ಮಹಿಳೆಯರಿಗೆ ಸ್ಪೂರ್ತಿ ಈ ವನ್ಯಮಾರ್ಗದರ್ಶಿ – ಸೂರಜ್ ಬಾಯ್ ಮೀನಾ

ಸೂರಜ್ ಬಾಯ್ ಮೀನಾ – ಮೊದಲ ವನ್ಯಮಾರ್ಗದರ್ಶಿ “ರಣಥಂಬೋರ್ ರಾಷ್ಟ್ರೀಯ ಉದ್ಯಾನವನ” ರಾಜಸ್ಥಾನದ ಸವಾಯಿ ಮಾಧೋಪುರ್ ನಗರಕ್ಕೆ ಹತ್ತಿರವಿರುವ ವಿಶಾಲವಾದ ವನ್ಯಜೀವಿ ಮೀಸಲು ತಾಣ. “ಸೂರಜ್ ಬಾಯ್ ಮೀನಾ” ಅಲ್ಲಿಯ ವನ್ಯಮಾರ್ಗದರ್ಶಿಗಳಲ್ಲೇ ಜನಪ್ರಿಯವಾಗಿರುವ ಹೆಸರು ಏಕೆಂದರೆ ಮೀನಾ ಅಲ್ಲಿನ ಮೊದಲ ಮಹಿಳಾ ವನ್ಯಮಾರ್ಗದರ್ಶಿ. “ಭೂರಿ ಪಹಾಡಿ” ಎಂಬ ಹಳ್ಳಿಯಲ್ಲಿ ಹುಟ್ಟಿದ ‘ಮೀನಾ’ ಕಳೆದ 15 ವರ್ಷಗಳಲ್ಲಿ ಹಲವು ವಿರೋಧಗಳ ನಡುವೆ ನಡೆದು ಬಂದ ದಾರಿ ಇದುವರೆಗು ಅದೆಷ್ಟೋ ಮಹಿಳೆಯರಿಗೆ ಸ್ಪೂರ್ತಿಯಾಗಿದೆ. “ಸೂರಜ್ ಮೀನಾ” ಹುಟ್ಟಿ ಬೆಳೆದ ‘ಭೂರಿ […]Read More

ಆಫ್ರಿಕಾದ ಚೀತಾಗಳು ಭಾರತಕ್ಕೆ

ಆಫ್ರಿಕಾದ ಚೀತಾಗಳು ಭಾರತಕ್ಕೆ ಹಲವು ತಿಂಗಳುಗಳಿಂದ ವನ್ಯಪ್ರಾಣಿ ಪ್ರಿಯರು ಕಾಯುತಿದ್ದ ಹಾಗೂ ಪರ ವಿರೋಧದ ಚರ್ಚೆಗಳಿಗೆ ಗ್ರಾಸವಾಗಿದ್ದ ‘ಆಫ್ರಿಕನ್ ಚೀತಾಗಳು’ ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕಿಗೆ ಬಂದಾಗಿದೆ. ಇಂದು ಪ್ರಧಾನಿ ಮೋದಿಯವರು ತಮ್ಮ ಜನ್ಮದಿನದ ಪ್ರಯುಕ್ತ ಚೀತಾಗಳನ್ನು ಅದಕ್ಕೆಂದೇ ಮೀಸಲಿಟ್ಟದ್ದ ಕುನೋ ಅರಣ್ಯಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿದೆ. ನಮೀಬಿಯಾ ದಿಂದ ಬೋಯಿಂಗ್ 717 ವಿಶೇಷ ವಿಮಾನದಲ್ಲಿ ಇವುಗಳನ್ನು ತರಲಾಗಿದ್ದು ಭಾರತದಲ್ಲಿ ಏಷ್ಯಾಟಿಕ್ ಚೀತಾಗಳು ನಶಿಸಿಹೋದ 70 ವರ್ಷಗಳ ನಂತರ ಇದನ್ನು ಆಯೋಜಿಸಲಾಗಿದೆ. ಮುಂದಿನ ತಿಂಗಳು ಇನ್ನೂ ಹನ್ನೆರಡು ಚೀತಾಗಳು […]Read More

ಫ್ಯಾಷನ್ ಯುಗದ ಔಷಧೀಯ ಹಣ್ಣು – ಫ್ಯಾಷನ್ ಫ್ರೂಟ್

ಫ್ಯಾಷನ್ ಫ್ರೂಟ್ ಹೆಸರೇನೋ ಫ್ಯಾಷನ್ ಆಗಿದೆ ಆದರೆ, ಈ ಹಣ್ಣು ತಿನ್ನೋಕೆ ಎಷ್ಟು ಫ್ಯಾಷನ್ ಆಗಿದೆ ಎಂಬುವುದೇ ಒಂದು ಸ್ವಾರಸ್ಯಕರ ಸಂಗತಿ. ‘ಫೆಸಿಫ್ಲೋರ ಎಡ್ಯುಲಸ್’ ಎಂಬ ವೈನ್ ಪ್ರಬೇಧಕ್ಕೆ ಸೇರಿದ ಫ್ಯಾಷನ್ ಫ್ಲವರ್ ಹೆಚ್ಚಾಗಿ ಬ್ರೆಜಿಲ್, ಪೆರುಗ್ವೆ ಹಾಗೂ ಉತ್ತರ ಅರ್ಜೆಂಟಿನಾಗಳಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ಫೆಸಿಫ್ಲೋರ ಎಂಬ ಶಬ್ದದ ಮೂಲ ಲ್ಯಾಟಿನ್ ಭಾಷೆಯಾಗಿದ್ದು, ಇದನ್ನು ಇಂಗ್ಲೀಷ್‌ನಲ್ಲಿ ‘ಫ್ಯಾಷನ್ ಫ್ಲವರ್’ ಎಂದು ಕರೆಯಲಾಗುತ್ತದೆ. ಈ ಹೂವಿಗೆ ಫ್ಯಾಷನ್ ಫ್ಲವರ್ ಎಂದು ಹೆಸರಿಸಿದವರು ಸ್ಪಾನಿಶ್ ಮಿಷನರಿಗಳು. ಇದರಲ್ಲಿ ಬೆಳೆಯುವ ಹಣ್ಣುಗಳನ್ನು […]Read More

ಸರಳ ಜೀವನ ಸಾಧಕನ ಲಕ್ಷಣ

ಸರಳ ಜೀವನ ಸಾಧಕನ ಲಕ್ಷಣ ಜೀವನ ವೀಣೆಯ ಮೀಟಿದ ವೈಣಿಕನವನುಸೋಲೊಪ್ಪದ ಸರದಾರನವನು|ಕರ್ಮಭೂಮಿಯ ಕಾರ್ಮಿಕನವನುಸರಳತೆಯಿಂದ ಸಾಧನೆಯೆಡೆಗೆ ಸಾಗಿದ ಸಾಧಕನವನು|| ‘ಕ್ಷಿಪಣಿಗಳ ಜನಕ’ ನೆಂಬ ಅಭಿದಾನ ಪಡೆದ ಅಭಿಮಾನಿಯವನುವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕನವನು|ಕರ್ತವ್ಯ ನಿಷ್ಠೆಯೇ ಜೀವನದೃಷ್ಟಿಯಾಗಿಸಿಕೊಂಡ ಜನಕನವನುಪವಿತ್ರಾತ್ಮವನು ಹೊಂದಿದ ಪರಮದಯಾಳು ಅವನು|| ದೂರದೃಷ್ಟಿಯ ದಾರ್ಶನಿಕನವನುಧರ್ಮಸಮದೃಷ್ಟಿಯ ಧಾರ್ಮಿಕನವನು|ಕನಸನ್ನು ನನಸಾಗಿಸಿದ ಛಲಗಾರನವನುಮನುಜಧರ್ಮವನು ಮನುಕುಲಕ್ಕೆ ಸಾರಿದ ಮಹಾನಾಯಕನವನು|| ವಿಜ್ಞಾನಿಯಾಗಿ, ವೈಣಿಕನಾಗಿ, ಕವಿಯಾಗಿ, ಕಲಾವಿದನಾಗಿಪ್ರತಿಭಾ ಕಾರಂಜಿಯನ್ನು ಚಿಮ್ಮಿದ ಪ್ರತಿಭಾವಂತನವನುಗುರಿಯೊಂದಿದ್ದರೆ ಸಾಕು ಗರಿ ತಾನಾಗಿಯೇ ಬರುವುದೆಂದು ತೋರಿದದಿಟಪುರುಷನಿವನು|| ಶಿಸ್ತಿನ ಸಿಪಾಯಿಯವನುನಭದೆತ್ತರಕ್ಕೆ ಹಾರಿದರೂ ಇಳೆಗಂಟಿಕೊಂಡ ನಾಯಕನವನು|ಸರ್ವರ ಕಣ್ಣಿನಲ್ಲಿ ಕಣ್ಮಣಿಯವನು‘ಅಂತರಿಕ್ಷ ಅಭಿಯಂತ’ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 34

ಪರಿಚ್ಛೇದ – 11ಸಡಿಲವಾದ ಕಗ್ಗಂಟು ಉತ್ತರ ದಿಕ್ಕಿನ ನಗರದ್ವಾರವನ್ನು ದಾಟಿ ರಟ್ಟಾ ರಕ್ಷಕಭಟರೊಂದಿಗೆ ಮುಂದೆ ನಡೆದಳು. ಇನ್ನು ಮುಂದೆ ರಾಜಮಾರ್ಗವು ಮೃಗಯಾ- ಕಾನನದಿಂದ ಸುತ್ತುವರಿದು ಹಾವಿನ ನಡೆಯಂತೆ ಅಂಕು ಡೊಂಕಾಗಿ, ಕೆಲವು ಕಡೆ ಏರುತ್ತ ಕೆಲವು ಕಡೆ ಇಳಿಯುತ್ತ ಮುಂದೆ ಹೋಗಿ ಕಾಡಿನಲ್ಲಿ ಮರೆಯಾಗಿತ್ತು. ಬೆಳಗಿನ ಎಳೆ ಬಿಸಿಲಲ್ಲಿ ಈ ದೃಶ್ಯವು ಮನೋಹರವಾಗಿ ಕಾಣುತ್ತಿತ್ತು. ಈ ಸುಂದರವಾದ ಪ್ರಕೃತಿಯ ದೃಶ್ಯದ ಮೇಲೆ ಒಮ್ಮೆ ದೃಷ್ಟಿ ಹಾಯಿಸಿ ರಟ್ಟಾ ಕುದುರೆಯನ್ನು ನಿಲ್ಲಿಸಿ, ಸೇನಾನಿಯನ್ನು ಹತ್ತಿರ ಕರೆದು, ‘ನಕುಲ, ನೀನು […]Read More

ಧನಾತ್ಮಕ ದೃಷ್ಟಿ

ಧನಾತ್ಮಕ ದೃಷ್ಟಿ ಆರೋಗ್ಯಕರವಾದ ದೇಹದಲ್ಲಿ ಆರೋಗ್ಯಕರವಾದ ಮನಸ್ಸು ಇರುತ್ತದೆ. ಸಜ್ಜನರ ಸಂಗ, ಉತ್ತಮ ಗ್ರಂಥಗಳ ವಾಚನ, ಚಿಂತನೆ ಮತ್ತು  ಆತ್ಮಾವಲೋಕನದಿಂದ ಧನಾತ್ಮಕ ದೃಷ್ಟಿ ಬೆಳೆಯುತ್ತದೆ.        ಬುದ್ಧ, ಸಾಕ್ರಟೀಸ್,  ಏಸು, ಬಸವ, ತುಕಾರಾಂ,  ಗಾಂಧಿ ಮೊದಲಾದ ಮಹಾನ್ ವ್ಯಕ್ತಿಗಳು ಧನಾತ್ಮಕವಾಗಿ ಯೋಚಿಸುತ್ತಿದ್ದರು. ತಮ್ಮನ್ನು ಕೊಲ್ಲಲು ಬಂದ ಅಂಗುಲಿಮಾಲನ ಮನಸ್ಸನ್ನು ಬುದ್ಧರು ತಮ್ಮ ಧನಾತ್ಮಕ ಮಾತುಗಳಿಂದ ಪರಿವರ್ತಿಸಿದರು. ಸಾಕ್ರಟೀಸನ ಹೆಂಡತಿ ಕೋಪಿಷ್ಠೆಯಾಗಿದ್ದಳು. ಹೆಂಡತಿ ಎಷ್ಟೇ ಬೈದರೂ ಸಾಕ್ರಟೀಸ್ ಸದಾ ನಗುತ್ತ ಇರುತ್ತಿದ್ದ. ಒಮ್ಮೆ ಅವಳು ಹೊಲಸು ನೀರು ತಂದು ಹಾಕಿದಳು. […]Read More

ವಾರಾಂತ್ಯದ ದಿನ – ಸೋಮಾರೀದಿನ

ವಾರಾಂತ್ಯದ ದಿನ – ಸೋಮಾರೀದಿನ ನೀ ಇದ ತಿಳಿಯೋ ಮನುಜರಜಾ ಬಯಸುವುದು ಸಹಜ|ಸೋಮವಾರದಿಂದ ಶನಿವಾರದವರೆಗೆವಾಲುವರು ಕೆಲಸದ ಕಡೆಗೆ||. ||೧|| ಭಾನುವಾರವಾದರೂ ಒಮ್ಮೆಕೆಲಸ ಮಾಡದಿರೋಣ ಒಮ್ಮೆ|ದಿನಂಪ್ರತಿ ಸೂರ್ಯೋದಯದಲೆದ್ದುನಿತ್ಯ ಕರ್ಮವ ಮುಗಿಸುವರು ಪೆದ್ದು||. ||೨|| ವಾರದ ಆರು ದಿನವು ಸಾಮಾನ್ಯ ತಿನಿಸುಭಾನುವಾರ ಮಾಡುವರು ವಿಶೇಷ ತಿನಿಸು|ಸಸ್ಯಾಹಾರವ ಕೆಲವರು ತಿಂದರೇಮಾಂಸ ಮೀನು ಮೊಟ್ಟೆಯ ತಿನ್ನುವರೇ||. ||೩|| ಪ್ರತಿನಿತ್ಯ ಕೆಲಸಕ್ಕಾಗೀ ಏಳುವರುಮುಂಜಾವಿನ ಗಂಟೆ ಆರು|ವಾರಾಂತ್ಯದ ದಿನದೀ ತಡವಾಗೀಹಾಲು ಪತ್ರಿಕೆಗಳ ಪಡೆವರು ತಡವಾಗೀ||. ||೪|| ವಾರಾಂತ್ಯವೆಂದರೇ ಆಗುವರು ಸೋಮಾರೀಪೂಜೇಪುರಸ್ಕಾರವಿಲ್ಲದೆ ಬರೀ|ನಮ್ಮ ನಾಗಶಯನನ ಅರ್ಚಿಸುವರೇಬರಿದೇ ಕೈಮುಗಿದು […]Read More

ಆಶಾ ರಘು ರವರ ‘ಆವರ್ತ’ ಮತ್ತು ಇನ್ನೆರಡು ಕೃತಿಗಳ ಬಿಡುಗಡೆ

ಆವರ್ತ (ಮೂರನೇ ಮುದ್ರಣ) – ಆವರ್ತ ಮಂಥನ – ಪೂತನಿ (ನಾಟಕ ಸಂಕಲನ) ಬಿಡುಗಡೆ ಲೇಖಕಿ ಶ್ರೀಮತಿ ಆಶಾ ರಘು ರವರ “ಆವರ್ತ” ತನ್ನ ಅಭೂತಪೂರ್ವ ಯಶಸ್ಸಿನೊಂದಿಗೆ ಮೂರನೇ ಮುದ್ರಣ ಕಂಡಿದೆ. ಇಂದು ಬೆಂಗಳೂರಿನ ಗಾಂಧಿ ಭವನದ ಬಾಪು ಸಭಾಂಗಣ ದಲ್ಲಿ ಶ್ರೀಮತಿ ಆಶಾ ರಘು ರವರ “ಆವರ್ತ, ಆವರ್ತ ಮಂಥನ, ಪೂತನಿ” ಕೃತಿಗಳು ಓದುಗರಿಗೆ ಲೋಕಾರ್ಪಣೆಯಾಯಿತು. ಶ್ರೀಮತಿ ಪ್ರತಿಮಾ ಪ್ರಶಾಂತ್ ರವರ ದೇವರ ನಾಮ ದಿಂದ ಆರಂಭಗೊಂಡು ಶ್ರೀಮತಿ ಶ್ವೇತ ಅವರ ಸುಂದರವಾದ ನಿರೂಪಣೆಯಲ್ಲಿ ನೆಡೆದ […]Read More

ಸಾವಿನ ರಣಭೂಮಿ-ಸಿಯಾಚಿನ್ ಗ್ಲೇಸಿಯರ್

ಪ್ರಾಕೃತಿಕ ವೈಪರೀತ್ಯದ ಸಾವಿನ ರಣಭೂಮಿ-ಸಿಯಾಚಿನ್ ಗ್ಲೇಸಿಯರ್ ಪ್ರಪಂಚದ ಅತ್ಯಂತ ಎತ್ತರದ ಯುದ್ಧಭೂಮಿಯೇ ಸಿಯಾಚಿನ್ ಗ್ಲೇಸಿಯರ್. ಸಿಯಾಚಿನ್ ಎಂಬ ಹೆಸರು ಈ ಹಿಮಶಿಖರದಲ್ಲಿ ಹೇರಳವಾಗಿ ಬೆಳೆಯುವ “ಸಿಯಾನ್” ಎಂಬ ಹೂವುಗಳಿಂದಾಗಿ ಬಂದಿದೆ. ಸಿಯಾಚಿನ್ ತನ್ನ ಪೂರ್ವ ಮಗ್ಗುಲಲ್ಲಿ ಪಾಕ್ ಮತ್ತು ಪಶ್ಚಿಮ ಮಗ್ಗುಲಲ್ಲಿ ಚೀನಾ ದೇಶಗಳನ್ನು ಇಟ್ಟುಕೊಂಡಿರುವಂತಹ ಪರ್ವತ ಪ್ರದೇಶವಾಗಿದ್ದು ಲಡಾಕ್‌ನಿಂದ 125 ಕಿ.ಮೀ ದೂರ ಹಾಗೂ ಸಮುದ್ರ ಮಟ್ಟದಿಂದ 18,875 ಅಡಿ ಎತ್ತರದಲ್ಲಿದೆ. ಒಟ್ಟು 77 ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ ಈ ಪ್ರದೇಶ ಭಾರತ, ಪಾಕಿಸ್ತಾನ ಹಾಗೂ […]Read More

ಲೇಖಕಿ ಆಶಾ ರಘು – ಸಂದರ್ಶನ

“ಆವರ್ತ” ಇದು ವೇದೋತ್ತರ ಕಾಲ ಘಟ್ಟದ ಕಲ್ಪನೆಯಲ್ಲಿ ಮೂಡಿಬಂದತಹ ಕಾದಂಬರಿ. ಇದರ ಲೇಖಕಿ ಶ್ರೀಮತಿ ಆಶಾ ರಘು. “ಆವರ್ತ” 2014 ರಲ್ಲಿ ಪ್ರಥಮ ಆವೃತಿ ಬಿಡುಗಡೆಯಾಗಿ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಹಾಗೆಯೇ ಲೇಖಕಿ ಆಶಾ ರಘು ರವರಿಗೆ ಅನೇಕ ಸಾಹಿತ್ಯಾಭಿಮಾನಿಗಳನ್ನು ದೊರಕಿಸಿಕೊಟ್ಟಂತಹ ಕೃತಿ. ಶ್ರೀಮತಿ ಆಶಾ ರಘು ರವರು ಬೆಂಗಳೂರಿನ ವಿಜಯನಗರ ಪಿ. ಯು. ಕಾಲೇಜು ಹಾಗು ಆದಿಚುಂಚನಗಿರಿ ಬಿ ಬಿ ಎಂ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿ, ನಂತರ […]Read More