ಡಾ. ಎಸ್. ಎಲ್. ಭೈರಪ್ಪನವರ ಭೇಟಿ ಹಾಗು ಕಿರು ಸಂದರ್ಶನ “ಡಾ. ಎಸ್. ಎಲ್. ಭೈರಪ್ಪ” ಈ ಹೆಸರೇ ಕನ್ನಡ ಸಾಹಿತ್ಯಲೋಕದಲ್ಲಿ ಹಾಗು ಓದುಗರ ಮನದಲ್ಲಿ ರೋಮಾಂಚನ ಉಂಟುಮಾಡುತ್ತದ್ದೆ. ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ಸ್ನೇಹಿತನ ಸಲಹೆ ಮೇರೆಗೆ ಭೈರಪ್ಪನವರ “ಯಾನ” ಕಾದಂಬರಿ ಓದಿ ಮೂಲತಃ ವಿಜ್ಞಾನ ವಿದ್ಯಾರ್ಥಿಯಾದ ನಾನು ನಿಜಕ್ಕೂ ಖುಷಿಯಾದೆ. ಅವರ ಅಧ್ಯಯನಶೀಲತೆಗೆ ಬೆರಗಾಗಿ ಅವರ ಹಿಂದಿನ “ಸಾರ್ಥ, ಭಿತ್ತಿ, ಉತ್ತರಕಾಂಡ” ಕಾದಂಬರಿಗಳನ್ನು ಓದಿ ಜೀವನದಲ್ಲಿ ಒಮ್ಮೆಯಾದರೂ ಅವರನ್ನು ಭೇಟಿಯಾಗಬೇಕು ಎಂದು ಆಸೆಯಿಟ್ಟುಕೊಂಡಿದ್ದ ನಾನು ಮೈಸೂರಿಗೆ […]Read More
ಹಿಂದಿನ ಸಂಚಿಕೆಯಿಂದ…. ಚಿತ್ರಕನ ಕಣ್ಣುಗಳಿಗೆ ಬೆಳುದಿಂಗಳ ಬೆಳ್ಳಿ ಬೆಳಕು ರಕ್ತ ವರ್ಣವಾಗಿ ಕಂಡಿತು. ರಟ್ಟಾಳಿಗೆ ತಾನು ಅಪಾಯದ ಸ್ಥಿತಿಯಲ್ಲಿ ಇರುವ ಬಗ್ಗೆ ಅರಿವಿಲ್ಲ. ಆಕೆ ತನ್ನ ಪಾಡಿಗೆ ತಾನು ನಿರ್ಭಯವಾಗಿ ಗೋಡೆಯ ಮೇಲೆ ಕುಳಿತಿದ್ದಾಳೆ. ಚಿತ್ರಕನು ಒಂದು ರೀತಿಯ ಕಟಕಿ ನಗೆ ನಕ್ಕು ‘ರಾಜಕುಮಾರಿ, ತಾವು ಕುಳಿತಿರುವ ಸ್ಥಳದಿಂದ ಒಂದು ಸಲ ಬಗ್ಗಿ ನೋಡಿರಿ. ಅಲ್ಲಿಂದ ಏನಾದರೂ ಕೆಳಗೆ ಬಿದ್ದರೆ ಜೀವಂತವಾಗಿ ಉಳಿಯುವಿರಾ?’ ಎಂದು ಎಚ್ಚರಿಸಿದನು. ರಟ್ಟಾ ತಿರಸ್ಕಾರ ಭಾವದಿಂದ ಒಂದು ಸಲ ಕೆಳಗೆ ಬಗ್ಗಿ ನೋಡಿ […]Read More
ನೀ ಬಿಟ್ಟು ಹೋದೆಯಾ? ಹೊರಟಿರಾಹೊರಡಲೇಬೇಕೇಹೊರಟೇಬಿಟ್ಟಿರಾ…ಹೊರಟು ಹೋಗುತ್ತಿರುವಿರಾಎದ್ದು ಹೀಗೆ ಸೀದಾತಿರುಗಿಯೂ ನೋಡದೇಅಯ್ಯೋ!!! ಹೋಗೆಬಿಡುತ್ತಿದ್ದೀರಾ ನೀವು ಹೊರಡುವ ಮೊದಲುನಾನು ನೀವುಜೊತೆಗಿದ್ದ ಆ ಕ್ಷಣಗಳುಬೊಗಸೆಯಲ್ಲಿಹಿಡಿದುಕೊಂಡ ನೀರಿನಂತೆಬಿಗಿಹಿಡಿಯಲು ಮುಷ್ಟಿ ಬಿಗಿದಷ್ಟೂಸರಸರನೇ ಜಾರಿಹೋದವು ಹೊರಡಲೇಬೇಕೆಂಬಹಟದಲ್ಲೇ ಹತ್ತಿರಾಗಿದ್ದಿರಿ ನೀವುಹತ್ತಿರವಾದಷ್ಟೂ ಮನದಲ್ಲಿನಿಮ್ಮ ಠಸ್ಸೆ ಒತ್ತಿದಿರಿಹೋಗುತ್ತೇನೆಹೋಗಿಯೇಬಿಡುತ್ತೇನೆಎಂದೆಲ್ಲಾ ಹೇಳುತ್ತಲೇಹೃದಯದ ತುಂಬೆಲ್ಲಾ ಆವರಿಸಿದಿರಿಬುದ್ಧಿಯನ್ನಾಕ್ರಮಿಸಿದಿರಿಕನಸುಗಳ ಬೀಜ ಬಿತ್ತಿದಿರಿ ಹೊರಟೇಬಿಟ್ಟಿರುವಿರಿ ಈಗನಿಮ್ಮನ್ನು ನಿಲ್ಲಿಸಿ ನಿಯಂತ್ರಿಸಿನಿಮ್ಮ ಹೆಗಲೇರಲಾರೆಹೇಳಿ ಹೋಗು ಕಾರಣವೆಂದುನಿಮ್ಮನ್ನು ಪೀಡಿಸಲಾರೆಹಾಗೆಂದು ಮನದ ತುಂಬೆಲ್ಲಾಬಿಡಿಸಿರುವ ನಿಮ್ಮಚಿತ್ರಗಳನ್ನೂ ಅಳಿಸಲಾರೆ ನೀವು ಬಿಟ್ಟುಹೋದಬಳುವಳಿಯಾಗಿ ಕೊಟ್ಟುಹೋದಕ್ಷಣಗಳ ನೆನಪುಗಳೆಲ್ಲವನೂಮರೆಯದೇ ಮುದ್ದಿಸುತ್ತೇನೆಪ್ರತಿರಾತ್ರಿ ಹಗಲೂನಿಮ್ಮ ಮಾತುಗಳನ್ನೇ ಕನವರಿಸುತ್ತೇನೆನಿಮ್ಮ ಕಲ್ಲೆದೆಯೂ ಕರಗಿಮತ್ತೊಮ್ಮೆ ನನ್ನಹೃದಯವನ್ನು ತೋಯಿಸಬಹುದೇಕಾಯುತ್ತೇನೆ! ಸೌಜನ್ಯ […]Read More
ಜೀರುಂಡೆ – Cicada ಪಶ್ಚಿಮಘಟ್ಟ ಪ್ರದೇಶದ ಮಲೆನಾಡಿನ ಜೀವ ವೈವಿಧ್ಯವೇ ಒಂಥರಾ ವಿಭಿನ್ನ. ಇಲ್ಲಿ ಸುಮ್ಮನೆ ಮನೆಯಂಗಳ ಮತ್ತು ತೋಟದಲ್ಲಿ ಸುತ್ತಾಡಿಕೊಂಡು ಬಂದರೆ ಸಾಕು ಅನೇಕ ವಿಸ್ಮಯಗಳು ಕಾಣಿಸುತ್ತವೆ ಮತ್ತು ಎಷ್ಟೋ ವಿಷಯಗಳು ಕಿವಿಗೆ ಬೀಳುತ್ತವೆ. ಮಲೆನಾಡಿನ ಮಳೆಗಾಲವೇ ವಿಭಿನ್ನವಾಗಿದ್ದು, ಜಿಟಿ ಜಿಟಿ ಮಳೆ ಬೀಳುವ ಸಂದರ್ಭದಲ್ಲಿ ಊರಿಗೆ ಹೋದಾಗ ಹೀಗೇ ಆಯಿತು. ಸಂಜೆಯ ವೇಳೆಗೆ ಮನೆಯಂಗಳದಲ್ಲಿ ಅಮ್ಮ ಬೆಳೆಸಿದ್ದ ವಿವಿಧ ರೀತಿಯ ಹೂವಿನ ಗಿಡಗಳನ್ನು ಮತ್ತು ಅದರಲ್ಲಿ ಅರಳಿದ್ದ ಹೂವುಗಳನ್ನು ನೋಡುತ್ತಾ ಮೊಬೈಲ್ ಕ್ಯಾಮರಾದಲ್ಲಿ ಫೋಟೋಗಳನ್ನು […]Read More
ನಾಯಿಯೊಂದಕೆ ದಿನವೂ ಅನ್ನ ಹಾಕುತಲಿದ್ದೆತಾಯಿ-ಮರಿ ಜೊತೆಯಾಗಿ ತಿನ್ನುತ್ತಲಿತ್ತುತಾಯಿ ತಿನ್ನದೆ ಕಡೆಗೆ ಮರಿಗಾಗಿ ಬಿಡುತಿತ್ತು,ನಾಯಿಯಾದರೂ ತಾಯಿ- || ಪ್ರತ್ಯಗಾತ್ಮ || ಗೊರಕೆ ಎಂಬುದು ಸುಖದ ನಿದ್ದೆ ಇರಬಹುದೇನೊ!ಗೊರಕೆ ಹೊಡೆಯುವರಿಂದ ಇತರರಿಗೆ ಕಷ್ಟಎರಡು ಸಲ ಎಬ್ಬಿಸುತ ಹೊರಳಿ ಮಲಗಲು ಹೇಳುಹರಿದೋಡುವುದು ಗೊರಕೆ- || ಪ್ರತ್ಯಗಾತ್ಮ || ಆಗಲೇ ಸುಲಿದಿರುವ ಅವರೆ ಕಾಳಿನ ಸೊಗಡುಮಗಮಗಿಪ ವಾಸನೆಯ ಸಪ್ಪೆಸರ ಸಾರುಆಗ ತೊಳಸಿದ ಬಿಸಿಯ ರಾಗಿಮುದ್ದೆಯದಿರಲುಆಗ ನೋಡದರ ರುಚಿ ! || ಪ್ರತ್ಯಗಾತ್ಮ || ಎಮ್ಮೆ ಮೊಸರಿನ ಜೊತೆಗೆ ಕೇಸಕ್ಕಿ ಅನ್ನವನುಘಮ್ಮೆನುವ ಹೇರಿಳೆಯ ಉಪ್ಪಿನಕಾಯಿಸುಮ್ಮಾನದಲಿ […]Read More
ಹಿಂದಿನ ಸಂಚಿಕೆಯಿಂದ…. ಇತ್ತ ಲಕ್ಷ್ಮಣ ಕಂಚುಕಿಯು ಹಿಂದಿನ ದಿನ ರಾತ್ರಿ ಕೆಟ್ಟ ಯೋಚನೆಗಳಲ್ಲಿ ಮುಳುಗಿ ನಿದ್ದೆ ಹೋಗಿರಲಿಲ್ಲ. ಆದರೆ ಈ ದಿನ ಬೆಳಗ್ಗೆ ಚಿತ್ರಕ, ಪಲಾಯನ ಮಾಡುವ ಯಾವುದೇ ಪ್ರಯತ್ನ ಮಾಡದೆ, ತಾನಾಗಿಯೇ ಅರಮನೆಗೆ ಹಿಂದಿರುಗಿ ಬಂದಿರುವುದನ್ನು ಕಂಡು ಬಹಳ ಸಂತೋಷವಾಯಿತು. ಚತುರಾನನ ಕಂಚುಕಿಗೆ ಅನ್ನಿಸಿತು. ಅವನು ಈಗ ಇಮ್ಮಡಿ ಗೌರವದಿಂದ ಚಿತ್ರಕನ ಸೇವೆ ಶುಶ್ರೂಷೆಯಲ್ಲಿ ತೊಡಗಿದನು. ಮಧ್ಯಾಹ್ನ ಊಟಮಾಡಿ ವಿಶ್ರಾಂತಿಗೆಂದು ಹಾಸಿಗೆಯ ಮೇಲೆ ಉರುಳಿಕೊಂಡಾಗ ಕಂಚುಕಿ ‘ಈ ದಿನ ತಾವು ಏಕೋ ಮೊದಲಿನಂತೆ ಹರ್ಷಚಿತ್ತರಾಗಿದ್ದಂತಿಲ್ಲ. ಚಿಂತೆಗೆ […]Read More
“ಆವರ್ತ” ಕಾದಂಬರಿ ಮೂರನೇ ಮುದ್ರಣ” ಪ್ರತಿಭಾನ್ವಿತ ಕಾದಂಬರಿಕಾರ್ತಿ ಶ್ರೀಮತಿ ಆಶಾ ರಘು ರವರ “ಆವರ್ತ” ಕಾದಂಬರಿ ಮೂರನೇ ಮುದ್ರಣಗೊಳ್ಳುತ್ತಿದೆ. ಮೊದಲ ಮುದ್ರಣದಲ್ಲಿಯೇ “ಆವರ್ತ” ಕಾದಂಬರಿಯು 2015 ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಮೂರನೇ ಮುದ್ರಣವನ್ನು ಶ್ರೀ ರಘುವೀರ್ ಸಮರ್ಥ್ ರವರು ತಮ್ಮ “ಸಾಹಿತ್ಯಲೋಕ ಪಬ್ಲಿಕೇಷನ್” ಮೂಲಕ ಹೊರತರುತ್ತಿದ್ದಾರೆ. ’ಆವರ್ತ’ ಕಾದಂಬರಿಯ ಮೂರನೆ ಮುದ್ರಣದೊಂದಿಗೆ ’ಆವರ್ತ-ಮಂಥನ’ ಎಂಬ ಕಾದಂಬರಿಯ ಕುರಿತ ಅಭಿಪ್ರಾಯಗಳ ಸಂಗ್ರಹವೂ ಪ್ರಕಟಗೊಳ್ಳುತ್ತಿದೆ. ಇದು ‘ಆವರ್ತ’ ಕಾದಂಬರಿಯ ಕುರಿತ ವಿವಿಧ ಲೇಖಕರ, ಪತ್ರಿಕೆಗಳ ಹಾಗೂ […]Read More
ಕರ್ನಾಟಕದ ಎರಳೆಗಳು – Antelopes ಹುಲ್ಲೆ ಅಥವಾ ಎರಳೆಗಳ (Antelope) ಜಾತಿಗೆ ಸೇರಿದ ನಾಲ್ಕು ಪ್ರಾಣಿಗಳನ್ನು ನಮ್ಮ ರಾಜ್ಯದಲ್ಲಿ ನೋಡಬಹುದು. ಇವು ಸೀಳುಗೊರಸುಳ್ಳ ಮೆಲಕು ಹಾಕುವ ಬೋವಿಡೀ ಕುಟುಂಬದ ಪ್ರಾಣಿಗಳಾಗಿವೆ, ಇವುಗಳ ಕೊಂಬುಗಳು ಕವಲು ಒಡೆಯುವುದಿಲ್ಲ ಹಾಗು ಇವುಗಳ ಕೊಂಬುಗಳು ಜಿಂಕೆಗಳ ಕೊಂಬುಗಳಂತೆ ಕಾಲಕಾಲಕ್ಕೆ ಬಿದ್ದು ಹುಟ್ಟಿದೆ ಶಾಶ್ವತವಾಗಿ ಇರುತ್ತವೆ. ಹೆಚ್ಚಾಗಿ ಒಣ ಪರಿಸರಕ್ಕೆ ಹೊಂದಿ ಕೊಂಡ ಇವನ್ನು ಮಲೆನಾಡಲ್ಲಿ ಕಾಣುವುದು ಅಪರೂಪ. ನಮ್ಮಲ್ಲಿಯ ಎರಳೆಗಳ ಕುರಿತು ಕಿರು ಪರಿಚಯ ಇಲ್ಲಿದೆ ನೋಡಿ. ಕೃಷ್ಣಮೃಗ (Black Buck) […]Read More
ಕ್ಯಾನ್ಸರ್ ಪೀಡಿತರ ಆಶಾಕಿರಣ – ಹರಕ್‌ಚಂದ ಸಾವ್ಲಾ ಇತ್ತೀಚಿನ ದಿನಗಳಲ್ಲಿ ದಿನಬೆಳಗಾಗುವುದರೊಳಗೆ ಕೆಲವರು ಏನೇ ಸಾಧನೆ ಮಾಡದಿದ್ದರು ಹೀರೋಗಳಾಗಿ ಬಿಟ್ಟಿರುತ್ತಾರೆ. ಆದರೆ ಅದೆಷ್ಟೋ ಮಹತ್ತರವಾದ ಸಾಧನೆ ಮಾಡಿಯೂ ಮುಖ್ಯವಾಹಿನಿಗೆ ಬರದ ಅದೆಷ್ಟೋ ಹೀರೋಗಳು ನಮ್ಮ ಮಧ್ಯದಲ್ಲಿದ್ದಾರೆ. ಅಂಗವಿಕಲರ, ರೋಗಿಗಳ, ಬಡವರ ಹಾಗೂ ಅನಾಥರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿರುವ ಸಮಾಜ ಸೇವೆಯಲ್ಲೆ ಜೀವನದ ಸಾರ್ಥಕತೆಯನ್ನು ಕಂಡುಕೊಂಡ ಬಹಳ ಮಂದಿ ನಮ್ಮ ನಡುವೆಯೆ ಇದ್ದಾರೆ. ಏಲೆಮರೆಯ ಕಾಯಿಯಂತೆ ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ಸೇವೆಸಲ್ಲಿಸುತ್ತಿದ್ದಾರೆ. ಸುಮಾರು 30 ವರ್ಷ ವಯಸ್ಸಿನ […]Read More
ಶತಾವರಿಯೆಂಬ ವಿಶಿಷ್ಟ ಸಸ್ಯ ಶತಾವರಿಯು ‘ಆಸ್ಪ್ಯಾರಗಸ್ ಅಫಿಷಿನಾಲಿಸ್’ ಎಂಬ ‘ಆಸ್ಪ್ಯಾರಗಸ್’ ಕುಲದ ಒಂದು ಹೂ ಬಿಡುವ ಸಸ್ಯದ ಜಾತಿಯಾಗಿದೆ. ಶತಾವರಿ ಎಂದು ಹೆಸರಾಗಿರುವ ತರಕಾರಿಯನ್ನು ಅದರಿಂದ ಪಡೆಯಲಾಗುತ್ತದೆ. ಶತಾವರಿಯನ್ನು 100 ಮಕ್ಕಳ ತಾಯಿ ಎಂದು ಕರೆಯುತ್ತಾರೆ. ಇದಕ್ಕೆ ಆಯುರ್ವೇದದಲ್ಲಿ ಮಹತ್ವದ ಸ್ಥಾನವಿದೆ. ಇದು ಯುರೋಪ್, ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ ದ ಬಹುತೇಕ ಭಾಗಗಳಲ್ಲಿ ಸ್ಥಳೀಯವಾಗಿ ಬೆಳೆಯುತ್ತದೆ. ಇದನ್ನು ತರಕಾರಿ ಬೆಳೆಯಾಗಿಯೂ ವ್ಯಾಪಕವಾಗಿ ಬೆಳೆಯುತ್ತಾರೆ. ಶತಾವರಿ ಸಸ್ಯಕ್ಕೆ ಸಂಸ್ಕೃತದಲ್ಲಿ ‘ಶತಮೂಲಿ’ ಎಂಬ ಹೆಸರಿದೆ. ಇಂಗ್ಲೀಷಿನಲ್ಲಿ ‘ಆಸ್ಪರಾಗಸ್’ […]Read More