲು ಮುಖ್ಯ ಕಾರಣವಿರಬಹುದು. ದೇಶಾಭಿಮಾನವನ್ನು ಜಾಗೃತಗೊಳಿಸದ, ನಮ್ಮವರ ಸುದ್ದಿಯನ್ನು […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 54

ಅಂತಿಮ ಭಾಗ ಮತ್ತೆ ಕಪೋತಕೂಟ ಅರಮನೆ ದೀಪಮಾಲಿಕೆಗಳಿಂದ ಝಗಝಗಿಸುತ್ತಿದೆ. ಮಂಗಳ ವಾದ್ಯಗಳು ಮೊಳಗುತ್ತಿವೆ. ಝಲ್ಲರಿ- ಮುರಳಿ- ಮೃದಂಗಗಳ ಮೃದುಮಧುರ ನಿನಾದ ವಾತಾವರಣದಲ್ಲೆಲ್ಲ ತುಂಬಿದೆ. ನಗರದ ಬೀದಿ ಬೀದಿಗಳಲ್ಲಿ ಗಂಡು ಹೆಣ್ಣುಗಳ ನೃತ್ಯಗೀತಗಳು ಇನ್ನೂ ಕಡಿಮೆಯಾಗಿಲ್ಲ. ಪುರಾತನ ರಾಜಪುತ್ರನಿಗೂ ನೂತನ ರಾಜಕುಮಾರಿಗೂ ಮದುವೆ ಎರಡು ರಾಜ ವಂಶಗಳು ಒಂದಾಗಿವೆ. ರಟ್ಟ ಧರ್ಮಾದಿತ್ಯರು ಅಳಿಯನ ಕೈಗೆ ರಾಜ್ಯಭಾರವನ್ನು ಒಪ್ಪಿಸಿ ಚಿಲ್ಲಕೂಟ ವಿಹಾರದಲ್ಲಿ ಆಶ್ರಯ ಪಡೆದಿದ್ದಾರೆ. ಸಮ್ರಾಟ ಸ್ಕಂದಗುಪ್ತರು ವಧೂವರರಿಗಾಗಿ ಸೇನಾ ಶಿಬಿರದಿಂದ ಐದು ಆನೆಗಳನ್ನು ಕಾಣಿಕೆಯಾಗಿ ಕಳುಹಿಸಿಕೊಟ್ಟಿದ್ದಾರೆ. ವಿಶ್ವಾಸಘಾತಕ ಕಿರಾತ […]Read More

ವಿಶ್ವದ ಅನಧಿಕೃತ ಅತ್ಯಂತ ಚಿಕ್ಕ ದೇಶ ಸೀಲ್ಯಾಂಡ್

ವಿಶ್ವದ ಅನಧಿಕೃತ ಅತ್ಯಂತ ಚಿಕ್ಕ ದೇಶ ಸೀಲ್ಯಾಂಡ್ ಜಗತ್ತಿನಲ್ಲಿ ಗಾತ್ರದಲ್ಲಿ, ಜನಸಂಖ್ಯೆಯಲ್ಲಿ ಮತ್ತು ಶ್ರೀಮಂತಿಕೆಯಲ್ಲಿ ಅನೇಕ ದೊಡ್ಡ ಮತ್ತು ಸಣ್ಣ ರಾಷ್ಟ್ರಗಳಿವೆ. ದೊಡ್ಡ ರಾಷ್ಟ್ರಗಳ ಪೈಕಿ ರಷ್ಯಾ, ಅಮೆರಿಕ, ಚೀನಾ, ಬ್ರೆಜಿಲ್, ಆಸ್ಟ್ರೇಲಿಯಾ, ಕೆನಡಾ ಮತ್ತು ಭಾರತಗಳು ಕ್ರಮವಾಗಿ ಪ್ರಥಮ ಏಳು ಸ್ಥಾನಗಳಲ್ಲಿವೆ. ಹಾಗೇ ಪ್ರಪಂಚದಲ್ಲಿ ಅನೇಕ ಸಣ್ಣ ದೇಶಗಳಿದ್ದು, ಅವುಗಳ ಜನಸಂಖ್ಯೆ ಒಂದು ಲಕ್ಷಕ್ಕಿಂತಲೂ ಕಡಿಮೆಯಿದೆ. ಆದರೆ ಇಲ್ಲೊಂದು ತೀರಾ ಸಣ್ಣ ದೇಶವೊಂದಿದ್ದು, ಅದರ ಹೆಸರು ಸೀಲ್ಯಾಂಡ್ ದೇಶ. ಈ ದೇಶದ ಒಟ್ಟು ಸುತ್ತಳತೆಯು ಒಂದು […]Read More

ಅಳಿವಿಲ್ಲದ ಕನ್ನಡ

ಅಳಿವಿಲ್ಲದ ಕನ್ನಡ ಒಂದು ಭಾಷೆಯನ್ನು ಮಾತನಾಡಲು ಕಲಿತರೆ ಸಾಕು,ಪ್ರೀತಿಸಿದರೆ ಸಾಕು,ಅದರ ಬಗ್ಗೆ ತಿಳಿಯುವ,ಕಲಿಯುವ,ಬೆಳೆಸುವ ಹಂಬಲ ತಾನಾಗಿಯೇ ಮೊಳಕೆಯೊಡೆಯುತ್ತದೆ.ಕನ್ನಡಕ್ಕೆ ಬೇಕಾಗಿರುವುದೂ ಅದೇ ಪ್ರೀತಿಸುವ ಜನತೆ.ಪರಭಾಷಾ ವ್ಯಾಮೋಹ ಇರಬಾರದೆಂದಲ್ಲ,ಪ್ರಥಮ ಆದ್ಯತೆ ಮಾತೃಭಾಷೆ ಆಗಬೇಕು. ತಾನು ಜನ್ಮವೆತ್ತಿದ ನಾಡಿಗೆ ಒಬ್ಬ ಸಾಹಿತಿ,ಕಲಾವಿದ,ಶ್ರೀಸಾಮಾನ್ಯ ಕೂಡ ಸಲ್ಲಿಸಬೇಕಾದ ಸೇವೆಯುಂಟು ,ಅದೇ ತಾಯ್ನುಡಿಯ,ನೆಲದ ಭಾಷೆಯ ಸೇವೆ ಅದು ನಮ್ಮದೇ ಮನೆಯಲ್ಲಿ,ಪರಿಸರದಲ್ಲಿ ಕನ್ನಡದಲ್ಲಿ ವ್ಯವಹರಿಸುವುದರಿಂದ ಆರಂಭಗೊಂಡರೆ ಸಾಕು,ಕನ್ನಡ ಸೇವೆಗೆ ಕಂಕಣ ಕಟ್ಟಿ ನಿಂತಂತೆ. ಕನ್ನಡ ಭಾಷೆ,ಪ್ರಪಂಚದ ಪುರಾತನ ಭಾಷೆಗಳಲ್ಲಿ ಒಂದು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯಅತಿ ಹೆಚ್ಚು […]Read More

ಬಾಳ ಪಯಣಿಗರು

ಬಾಳ ಪಯಣಿಗರು ಜೋಡೆತ್ತಿನಂದದಿ ಬಾಳ ದಾರಿಯಲಿನಗುನಗುತಾ ಸಾಗಿದೆವು..ಎದುರಿಸಿದ ಸಂಕಷ್ಟಗಳಮೌನದಲಿ ಸಹಿಸಿದೆವು!! ಕಲ್ಲುಮುಳ್ಳಿನ ಹಾದಿಯಲಿಜೊತೆಯಾಗಿ ನಡೆದೆವು..ಸುಖಸಂತಸದ ದಿನಗಳಲಿನೋವೆಲ್ಲ ಮರೆತೆವು!! ರವಿ ತಂದ ಹಗಲಿನಲ್ಲಿಬೆಳಕನು ಕಂಡೆವು..ಶಶಿ ಮೂಡಿದಇರುಳಲಿ ಮಿಂದೆವು!! ಬದುಕನು ಬಂದಂತೆಸ್ವೀಕರಿಸುತಾ ನಡೆದಿಹೆವು..ಜೀವನದ ತಿರುವುಗಳನೆದುರಿಸಿಹಬಾಳಪಯಣಿಗರು ನಾವು!! ನಗುನಗುತಾ ನಲಿದಿಹೆವು ಸುಮನಾ ರಮಾನಂದRead More

ಬೀಸುವ ಕಲ್ಲು

ಬೀಸುವ ಕಲ್ಲು ರಾಗಿ ಬೀಸೋ ರಾಜ್ಯಾದೊಳಗೆನಾನೂ ನೀನೂ ಜೋಡಿಜೀವನನ ಕಾಲ ಹೇಗಿತ್ತು ಕೇಳೋ ನನ ಜಾಣ ಮನೆ ತುಂಬಾ ನೂರಾರು ಮಂದಿಎಲ್ರಿಗೂ ಬೇಕು ಮುದ್ದೆ ರೊಟ್ಟಿಸೇರು ಸೇರು ರಾಗಿ ಬೀಸೋ ಕಾಲ ನನ ಜಾಣ ಬೆಳಗೆದ್ದು ನೀರ್ಹೊತ್ತು ಕಸ ಹೊಡೆದುಆಕಳ ಮೈ ತಿಕ್ಕಿ ಹಾಲು ಹಿಂಡಿಕೆರೆಯಲ್ಲಿ ಮೈ ತೊಳೆದೆ ನನ ಜಾಣ ಬುಡ್ಡಿ ದೀಪದ ಬೆಳಕಲ್ಲಿ ಪಾಟಿ ಹಿಡಿದುಮಕ್ಕಳಿಗೆ ಪಾಠ ಕಲಿಸಿ ದೊಡ್ಡೋರ ಮಾಡಿಬಲು ಪಾಡು ಪಟ್ಟೆ ಕೇಳೋ ನನ ಜಾಣ ಈಗುಂಟು ಸರ್ಕಾರ ಅದು ಕೊಟ್ಟ […]Read More

ಕಂಡಿಲ್ಲಾ ಗುಲಾಬಿ ತಲೆಯ ಬಾತು

ಕಂಡಿಲ್ಲಾ ಗುಲಾಬಿ ತಲೆಯ ಬಾತು ನಿಮ್ಮೂರ ಕೆರೆಗಳಲ್ಲಿ ತೊರೆಗಳಲ್ಲಿ ಬಿಳಿಯ ಬಣ್ಣದ ಬಾತುಕೋಳಿಗಳು ವಿಹರಿಸುತ್ತಿರುವುದನ್ನು ನೋಡಿರುತ್ತೀರ! ಆದರೆ ಗುಲಾಬಿ ಬಣ್ಣದ ತಲೆಯ ಬಾತುಕೋಳಿಗಳನ್ನು ಕಂಡಿದ್ದೀರಾ? ನೀವಷ್ಟೇ ಅಲ್ಲಾ 1940 ರಿಂದಾಚೆಗೆ ಯಾರು ಕಂಡಿಲ್ಲ. ನಮ್ಮ ಭಾರತ, ಮ್ಯಾನ್ಮಾರ್ (ಬರ್ಮಾ) ಹಾಗು ಬಾಂಗ್ಲಾದೇಶದ ಜೌಗು ಪ್ರದೇಶಗಳಲ್ಲಿ ಯತ್ತೇಚ್ಛವಾಗಿ ಅಧಿಕ ಸಂಖ್ಯೆಯಲ್ಲಿ ಕಾಣಿಸುತಿದ್ದ ಗುಲಾಬಿ ಬಣ್ಣದ ಬಾತು ಇದ್ದಕಿದ್ದಂತೆ ನಿಗೂಢವಾಗಿ ಕಣ್ಮರೆಯಾದದ್ದು ಹೇಗೆ? “ಪಿಂಕ್ ಹೆಡೆಡ್ ಡಕ್” – “ರೋಡೋನೆಸ್ಸಾ ಕ್ಯಾರಿಯೋಫಿಲೇಸಿಯಾ” (Rhodonessa caryophyllacea) ಎಂದು ಹೆಸರಿಸಿರುವ ಈ ಬಾತುಕೋಳಿಗಳನ್ನು […]Read More

ಅಮೇಜಾನ್ ಮತ್ತು ಸಹಾರಾ

ಅಮೇಜಾನ್ ಮತ್ತು ಸಹಾರಾ ಪ್ರಕೃತಿಯಲ್ಲಿ ವಾಯುವನ್ನ ನೇರವಾಗಿ ನೋಡಲಾಗದಿದ್ದರೂ ಅದರ ಅರೂಡಾವಸ್ತೆಯಲ್ಲಿ ಅನುಭವಿಸುತ್ತೇವೆ. ಸರೂಪಗಳ ಮೇಲೆ ಗಾಳಿ ತನ್ನ ವಿವಿಧ ಸ್ತಿತಿಗಳಲ್ಲಿ ಉಂಟುಮಾಡುವ ಪರಿಣಾಮದ ಚಿತ್ರಗಳಲ್ಲಿ ಅದು ಗೋಚರವಾಗುತ್ತದೆ;ತನ್ನ ಗರಿಗಳನ್ನೆಲ್ಲ ಒಕ್ಕಡೆಗೆ ಚಾಚಿ, ಬಾಗಿ,ತೂಗಾಡುತ್ತಿರುವ ತೆಂಗಿನ ಮರದ ಚಿತ್ರದಲ್ಲಿ, ಬರ್ರನೇ ಬೋರ್ಗರೆಯುತ್ತಾ ತೀರವನ್ನಪ್ಪಳಿಸುತ್ತಿರುವ ಕಡಲಿನ ತೆರೆಗಳಲ್ಲಿ,ಆಕಾಶದಲ್ಲಿ ರಿಂಗಣಗುಣಿಯುತ್ತಿರುವ ಹುಲ್ಲಿನ ಚಿಂದಿಗಳಲ್ಲಿ, ಬಾನಂಗಳದಲ್ಲಿ ಚಲಿಸುವ ಕಾರ್ಮೋಡಗಳಲ್ಲಿ, ಒಯ್ಯೇಂದು ತಲೆದೂಗುವ ಹೂಮರ ಲತೆಬಳ್ಳಿಗಳಲ್ಲಿ ..ಇಂತಹ ನೂರಾರು ಚಿತ್ರಗಳಲ್ಲಿ , ಬಲ್ಗಾಳಿಯಾಗಿ, ಕಾರ಼್ಗಾಳಿಯಾಗಿ, ಬಿರುಗಾಳಿಯಾಗಿ, ತಿರಿಗಾಳಿಯಾಗಿ, ತಂಗಾಳಿಯಾಗಿ, ಮೇಲ್ಗಾಳಿಯಾಗಿ ಅನೇಕಾವಸ್ಥೆಯಲ್ಲಿ ವಾಯು […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 53

ಕಳೆದ ಸಂಚಿಕೆಯಿಂದ…. ಕಿರಾತ ತನ್ನ ಭವನದಲ್ಲಿಯೇ ಇದ್ದನು. ಅವನು ನಗುನಗುತ್ತ ಚಿತ್ರಕನೊಡನೆ ಮಾತನಾಡಿದನು. ‘ದೂತಮಹಾಶಯರೆ, ತಾವು ವಾಪಸು ಹೋಗಲು ಬಹಳ ಕಾತರರಾಗಿದ್ದೀರಿ. ಆದರೆ ವಿಷಾದ ಸಂಗತಿಯೆಂದರೆ ಧರ್ಮಾದಿತ್ಯರ ಆರೋಗ್ಯ ಮೊದಲಿನಂತೆಯೇ ಯಥಾಸ್ಥಿತಿ. ಯಾವುದೇ ಬದಲಾವಣೆಯಾಗಲೀ ಸುಧಾರಣೆಯಾಗಲೀ ಕಂಡು ಬರುತ್ತಿಲ್ಲ. ತಾವು ಇನ್ನೂ ಒಂದೆರಡು ದಿನ ಇಲ್ಲಿಯೇ ಇರಬೇಕಾಗುತ್ತದೆ. ಚಿತ್ರಕ ಉತ್ತರ ಕೊಡಲಿಲ್ಲ. ಕಿರಾತನನ್ನೇ ದುರುಗುಟ್ಟಿಕೊಂಡು ನೋಡುತ್ತ ಇದ್ದು ಬಿಟ್ಟನು. ಕಿರಾತ- ಒಂದು ವೇಳೆ ತಾವು ಹೋಗಲೇಬೇಕು ಎನ್ನುವುದಾದರೆ ನಾಳೆ ಬೆಳಗ್ಗೆ ಹೋಗಬಹುದು. ಆದರೆ ತಾವು ಇಲ್ಲಿ ಯಾವ […]Read More

ಜಲ ಜೀವನ

ಜಲ ಜೀವನ ಚೆಂದದ ರಾತ್ರಿಯಲ್ಲಿ ನೀರವ ಮೌನದಲ್ಲಿ ಕಾರ್ಮೋಡದ ಕತ್ತಲಲ್ಲಿ ಮಿರಗುಟ್ಟುವ ಡಾಂಬರಿನ ರಸ್ತೆಯ ಮೇಲೆ ಕಪ್ಪನೆಯ ಕಾರೊಂದು ಭರ್ರನೇ ಓಡುತಿದೆ. ಕಾರಿನಲ್ಲಿ ನಾಲ್ಕು ಜನರು ಇದ್ದಾರೆ. ಕಾರಿನ ಸ್ಟೀರಿಯೋದಲ್ಲಿ ಹಿಂದಿ ಹಾಡೊಂದು ಕೇಳುತ್ತಿದೆ. ಕಾರು ಸುಮಾರು ಅರವತ್ತು ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಎತ್ತರೆತ್ತರದ ಮರಗಳು ಗರಬಡಿದಂತೆ ನಿಂತಿವೆ. ಕಾರಿನ ಹೆಡ್‌ಲೈಟು ಪ್ರಖರವಾಗಿ ರಸ್ತೆಯ ಹಳ್ಳಕೊಳ್ಳಗಳನ್ನು ತೋರುತ್ತಿದೆ. ಗಾಡಿಯ ವೇಗ ಕ್ರಮೇಣ ಕ್ಷೀಣಿಸುತ್ತಿದೆ. ಕಾರಿನೊಳಗಿದ್ದ ಎಲ್ಲರೂ ಕುಳಿತಲ್ಲೇ ತುಸು ನೇರವಾದ್ರು,ಇದ್ದಕ್ಕಿಂದತೆಯೇ ರಸ್ತೆಯ ಇಕ್ಲೆಲಗಳ ಮರಗಳು […]Read More