ಚೆಂಗಾಯಣ ಮತ್ತು ಇತರ ಹಾಸ್ಯ ಲೇಖನಗಳು

ಚೆಂಗಾಯಣ ಮತ್ತು ಇತರ ಹಾಸ್ಯ ಲೇಖನಗಳು ಚೆಂಗಾಯಣ ಮತ್ತು ಇತರ ಹಾಸ್ಯ ಲೇಖನಗಳುಲೇಖಕರು: ಜಿ ವಿ ಅರುಣಪ್ರಕಟಣೆ: ವಿದ್ಯಾರಣ್ಯ ಪ್ರತಿಷ್ಠಾನ, ಬೆಂಗಳೂರು ರಾಮನ ಕಥೆ ರಾಮಾಯಣ ಎನಿಸಿದರೆ; ಚೆಂಗನ ಕಥೆ ಚೆಂಗಾಯಣ ಏಕಾಗಬಾರದು ಅಲ್ಲವೇ!!? ಎಲ್ಲಾರ್ದೂ ಒಂದು ದಾರಿ ಆದ್ರೆ ಎಡವಟ್ಟನದೇ ಒಂದು ದಾರಿ ಎಂಬ ಗಾದೆಯಂತೆ ಕಥಾನಾಯಕ ಚೆಂಗ ಸೋಸ್ಯಲ್ ಸರ್ವೀಸ್ ಮಾಡಿಕೊಂಡು ತನ್ನ ಸೆಲ್ಫ್ ಸರ್ವೀಸನ್ನೂ ಮಾಡಿಕೊಳ್ಳುವ ಲೀಡರ್ರು. ತನ್ನ ನಿಸ್ವಾರ್ಥ(!!?) ಸೇವೆಯನ್ನು ಎಲ್ಲರಿಗೂ ಒದಗಿಸಲು ತುದಿಗಾಲಲ್ಲಿ ನಿಲ್ಲುವ ಚೆಂಗನ ಪ್ರತಿಯೊಂದು ಕಾರ್ಯದ ಹಿಂದೆಯೂ […]Read More

ಫೀನಿಕ್ಸ್ ಎಂಬ ಪುರಾಣ ಹಕ್ಕಿ ಹಾಗು ಕ್ರೌಂಚ ಪಕ್ಷಿ

ಫೀನಿಕ್ಸ್ ಎಂಬ ಪುರಾಣ ಹಕ್ಕಿ ಹಾಗು ಕ್ರೌಂಚ ಪಕ್ಷಿ ಫೀನಿಕ್ಸ್ ಎಂಬ ಹೆಸರು ಕೇಳದವರ್ಯಾರು. ಜೀವನದಲ್ಲೂ ಅಥವಾ ಇನ್ನೆಲ್ಲೋ  ಸೋತು ಮತ್ತೆ ಗೆದ್ದು ಬಂದವರನ್ನು “ಮತ್ತೆ ಫೀನಿಕ್ಸ್ ನಂತೆ ಬೂದಿಯಿಂದ ಮೇಲೆದ್ದು ಬಂದರು” ಎಂದು ಮಾತನಾಡಿಕೊಳ್ಳುವುದು ಸಹಜ. ಫೀನಿಕ್ಸ್, ಇದು ಗ್ರೀಕ್ ಪುರಾಣದ ಪಕ್ಷಿಯ ಹೆಸರು. ಇದರ ಬಗ್ಗೆ ಹುಡುಕುತ್ತಾ ಹೋದರೆ ತುಂಬಾ ಕಥೆಗಳಿವೆ, ಮಾಹಿತಿಗಳಿವೆ, ಈ ಪಕ್ಷಿಯದ್ದು ಎನ್ನಲಾದ ಕಲ್ಪಿಸಿ ರಚಿಸಲಾದ ಚಿತ್ರಗಳಿವೆ. ಗ್ರೀಕ್ ಪುರಾಣದಲ್ಲಿ ಬರುವ ಅಮರ ಪಕ್ಷಿ ಈ ಫೀನಿಕ್ಸ್. ಸೂರ್ಯನ ಪ್ರತೀಕವಾಗಿ […]Read More

“ದಸ್ ಕತ್ತು” – ಹನಿಗವನ ಸಂಕಲನ ಲೋಕಾರ್ಪಣೆ

“ದಸ್ ಕತ್ತು” – ಹನಿಗವನ ಸಂಕಲನ ಲೋಕಾರ್ಪಣೆ “ದಸ್ ಕತ್ತು” ಇದು ಹತ್ತು ಪ್ರತಿಭೆಗಳು ರಚಿಸಿರುವ ಹನಿಗವನ ಸಂಕಲನ. ಇಂತಹುದೊಂದು ವಿನೂತನ ಪ್ರಯತ್ನದ ಫಲವಾಗಿ “ದಸ್ ಕತ್ತು” ಹನಿಗವನ ಸಂಕಲನ ಪುಸ್ತಕವು ಡಿಸೆಂಬರ್ 17 ನೇ ತಾರೀಕು 2022 ರಂದು ಬೆಂಗಳೂರಿನ ಎನ್. ಆರ್. ಕಾಲೋನಿಯ “ಸಿ. ಅಶ್ವಥ್ ಕಲಾಭವನ” ದಲ್ಲಿ ಲೋಕಾರ್ಪಣೆಗೊಂಡಿತು. ಮೊದಲಿಗೆ “ಸುಪ್ರತೀಕ” ರ ಧ್ವನಿಯಲ್ಲಿ ಗಜಮುಖನ ಪ್ರಾರ್ಥನೆಯೊಂದಿಗೆ ಶುರುವಾದ ಕಾರ್ಯಕ್ರಮವು ಎನ್. ರಮಾನಾಥ್ (ಅಣುಕು ರಮಾನಾಥ್) ರವರ ನಿರೂಪಣೆಯಲ್ಲಿ ಮುಂದುವರೆಯಿತು. ಎನ್. ರಮಾನಾಥ್ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 45

ಹಿಂದಿನ ಸಂಚಿಕೆಯಿಂದ….. ಗುಲಿಕ ವರ್ಮಾ ಒಬ್ಬ ಕನಿಷ್ಠ ಸೇನಾ ನಾಯಕ ಹಾಗೂ ಸ್ಕಂದಗುಪ್ತನ ಪಾರ್ಶ್ವಚರ. ಒಳ್ಳೆಯ ಬಲಶಾಲಿ, ವಿಶಾಲವಾದ ವಕ್ಷಸ್ಥಳ ಬಲಿಷ್ಠವಾದ ಭುಜಗಳು. ಧೂಮಕೇತುವಿನಂಥ ಮೀಸೆ. ಅವನು ಬಂದು ನಮಸ್ಕರಿಸಿ ನಿಂತ ಮೇಲೆ ಸ್ಕಂದಗುಪ್ತನು ‘ಗುಲಿಕ, ಚಷ್ಟನ ದುರ್ಗ ಎಲ್ಲಿದೆ? ಗೊತ್ತಿದೆಯೇ?’ ಎಂದು ಕೇಳಿದನು. ಗುಲಿಕ ವರ್ಮಾ- ಗೊತ್ತು ಆಯುಷ್ಮನ್. ಅದು ವಿಟಂಕ ರಾಜ್ಯದ ಉತ್ತರ ಸೀಮಾಂತದಲ್ಲಿದೆ. ಇಲ್ಲಿಂದ ಸುಮಾರು ಇಪ್ಪತ್ತು ಹರಿದಾರಿ ದೂರದಲ್ಲಿ, ಈಶಾನ್ಯ ದಿಕ್ಕಿನಲ್ಲಿದೆ. ಸ್ಕಂದಗುಪ್ತ- ಕೇಳು. ಚಷ್ಟನ ದುರ್ಗದ ದುರ್ಗಾಧಿಪ ಕಿರಾತನು ವಿಟಂಕದ […]Read More

ಅಮ್ಮ

ಅಮ್ಮ ಅಮ್ಮನ ಮಡಿಲು ಅಘಾದ ಪ್ರೇಮದ ಕಡಲುಮಮತೆ ಪ್ರೀತಿ ಎಂದೆಂದೂ ಬರಿದಾಗದ ಒಡಲು ಅಮ್ಮ ಎನ್ನುವ ಮೊದಲನೆ ಪದವುಅದರೊಳು ಅಡಗಿದೆ ಮಮತೆ ಮಾಧುರ್ಯವು ನೋವು ನಲಿವು ಯಾವುದೇ ಇರಲುನೆನಪಲಿ ಬರುವುದು ಅಮ್ಮನ ಒಲವು ಅತ್ತಾಗ ಸಂತೈಸುವಳು, ನಕ್ಕಾಗ ಸುಖಿಸುವಳುಕಂದನ ಹೊನ್ನುಡಿಯನು ಕಂಡು ಮುದ್ದಾಡಿದವಳು ಮಕ್ಕಳ ಪಾಲಿನ ಕಲ್ಪವೃಕ್ಷವೇ ಇವಳುಉತ್ತಮ ದಾರಿ ತೋರಲು ದೇವ ನೀಡಿದ ಗುರು ಇವಳು ಸುಖದಲ್ಲಿ ನಗುವವಳು, ದುಃಖದಲ್ಲಿ ಹೆಗಲಾಗುವಳುನೋವಿನಲಿ ಕಣ್ಣೀರೋರೆಸುವ ನಿಸ್ವಾರ್ಥ ಪ್ರೀತಿಯ ತವರವಳು ನಮ್ಮನ್ನು ಪೊರೆವ ಕ್ಷಮಯಾ ಧರಿತ್ರಿನಮ್ಮನ್ನು ಸಲಹುವ ಅಪರೂಪದ […]Read More

ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ಓಲಾ ಇ-ಸ್ಕೂಟರ್

ಪರಿಸರಸ್ನೇಹಿ ಬ್ಯಾಟರಿ ಚಾಲಿತ ಓಲಾ ಇ-ಸ್ಕೂಟರ್ ಓಲಾ ಕಂಪೆನಿಯು ವಿಶ್ವದ ಅತಿದೊಡ್ಡ ಇ-ಸ್ಕೂಟರ್ ತಯಾರಕ ಸಂಸ್ಥೆಯಾಗಿದ್ದು, ಪ್ರತಿ ವರ್ಷ 1 ಕೋಟಿ ಸ್ಕೂಟರ್ ಉತ್ಪಾದನೆಯ ಗುರಿಯನ್ನು ಹಾಕಿಕೊಂಡಿದೆ. ಅಂದರೆ ಈ ಕಂಪೆನಿಯೇ ಪ್ರಪಂಚದ 15% ಇಲೆಕ್ಟ್ರಿಕ್ ಸ್ಕೂಟರ್‌ಗಳ ಬೇಡಿಕೆಯನ್ನು ಪೂರೈಸುತ್ತದೆ. ಈ ಕಂಪೆನಿಯ ಕ್ಯಾಂಪಸ್ಸೆ ಸರಿ ಸುಮಾರು 500 ಎಕರೆ ವಿಸ್ತಾರವಾಗಿದೆ. ಈ ಕಂಪೆನಿಯಲ್ಲಿ ಬರೋಬ್ಬರಿ 10,000 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸುಮಾರು 3,000 ಕ್ಕಿಂತಲೂ ಹೆಚ್ಚು ರೋಬೋಟ್ಗಳನ್ನು ಈ ಘಟಕದಲ್ಲಿ ಬಳಸಲಾಗುತ್ತದೆ. ಓಲಾ ಕಾರ್ಖಾನೆಯ ಮೇಲ್ಛಾವಣಿಯನ್ನು […]Read More

ಕಂಬನಿಯ ಲಹರಿಯಲಿ…

ಕಂಬನಿಯ ಲಹರಿಯಲಿ… ಕಂಬನಿ ಯ ಹನಿಯೊಂದು ಕಂಗಳಿಂದಜಾರುತಾ ದಿಂಬಿನಲಿ ಇಂಗಿತು!ಮನದಲಿ ಅವಿತ ಕಹಿನೆನಪುಗಳಿಂದ..ಕಣ್ಣೀರದು ಕಟುಸತ್ಯವ ಅರುಹಿತು!! ಕಂಬನಿ ಯು ಕಂಗಳ ತೆರೆ ಜಾರಿಸಿಕೆನ್ನೆಗಳ ಕಿನಾರೆಗಳನು ಮೀಟಿದೆ!ಮಾತಿರದ ಮೌನದಲಿ ಮನವಿರಿಸಿ..ನೋವುಗಳ ಪರಿಮಿತಿಯನದು ದಾಟಿದೆ!! ಕಂಬನಿ ಗೆ ಮಿಡಿಯುವಾ ಮನವದುದೂರದಲೆಲ್ಲೋ ಮಾಗಿ ತಿಳಿಯಾಗಿದೆ!ಕ್ರಮೇಣ ಕಾಡುವ ಬೇಸರವು ಕಳೆದು..ಹೃದಯದಲಿ ಶಾಂತಿಯು ನೆಲೆಯಾಗಿದೆ!! ಕಂಬನಿ ಯಲಿ ತೇಲುವ ಹನಿಯು ತಾನೊಂದರೂ ಜಾರಲೊಲ್ಲದು ಕಂಗಳಿಂದ!ನೋಯುವ ಮನವು ಸದಾ ಮಿಡಿದಿದೆ…ಬಿಂದುವ ಪಟ್ಟನೆ ಒರೆಸುವ ಒಲವ ಕರಗಳಿಂದ!! ಕಂಬನಿ ಯಿಂದ ತೋಯುವ ಕಂಗಳಲೂಮಿನುಗಿದೆ ಸವಿ ದಿಗಂತದ ಬೆಳಕು!ಹೃದಯವು […]Read More

ಸ್ಟಾರ್ಟ್ ಅಪ್….ನೀವೂ ಕಟ್ಟಬಹುದು

ಸ್ಟಾರ್ಟ್ ಅಪ್….ನೀವೂ ಕಟ್ಟಬಹುದು ಪುಸ್ತಕ :ಸ್ಟಾರ್ಟ್ ಅಪ್….ನೀವೂ ಕಟ್ಟಬಹುದುಲೇಖಕರು : ಸತ್ಯೇಶ್ ಎನ್ ಬೆಳ್ಳೂರ್ಪ್ರಕಾಶಕರು :ಮೈಲ್ಯಾಂಗ್ ಬುಕ್ಸ್ ಇಂದಿನ ಹೈಟೆಕ್ ಯುಗದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಒಳಗೊಂಡ ಪುಸ್ತಕಗಳು ಸ್ಥಳೀಯ ಭಾಷೆಯಲ್ಲೂ ಬರಲಾರಂಭಿಸಿವೆ…ಕನ್ನಡ ಭಾಷೆಗೆ ಇತ್ತೀಚಿನ ಸೇರ್ಪಡೆ ಸ್ಟಾರ್ಟಪ್ ನೀವೂ ಕಟ್ಟಬಹುದು ಎಂಬ ವಿಶಿಷ್ಟವಾದ ಪುಸ್ತಕ. ಯಾರಾದರೂ ಒಂದು ತನ್ನದೇ ಸ್ವಂತ ಉದ್ದಿಮೆ ಅಥವಾ ವ್ಯಾಪಾರವನ್ನು ಪ್ರಾರಂಭಿಸಿದರೆ ಅಂತಹ ಕಂಪನಿಗಳನ್ನು ಸ್ಟಾರ್ಟಪ್ ಎಂದು ಕರೆಯಲಾಗುತ್ತದೆ.ಇಂತಹ ಸ್ಟಾರ್ಟಪ್ಗಳ ಸ್ವರೂಪ ಎಂತಾದ್ದು!?ಯಾರು ಬೇಕಾದರೂ ಕಟ್ಟಬಹುದೇ!?ಬಂಡವಾಳ ಕ್ರೋಢೀಕರಣ […]Read More

ಪಶ್ಚಿಮ ಘಟ್ಟದಲ್ಲೊಂದು ಇಣುಕು – 1

ಪಶ್ಚಿಮ ಘಟ್ಟದಲ್ಲೊಂದು ಇಣುಕು – 1 ಪಶ್ಚಿಮ ಘಟ್ಟ ನಮ್ಮ ದೇಶದ ಅನರ್ಘ್ಯ ಸಂಪತ್ತು. ಗುಜರಾತಿನಿಂದ ಕನ್ಯಾಕುಮಾರಿಯವರೆಗೆ ಸುಮಾರು 1600 ಕಿಲೋಮೀಟರ್ ಉದ್ದದ ಘಟ್ಟ ಪ್ರದೇಶ ಹಾಗೂ ಪ್ರಪಂಚದ ಅತಿಸೂಕ್ಷ್ಮ ಪರಿಸರ ಎಂದು ಗುರುತಿಸಲ್ಪಟ್ಟಿದೆ.ಮನಮೋಹಕ ದೃಶ್ಯಾವಳಿಗಳು, ಬಿಸಿಲು ಮತ್ತು ಮೋಡಗಳ ಕಣ್ಣಾಮುಚ್ಚಾಲೆಯಾಟ, ಜುಳುಜುಳು ಹರಿವ ನೀರಿನ ತೊರೆಗಳು, ಅಸಂಖ್ಯ ವನ್ಯಸಂಪತ್ತು, ಔಷಧೀಯ ಸಸ್ಯಸಂಪತ್ತು, ವೈವಿಧ್ಯಮಯ ಪ್ರಾಣಿ, ಪಕ್ಷಿ ಪ್ರಬೇಧಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಪಶ್ಚಿಮ ಘಟ್ಟಕ್ಕೆ ಮಹತ್ವದ ಸ್ಥಾನ ಇದೆ. ನಮ್ಮ ಕರ್ನಾಟಕದಲ್ಲಿ ಪಶ್ಚಿಮಘಟ್ಟವು ದಾಂಡೇಲಿಯಿಂದ ಶುರುವಾಗಿ ಕೊಡಗು […]Read More

ಅಳಿದ – ಅಳಿವಿನಂಚಿನ ವನ್ಯಜೀವಿಗಳು – ದ್ವೀಪದ ಹಕ್ಕಿಗಳ ಕಣ್ಮರೆ – 2

ದ್ವೀಪದ ಹಕ್ಕಿಗಳ ಕಣ್ಮರೆ – 2 ಹಿಂದಿನ ಸರಣಿಯ ಮುಂದಿನ ಭಾಗ…… ದ್ವೀಪದ ಹಕ್ಕಿಗಳ ಕಣ್ಮರೆ –1 – https://bit.ly/3PkGZXy ಓ’ಆಹೂ ಅಕಿಯಲೋ – ಜೇನು ಬಳ್ಳಿಗ “ಓ’ಆಹೂ ಅಕಿಯಲೋ” ಎಂಬ ವಿಚಿತ್ರ ಹೆಸರಿರುವ ಈ ಪಕ್ಷಿಯು ಪೆಸಿಫಿಕ್ ಮಹಾಸಾಗರದ ಹವಾಯಿ ದ್ವೀಪದಲ್ಲಿನ ಪ್ರಮುಖ ಆಕರ್ಷಕ ಪಕ್ಷಿಗಳಲೊಂದಾಗಿತ್ತು. ಜೇನು ಬಳ್ಳಿಗ (ಹನಿ ಕ್ರೀಪರ್) ಎಂದು ಕೂಡ ಕರೆಯುವ ಈ ಹಕ್ಕಿಯು ತನ್ನ ಆಕರ್ಷಕವಾದ ಬಾಗುಕತ್ತಿಯಂತಹ ಕೊಕ್ಕಿನಿಂದ ಮರಗಳಿಗೆ ಮಾರಕವಾದ ಮರದ ತೊಗಟೆಗಳಲ್ಲಿ ಸಿಗುವ ಜೇಡ, ಮತ್ತಿತರ ಕೀಟಗಳನ್ನು […]Read More