ಆವರ್ತ (ಮೂರನೇ ಮುದ್ರಣ) – ಆವರ್ತ ಮಂಥನ – ಪೂತನಿ (ನಾಟಕ ಸಂಕಲನ) ಬಿಡುಗಡೆ ಲೇಖಕಿ ಶ್ರೀಮತಿ ಆಶಾ ರಘು ರವರ “ಆವರ್ತ” ತನ್ನ ಅಭೂತಪೂರ್ವ ಯಶಸ್ಸಿನೊಂದಿಗೆ ಮೂರನೇ ಮುದ್ರಣ ಕಂಡಿದೆ. ಇಂದು ಬೆಂಗಳೂರಿನ ಗಾಂಧಿ ಭವನದ ಬಾಪು ಸಭಾಂಗಣ ದಲ್ಲಿ ಶ್ರೀಮತಿ ಆಶಾ ರಘು ರವರ “ಆವರ್ತ, ಆವರ್ತ ಮಂಥನ, ಪೂತನಿ” ಕೃತಿಗಳು ಓದುಗರಿಗೆ ಲೋಕಾರ್ಪಣೆಯಾಯಿತು. ಶ್ರೀಮತಿ ಪ್ರತಿಮಾ ಪ್ರಶಾಂತ್ ರವರ ದೇವರ ನಾಮ ದಿಂದ ಆರಂಭಗೊಂಡು ಶ್ರೀಮತಿ ಶ್ವೇತ ಅವರ ಸುಂದರವಾದ ನಿರೂಪಣೆಯಲ್ಲಿ ನೆಡೆದ […]Read More
ಪ್ರಾಕೃತಿಕ ವೈಪರೀತ್ಯದ ಸಾವಿನ ರಣಭೂಮಿ-ಸಿಯಾಚಿನ್ ಗ್ಲೇಸಿಯರ್ ಪ್ರಪಂಚದ ಅತ್ಯಂತ ಎತ್ತರದ ಯುದ್ಧಭೂಮಿಯೇ ಸಿಯಾಚಿನ್ ಗ್ಲೇಸಿಯರ್. ಸಿಯಾಚಿನ್ ಎಂಬ ಹೆಸರು ಈ ಹಿಮಶಿಖರದಲ್ಲಿ ಹೇರಳವಾಗಿ ಬೆಳೆಯುವ “ಸಿಯಾನ್” ಎಂಬ ಹೂವುಗಳಿಂದಾಗಿ ಬಂದಿದೆ. ಸಿಯಾಚಿನ್ ತನ್ನ ಪೂರ್ವ ಮಗ್ಗುಲಲ್ಲಿ ಪಾಕ್ ಮತ್ತು ಪಶ್ಚಿಮ ಮಗ್ಗುಲಲ್ಲಿ ಚೀನಾ ದೇಶಗಳನ್ನು ಇಟ್ಟುಕೊಂಡಿರುವಂತಹ ಪರ್ವತ ಪ್ರದೇಶವಾಗಿದ್ದು ಲಡಾಕ್‌ನಿಂದ 125 ಕಿ.ಮೀ ದೂರ ಹಾಗೂ ಸಮುದ್ರ ಮಟ್ಟದಿಂದ 18,875 ಅಡಿ ಎತ್ತರದಲ್ಲಿದೆ. ಒಟ್ಟು 77 ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ ಈ ಪ್ರದೇಶ ಭಾರತ, ಪಾಕಿಸ್ತಾನ ಹಾಗೂ […]Read More
“ಆವರ್ತ” ಇದು ವೇದೋತ್ತರ ಕಾಲ ಘಟ್ಟದ ಕಲ್ಪನೆಯಲ್ಲಿ ಮೂಡಿಬಂದತಹ ಕಾದಂಬರಿ. ಇದರ ಲೇಖಕಿ ಶ್ರೀಮತಿ ಆಶಾ ರಘು. “ಆವರ್ತ” 2014 ರಲ್ಲಿ ಪ್ರಥಮ ಆವೃತಿ ಬಿಡುಗಡೆಯಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಹಾಗೆಯೇ ಲೇಖಕಿ ಆಶಾ ರಘು ರವರಿಗೆ ಅನೇಕ ಸಾಹಿತ್ಯಾಭಿಮಾನಿಗಳನ್ನು ದೊರಕಿಸಿಕೊಟ್ಟಂತಹ ಕೃತಿ. ಶ್ರೀಮತಿ ಆಶಾ ರಘು ರವರು ಬೆಂಗಳೂರಿನ ವಿಜಯನಗರ ಪಿ. ಯು. ಕಾಲೇಜು ಹಾಗು ಆದಿಚುಂಚನಗಿರಿ ಬಿ ಬಿ ಎಂ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿ, ನಂತರ […]Read More
ಪೂತನಿ ಮತ್ತಿತರ ನಾಟಕಗಳು ‘ಕಾವ್ಯೇಷು ನಾಟಕಂ ರಮ್ಯಂ’ – ಭಾರತೀಯ ಸಾಹಿತ್ಯವನ್ನು ಒಳಗೊಂಡು ವಿಶ್ವಸಾಹಿತ್ಯ ಸಂದರ್ಭದಲ್ಲಿ ಬಹಳ ಜನಜನಿತವಾದ ನುಡಿ ಇದು. ಮನುಷ್ಯನ ಚಿಂತನ-ಮಂಥನಗಳು, ಆಲೋಚನೆಗಳು, ಅನುಭವಗಳು, ರಾಗಾನುರಾಗಗಳು, ಲೋಕಾಲೋಕದ ಪುರಾಣ-ಚರಿತ್ರೆ ಹಾಗೂ ವರ್ತಮಾನದ ಕಾಲಸಂದರ್ಭಗಳಲ್ಲಿ ಫಲಿಸುವ ಆಗುಹೋಗುಗಳು.. ಇವೆಲ್ಲವು ಮನುಷ್ಯನ ಭಾವಕೋಶದೊಳಗೆ ಬೆಸೆದು ಬೆಸೆದು ಕಡೆದು ಕಡೆದು ಮಿಳಿತಗೊಂಡು ಸೃಜನಶೀಲ ಸೃಷ್ಟಿಯ ಮಿಂಚೊಂದು ಮಿನುಗಿ ಮನದೊಳಗೇ ಬೀಜಾಂಕುರವಾಗಿ.. ಅಣುಯಾಗಿ.. ಕುಡಿಯಾಗಿ.. ಟಿಸಿಲೊಡೆದು ಚಿಗುರು ಚಿಗುರಾಗಿ ನಳನಳಸಿ ಬದುಕಿನ, ಬಾಳಿನ ಸತ್ವಸಾರವ ಹೀರಿ ಕೈಕಾಲುಗಳು.. ಅಂಗಾಂಗಗಳು ಮೂಡಿ […]Read More
ಕಾಡುವ ತೇಜಸ್ವಿ ನೆನಪಿನಲ್ಲಿ – ಅನಂತ್ ಕುಣಿಗಲ್ ಸಂಕಟ ಅಂದ್ರೆ ಏನ್ ಗೊತ್ತಾ?? ನನ್ನಿಷ್ಟದ ಲೇಖಕನನ್ನ ನೇರವಾಗಿ ಭೇಟಿಯಾಗೋಕೆ ಆಗದೆ ಇರೋದು! ಏಕಲವ್ಯನಿಗೆ ದ್ರೋಣ ಹೇಗೋ.. ಸಾಹಿತ್ಯ ಲೋಕದಲ್ಲಿ ನನಗೆ ತೇಜಸ್ವಿಯೂ ಹಾಗೇ.. ಏಕಲವ್ಯ ದ್ರೋಣನನ್ನ ನೋಡಿದ್ದ. ಆದರೆ ಅನಂತ, ತೇಜಸ್ವಿಯವರನ್ನ ನೋಡೋಕ್ ಆಗಿಲ್ಲ. ಅವರ ಬರಹ-ಬದುಕಿನ ಸ್ಪೂರ್ತಿಯಿಂದ ಅನಂತನೊಳಗೊಬ್ಬ ತೇಜಸ್ವಿ ಸದಾ ಜೀವಂತದಿಂದಿರುತ್ತಾರೆ. ಕಾಡು-ಗುಹೆ, ಬೆಟ್ಟ-ಗುಡ್ಡ, ಹಳ್ಳ-ಕೊಳ್ಳ, ಮರ-ಗಿಡ-ಹುಲ್ಲು, ಹುಳ-ಉಪ್ಪಟ್ಟೆಗಳ ಜಂತು ಜಂತುವಿನಲ್ಲೂ ತೇಜಸ್ವಿಯ ಪರಿಸರದ ಕೂಗು ಕೇಳಿಸುತ್ತದೆ. ಮನುಷ್ಯ ಅಂದ್ರೆ ಹೀಗೆ ಜಾಲಿಯಾಗಿ ಇರ್ಬೇಕಪ್ಪಾ […]Read More
ಹಿಂದಿನ ಸಂಚಿಕೆಯಿಂದ… ಮರುದಿನ ಮಧ್ಯಾಹ್ನ ಚಷ್ಟನ ದುರ್ಗದಿಂದ ಸಂದೇಶ ವಾಹಕನು ಬಂದನು. ಮಹಾರಾಜ ರಟ್ಟ ಧರ್ಮಾದಿತ್ಯರು ಪತ್ರ ಕಳುಹಿಸಿದ್ದರು. ಪತ್ರವನ್ನು ಓದಿದ ಮಂತ್ರಿ ಚತುರಾನನ ಭಟ್ಟರು ಚಿಂತೆಗೊಳಗಾಗಿ ರಟ್ಟಾಳ ಬಳಿಗೆಬಂದರು.‘ಮಹಾರಾಜರ ಆರೋಗ್ಯ ಚೆನ್ನಾಗಿಲ್ಲ. ಅವರು ಇನ್ನೂ ಕೆಲವು ದಿನಗಳು ಚಷ್ಟನ ದುರ್ಗದಲ್ಲಿಯೇ ಇರುವರು, ಆದರೆ ತಮ್ಮ ಮಗಳನ್ನು ನೋಡಲೇಬೇಕೆಂದು ಅವರು ಚಡಪಡಿಸುತ್ತಿದ್ದಾರೆ. ‘ನಾನು ತಂದೆಯವರ ಬಳಿಗೆ ಹೋಗುತ್ತೇನೆ’ ಎಂದು ರಟ್ಟಾ ಹೇಳಿದಳು.ಚತುರಾನನ ಭಟ್ಟ- ಹೋಗುವುದು ಸರಿಯೋ ಅಲ್ಲವೋ ಎಂಬುದು ತಿಳಿಯದಾಗಿದೆ.‘ಏಕೆ ಹೀಗೆ ಸಂಶಯಪಡುತ್ತೀರಿ?’ಸ್ವಲ್ಪ ಹಿಂದೆ ಮುಂದೆ ನೋಡಿ […]Read More
ರೋಮ್ ಪ್ರವಾಸದ ಅನುಭವ ಯೂರೋಪ್‌ಗೆ ಹೋಗುವ ಅವಕಾಶ ಸಿಕ್ಕಿ ಪ್ರವಾಸದ ಕೊನೆಯ ಭಾಗವಾಗಿ ರೋಮ್‌ಗೆ ಆಗಮಿಸಿದ್ದೆವು. ಇತಿಹಾಸವನ್ನು ಓದಿದವರಿಗೆಲ್ಲಾ ರೋಮ್ ಬಗ್ಗೆ ಥಟ್ಟನೆ ನೆನಪಾಗುವ ಗಾದೆ ” ಆಲ್ ರೋಡ್ ಲೀಡ್ಸ್ ಟೂ ರೋಂ” ಎಂಬುದು, ಇದಕ್ಕೆ ಕಾರಣವೂ ಇದೆ, ರೋಮ್‌ನ ಇತಿಹಾಸ ಅಷ್ಟು ರೋಮಾಂಚನವಾಗಿತ್ತೆಂದು ಹೇಳುತ್ತಾರೆ. ರೋಮ್ ಬಗ್ಗೆ ಪುಸ್ತಕದಲ್ಲಿ ಓದಿದ್ದೆ, ಆದರೆ ಸ್ವತಃ ಈಗ ರೋಮ್ ನೆಲದಲ್ಲಿ ನಿಂತಿದ್ದೆ, ರೋಮ್ ನಗರವನ್ನು ಸೇರಲು ಮೂವತ್ತೊಂದು ಪ್ರವೇಶ ಮಾರ್ಗಗಳಿದೆ ಅದಕ್ಕೆ “ಆಲ್ ರೋಡ್ ಲೀಡ್ಸ್ ಟೂ […]Read More
ಪೇರಲ ಹಣ್ಣು ಮತ್ತು ಮರ ಶ್ರಾವಣ ಮಾಸದ ಹಬ್ಬಗಳ ಆಚರಣೆಯಲ್ಲಿ ದೇವರಿಗೆ ಅರ್ಪಿಸುವ ಹಣ್ಣುಗಳಲ್ಲಿ ಪೇರಲ ಹಣ್ಣು ಒಂದು. ರಜೆಯಲ್ಲಿ ಪ್ರವಾಸಕ್ಕೆ ಹೊರಟಾಗ, ರೈಲುಗಳಲ್ಲಿ ಪ್ರಯಾಣಿಸುವಾಗ ಅತಿ ಕಡಿಮೆ ಬೆಲೆಗೆ ಸಿಗುವ ಹಾಗು ಸವಿಯಲು ಸೊಗಸಾದ ಹಣ್ಣು ಈ ಪೇರಲೆ. ಏಶಿಯಾದ್ಯಂತ ಉಷ್ಣವಲಯದ ಋತುವಿನಲ್ಲಿ ಸೊಗಸಾಗಿ ಪೇರಲ ಮರ ಬೆಳೆಯುವುದು. ಇದು ಎಲ್ಲ ಮಾಸಗಳಲ್ಲಿಯೂ ಹಣ್ಣುಗಳನ್ನು ನೀಡುತ್ತದೆ ಎನ್ನುವುದು ವಿಶೇಷ. “ಸೀಬೆ ಹಣ್ಣು, ಅಲಾಬಾದ್, ಚೇಪೆ ಹಣ್ಣು, ಪೆರು” ಎಂದು ಮುಂತಾದ ಹೆಸರಿಂದಲೂ ಸಹ ಕರೆಯಲ್ಪಟ್ಟಿದೆ. ಈ […]Read More
ಮೈಸೂರಿನ ಶೂಟಿಂಗ್ ಪ್ರತಿಭೆ – ರಕ್ಷಿತ್ ಶಾಸ್ತ್ರಿ ಎಲ್ಲರಿಗೂ ಜೀವನದಲ್ಲಿ ಒಂದಲ್ಲ ಒಂದು ಕನಸಿರುತ್ತದೆ. ಅದರಲ್ಲೂ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಯಸ್ಸಲ್ಲಂತೂ ಏನೇನೋ ಅದ್ಭುತ ಸಾಧನೆಗಳನ್ನು ಮಾಡುವ ಕನಸು ಮೊಳೆಯುವ ಸಮಯ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ಗಾದೆಯೇ ಇಲ್ಲಿ ಬಹಳ ಸೂಕ್ತವಾದದ್ದು. ಮಕ್ಕಳಿಗೆ ಕ್ರೀಡೆ ಹೆಚ್ಚು ಮೌಲ್ಯವನ್ನು ಒದಗಿಸುವುದರೊಂದಿಗೆ ಶಿಸ್ತು ತಾಳ್ಮೆ ಮತ್ತು ಸಂಯಮವನ್ನು ಹಾಗೂ ಜೀವನಕ್ಕೆ ಹೆಚ್ಚು ಮಹತ್ವವನ್ನು ನೀಡುವಂತೆ ಈ ಕನಸುಗಳು ಮಾಡುತ್ತದೆ. ತಾನು ದೊಡ್ಡ ರಾಜಕಾರಣಿ, ಸೈನಿಕ, ಕ್ರೀಡಾಪಟು, ಇಂಜಿನಿಯರ್, ವಕೀಲ, […]Read More
ವಚನ ಸಾಹಿತ್ಯ ಮತ್ತು ಆರೋಗ್ಯ ವಿವಿಧತೆಯಲ್ಲಿ ಏಕತೆ ಭಾರತದ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದು. ಇಲ್ಲಿ ಹಲವು ಭಾಷೆ, ಧರ್ಮ, ಸಂಸ್ಕೃತಿಗಳು ಚಾಲ್ತಿಯಲ್ಲಿವೆ. ಇವೆಲ್ಲವುಗಳಿಂದಾಗಿ ಭಾರತ ಇಂದು ಜಗತ್ತಿನಲ್ಲಿ ಒಂದು ವೈಶಿಷ್ಟ್ಯಪೂರ್ಣ ದೇಶ ಎನಿಸಿದೆ. ಭಾರತದ ಪ್ರಮುಖ ಭಾಷೆಗಳಲ್ಲಿ ಕನ್ನಡವೂ ಒಂದು. ಇದು ಭಾರತದ ದ್ವಿತೀಯ ಪ್ರಾಚೀನತಮ ಭಾಷೆಯಾಗಿದ್ದು ಇದಕ್ಕೆ ಶಾಸ್ತ್ರೀಯ ಭಾಷೆಯ ಪಟ್ಟ ಲಭಿಸಿದೆ. ಇದಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಸ್ಪಷ್ಟವಾದ ಇತಿಹಾಸವಿದೆ. ಕನ್ನಡ ಸಾಹಿತ್ಯ ಸಂಪೂರ್ಣ ಭಾರತದಲ್ಲಿಯೇ ಅತಿ ಹೆಚ್ಚು ಸಮೃದ್ಧವಾಗಿದ್ದು ಕನ್ನಡ ಸಾಹಿತ್ಯಕ್ಕೆ […]Read More