ಪೂತನಿ ಮತ್ತಿತರ ನಾಟಕಗಳು – ಮುನ್ನುಡಿ

ಪೂತನಿ ಮತ್ತಿತರ ನಾಟಕಗಳು ‘ಕಾವ್ಯೇಷು ನಾಟಕಂ ರಮ್ಯಂ’ – ಭಾರತೀಯ ಸಾಹಿತ್ಯವನ್ನು ಒಳಗೊಂಡು ವಿಶ್ವಸಾಹಿತ್ಯ ಸಂದರ್ಭದಲ್ಲಿ ಬಹಳ ಜನಜನಿತವಾದ ನುಡಿ ಇದು. ಮನುಷ್ಯನ ಚಿಂತನ-ಮಂಥನಗಳು, ಆಲೋಚನೆಗಳು, ಅನುಭವಗಳು, ರಾಗಾನುರಾಗಗಳು, ಲೋಕಾಲೋಕದ ಪುರಾಣ-ಚರಿತ್ರೆ ಹಾಗೂ ವರ್ತಮಾನದ ಕಾಲಸಂದರ್ಭಗಳಲ್ಲಿ ಫಲಿಸುವ ಆಗುಹೋಗುಗಳು.. ಇವೆಲ್ಲವು ಮನುಷ್ಯನ ಭಾವಕೋಶದೊಳಗೆ ಬೆಸೆದು ಬೆಸೆದು ಕಡೆದು ಕಡೆದು ಮಿಳಿತಗೊಂಡು ಸೃಜನಶೀಲ ಸೃಷ್ಟಿಯ ಮಿಂಚೊಂದು ಮಿನುಗಿ ಮನದೊಳಗೇ ಬೀಜಾಂಕುರವಾಗಿ.. ಅಣುಯಾಗಿ.. ಕುಡಿಯಾಗಿ.. ಟಿಸಿಲೊಡೆದು ಚಿಗುರು ಚಿಗುರಾಗಿ ನಳನಳಸಿ ಬದುಕಿನ, ಬಾಳಿನ ಸತ್ವಸಾರವ ಹೀರಿ ಕೈಕಾಲುಗಳು.. ಅಂಗಾಂಗಗಳು ಮೂಡಿ […]Read More

ಕಾಡುವ ತೇಜಸ್ವಿ ನೆನಪಿನಲ್ಲಿ – ಅನಂತ್ ಕುಣಿಗಲ್

ಕಾಡುವ ತೇಜಸ್ವಿ ನೆನಪಿನಲ್ಲಿ – ಅನಂತ್ ಕುಣಿಗಲ್ ಸಂಕಟ ಅಂದ್ರೆ ಏನ್ ಗೊತ್ತಾ?? ನನ್ನಿಷ್ಟದ ಲೇಖಕನನ್ನ ನೇರವಾಗಿ ಭೇಟಿಯಾಗೋಕೆ ಆಗದೆ ಇರೋದು! ಏಕಲವ್ಯನಿಗೆ ದ್ರೋಣ ಹೇಗೋ.. ಸಾಹಿತ್ಯ ಲೋಕದಲ್ಲಿ ನನಗೆ ತೇಜಸ್ವಿಯೂ ಹಾಗೇ.. ಏಕಲವ್ಯ ದ್ರೋಣನನ್ನ ನೋಡಿದ್ದ. ಆದರೆ ಅನಂತ, ತೇಜಸ್ವಿಯವರನ್ನ ನೋಡೋಕ್ ಆಗಿಲ್ಲ. ಅವರ ಬರಹ-ಬದುಕಿನ ಸ್ಪೂರ್ತಿಯಿಂದ ಅನಂತನೊಳಗೊಬ್ಬ ತೇಜಸ್ವಿ ಸದಾ ಜೀವಂತದಿಂದಿರುತ್ತಾರೆ. ಕಾಡು-ಗುಹೆ, ಬೆಟ್ಟ-ಗುಡ್ಡ, ಹಳ್ಳ-ಕೊಳ್ಳ, ಮರ-ಗಿಡ-ಹುಲ್ಲು, ಹುಳ-ಉಪ್ಪಟ್ಟೆಗಳ ಜಂತು ಜಂತುವಿನಲ್ಲೂ ತೇಜಸ್ವಿಯ ಪರಿಸರದ ಕೂಗು ಕೇಳಿಸುತ್ತದೆ. ಮನುಷ್ಯ ಅಂದ್ರೆ ಹೀಗೆ ಜಾಲಿಯಾಗಿ ಇರ್ಬೇಕಪ್ಪಾ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 33

ಹಿಂದಿನ ಸಂಚಿಕೆಯಿಂದ… ಮರುದಿನ ಮಧ್ಯಾಹ್ನ ಚಷ್ಟನ ದುರ್ಗದಿಂದ ಸಂದೇಶ ವಾಹಕನು ಬಂದನು. ಮಹಾರಾಜ ರಟ್ಟ ಧರ್ಮಾದಿತ್ಯರು ಪತ್ರ ಕಳುಹಿಸಿದ್ದರು. ಪತ್ರವನ್ನು ಓದಿದ ಮಂತ್ರಿ ಚತುರಾನನ ಭಟ್ಟರು ಚಿಂತೆಗೊಳಗಾಗಿ ರಟ್ಟಾಳ ಬಳಿಗೆಬಂದರು.‘ಮಹಾರಾಜರ ಆರೋಗ್ಯ ಚೆನ್ನಾಗಿಲ್ಲ. ಅವರು ಇನ್ನೂ ಕೆಲವು ದಿನಗಳು ಚಷ್ಟನ ದುರ್ಗದಲ್ಲಿಯೇ ಇರುವರು, ಆದರೆ ತಮ್ಮ ಮಗಳನ್ನು ನೋಡಲೇಬೇಕೆಂದು ಅವರು ಚಡಪಡಿಸುತ್ತಿದ್ದಾರೆ. ‘ನಾನು ತಂದೆಯವರ ಬಳಿಗೆ ಹೋಗುತ್ತೇನೆ’ ಎಂದು ರಟ್ಟಾ ಹೇಳಿದಳು.ಚತುರಾನನ ಭಟ್ಟ- ಹೋಗುವುದು ಸರಿಯೋ ಅಲ್ಲವೋ ಎಂಬುದು ತಿಳಿಯದಾಗಿದೆ.‘ಏಕೆ ಹೀಗೆ ಸಂಶಯಪಡುತ್ತೀರಿ?’ಸ್ವಲ್ಪ ಹಿಂದೆ ಮುಂದೆ ನೋಡಿ […]Read More

ರೊಮ್ಯಾಂಟಿಕ್ ರೋಮ್‌

ರೋಮ್ ಪ್ರವಾಸದ ಅನುಭವ ಯೂರೋಪ್‌ಗೆ ಹೋಗುವ ಅವಕಾಶ ಸಿಕ್ಕಿ ಪ್ರವಾಸದ ಕೊನೆಯ ಭಾಗವಾಗಿ ರೋಮ್‌ಗೆ ಆಗಮಿಸಿದ್ದೆವು. ಇತಿಹಾಸವನ್ನು ಓದಿದವರಿಗೆಲ್ಲಾ ರೋಮ್ ಬಗ್ಗೆ ಥಟ್ಟನೆ ನೆನಪಾಗುವ ಗಾದೆ ” ಆಲ್ ರೋಡ್ ಲೀಡ್ಸ್ ಟೂ ರೋಂ” ಎಂಬುದು, ಇದಕ್ಕೆ ಕಾರಣವೂ ಇದೆ, ರೋಮ್‌ನ ಇತಿಹಾಸ ಅಷ್ಟು ರೋಮಾಂಚನವಾಗಿತ್ತೆಂದು ಹೇಳುತ್ತಾರೆ. ರೋಮ್ ಬಗ್ಗೆ ಪುಸ್ತಕದಲ್ಲಿ ಓದಿದ್ದೆ, ಆದರೆ ಸ್ವತಃ ಈಗ ರೋಮ್ ನೆಲದಲ್ಲಿ ನಿಂತಿದ್ದೆ, ರೋಮ್ ನಗರವನ್ನು ಸೇರಲು ಮೂವತ್ತೊಂದು ಪ್ರವೇಶ ಮಾರ್ಗಗಳಿದೆ ಅದಕ್ಕೆ “ಆಲ್ ರೋಡ್ ಲೀಡ್ಸ್ ಟೂ […]Read More

ಪೇರಲ ಹಣ್ಣು ಮತ್ತು ಮರ

ಪೇರಲ ಹಣ್ಣು ಮತ್ತು ಮರ ಶ್ರಾವಣ ಮಾಸದ ಹಬ್ಬಗಳ ಆಚರಣೆಯಲ್ಲಿ ದೇವರಿಗೆ ಅರ್ಪಿಸುವ ಹಣ್ಣುಗಳಲ್ಲಿ ಪೇರಲ ಹಣ್ಣು ಒಂದು. ರಜೆಯಲ್ಲಿ ಪ್ರವಾಸಕ್ಕೆ ಹೊರಟಾಗ, ರೈಲುಗಳಲ್ಲಿ ಪ್ರಯಾಣಿಸುವಾಗ ಅತಿ ಕಡಿಮೆ ಬೆಲೆಗೆ ಸಿಗುವ ಹಾಗು ಸವಿಯಲು ಸೊಗಸಾದ ಹಣ್ಣು ಈ ಪೇರಲೆ. ಏಶಿಯಾದ್ಯಂತ ಉಷ್ಣವಲಯದ ಋತುವಿನಲ್ಲಿ ಸೊಗಸಾಗಿ ಪೇರಲ ಮರ ಬೆಳೆಯುವುದು. ಇದು ಎಲ್ಲ ಮಾಸಗಳಲ್ಲಿಯೂ ಹಣ್ಣುಗಳನ್ನು ನೀಡುತ್ತದೆ ಎನ್ನುವುದು ವಿಶೇಷ. “ಸೀಬೆ ಹಣ್ಣು, ಅಲಾಬಾದ್, ಚೇಪೆ ಹಣ್ಣು, ಪೆರು” ಎಂದು ಮುಂತಾದ ಹೆಸರಿಂದಲೂ ಸಹ ಕರೆಯಲ್ಪಟ್ಟಿದೆ. ಈ […]Read More

ಮೈಸೂರಿನ ಶೂಟಿಂಗ್ ಪ್ರತಿಭೆ – ರಕ್ಷಿತ್ ಶಾಸ್ತ್ರಿ

ಮೈಸೂರಿನ ಶೂಟಿಂಗ್ ಪ್ರತಿಭೆ – ರಕ್ಷಿತ್ ಶಾಸ್ತ್ರಿ ಎಲ್ಲರಿಗೂ ಜೀವನದಲ್ಲಿ ಒಂದಲ್ಲ ಒಂದು ಕನಸಿರುತ್ತದೆ. ಅದರಲ್ಲೂ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಯಸ್ಸಲ್ಲಂತೂ ಏನೇನೋ ಅದ್ಭುತ ಸಾಧನೆಗಳನ್ನು ಮಾಡುವ ಕನಸು ಮೊಳೆಯುವ ಸಮಯ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ಗಾದೆಯೇ ಇಲ್ಲಿ ಬಹಳ ಸೂಕ್ತವಾದದ್ದು. ಮಕ್ಕಳಿಗೆ ಕ್ರೀಡೆ ಹೆಚ್ಚು ಮೌಲ್ಯವನ್ನು ಒದಗಿಸುವುದರೊಂದಿಗೆ ಶಿಸ್ತು ತಾಳ್ಮೆ ಮತ್ತು ಸಂಯಮವನ್ನು ಹಾಗೂ ಜೀವನಕ್ಕೆ ಹೆಚ್ಚು ಮಹತ್ವವನ್ನು ನೀಡುವಂತೆ ಈ ಕನಸುಗಳು ಮಾಡುತ್ತದೆ. ತಾನು ದೊಡ್ಡ ರಾಜಕಾರಣಿ, ಸೈನಿಕ, ಕ್ರೀಡಾಪಟು, ಇಂಜಿನಿಯರ್, ವಕೀಲ, […]Read More

ವಚನ ಸಾಹಿತ್ಯ ಮತ್ತು ಆರೋಗ್ಯ – ಡಾ. ಗುರುಸಿದ್ಧಯ್ಯಾ ಸ್ವಾಮಿ

ವಚನ ಸಾಹಿತ್ಯ ಮತ್ತು ಆರೋಗ್ಯ ವಿವಿಧತೆಯಲ್ಲಿ ಏಕತೆ ಭಾರತದ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದು. ಇಲ್ಲಿ ಹಲವು ಭಾಷೆ, ಧರ್ಮ, ಸಂಸ್ಕೃತಿಗಳು ಚಾಲ್ತಿಯಲ್ಲಿವೆ. ಇವೆಲ್ಲವುಗಳಿಂದಾಗಿ ಭಾರತ ಇಂದು ಜಗತ್ತಿನಲ್ಲಿ ಒಂದು ವೈಶಿಷ್ಟ್ಯಪೂರ್ಣ ದೇಶ ಎನಿಸಿದೆ. ಭಾರತದ ಪ್ರಮುಖ ಭಾಷೆಗಳಲ್ಲಿ ಕನ್ನಡವೂ ಒಂದು. ಇದು ಭಾರತದ ದ್ವಿತೀಯ ಪ್ರಾಚೀನತಮ ಭಾಷೆಯಾಗಿದ್ದು ಇದಕ್ಕೆ ಶಾಸ್ತ್ರೀಯ ಭಾಷೆಯ ಪಟ್ಟ ಲಭಿಸಿದೆ. ಇದಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಸ್ಪಷ್ಟವಾದ ಇತಿಹಾಸವಿದೆ. ಕನ್ನಡ ಸಾಹಿತ್ಯ ಸಂಪೂರ್ಣ ಭಾರತದಲ್ಲಿಯೇ ಅತಿ ಹೆಚ್ಚು ಸಮೃದ್ಧವಾಗಿದ್ದು ಕನ್ನಡ ಸಾಹಿತ್ಯಕ್ಕೆ […]Read More

ತಿಲಕರ ಏಕತಾ ಗಣೇಶ

ತಿಲಕರ ಏಕತಾ ಗಣೇಶ ನೀಲವ್ಯೋಮ ವಿಶಾಲ ಪಥದಲಿಶ್ರಾವಣ ನೀರದ ನೀಲ ರಥದಲಿಗೌರಿಗಣೇಶರು ಬರುವರದೊ!ಭಾದ್ರಪದಾದಿಯ ಶಾದ್ವಲ ವೇದಿಯಶ್ಯಾಮಲ ಪೃಥಿವಿಯ ಕೋಮಲ ವಕ್ಷಕೆಶ್ರೀ ಕೈಲಾಸವ ತರುವರದೊ!ಕುವೆಂಪು ವರುಷ ವರುಷದಂತೆ ಮತ್ತೊಮ್ಮೆ ಗಣೇಶ ಹಬ್ಬ ಬಂದಿದೆ. ಮನೆ ಮನೆ, ಬೀದಿ ಬೀದಿಗಳು ಹಬ್ಬದ ಆಚರಣೆಗೆ ತಯಾರಾಗಿ ನಿಂತಿದೆ. ಎಂದಿನಂತೆ ಸರಕಾರದವರು, ಪ್ರಕೃತಿ ಪರಿಸರ ಸಂಘಗಳು, ಎಕೋ ಫ್ರೆಂಡ್ಲಿ ಗಣೇಶನನ್ನೇ ಎಲ್ಲರು ಕೂರಿಸಬೇಕೆಂದು ಪ್ರತಿ ವರುಷದಂತೆ ಸಾರಿ ಆಗಿದೆ. ಬೀದಿಯ ಹುಡುಗರು ಹೋದ ವರುಷದ ದೂಳು ಕೆಡವಿದ ಬ್ಯಾನರ್ ಇಸ್ತ್ರಿ ಮಾಡಿ ಹಾಕಬೇಕಾ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 49

ಸೊಕ್ಕಿನಲಿ ಲಂಚಗುಳಿ ಲಂಚ ಸ್ವೀಕರಿಸುತಿರೆಸಿಕ್ಕಿ ಬಿದ್ದನು ಗುಪ್ತಚರರ ಜಾಲಕ್ಕೆ,ಇಕ್ಕಿ ಬಡಿಯುವ ಕೋಲ ಕಾಣಲಿಲ್ಲವು ಬೆಕ್ಕುನೆಕ್ಕಿತೈ ಹಾಲನ್ನು- || ಪ್ರತ್ಯಗಾತ್ಮ || ಲಂಚಗುಳಿಯಧಿಕಾರಿ ಮೈ ಸೊಕ್ಕಿನಿಂ ಕೊಬ್ಬಿಸಂಚಯನ ಮಾಡುವನು ಅಕ್ರಮದಿ ಧನವ,ಹೊಂಚು ಹಾಕುತಲಿರುವ ಗುಪ್ತಚರರನು ಕಾಣಲಂಚ ಒಂದನೆ ಕಾಂಬ || ಪ್ರತ್ಯಗಾತ್ಮ || ರಾಜಕೀಯವ ಮಾಳ್ವ ಶಿಕ್ಷಕರು ಬಹಳಿಹರುಓಜೆಯಲಿ ಮಕ್ಕಳನು ಬಳಿಸಿಕೊಳ್ಳುವರುಪೂಜೆಗೊಳುವರು ಮತ್ತೆ ಎಲ್ಲರಿಂದಲು ಆಹಾ !ಸೋಜಿಗವದೇನೆಂಬೆ- || ಪ್ರತ್ಯಗಾತ್ಮ || ಮರವೆ ಮನೆಯಾದವಗೆ ಗುಡಿಸಲಲಿ ಇರುವಾಸೆಗರಿಯ ಗುಡಿಸಲವಂಗೆ ಕರಿ ಹೆಂಚಿನಾಸೆಕರಿಯ ಹೆಂಚಿನರುವವಗೆ ಕೆಂಪು ಹೆಂಚಿನ ಆಸೆಇರುದದುಕೆ ತುಡಿವಾಸೆ- […]Read More

ನನಗೆ ಸಿಕ್ಕ ಭೈರಪ್ಪನವರು – ಅನಂತ್ ಕುಣಿಗಲ್

ನೀವು ಕಂಡ ಭೈರಪ್ಪ ಬೇರೆ, ನನಗೆ ಸಿಕ್ಕ ಭೈರಪ್ಪ ಬೇರೆ! ನಾಲ್ಕು ವರ್ಷಗಳ ಹಿಂದೆ ರಂಗಭೂಮಿ ಕಲಿಕೆಗಾಗಿ ಆಯ್ಕೆಯಾಗಿದ್ದರಿಂದ ಪುಸ್ತಕಗಳನ್ನು ಓದಲೇಬೇಕಿದ್ದ ಅನಿವಾರ್ಯತೆ ಸೃಷ್ಟಿಯಾಯ್ತು. ಅವರಿವರೆನ್ನದೆ ಸಿಕ್ಕ ಸಿಕ್ಕವನ್ನೆಲ್ಲ ಓದೋಕೆ ಶುರುಮಾಡಿದೆ. ನನ್ನ ಗೆಳೆಯ ಡಾ. ಎಸ್. ಎಲ್. ಭೈರಪ್ಪನವರ “ಯಾನ” ಕೃತಿಯ ಹೆಸರು ಸೂಚಿಸಿದ. ವಿಜ್ಞಾನದ ವಿದ್ಯಾರ್ಥಿಯಾದ್ದರಿಂದ “ಯಾನ” ನನ್ನ ಮೆಚ್ಚಿನ ಕೃತಿಯಾಯಿತು. ಅಲ್ಲಿಂದ ನನ್ನಲ್ಲಿ “ಭೈರಪ್ಪ” ಎಂಬ ಮಹಾಚೇತನದ ಹುಡುಕಾಟ ಶುರುವಾಯ್ತು. “ಸಾರ್ಥ, ಭಿತ್ತಿ, ಉತ್ತರಕಾಂಡ” ದಂತಹ ಕೃತಿಗಳು ನನ್ನಲ್ಲಿ ಇನ್ನಿಲ್ಲದಂತೆ ಬಹಳ ಪ್ರಭಾವ […]Read More