ಅದೃಷ್ಟದಾಟ ಎಲ್ಲರ ಬಾಳಲೂ ಬಯಸಿದಂತೆಅದೃಷ್ಟಭಾಗ್ಯ ಸಿಗದು!ಅದೊಂದು ಗಗನಕುಸುಮದಂತೆಕೆಲವರ ಪಾಲಿಗಿರುವುದು!! ಅದೃಷ್ಟವೆಂಬುದು ಮರಳುಗಾಡಿನನೀರ ಪುಟ್ಟ ಸೆಲೆಯಂತೆ!ಕೈಗೆಟುಕಿದಂತಾಗಿ ಮಾಯಕಂಡರೂ ಕಾಣದಂತೆ!! ಅದೃಷ್ಟದಾಟಕೆ ಸಿಕ್ಕವರುಸಂತಸವಾಗಿಹರು!ಸಿಗದವರು ಕೊರಗುತಲಿಹರು!ಪರಿಶ್ರಮದೊಡೆ ಅದೃಷ್ಟವಿರೆಯಶಸ್ಸು ಖಂಡಿತವೆಂಬಮಾತನರಿಯರಿವರು!! ಅದೃಷ್ಟದ ಮಾತೊಂದೇ ನಂಬಿನೂಕದಿರಿ ಬಾಳನು ಹಲುಬಿ!ದೈವದೊಲುಮೆಯೂ ಬೇಕುನೆಮ್ಮದಿಯಲಿ ಸಾಗಲು ಬದುಕು!! ಸುಮನಾ ರಮಾನಂದRead More
ಜ್ವಾಲಾಮುಖಿ ಹಿಡಿದಿಟ್ಟ ಬಿಕ್ಕುಗಳಾಗಿ,ಕಣ್ಣಾಲಿಯಲ್ಲಿಂಗಿದಆಸೆಗಳಾಗಿ, ಬಣ್ಣಗೆಟ್ಟ,ಕಮರಿದ ಕನಸುಗಳಾಗಿವೆ,ಕಾಯ್ದುಕೊಳ್ಳದ ಸಂಬಂಧಗಳು! ಸುಡುವ ಕೆಂಡವಾಗಿ,ಒಣಹುಲ್ಲ ಮೆದೆಯಾಗಿ,ಸುಟ್ಟು ಕರಕಲಾಗಲುತಾವೇ ಸಿದ್ಧವಾಗಿ ನಿಂತಿದೆಕಾಯ್ದುಕೊಳ್ಳದ ಸಂಬಂಧಗಳು! ಕಾಲದ ಬಿರಡೆಯಲ್ಲಿನಬಂಧಿಗಳಾಗಿ, ಕರ್ತವ್ಯವೆಂಬಗೂಟದ ಎತ್ತಿನಂತಾಗಿ,ತಿರುಗುತ್ತ ಕಳಚುತಿದೆಕಾಯ್ದುಕೊಳ್ಳದ ಸಂಬಂಧಗಳು! ಅಂತರಾಳದ ಕುದಿವಕೊಪ್ಪರಿಗೆಗೆ, ಕಳವಳದಮನದ ಕಾವನಿಳಿಸುತ್ತಒಳಗೊಳಗೇ ತಳಮಳಿಸಿದೆಕಾಯ್ದುಕೊಳ್ಳದ ಸಂಬಂಧಗಳು! ವೇದನೆ ಸಂವಾದವಾಗಿ,ಮೌನ ಕರಗಿ ಮಾತಾಗಿ,ಮನದ ಕಾವ ಆರಿಸುತ,ನೆಮ್ಮದಿಯ ಅರಸಬೇಕಿದೆಕಾಯ್ದುಕೊಂಡು ಸಂಬಂಧಗಳ! ಶ್ರೀವಲ್ಲಿ ಮಂಜುನಾಥRead More
ಸೌರಶಕ್ತಿ ಚಾಲಿತ ರೊಟ್ಟಿ ತಯಾರಿಕೆ ಯಂತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಶ್ರೀಮಂತರಿಂದ ಕೂಡಿದ ಬಡ ರಾಷ್ಟ್ರವೆಂದು ಕರೆಯಲಾಗುತ್ತಿದ್ದು, ಈ ದೇಶದಲ್ಲಿ ಹೇರಳವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳದೇ (ತಾಂತ್ರಿಕತೆ ಹಾಗೂ ಜ್ಞಾನದ ಕೊರತೆಯಿಂದ) ಇಲ್ಲಿನ ಕಚ್ಚಾವಸ್ತುಗಳನ್ನು ಇತರ ದೇಶಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ಅಲ್ಲಿಂದ ಅಧಿಕ ಬೆಲೆಗೆ ಸಿದ್ಧ ಉತ್ಪನ್ನಗಳನ್ನು ಖರೀದಿಸುತ್ತಿರುವುದು ದುರದೃಷ್ಟಕರ. ಇದರೊಂದಿಗೆ ನಮ್ಮ ದೇಶದ ಒಟ್ಟು ಜನಸಂಖ್ಯೆಯು ಸುಮಾರು 136 ಕೋಟಿಯಷ್ಟಿದ್ದು, ನೈಸರ್ಗಿಕ ಸಂಪನ್ಮೂಲದೊಂದಿಗೆ ಮಾನವ ಸಂಪನ್ಮೂಲವೂ ಈ ದೇಶದ ದೊಡ್ಡ […]Read More
ಟೇಬಲ್ಲು ಹಾಗು ಪರ್ವತ ನೇನು – ದೇಪು – ಸಂಘರ್ಷ…. ಅವತ್ತು ಎಂದಿನಂತೆ ಅದೇ ಟೇಬಲ್ಲು ನಾವು ಮೂರ್ವರುಎದುರಗಡೆ ಹೊಸ ಪರ್ವತ ಮೂವರು ಕಣ್ಣು ಪಿಳ ಪಿಳ, ಹೊಸ ಪರ್ವತವೊಂದು ಗೋಚರಿಸಿದೆ ಅದು ನಮ್ಮ ಟೇಬಲಲ್ಲೇ! ಪರ್ವತ ಪೂರ್ತಿ ಅಕ್ರಮಿಸಿದ್ದರಿಂದ ಬೇರೆ ಜಾಗವಿಲ್ಲದೆ ನಾವ್ ಮೊರ್ವರು ಅಂಟಿಕ್ಕೊಂಡು ಗುಟ್ಟಾಗಿ ಪಿಸುಗೊಂಡೆವು ಅದೊಂದು ತಜ್ಞರ ಸಮಾಲೋಚನೆ👍 ಸಂಘರ್ಷ: ಅಲ್ನೋಡು ಟೇಬಲ್ಲು ಪರ್ವತದ ಹೊಟ್ಟೆಯ ಮೇಲೆ ಬಿದಿದ್ದೆ, ನೇನು: ಇಲ್ಲಾ ಕಣೋ ಟೇಬಲ್ನನ್ನೇ ಪರ್ವತದ ಮೇಲೆ ಕೂರಿಸಿದ್ದಾರೆ, ದೇಪು: ಲೊ […]Read More
ಉಪಸಂಹಾರ ದುರ್ಗದಿಂದ ಸುಮಾರು ಎರಡು ಹರಿದಾರಿ ಉತ್ತರಕ್ಕೆ ಪ್ರಯಾಣ ಮಾಡಿದ ಅಶ್ವಾರೋಹಿಯು ಕುದುರೆಯನ್ನು ನಿಲ್ಲಿಸಿದನು. ಬೆಟ್ಟದ ತಪ್ಪಲು ಇಲ್ಲಿ ಇಕ್ಕಟ್ಟಾಗಿದೆ. ಸುತ್ತಲೂ ಮೇಲೆ ಕೆಳಗೆ ಬಂಡೆ ಕಲ್ಲುಗಳು ಹರಡಿವೆ. ಎಚ್ಚರಿಕೆಯಿಂದ (ಜಾಗರೂಕತೆಯಿಂದ) ಕುದುರೆಯನ್ನು ಓಡಿಸಬೇಕಾಗುತ್ತದೆ. ದಾರಿಯು ವಿಘ್ನ ಪರಂಪರೆಯಿಂದ ಕೂಡಿರುವುದರಿಂದ ಅಶ್ವಾರೋಹಿಯು ಚಂದ್ರೋದಯವಾದ ಮೇಲೆ ಪ್ರಯಾಣ ಹೊರಟಿದ್ದಾನೆ. ಅದೂ ಅಲ್ಲದೆ ಬೆಳದಿಂಗಳಿದ್ದರೂ ವೇಗವಾಗಿ ಕುದುರೆಯನ್ನು ಓಡಿಸುವುದು ಸಾಧ್ಯವಿಲ್ಲ. ಶಬ್ದ ನಿವಾರಣೆಗಾಗಿ ಕುದುರೆಯ ಕಾಲುಗಳಿಗೆ ಬಟ್ಟೆ ಬಿಗಿಯಲಾಗಿದೆ. ಹೀಗಿರುವಾಗ ಕುದುರೆಯು ವೇಗವಾಗಿ ಹೋಗಲು ಹೇಗೆ ಸಾಧ್ಯ! ಅಶ್ವಾರೋಹಿಯು ಹಿಂದಿರುಗಿ […]Read More
ಬದಲಾವಣೆ ಜಗದ ನಿಯಮ ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ॥ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।ಸತತ ಕೃಷಿಯೋ ಪ್ರಕೃತಿ – ಮಂಕುತಿಮ್ಮ ॥ ನಾನು ಮತ್ತೆ ಮತ್ತೆ ಓದಿಕೊಳ್ಳುವ,ಪ್ರತಿ ಬಾರಿಯೂ ಹೊಸ ಹೊಳಹನ್ನು ಕಂಡುಕೊಳ್ಳುವಂತೆ ಮಾಡುವ ಕಗ್ಗ ಇದು. ಪ್ರಕೃತಿಯಲ್ಲಿ ಕಾರ್ಯಕಾರಣ ಸಂಬಂಧ ಎನ್ನುವುದು ಸಹಜ ಪ್ರಕ್ರಿಯೆ.ಹುಟ್ಟನ್ನು ಹಿಂಬಾಲಿಸುವ ಸಾವು;ಅದು ಕೊಡಬಹುದಾದ ನೋವು,ಸ್ವಲ್ಪ ಸಮಯದಲ್ಲೇ ಬರುವ ಮರೆವು ಇವೆಲ್ಲವೂ ನಮ್ಮ ಬದುಕಿನ ಅಗತ್ಯವೂ ಹೌದಲ್ಲವೇ!!!..ಇಂದು ಒಂದು ದೇಹದಲ್ಲಿದ್ದ ಜೀವಕಣ…ದೇಹಾವಸಾನದ ನಂತರ […]Read More
ಓಡಿ ಸಾಗುವ ಬದುಕು ಕಣ್ ಬಿಡುವ ಮುಂಚೆಯೇಕಲಿಯಬೇಕೋಡುವುದದಿನನಿತ್ಯ ಕಣ್ಮುಂದೆ ಓಡು ಬದುಕು. ಗುರಿಗಮ್ಯಗಳನೆಲ್ಲ ಬದಿಗಿಟ್ಟು ಸಾಗುತಿದೆಗಂತವ್ಯದೆಡೆಗೆಮ್ಮ ಹೆಜ್ಜೆ ಮುಲುಕು. ನಡಿಗೆಯೋ, ಓಟವೋ, ಬಂಡಿಯೋ, ವಾಹನವೊಗಡಿಬಿಡಿಯ ಬಾಳಿನಲಿ ಅರಿಯಲಾರೆ ಕಂಡದ್ದು ಕಂಡಂತೆ ಕಾಣ್ಕೆಯನು ಕಾಣಲದುಅಂದಿಗಂದಿಗೆ ಸುರಿಯೊ ಬೆವರಧಾರೆ. ದುಡಿವವಗೆ ಕಾಲ ದೇಶಗಳ ಗಡಿ ಇಲ್ಲವೈಮಡಿವತನಕವು ದಿನವು ದುಡಿಯಬೇಕು ಕಾಲದಾ ಜೊತೆಯಲ್ಲಿ ಓಡಲಿಕ್ಕಾಗದಿರೆಓಡುವಾ ಕಾಲ್ಗಳಡಿ ಮಡಿಯಬೇಕು. ಕಾಲಕ್ಕೆ ತಕ್ಕಂತೆ ಓಟದಾ ಆಟವನುಬದಲಿಸುತ ಬಣ್ಣವನು ಓತಿಯಂತೆ ಬದುಕಲೇ ಬೇಕಲ್ಲ ಸಾವು ಬರುವಾ ತನಕಜೀತಕ್ಕೆ ತುತ್ತಾದ ತೊತ್ತಿನಂತೆ ಅದೆ ಹಗಲು ಅದೆ ಇರುಳು […]Read More
ಜಗದ ವಾಸ್ತವ ಆಸ್ತಿ ಅಂತಸ್ತು ಮಹಲುಗಳೇಕೆ ?ಬಾಳಲಿ ನೆಮ್ಮದಿಯಿಲ್ಲದಿರೆ!! ನಿಶೆಯ ಸೊಬಗಿನ ಬೆಳದಿಂಗಳು ಏತಕೆ ?ಅದ ಸವಿಯುವ ಮನವಿಲ್ಲದಿರೆ!! ಮಿತ್ರರೆಲ್ಲರ ಸ್ನೇಹದ ಗೊಂಚಲದೇತಕೆ ?ಆತ್ಮೀಯತೆಯ ಸಮಭಾವವಿಲ್ಲದಿರೆ!! ಸುರಿವ ಸಿರಿವಂತಿಕೆಯದೇತಕೆ ?ಸಮರಸದ ಬಾಳ್ವೆಗದು ಸೋಪಾನವಾಗದಿರೆ!! ಆಶ್ವಾಸನೆಗಳ ಮಹಾಪೂರವದೇತಕೆ ?ಮನದ ಕಡು ಮೌನವರಿಯದಿರೆ!! ಶಿಖರದಷ್ಟೆತ್ತರದ ಭರವಸೆಯ ನುಡಿಗಳೇತಕೆ ?ಅದನೀಡೇರಿಸುವ ಸಡಗರವಿಲ್ಲದಿರೆ!! ಮನವ ಕಾಡುವ ಪ್ರಶ್ನೆ ನೂರೆಂಟೇತಕೆ ?ಬಿಡದೇ ಹುಡುಕಿದರೂ ಉತ್ತರ ಸಿಗದಿರೆ!! ಅಂತರ್ಮನದ ಬೆನ್ನೇರಿ ಹುಡುಕಿದರೆ ಸಾಕು..ಸಾರ್ಥಕ್ಯದ ಪಥದತ್ತ ಬದುಕು ನಡೆದಿರೆ!! ಸುಮನಾ ರಮಾನಂದRead More
ಸೋಲೇ ಗೆಲುವಿನ ಸೋಪಾನ ಮರೆಯದಿರಿ ಜೀವನದಲ್ಲಿ ತಾನು ಕೈಗೆತ್ತಿಕೊಂಡ ಯಾವುದೇ ವ್ಯವಹಾರ ವಹಿವಾಟುಗಳಲ್ಲಿ ಯಶಸ್ಸನ್ನು ಕಾಣದ ವ್ಯಕ್ತಿಯೊಬ್ಬ ಬದುಕಿನ ಆಸೆಯನ್ನು ಕಳೆದುಕೊಂಡು ಒಂಟಿಯಾಗಿ ಮನೆಬಿಟ್ಟು ಹೊರಟು ನಿಂತ. ನಡೆಯುತ್ತಾ ಹೋದವನು ದೊಡ್ಡದಾದ ಕಲ್ಲಿನ ಗುಹೆಯೊಳಗೆ ಕುಳಿತು ತನ್ನ ಕಷ್ಟಗಳು ಮತ್ತು ಜೀವನದಲ್ಲಿ ಉಂಟಾದ ಸೋಲುಗಳ ಕುರಿತುಚಿಂತಿಸತೊಡಗಿದ. ಯಾವ ರೀತಿಯಲ್ಲಿ ಯೋಚಿಸಿದರೂ ಕಮರಿ ಹೋಗಿದ್ದ ತನ್ನ ಆತ್ಮಸ್ಥೈರ್ಯ ಚಿಗುರುತ್ತಿರಲಿಲ್ಲ, ಹೊಸ ಉತ್ಸಾಹವೂ ಮೂಡುತ್ತಿರಲಿಲ್ಲ, ಹೊಸ ದಾರಿಯೂ ಕಾಣಿಸುತ್ತಿರಲಿಲ್ಲ. ಬದುಕೆಲ್ಲಾ ಈ ಹತಾಶೆ, ನೋವು, ನಿರಾಶೆ ಮತ್ತು ಸೋಲಿನಲ್ಲೇ ಕಳೆಯಬೇಕೋ […]Read More
ಗಮ್ಯದೆಡೆಗೆ….. ನಾವು ಮನೆಯ ಬಿಟ್ಟು ನಡೆದಾಗಆಗಷ್ಟೇ ಹದಿನೆಂಟು ತುಂಬಿತ್ತುಕನಸುಗಳ ಬೀಜಕೆ ಪ್ರಯತ್ನದ ನೀರುಣಿಸಿಭವ್ಯ ಭವಿತವ್ಯದ ದಾರಿಯೆಡೆಗೆ ನಡೆದೆವು!!! ಗುರಿ ಬೇರೆ!ದಾರಿಯೂ ಬೇರೆ,!!ನೀ ಎಂಜಿನಿಯರನಾದೆನಾ ಭಾರತಮ್ಮನ ಕಾಯಲು ಹೊರಟೆ!!! ನಿನಗೆ ಸಿಕ್ಕಿದ್ದುಏಳಕ್ಕೆ ಎದ್ದು ಐದಕ್ಕೆ ಮುಗಿವ ಕಾಯಕನನಗೋ ಮುಂಜಾನೆ ನಾಲ್ಕುಮುಗಿವ ಸಮಯವನೆಂತೋ ಅರಿಯೆಸಭಿಕರ ಚಪ್ಪಾಳೆಯಲಿನೀ ಪದವಿ ಪಡೆವಾಗನಾ ಪೆರೇಡು ಮಾಡುತ್ತಿದ್ದೆ!!! ಕಂಪನಿಯ ನೌಕರಿ ನೀ ಹಿಡಿದಾಗನಾ ಗಡಿಯ ಕಾಯಲು ಹೊರಟೆನನ್ನ ಬದುಕಿನ ಹಾದಿ ಹಿಡಿದೆಪ್ರತಿ ಹಬ್ಬ ಹರಿದಿನವೂನೀ ಮನೆಯವರೊಡನಿದ್ದೆನಾ ಅವರ ನೋಡುವ ಹಂಬಲದಲಿದ್ದೆ!! ನೀ ಸಂಭ್ರಮಿಸುತ್ತಿರುವಾಗನಾ ದೇಶದ ಹಿತ […]Read More