ನಂಕಂಪ್ನಿ – ನಾಟಕ ಪ್ರದರ್ಶನ ಸುಮಾರು ನೂರು ವರುಷ ಹಳೆಯ ನಾಟಕವಾದರೂ ನಿತ್ಯನೂತನ ಟಿ. ಪಿ. ಕೈಲಾಸಂ ರವರ ಆಹ್ಲಾದಕರ ರಂಗಕೃತಿ “ನಂಕಂಪ್ನಿ” ಸಂಗೀತಮಯ – ಹಾಸ್ಯ– ವಿಡಂಬನಾತ್ಮಕ ನಾಟಕವು ಕನ್ನಡ ರಂಗ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ. ನಾಟಕದೊಳಗೆ ನಾಟಕ ನಡೆಯುವ ಅಂಶ ಹೊಂದಿರುವ ಕೃತಿ ನಕ್ಕು ನಗಿಸುತ್ತದೆ – ವಿಶಿಷ್ಟ ಹಾಡುಗಳಿಂದ ಮುದಗೊಳಿಸುತ್ತದೆ. ನಾಟಕ ಆರಂಭದಲ್ಲಿ ಸೂತ್ರಧಾರನೊಂದಿಗೆ ನಟಿಯ ಪ್ರವೇಶ. “ನಂಕಂಪ್ನಿ” ತಂಡದಿಂದ “ಶೂರ್ಪನಖ ಕುಲವಿಲಾಸ” ನಾಟಕ ಪ್ರದರ್ಶನ! “ಆ ನಾಟಕ” ನಡೆಯುವಾಗ ಘಟಿಸುವ […]Read More
ಜಿಂಕೆಗಳು ಸೀಳುಗೊರಸುಳ್ಳ ಜಿಂಕೆಗಳು ಮೆಲುಕಾಡಿಸುವ (Ruminants) ಪ್ರಾಣಿಗಳ ಗಣಕ್ಕೆ ಸೇರಿದ್ದು Cervidae ಕುಟುಂಬದಲ್ಲಿ ಬರುತ್ತವೆ, ಇವುಗಳಿಗೆ ಕವಲುಗೊಂಬುಗಳು (Antlers) ಇದ್ದು ವಾಡಿಕೆಯಾಗಿ ಗಂಡುಗಳಿಗೆ ಕೊಂಬುಗಳು ಇರುತ್ತವೆ, ಆದರೆ ಕಸ್ತೂರಿ ಮೃಗಕ್ಕೆ ಹೆಣ್ಣು ಮತ್ತು ಗಂಡು ಎರಡಕ್ಕೂ ಕೊಂಬುಗಳು ಇರುವುದಿಲ್ಲ. ರೇನ್ ಡೀರ್, ಕ್ಯಾರಿಬೂಗಳಿಗೆ ಹೆಣ್ಣಿಗೂ ಕೊಂಬುಗಳಿವೆ.ಜಿಂಕೆಗಳ ಕೊಂಬುಗಳು ಕಾಲಕಾಲಕ್ಕೆ ಬಿದ್ದು ಹುಟ್ಟುತ್ತವೆ. ಚಿಲಿಯ ಪುಡು (Pudu) ಜಿಂಕೆ 40 ಸೆಂಮೀ ಎತ್ತರವಿದ್ದರೆ, ಯುರೇಶಿಯಾದ ಎಲ್ಕ್ ಜಿಂಕೆ 150 ಸೆಂಮೀ ಎತ್ತರವಿದೆ.ಜಿಂಕೆಗಳ ಕೋರೆ ಹಲ್ಲುಗಳು ಅಭಿವೃದ್ಧಿ ಹೊಂದಿವೆ.ಕಸ್ತೂರಿ ಮೃಗ […]Read More
ಭಾವ ನೌಕೆಯನೇರಿ ಹಾಗು ಕಥೆಯೆಂಬ ಕನ್ನಡಿಯಲ್ಲಿ ಕೃತಿಗಳ ಲೋಕಾರ್ಪಣೆ ಇಂದು ಬೆಳಿಗ್ಗೆ ಕನ್ನಡ ಸಾಹಿತ್ಯ ಪರಿಷತ್ತು, ಕುವೆಂಪು ಸಭಾಂಗಣದಲ್ಲಿ ಶ್ರೀಮತಿ ಸೌಜನ್ಯ ದತ್ತರಾಜ್ ರವರ ಎರಡು ಕೃತಿಗಳಾದ “ಭಾವ ನೌಕೆಯನೇರಿ” ಕವನ ಸಂಕಲನ ಹಾಗು “ಕಥೆಯೆಂಬ ಕನ್ನಡಿಯಲ್ಲಿ” ಕಥಾ ಸಂಕಲನ ಆದಮ್ಯಾ ಪ್ರಕಾಶನ ದವರಿಂದ ಲೋಕಾರ್ಪಣೆಯಾಯಿತು. ಕನ್ನಡ ಸಾಹಿತ್ಯ ಸಮಾರಂಭಗಳ ಎಂದಿನ ಸಂಪ್ರದಾಯದಂತೆ ನಾಡಗೀತೆಯಿಂದ ಶುರುವಾದ ಕಾರ್ಯಕ್ರಮವು ನಂತರ ದೀಪವನ್ನು ಬೆಳಗಲಾಯಿತು. ಶ್ರೀಮತಿ ಸೌಜನ್ಯ ದತ್ತರಾಜ್ ರವರು ನಾಡಿನ ತಮ್ಮ ಕಥೆ ಕವನಗಳಿಂದ ಅನೇಕ ಕಡೆಯಿಂದ ಸಾಕಷ್ಟು […]Read More
ಒಬ್ಬ ಹರೆಯದ ಹುಡುಗ ಹಾದಿ ಕಲ್ಲನು ಒದೆದುಉಬ್ಬಿ ಕುಣಿದಾಡಿದನು `ಕಲ್ಲೊಳಗೆ ರಕುತ !’ಅಬ್ಬೆ ಮನೆಯಲಿ ಕೇಳೆ ಆಗ ಗಾಯದ ಅರಿವು !ಅಬ್ಬ! ಪ್ರಾಯದ ಮದವೆ – || ಪ್ರತ್ಯಗಾತ್ಮ || ಮೀಸೆ ಮೊಲೆ ಬಂದವರು ದೇಶ ನೆಲ ಕಾಣರಲ !ಆಸೆ ಮಹಲಲಿ ವಾಸ; ಹಗಲಿನಲಿ ಕನಸು !ದೇಶವೆಲ್ಲವು ರಂಗುರಂಗಾಗಿ ಕಾಣುವುದುಲೇಸು ಬೆದೆಗಾಲವದು- || ಪ್ರತ್ಯಗಾತ್ಮ || ಜರೆಯುವರು ಗರ್ವದಲಿ ದೇವರನು ಕಲ್ಲೆಂದುಹಿರಿಯರನು ಮುದಿಗೊರಡು ಎಂದು ನೂಕುವರುಪರಿಪರಿಯ ಹಿತನುಡಿಗೆ ಎಳ್ಳಿನಿತು ಕಿವಿಗೊಡರುಹರೆಯದಲ್ಲದು ಸಹಜ_ || ಪ್ರತ್ಯಗಾತ್ಮ || ಸೋಲು […]Read More
ಹಿಂದಿನ ಸಂಚಿಕೆಯಿಂದ…. ಆ ರಾತ್ರಿ ಚಿತ್ರಕನು ಅರಮನೆಗೆ ಹಿಂದಿರುಗಿ ಹೋಗಲಿಲ್ಲ. ಅನುಮಾನಗೊಂಡ ಕಂಚುಕಿಯು ಗುಟ್ಟಾಗಿ ರಕ್ಷಕಭಟರನ್ನು ಕಳುಹಿಸಿದ್ದನು. ಅವರು ರಾತ್ರಿಯೆಲ್ಲಾ ಸುಗೋಪಾಳ ಕುಟೀರದ ಹೊರಗೆ ಕಾವಲು ಕಾಯುತ್ತಿದ್ದರು. ಮಧ್ಯರಾತ್ರಿಯ ಹೊತ್ತಿಗೆ ಪೃಥಾ ಪ್ರಜ್ಞಾಹೀನಳಾದಳು. ಚಿತ್ರಕನು ಆಕೆಯ ಹಾಸಿಗೆಯ ಬಳಿ ನಿಂತು, ಸುಗೋಪಾಳ ಹೆಗಲ ಮೇಲೆ ಕೈಯಿಟ್ಟು ‘ಸುಗೋಪಾ ನೀನು ನನ್ನ ಸೋದರಿ. ನಾವಿಬ್ಬರೂ ಒಬ್ಬ ತಾಯಿಯ ಹಾಲು ಕುಡಿದವರು’ ಎಂದು ಹೇಳಿದನು. ಸುಗೋಪಾ ಅಶ್ರುಪೂರಿತ ನಯನಳಾಗಿ ಚಿತ್ರಕನನ್ನು ನೋಡಿದಳು. ಚಿತ್ರಕ- ಈ ದಿನ ನೀವು ಕೇಳಿದ ಈ […]Read More
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡ ಆಧುನೀಕತೆಯ ಧಾವಂತದಲ್ಲಿ ಹಳ್ಳಿಗಳು ಪಟ್ಟಣಗಳಾಗುತ್ತಿವೆ, ಕಾಂಕ್ರಿಟೀಕರಣಗೊಂಡು ಕಾಡೇ ನಶಿಸಿ ಹೋಗುತ್ತಿದೆ. ಅರಣ್ಯ ಸಂರಕ್ಷಣೆಯ ಕುರಿತು ಯುವ ಪೀಳಿಗೆಗೆ ಜಾಗೃತಿ ಬೇಕಿರುವ ಇಂದಿನ ದಿನದಲ್ಲಿ ಇಲ್ಲೊಬ್ಬಾಕೆ ಸದ್ದಿಲ್ಲದೇ ವೃಕ್ಷ ಕ್ರಾಂತಿಯನ್ನು ಮಾಡಿದ್ದಾರೆ. ಅವರೇ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ “ತುಳಸಿ ಗೌಡ”. ಮರ ಗಿಡಗಳೆಂದರೆ ಮಕ್ಕಳಂತೆ ಕಾಣುವ ಇವರ ಈ ಸಾಧನೆಗೆ ಭಾರತ ಸರ್ಕಾರವು ಪ್ರತಿಷ್ಟಿತ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈಕೆ ಈ ಶತಮಾನ […]Read More
ನೀರು ನಾಯಿಗಳು ಮಾಂಸಹಾರಿ ಗಣದ ‘ಮುಸ್ಟಲಿಡೀ’ (mustelidae) ಕುಟುಂಬಕ್ಕೆ ಸೇರಿದ್ದು ವೀಸಲ್ ಗಳು (weasel), ಮಾರ್ಟೆನ್ಗಳು (Martens), ಬ್ಯಾಜರ್ (Badger) ಇನ್ನೂ ಅನೇಕ ಪ್ರಾಣಿಗಳು ಈ ಕುಟುಂಬದಲ್ಲಿ ಬರುತ್ತವೆ. ಈ ಗುಂಪುಗಳ ಪ್ರಾಣಿಗಳು ಒಂದಕ್ಕೊಂದು ವಿಭಿನ್ನವಾಗಿದ್ದರೂ ಕೆಲವೊಂದು ಲಕ್ಷಣಗಳಲ್ಲಿ ಸಾಮ್ಯತೆ ಇರುವುದರಿಂದ ಒಂದೇ ಕುಟುಂಬದಲ್ಲಿ ಇರಿಸಲಾಗಿದೆ. ಉದ್ದ ದೇಹ,ಗಿಡ್ಡ ಕಾಲು, ಬಾಲದ ಬುಡದಲ್ಲಿ ವಾಸನಾ ಗ್ರಂಥಿ, ಅಭಿವೃದ್ಧಿ ಹೊಂದಿದ ಮಾಂಸದ ಹಲ್ಲುಗಳು ಈ ಕುಟುಂಬದ ಪ್ರಾಣಿಗಳ ಲಕ್ಷಣಗಳಾಗಿವೆ. ನಮ್ಮ ದೇಶದಲ್ಲಿ 3 ಜಾತಿಯ ನೀರು ನಾಯಿಗಳನ್ನು ಗುರುತಿಸಲಾಗಿದೆ. […]Read More
ಸುಳ್ಳಿನ ಸೋಗು ಸುಳ್ಳಿನ ಸೋಗು ಬಲು ಜೋರುಜನ ಹೋಗುತಿರುವರು ಅದಕೆ ಮಾರು. (ಮಾರುಹೋಗುತಿರುವರು) ಸುಳ್ಳು ತೋರುತಿದೆ ಆರ್ಭಟವನುಸತ್ಯ ಮೊರೆಯಿಡುತಿದೆ ದೈವ ಕೃಪೆಯನು. ಸುಳ್ಳಿನ ಮುಖಗಳು ಹಲವಾರುಸತ್ಯವ ತಿಳಿದವರು ಕೇವಲ ಕೆಲವರು. ಸುಳ್ಳು ಮೆರೆಯುತಿದೆ ಅಟ್ಟಹಾಸದಿಸತ್ಯವು ಸಾಯುತಿದೆ ಸುಳ್ಳಿನ ಅಡಿಯಲಿ. ಸುಳ್ಳು ತೋರುತಿದೆ ಭಯಂಕರ ಆಸೆಸತ್ಯಕ್ಕಾಗುತಿದೆ ಪದೇ ಪದೇ ನಿರಾಸೆ. ಸುಳ್ಳೀಗೆ ಸಿಗುತ್ತಿದೆ ಜಯದ ಮಾಲೆಸತ್ಯಕೆ ಸಿಗುತ್ತಿದೆ ಸೋಲಿನ ಸರಮಾಲೆ.ಸುಳ್ಳು ಮಾಡುತಿರುವುದು ಅಪಹಾಸ್ಯವಸತ್ಯ ಕೂಗಿ ಕರೆಯುತಿದೆ ಮನುಷ್ಯತ್ವವ.ಸುಳ್ಳಿಗೆ ಸುಖದ ಸೋಪಾನಸತ್ಯಕೆ ಸದಾ ಅವಮಾನ. ಸುಳ್ಳು ಮಾಡುತಲಿದೆ ಮಾರ್ಮಿಕ ಹತ್ಯೆಜನರಿಗಾಗುತ್ತಿಲ್ಲ […]Read More
ಧರ್ಮದ ಕೊಡಲಿ ದುಡಿಯುವ ಕೈಗಳ ಕತ್ತರಿಸಿದರುಹರಿಸಿದರು ನೆತ್ತರುಕಣ್ಣೀರು ಕಡಲಾಗಿಸಿದರು ಹೃದಯಕ್ಕೆ.ಶವವಾಯಿತು, ತಾಯಿ ಜೀವ. ಜೀವ ಇದ್ದೂ….ಧರ್ಮಾಂದತೆಯ ಕೈಗಳಿಗೆ ಕೊಡಲಿ ಕೊಟ್ಟವರಾರು? ಯಾರೋ ಅದ್ಯಾರದೋ ಜೀವ ಹೊತ್ತೊಯ್ಯುತಿದ್ದಾರೆತಡೆಯುವವರಾರಿಲ್ಲ. ಬದುಕು ಭಯದ ಕೂಪ.ಕುರಾನು ಶಾಂತಿ ಬೋದಿಸುತ್ತಿದೆ.ಬೈಬಲ್ಲೂ ಶಾಂತಿ ಸಾರುತ್ತಿದೆ.ಗೀತೆಯೂ ಶಾಂತಿ ಹಾಡುತ್ತಿದೆ.ಮೌಡ್ಯ ತೊಲಗುತ್ತಿಲ್ಲ ಆದರೂ… ಜಳಪಿಸಿದ ತಲವಾರುತೊಳೆಯಬೇಕಿದೆ ಶಾಂತಿ ಮಂತ್ರದಿಂದಹೊಗೆಯಾಡುತ್ತಿರುವ ಬಂದೂಕಿನ,ನಳಿಕೆ ಮುಚ್ಚಬೇಕಿದೆ ಮಾನವತ್ವದಿಂದಭ್ರಾತೃತ್ವದ ಧರ್ಮದಿಂದ ಇದ್ದು ಎದ್ದು ಒಮ್ಮೆ ಬಿದ್ದುಹೋಗುವಾಗ ತಿಳಿಸಬೇಕಿದೆಭಾರತಾಂಬೆಗೆ ನಾವೆಲ್ಲ ಒಂದೇ ಎಂಬ ಹೆಮ್ಮೆಯಿಂದ ಪವನ್ ಕುಮಾರ್ ಕೆ.ವಿ.Read More
ವಿದ್ಯಾರ್ಥಿ ಯುವಜನರಿಗಾಗಿ – ಅಂಬೇಡ್ಕರ್ ವಾದ ಪ್ರಕಟಣೆ: ಬುದ್ಧ ಬುಕ್ ಹೌಸ್ಬೆಲೆ : 80/- ಪರಶುರಾಮ್.ಎ ರವರ ಹೊಸ ಪುಸ್ತಕ ” ವಿದ್ಯಾರ್ಥಿ ಯುವಜನರಿಗಾಗಿ ಅಂಬೇಡ್ಕರ್ ವಾದ ” ಬಿಡುಗಡೆಗೆ ಸಿದ್ದಗೊಂಡಿದ್ದು, ಈ ಪುಸ್ತಕದ ಮುನ್ನುಡಿ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳು ಬರೆದಿದ್ದಾರೆ. ಮುನ್ನುಡಿಪೂಜ್ಯ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳುಶ್ರೀ ಉರಿಲಿಂಗ ಪೆದ್ದೀಶ್ವರ ಮಠಮೈಸೂರು “ಅಂಬೇಡ್ಕರ್ ವಾದ ಎಂಬುದು ಭಾರತದ ಎಲ್ಲಾ ಸಮಸ್ಯೆಗಳಿಗೆ ಉತ್ತರ, ಹಾಗೂ ಅದೇ ಎತ್ತರ.” ಭಾರತೀಯರ ಹಾಗೂ ಭಾರತದ ವಿಮೋಚನೆ ಇರುವುದೇ ಅಂಬೇಡ್ಕರ್ […]Read More