ಭಾವದ ಬೆನ್ನತ್ತಿ

ಭಾವದ ಬೆನ್ನತ್ತಿ ಅವೆಷ್ಟೋ ಭಾವಗಳುಮಾತಿಗೆ ನಿಲುಕದೇಮೌನದಲೂ ಬೆರೆಯದೆಒಳಗೊಳಗೆ ಹುದುಗಿಹೈರಾಣಾಗುತಿದೆ ಸಪ್ಪ್ರೆಸ್ಡ್,ಡಿಪ್ರೈವ್,ಡಿಪ್ರೆಶನ್,ಗಿಲ್ಟ್ ಪ್ಲೆಶರ್,ಇನ್ನೆಷ್ಟು ಹೆಸರುಗಳೋ ಇವಕ್ಕೆ?! ಸೀಡ್ಲೆಸ್ ಹೈಬ್ರಿಡ್ಬ್ರೀಡ್ ಆಗದಹಾರ್ಮೋನು ಚುಚ್ಚಿದಮರಿ ಹಾಕದ ಮೊಟ್ಟೆಗಳಂಥಾಈ ಭಾವಗಳುಗೋಡೆ ಬಿರುಕು ಬಿಟ್ಟರೆಹೊರಗೆ ಬರಬಹುದು ಅಷ್ಟೇ ಪ್ಲಾಸ್ಟಿಕ್ ಬಿರಡೆಯನ್ನುಗಟ್ಟಿಯಾಗಿ ಮುಚ್ಚಿರುವಾಗಹೊರಬರಲಾಗದ ಭಾವಗಳುಒಳಗೊಳಗೆ ಉಬ್ಬರಿಸಬೇಕುತಮ್ಮೊಳಗೆ ಬೊಬ್ಬಿರಿಯಬೇಕುಕರಪತ್ರಗಳ ಪ್ರಕಟಣೆಗೆಖಾಲಿ ಸ್ಥಳವಿಲ್ಲಜಾಹಿರಾತುಗಳಿಗಾಗಿಜಾಗವನು ಈಗಾಗಲೇಮಾರಿಕೊಂಡಾಗಿದೆ ಭವಿಷ್ಯದ ದಾರಿಗೆಕಣ್ಣು ಮುಚ್ಚಿಕೊಂಡಿರುವಾಗಭೂತದ ಬೆನ್ನಿಗೇನಾನೆಂಬ ಭಾವನೇತು ಬಿದ್ದಿರುವಾಗವಾಸ್ತವದ ಅರಿವುಮೂಡುವುದಾದರೂ ಹೇಗೆ?! ಪ್ಲಾಸ್ಟಿಕ್ ಡಬ್ಬಿಯಲ್ಲಿಅವೆಷ್ಟು ಭಾವಗಳನ್ನುತುಂಬಿ ಇಟ್ಟರೂಏರ್ ಟೈಟ್ ಆಗಿರುವುದರಿಂದಗೋಡೆಗಳ ನಡುವೆಉಳಿದ ಗಾಳಿಯಷ್ಟೇಉಸಿರಾಡಲು ಸಿಗುವುದು ನಾವೇ ಮಾಡಿಕೊಂಡವ್ಯವಸ್ಥೆ ಹೀಗಿರುವಾಗಸ್ವಚ್ಛ ಗಾಳಿ ಸ್ವಸ್ಥ ಮನಸುಅರಳುವುದಾದರೂ ಹೇಗೆ?! […]Read More

ಆಮೇಜಾನ್ ಕಾಡಿನ ಜಾಗ್ವಾರ್

ಆಮೇಜಾನ್ ಕಾಡಿನ ಜಾಗ್ವಾರ್ ಅಘ್ರ ಪರಭಕ್ಷಕ ವನ್ಯಜೀವಿಗಳಲ್ಲಿ ಧೈಹಿಕ ಶಕ್ತಿ ಸಾಮರ್ಥ್ಯ‌, ಭೇಟೆಯಾಡುವ ಕುಶಲತೆ ಮತ್ತು ಯಾವ ಪ್ರದೇಶದಲ್ಲಿ ಭೇಟೆಯಾಡುತ್ತಿದೆಯೋ ಆ ಪ್ರದೇಶಕ್ಕೆ ತಕ್ಕಂತೆ ಹೊಂದಿಕೊಂಡು ಭೇಟೆಯಾಡಲು ಸಹಕರಿಸುವ ಅವುಗಳ ದೇಹದ ಗುಣಲಕ್ಷಣಗಳು ಸಹ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಬೆಕ್ಕಿನ ಕುಲದ ( Cat family) ಅಘ್ರಪರಭಕ್ಷಕ ಪಟ್ಟಿಗೆ ಬಂದಾಗ ಹುಲಿ ಸಿಂಹಗಳು ನಿಸ್ಸಂದೇಹವಾಗಿ ಪ್ರಥಮ ಶ್ರೇಣಿಯಲ್ಲಿ ನಿಲ್ಲುತ್ತವೆ ಎನ್ನುವುದು ನಿಜ. ಈ ಕ್ಯಾಟ್ ಪ್ಯಾಮಿಲಿಯ ಹೆಚ್ಚಿನವು ನೀರಿನಲ್ಲಿ ಆರಾಮವಾಗಿ ಈಜಬಲ್ಲವಾದರೂ ಹೆಚ್ಚಾಗಿ ನೀರಿನಿಂದ ದೂರವೇ […]Read More

ವ್ಯರ್ಥ

ವ್ಯರ್ಥ ತಂದಿಟ್ಟ ಓಲೆಯಲಿನಿನ್ನಿಷ್ಟದ ಅಕ್ಷರಗಳನುನನ್ನಿಷ್ಟದ ಹಾಗೆ ಬರೆಯಬೇಕೆಂದುಇರುಳೆಲ್ಲ ಚಿಂತಿಸಿದರುಒಂದಿಷ್ಟು ಜೋಡಿಸಿ ಬರೆಯಲುಸಾಧ್ಯವಾಗುತ್ತಿಲ್ಲ ಕಾರಣವೇನೆಂದು ಕೇಳಬೇಡ? ಬರಹಕ್ಕಾಗಿ ಆಯ್ದ ವಿಷಯವನ್ನುಗಂಭೀರವಾಗಿ ಶೋಧಿಸಿ ಪರಿಶೀಲಿಸಿಹುಡುಕಿಟ್ಟು ಇದ್ದಂತೆ ಬರೆಯಲುನೆರವು ಕೇಳಲು ಕೊಳಲು ಕೃಷ್ಣಗೆಕೈಮಾಡಿ ಕರೆದು ಹಣೆಯ ಮೇಲಿನನವಿಲು ಗರಿ ಕೇಳಿಬರೆಯಲು ಕುಳಿತುಕೊಂಡರುಅದೇನೋ ವಿಘ್ನಮೊದಲಕ್ಷರವು ಮೂಡಿ ಮುಂದೆ ಹೋಗುತ್ತಿಲ್ಲಕಾರಣವೇನೆಂದು ಕೇಳಬೇಡ? ಅಮವಾಸ್ಯೆಯ ರಾತ್ರಿ ಕುಳಿತುಸಮಸ್ಯೆಯೆಲ್ಲವ ಪರಿಹರಿಸಿಪ್ರಥಮ ರಾತ್ರಿಯ ಕತ್ತಲು ನೆನೆದುಕುಳಿತಲ್ಲಿಯೇ ಬೆವೆತುನೀನಿರುವ ಸಿಂಗಾರ ಚಾವಣಿಯ ಕಲ್ಪಿಸಿಸ್ಪರ್ಶಾಕ್ಷರ ಬರೆಯುವುದು ಸಾಧ್ಯವಾಗಲ್ಲಿಅಡ್ಡಗಟ್ಟಿದ್ದು ಯಾರೆಂದು ಕೇಳಬೇಡ? ಹಸಿಮನೆಯಿಂದ ಕೆಳಗಿಳಿದುನಾವಿಬ್ಬರೂ ಚದುರಂಗದಾಟಕ್ಕೆ ಕಾಯುತ್ತಿರುವಾಗಇರುಳ ಲೋಕವೆಲ್ಲ ಮಧ್ಯಪಾನ ಮಾಡಿಮಧ್ಯ ರಾತ್ರಿಯೇ […]Read More

ವ್ಯಕ್ತಿಯ ವ್ಯಕ್ತಿತ್ವ ಪೆನ್ಸಿಲ್‌ನಂತೆ

ವ್ಯಕ್ತಿಯ ವ್ಯಕ್ತಿತ್ವ ಪೆನ್ಸಿಲ್‌ನಂತೆ ಅಕ್ಷರಗಳನ್ನು ಸುಂದರವಾಗಿ ಬರೆಯುವ ಪೆನ್ಸಿಲ್ ವಿಭಿನ್ನ ವಿಚಾರಗಳನ್ನು ದಾಖಲಿಸಿ ಇಡಬಲ್ಲದು. ಅದ್ಭುತವಾದ ಕಥೆಗಳು, ಕವನಗಳು, ಒಳ್ಳೆಯ ಮತ್ತು ಕೆಟ್ಟ ವಿಚಾರಗಳನ್ನು ಬರೆಯುವ ಮೂಲಕ ಮತ್ತು ಬರೆದ ಅಕ್ಷರಗಳಿಂದ ವ್ಯಕ್ತಿ ವ್ಯಕ್ತಿಗಳಲ್ಲಿ ಪ್ರೀತಿ ಹುಟ್ಟಿಸುವ ಅಥವಾ ದ್ವೇಷವನ್ನು ಬಿತ್ತುವ ಎರಡೂ ಗುಣ ಪೆನ್ಸಿಲ್‌ ನಲ್ಲಿ ಇದೆ. ಆದರೆ, ಪೆನ್ಸಿಲಿಗೆ ಬರೆಯುವ ಕೈಗಳ ಸಹಕಾರ ಇಲ್ಲದಿದ್ದರೆ ಕೇವಲ ಪೆನ್ಸಿಲ್ ಒಂದೇ ಏನನ್ನೂ ಬರೆಯಲು ಯಾ ಮಾಡಲು ಸಾಧ್ಯವಿಲ್ಲ. ಅಕ್ಷರಗಳನ್ನು ಬರೆಯುವ ಪೆನ್ಸಿಲ್ ಬಳಸುತ್ತಾ ಹೋದಂತೆ ಅದರ […]Read More

ನೇಸರನ ಇಣುಕುನೋಟ

ನೇಸರನ ಇಣುಕುನೋಟ ಗಗನದಿಂದ ಬುವಿಯೆಡೆಗೆತಾ ಇಣುಕುನೋಟ ಬೀರಿಹನು!ತನ್ನಾಸರೆಯಲಿ ಜಗವು ಬೆಳಕಿನೆಡೆಗೆ..ಸಾಗುವುದನು ಅವ ನೋಡಬಯಸಿಹನು!! ಕೆಂಪಿನೋಕುಳಿಯ ಹೊಸ ರಂಗುಅಂಬರದಲಿ ನಿತ್ಯ ತುಂಬಿರಲು!ಅಹಸ್ಕರನಿಗೂ ಅವನಿಯದೇ ಗುಂಗು..ಅವಳ ನಗುವಲಿ ಮನವಿರಲು!! ಬೆಟ್ಟಗುಡ್ಡಗಳ ಮರೆಯಲಿದೆಭಾಸ್ಕರನ ಕಿರಣದ ಸೊಬಗು!ಲೋಕವು ದಿನವೂ ಬೆಳಗಲಿದೆ..ಕೇಳುತಾ ಇಳೆಯ ಹೃದಯದ ಕೂಗು!! ಅನಂತತೆಯ ಸಾರವಿರಲುಅಲ್ಲಿಯೇ ಲೀನವಾಗಿದೆ ಕ್ಷಿತಿಜ!ಅಗೋಚರ ಸೃಷ್ಟಿಯೇ ಪ್ರಕೃತಿಯಲಿರಲು…ಬುವಿಗಿದು ಆ ದೈವನಿತ್ತ ಖನಿಜ!! ಸುಮನಾ ರಮಾನಂದRead More

ಮಧುಮೇಹ ಪರಿಹರಿಸುವ ಕರುಂಬೇಶ್ವರ

ಮಧುಮೇಹ ಪರಿಹರಿಸುವ ಕರುಂಬೇಶ್ವರ ಭಾರತ ದೇಗಲಗಳ ದೇಶ. ಇಲ್ಲಿರುವ ಎಷ್ಟೋ ಪುರಾತನ ದೇಗುಲಗಳು ಅಲ್ಲಿನ ಕ್ಷೇತ್ರ ಮಹಿಮೆಯಿಂದ ವಿಶಿಷ್ಟವಾದ ಶಕ್ತಿಯಿಂದ ಭಕ್ತರನ್ನು ಕೈಬೀಸಿ ಕರೆಯುತ್ತದೆ. ಸಂತಾನ ಕರುಣಿಸುವ ದೇವಸ್ಥಾನವಿದೆ, ಆರೋಗ್ಯ ಕರುಣಿಸುವ ವೈಧ್ಯನಾಥೇಶ್ವರನ ದೇಗುಲವಿದೆ. ಚರ್ಮ ರೋಗ ವಾಸಿ ಮಾಡುವ ದೇಗುಲಗಳಿವೆ. ಮಕ್ಕಳಿಗೆ ವಿದ್ಯೆ ಕರುಣಿಸುವ ಅನೇಕ ದೇಗುಲಗಳಿದೆ. ಆದರೆ ಮಧುಮೇಹವನ್ನು ನಿಯಂತ್ರಣದಲ್ಲಿಡುವ ದೇಗುಲದ ಬಗ್ಗೆ ಕೇಳಿದ್ದಿರಾ. ಹೌದು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಇಲ್ಲಿರುವ ಆರಾಧ್ಯ ಧೈವ ಕರುಂಬೇಶ್ವರನ ದರ್ಶನ ಮಾಡಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ ಎಂದು […]Read More

ಅಪ್ಪನೆಂಬ ಹಿರಿಮೆ

ಅಪ್ಪನೆಂಬ ಹಿರಿಮೆ ಅಕ್ಷರಗಳಲ್ಲಿ ಅಳೆಯಲಾಗದಆಕಾರವೊಂದಿದೆ ಅಪ್ಪಾ ಎಂಬಅಚ್ಚರಿಯ ಆಕಾಶ ನಾಗರಿಕತೆಯೊಂದಗೆ ಉದಯಿಸಿದಮೊದಲ ಸೇನಾನಿಅವನಿರುವೇ ಜಗದಬಲ ಬೆರಗು ಹಳೆ ಚಪ್ಪಲಿಯಂತೆಯೇ ಎತ್ತೆತ್ತಲೊಬಾಯ್ಬಿಟ್ಟ ಬದುಕಿಗೆ ಹೊಲಿಗೆ ಹಾಕುವ ಕಸುಬುದಾರತನ್ನದೇ ಹರಿದ ಬೆನ್ನು ಅವನಿಗೆ ಕಾಣುವುದೇ ಇಲ್ಲ ಅಪ್ಪನಾದ ಹಿರಿಮೆಗೆ ಅಂಕುರಿಸಿದತನ್ನದೇ ಜೀವ ಚೈತನ್ಯದಕಣ್ಣ ಹೊಳಪಲ್ಲಿ ನಕ್ಷತ್ರ ಎಣಿಸುವ ಅಪ್ಪಮುರಿದು ಬಿದ್ದ ಕನಸುಗಳ ಆಯ್ದು ತಂದುಕೌದಿ ಹೊಲಿಯುತ್ತಾನೆಬೇಸಿಗೆಯಲ್ಲೂ ತಂಪಿಡುವ ಅಪ್ಪನ ಹೃದಯನಡುಗಿಸುವ ಚಳಿಯಲ್ಲೂ ಬೆಚ್ಚನೆ ಕಾವು ಅಂಗಳದ ತುಳಸಿ,ಜಂಪು ಹಿಡಿದ ನಡುಮನೆ,,ತಳತಳಿಸುವ ಪಡಸಾಲೆಯ ಜಂತಿ,,,ಹಿತ್ತಲ ಕಿಲುಬು ಹಿಡಿದ ಚಿಲಕಎಲ್ಲವೂ ಅವನದೇ ಪ್ರತಿರೂಪ […]Read More

ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ

ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ ಲೇಖಕ : ಪ್ರಮೋದ ಕರಣಂ (Chiದು)ಪ್ರ: ಮಾತ್ರೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಟಾನ (ರಿ), ಡೊಂಗರಗಾಂವ, ಕಮಲಾಪುರ, ಕಲಬುರಗಿ.ದೂ: 9743224892ಬೆಲೆ: ರೂ. ೧೦೦.೦೦, ಮುದ್ರಣ: ೨೦೨೩ ‘ಸಾಧ್ಯ ಅಸಾಧ್ಯಗಳ ನಡುವೆ’ ಎಂಬ ತಮ್ಮ ಮೊದಲ ಕಾದಂಬರಿಯಿಂದ ಓದುಗರಿಗೆ ಪರಿಚಿತರಾಗಿರುವ ಪ್ರಮೋದ ಕರಣಂ ತಮ್ಮ ಎರಡನೇ ಪ್ರಯತ್ನವನ್ನಿಲ್ಲಿ ದಾಖಲಿಸಿದ್ದಾರೆ. ಭಾಷೆಯ ಮೇಲಿನ ಹಿಡಿತ ಹಾಗೂ ಸೊಗಸಾದ ಉಪಮೆಗಳು ಕಾದಂಬರಿಯ ಅಂದ ಹೆಚ್ಚಿಸಿ ಲೇಖಕರ ಬಗ್ಗೆ ಭರವಸೆ ಮೂಡಿಸುತ್ತವೆ. ಆರಂಭದ ಅರೆಕೊರೆಗಳನ್ನು ನೀಗಿಸಿಕೊಂಡು ಮಾಗುತ್ತಾ […]Read More

ಗುರುಸ್ಮರಣೆ

ಗುರುಸ್ಮರಣೆ ಬಾಲ ಭಾಸ್ಕರನಹೊಳೆವ ಹೊಂಗಿರಣಗುರು ಚರಣಕ್ಕೆರಗಲಿ! ಮಂದ ಮಾರುತದಇಂಪು ಗಾಯನವುಗುರು ಗೀತೆ ಭಜಿಸಲಿ! ಇಳೆಗಿಳಿವ ಮಳೆಯತುಂತುರೆಲ್ಲವೂ ತಾಗುರುವಿಗಭಿಷೇಕ ಮಾಡಲಿ! ಧರಣಿ ಅರಳಿಸುವಘಮದ ಸುಮವೆಲ್ಲವೂಗುರುವಿನ ಮುಡಿಯೇರಲಿ! ಅನು ದಿನ ಅನು ಕ್ಷಣನನ್ನ ಮನದ ತುಂಬೆಲ್ಲಾಗುರುನಾಮ ಅನುರಣಿಸಲಿ!! ಶ್ರೀವಲ್ಲಿ ಮಂಜುನಾಥRead More

ನಮ್ಮಮ್ಮ ಕಾವೇರಿ

ನಮ್ಮಮ್ಮ ಕಾವೇರಿ ಕಾವೇರಿ !! ಅಂದರೆ ಅವಳು ಬರೀ ನೀರಿನ ಹನಿಯಲ್ಲ ಸಿಹಿಯಾದ ಜೇನು. ಕನ್ನಡಿಗರ ಹೆಮ್ಮೆಯ ಮನೆ ಮಗಳು. ಇನ್ನೂ ಕೆಲ ಕವಿಗಳು ಅವಳಿಗೆ ಪೂಜ್ಯ ಸ್ಥಾನ ಕೊಟ್ಟು ತೀರ್ಥವೆಂದೆನ್ನುತ್ತಾರೆ. ಅವಳ ವರ್ಣನೆ ಮಾಡದ ಕವಿಗಳಿಲ್ಲ. ಅವಳಿಗೂ ಕವಿಗಳಿಗೂ ಅಗಾಧ ಅನುಬಂಧವಾದರೂ, ಅವಳ ಅಂದ ವರ್ಣನೆಗೂ ಮೀರಿದ್ದು. ಅವಳಿಂದಲೇ ಭೂತಾಯಿ ಮಡಿಲು ಹಚ್ಚ ಹಸಿರು, ಈ ಇಳೆಗೆ ಬೆಳೆ, ಕಳೆ ಎಲ್ಲವೂ. ನಿತ್ಯವೂ ನೋಡುಗರಿಗೆ ನೂತನ, ಚೇತನ ಮನೋಹರವಾಗಿದ್ದಾಳೆ ಈ ಕಾವೇರಿ. ವಿಷ್ಣುವರ್ಧನ್ ಅಭಿನಯದ ‘ಜೀವನದಿ’ […]Read More