ವಾಸ್ತವ ಸತ್ಯ

ವಾಸ್ತವ ಸತ್ಯ ನೀನಿಲ್ಲದಿರಲಾರೆನೆ,ಈ ಜೀವ ಶವವಾಗುತ್ತಿದೆಗೆಳತಿ, ಈ ಹಸಿ ಸುಳ್ಳು, ಒಪ್ಪಿಕೊಂಡು ಬಿಡು. ಮನದೊಳಗೆ ನಿನ್ನದೇ ಧ್ಯಾನನಿಧ್ರಾಹಾರಗಳು ಶೂನ್ಯ.ಈ ಮಾತಿಗೆ ನಕ್ಕು ಬಿಡು. ಸದಾ, ತೆರೆದಿದೆ ಮನೆ, ಮನಕಾಯುತಿಹೆನು ಪ್ರತೀ ಕ್ಷಣಬಾ, ಬೆಳಗೋಣ ಜೀವನ.ಈ ನುಡಿಗಳಿಗೆ, ಚಕಿತಗೊಳ್ಳದಿರು.ಗಹ, ಗಹಿಸಿ ಬಿಡು. ಸದಾ ಹಾತೊರೆಯುವ,ವಿರಹಿಯಾಗಿ ಅಲೆಯುವ,ನಿದ್ರಾಹಾರ ತ್ಯಜಿಸುವ, “ನಿನ್ನದೇ ಧ್ಯಾನದೊಳು ಲೀನವಾಗುವಹೋ! ಬೇರೆ ಕೆಲಸವಿಲ್ಲವಾ.? ಇದು ವಾಸ್ತವ. ಪವನ ಕುಮಾರ ಕೆ ವಿಬಳ್ಳಾರಿRead More

ಮನೆಯಂಗಳದ ಅಪ್ಸರಾ – ಪಾರಿಜಾತ ಪುಷ್ಪ

ಮನೆಯಂಗಳದ ಅಪ್ಸರಾ ‘ಪಾರಿಜಾತ’ ಪುಷ್ಪ ಪಾರಿಜಾತ ಹೆಸರಲ್ಲೇ ಏನೋ ವಿಶೇಷ ಶಕ್ತಿ ಅಥವಾ ಅದೇನೋ ಅವರ್ಣನೀಯವಾದ ಸೊಗಡು ಇದೆ ಅಲ್ಲವೇ..? ಹೌದು ಇದು ಪುಷ್ಪ ಪ್ರಬೇಧದಲ್ಲೇ ವಿಶೇಷ ಸ್ಥಾನಮಾನ ಪಡೆದಿರುವ ಹೂವು. ದೇವತೆಗಳು ಮತ್ತು ಅಸುರರು ತಪಸ್ಸಿನ ಮೂಲಕ ವರಪ್ರಸಾದವಾಗಿ ಪಡೆದುಕೊಂಡ ಅಮೃತವನ್ನು ಹಂಚಿಕೊಳ್ಳಲು ನಡೆಸಿದ ಸಮುದ್ರ ಮಥನದ ಸಂದರ್ಭದಲ್ಲಿ ಕ್ಷೀರ ಸಮುದ್ರದಿಂದ ಹದಿನಾಲ್ಕು ಅಮೂಲ್ಯ ರತ್ನಗಳು ಹಾಗೂ ಐದು ಕಲ್ಪವೃಕ್ಷಗಳು ಹುಟ್ಟಿದವೆಂದು ನಂಬಿಕೆಯಿದೆ. (ಕಲ್ಪವೃಕ್ಷವೆಂದರೆ ಕೇಳಿದ್ದನ್ನೆಲ್ಲಾ ಕೊಡುವ ಮರ) ಅವುಗಳೆಂದರೆ ಪಾರಿಜಾತ, ಮಂದಾರ, ಸಂತಾನ, ನಾರೀಕೇಳ […]Read More

ನವದುರ್ಗೆಯರ ನವರಾತ್ರಿ ವೈಭವ

ನವದುರ್ಗೆಯರ ನವರಾತ್ರಿ ವೈಭವ ಒಂದೊಮ್ಮೆ, ಮಹಿಷಾಸುರ ಎನ್ನುವ ಅಸುರ ದೇವತೆಗಳನ್ನೆಲ್ಲಾ ಪೀಡಿಸುತ್ತಿದ್ದು, ಆ ದೇವತೆಗಳೆಲ್ಲಾ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಕಾಪಾಡುವಂತೆ ಬೇಡಿದರು. ತ್ರಿಮೂರ್ತಿಗಳು ತಮ್ಮ ಶಕ್ತಿಯನ್ನೆಲ್ಲಾ ಪಾರ್ವತಿಗೆ ಧಾರೆಯೆರೆದು, ದೇವಿಯು ಹತ್ತು ಕೈಗಳನ್ನು ಹೊಂದಿ ದುರ್ಗೆಯ ಅವತಾರವೆತ್ತಿದಳು. ಶಿವನು ತ್ರಿಶೂಲವನ್ನು, ವಿಷ್ಣುವು ಚಕ್ರವನ್ನು, ವರುಣ ದೇವನು ಪಾಶವನ್ನು, ಇಂದ್ರನು ವಜ್ರಾಯುಧವನ್ನು, ವಾಯುವು ಬಾಣಗಳನ್ನು, ಪರ್ವತರಾಜನು ವಾಹನವಾದ ಸಿಂಹವನ್ನು ದುರ್ಗೆಗೆ ನೀಡಿದರು. ಈ ಎಲ್ಲಾ ಆಯುಧ ಹಾಗೂ ವಾಹನಗಳಿಂದ ಸನ್ನದ್ಧಳಾದ ದುರ್ಗೆಯು ಮಹಿಷಾಸುರನ ಸೈನ್ಯದ ಮೇಲೆ ಆಕ್ರಮಣ […]Read More

ಹನಿಗವನಗಳು – ನಾಗರಾಜು.ಹ

ಮುಂಜಾವಿನ ವೇಳೆಯಲಿ ಮುಂಜಾವಿನ ವೇಳೆಯಲಿಮುತ್ತಿನ ಹನಿ ಬೀಳುತಲಿ|ಮುಂಗುರುಳಿನ ಕೇಶದಲೀಹನಿಯುತಿದೆ ಮಂದಗತಿಯಲೀ|ಹಸಿರು ಹುಲ್ಲಿನ ಹಾಸಿನಲಿಹೊಳೆಯುತಿದೆ ಇಬ್ಬನಿ ಮುತ್ತಿನಲೀ|| ಸಾಹಿತ್ಯ ವೈರಿ ಹೇ ವಿನಾಯಕ ನಿನಗೆ ನನ್ನ ನಮನನನ್ನ ಸಾಹಿತ್ಯಕ್ಕೆ ಕೊಡು ನಿನ್ನ ಗಮನ|ಗ್ರಂಥಗಳ ತಿನ್ನುವವು ನಿನ್ನ ವಾಹನಗಣಕ ಯಂತ್ರಕೆ ವೈರಸ್ ನ ಆಗಮನ||ಮತ್ತೆ ಪುಸ್ತಕದುಳುಗಳ ಆಕ್ರಮಣಅಲ್ಲದೇ ಶೀತಾಂಶವೂ ಒಂದು ಕಾರಣ|ದಯಮಾಡಿ ಕಾಪಾಡು ನಾಗಶಯನನಿನಗೆ ಅರ್ಪಿಸುವೆ ನನ್ನ ಪ್ರಣಾಮ|| ಅದ್ಭುತ ಪ್ರಪಂಚದ ವೈಶಿಷ್ಟ್ಯವೇ ಒಂದು ಅದ್ಭುತಪರಮಾತ್ಮನ ಸೃಷ್ಟಿ ಅರ್ಥಗರ್ಭಿತ|ಪ್ರತೀ ಜೀವಿಯ ಬಾಳೂ ಊರ್ಜಿತಅದರಂತೆ ಜಡವಸ್ತುವೂ ಅಶಾಶ್ವತ|ನಾಗಶಯನನ ಅಣತಿಯಂತೇ ವ್ಯವಸ್ಥಿತಈ ಜಗದೊಳಗೆಲ್ಲಾ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 36

ಹಿಂದಿನ ಸಂಚಿಕೆಯಿಂದ…. ರಟ್ಟಾ ಮತ್ತು ಚಿತ್ರಕ ಮೇಲಕ್ಕೆ ಹೋಗಲು ಅರ್ಧ ಗಂಟೆ ಹಿಡಿಯಿತು. ಅದು ಸಂಘವೆಂದು ರಟ್ಟಾ ಗುರುತಿಸಿದಳು. ಕಲ್ಲನ್ನು ಕಡಿದು ನಿರ್ಮಿಸಿರುವ ಕೆಲವು ಕೊಠಡಿಗಳು. ಎದುರಿಗೆ ಸಮತಲವಾದ ಒಂದು ಜಗಲಿ. ಜಗಲಿಯ ಮಧ್ಯದಲ್ಲಿ ತಥಾಗತನ ಶಿಲಾಮೂರ್ತಿ. ತಪ್ಪಲಿನ ಕಡೆಯಿಂದ ಕಾಣಿಸಿದ ಕಿಟಕಿಗಳು ಸಂಘದ ಹಿಂಭಾಗದ್ದು. ರಟ್ಟಾ ಮೊದಲು ಬುದ್ಧನ ಧ್ಯಾನ ಮುದ್ರೆಯಲ್ಲಿದ್ದ ಮೂರ್ತಿಯ ಮುಂದೆ ಹೋಗಿ ನಿಂತಳು. ಚಿತ್ರಕನೂ ಪಕ್ಕದಲ್ಲಿ ಬಂದು ನಿಂತನು. ರಟ್ಟಾ ಕೈ ಜೋಡಿಸಿ ಭಕ್ತಿ ನಮ್ರ ಧ್ವನಿಯಲ್ಲಿ-ನಮೋ ತಸ್ಸ ಭಗವತೋ ಅರಹತೋ […]Read More

ಆಯುರ್ವೇದಿಯ ಔಷದಿಗಳೆಷ್ಟು ಸುರಕ್ಷಿತ ?

ಆಯುರ್ವೇದಿಯ ಔಷದಿಗಳೆಷ್ಟು ಸುರಕ್ಷಿತ ? ಆಯುರ್ವೇದಿಯ ಔಷದಶಾಸ್ತ್ರಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಶತಶತಮಾನಗಳಿಂದಲೂ ಕೆಲವೊಂದು ಗಿಡಮೂಲಿಕೆಗಳನ್ನು ನಾರುಬೇರುಗಳನ್ನು ಔಷದಿಯಾಗಿ – ಆಹಾರವಾಗಿ ಬಳಸುತ್ತಿದ್ದಾರೆ. ಆಯುರ್ವೇದ ಔಷದಿಗಳು ನೈಸರ್ಗಿಕವಾಗಿ ದೊರೆಯುವುದರಿಂದ ಇವು ಸುರಕ್ಷಿತ ಎಂಬ ತಪ್ಪು ತಿಳುವಳಿಕೆ ಜನ ಸಾಮಾನ್ಯರಲ್ಲಿದೆ. ಇತ್ತೀಚಿನ ಸಂಶೋಧನೆಗಳು ಇವುಕೂಡ ಅಸುರಕ್ಷಿತ ಹಾಗೂ ಅಡ್ಡಪರಿಣಾಮ ಬಿರಬಲ್ಲದು ಎಂದು ಸಾಬೀತು ಪಡಿಸಿದೆ. ದೇಶದಲ್ಲಿ ದೊರೆಯುವ ಹಲವಾರು ಆಯುರ್ವೇದ ಔಷದಿಗಳಿಗೆ ಅವುಗಳು ಉಪಯೋಗಕ್ಕೆ ಎಷ್ಟು ಸುರಕ್ಷಿತ ಎಂಬ ದಾಖಲೆ, ಅಥವಾ ಅವರಲ್ಲಿರುವ ವಿಷಯುಕ್ತ ವಸ್ತುಗಳು […]Read More

ಇಂಡೋನೇಷ್ಯಾದ ಕೊಮಾಡೋ ಡ್ರ್ಯಾಗನ್ಸ್

ಕೊಮಾಡೋ ಡ್ರ್ಯಾಗನ್ಸ್ “ಕೊಮಾಡೋ ಡ್ರ್ಯಾಗನ್” ಎನ್ನುವ ಈ ಮೊಸಳೆ ಗಾತ್ರದ ಹಲ್ಲಿಗಳು ಇಂಡೋನೇಷ್ಯಾದ “ಸುಂದಾ”ದ್ವೀಪಗಳಲ್ಲಿ ಕಂಡುಬರುತ್ತವೆ . ಲಕ್ಷಾಂತರ ವರ್ಷಗಳಿಂದ ಸುಂದಾ ದ್ವೀಪ ಸಮೂಚ್ಚಯಗಳಲ್ಲಿ ವಿಕಸನ ಹೊಂದಿರುವ ಈ ಹಲ್ಲಿಗಳು ಮಾಂಸಾಹಾರಿಗಳು . “ಸುಂದಾ” ದ್ವೀಪ ಸಮುಚ್ಚಯಯದ ಜೊತೆಗೆ ಇನ್ನೂ ಕೆಲವು ನಡುಗಡ್ಡೆಗಳಲ್ಲಿಯೂ ಕಂಡುಬರುತ್ತವೆ . ಇವು ಪ್ರಾಣಿಗಳ ಹಿಂದೆ ಬೆನ್ನು ಹತ್ತಿ ಓಡಿಹೋಗಿ ಭೇಟೆಯಾಡುವುದಿಲ್ಲ . ಬದಲಾಗಿ ಭೇಟೆ ಪ್ರಾಣಿಗಳು ಇವುಗಳ ಸಮೀಪಕ್ಕೆ ಸುಳಿದಾಗ ತಟಕ್ಕನೇ ಅವುಗಳ ಕಾಲು, ತೊಡೆ ಅಥವಾ ಹೊಟ್ಟೆಯ ಭಾಗಕ್ಕೆ ತಮ್ಮ […]Read More

ಕನ್ನಂಬಾಡಿ ಹಿನ್ನೀರಿನ ಶ್ರೀ ವೇಣುಗೋಪಾಲ ಸ್ವಾಮಿ

ಕನ್ನಂಬಾಡಿ ಹಿನ್ನೀರಿನಿಂದ ಹೊರಬಂದ ಶ್ರೀ ವೇಣುಗೋಪಾಲ ಸ್ವಾಮಿ ಮೈಸೂರು ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಅರಮನೆ, ಮೃಗಾಲಯ ಮತ್ತು ಕೃಷ್ಣರಾಜ ಸಾಗರ ಅಣೆಕಟ್ಟು. ರಾಜ್ಯದ ಪ್ರಸಿದ್ಧ ಪ್ರವಾಸೀ ತಾಣಗಳಲ್ಲಿ ಮೈಸೂರು ಅಗ್ರಸ್ಥಾನವನ್ನು ಪಡೆದಿದೆಯೆಂದರೆ ಅತಿಶಯೋಕ್ತಿಯಾಗಲಾರದು. ಅತ್ಯಂತ ತಂಪಾದ ವಾತಾವರಣದೊಂದಿಗೆ ಅಗಲವಾದ ರಸ್ತೆಗಳೊಂದಿಗೆ ಸುಸಜ್ಜಿತವಾದ ಸಾರಿಗೆಯ ವ್ಯವಸ್ಥೆಯನ್ನೊಳಗೊಂಡು ದೇಶದ ಪ್ರಥಮ ಅತ್ಯಂತ ಸ್ವಚ್ಛ ನಗರವೆಂಬ ಖ್ಯಾತಿಯೊಂದಿಗೆ ಇಲ್ಲಿನ ಸಂಸ್ಕೃತಿ ಪ್ರವಾಸಿಗರನ್ನು ಸರ್ವ ಋತುಗಳಲ್ಲೂ ತನ್ನೆಡೆಗೆ ಕೈ ಬೀಸಿ ಕರೆಯುತ್ತದೆ. ಕೃಷ್ಣರಾಜಸಾಗರ ಅಣೆಕಟ್ಟನ್ನು ಸರ್.ಎಂ ವಿಶ್ವೇಶ್ವರಯ್ಯರವರ ನೇತೃತ್ವದಲ್ಲಿ ಕಟ್ಟಲಾಗಿದ್ದು, ಇದು […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 50

ಹೊಟ್ಟಗಿಲ್ಲದವಂಗೆ ರೊಟ್ಟಿ ಸಿಕ್ಕರೆ ಸಾಕುಹೊಟ್ಟೆ ತುಂಬಿದವಂಗೆ ಬಾಯಿ ರುಚಿ ಬೇಕುಮೊಟ್ಟೆ ಮಾಂಸಾಹಾರ ಬೇಕು ಬೇರೊಬ್ಬನಿಗೆಎಷ್ಟೊಂದು ವೈಚಿತ್ರ್ಯ! – || ಪ್ರತ್ಯಗಾತ್ಮ || ಬಟ್ಟೆಯೇ ಇರದವಗೆ ಮಾನ ಮುಚ್ಚುವ ಆಸೆಬಟ್ಟೆ ಇದ್ದವಗಿನ್ನು ಎರಡು ಜೊತೆ ಆಸೆಪಟ್ಟೆ ಪೀತಾಂಬರವು ಮದುವೆ ಮನೆಗೆಂಬಾಸೆಇಷ್ಟಿದ್ದರಷ್ಟಾಸೆ- || ಪ್ರತ್ಯಗಾತ್ಮ || ಹಸಿದ ಹೊಟ್ಟೆಗೆ ಹಲಸು, ಉಂಡ ಬಾಯಿಗೆ ಮಾವು,ಹಸಿರು ದಾಕ್ಷಿಯು ಬಾಯಿ ಚಪ್ಪರಿಸಲಷ್ಟೆಹಸನಾದ ಮೋಸಂಬಿ – ಸೇಬು ಕಿತ್ತಲೆ ಹಣ್ಣುಹಸಿದ ರೋಗಿಗೆ ಉಣಿಸು- || ಪ್ರತ್ಯಗಾತ್ಮ || ಬಲಿಯಾಗದಿರು ನೀನು ಯಾವುದೇ ದುಶ್ಚಟಕೆಬಲೆ ಬೀಸಿ […]Read More

ಮುದ್ದು ಮಗಳೇ – ತಾಯಿಯೊಬ್ಬಳ ಆತ್ಮಕಥೆ

ಮುದ್ದು ಮಗಳೇ – ತಾಯಿಯೊಬ್ಬಳ ಆತ್ಮಕಥೆಲೇಖಕಿ: ಲತಾ ಶ್ರೀನಿವಾಸ್ಪ್ರಕಾಶನ: ಕಾಜಾಣಬೆಲೆ: 200/- ಲೇಖಕಿ ಶ್ರೀಮತಿ ಲತಾ ಶ್ರೀನಿವಾಸ್ ತುಮುಕೂರಿನವರು, ಕನ್ನಡ ಸ್ನಾತಕೋತ್ತರ ಪದವೀಧರೆ, ನಿವೃತ್ತ ಐ ಎ ಸ್ ಅಧಿಕಾರಿ ಶ್ರೀ ಕೆ. ಆರ್. ಶ್ರೀನಿವಾಸ್ ರವರ ಧರ್ಮಪತ್ನಿ. ಇವರು ಬರೆದ ಕೆಲವು ಸಣ್ಣ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಲೇಖಿಕಾ ಸಾಹಿತ್ಯ ವೇದಿಕೆ ನಡೆಸಿದ ಕಥಾ ಸ್ಪರ್ಧೆಯಲ್ಲಿ ಇವರಿಗೆ ಬಹುಮಾನ ದೊರೆತಿದೆ. ಮುದ್ದಿನ ಮಗಳ ಅಕಾಲ ಮರಣದಿಂದ ತತ್ತರಿಸಿದ ಮಹಾತಾಯಿ ಶ್ರೀಮತಿ ಲತಾ ಶ್ರೀನಿವಾಸ್. ತಮ್ಮ […]Read More