ಪ್ರತ್ಯಗಾತ್ಮ ಚಿಂತನ (ನೇನಂಶಿ) – 46

ರಾಜ್ಯ ಶಾಸನ ಸಭೆಗೆ ಆಯ್ಕೆಯಾಗಿಹ ಜನರುವ್ಯಾಜ್ಯವಾಡಲು ತೋಳು ಮಡಿಸಿ ನಿಲ್ಲವರುವ್ಯಾಜ್ಯದಲಿ ದಿನವೆಲ್ಲ ಹಾಳು ಮಾಡುವರಯ್ಯರಾಜ್ಯ ಬೊಕ್ಕಸ ಖಾಲಿ- || ಪ್ರತ್ಯಗಾತ್ಮ || ಕಚ್ಚಾಟ ಕಿತ್ತಾಟ ನೂಕು ನುಗ್ಗಲಿನಾಟಹುಚ್ಚಾಟ ತಿಕ್ಕಾಟ ಗೋಳು ನರಳಾಟಪೆಚ್ಚಾದ ಜನ ಜಾತ್ರೆ ರಾಜಕೀಯದ ಆಟಕಿಚ್ಚಿಟ್ಟ ಮನೆಯಂತೆ- || ಪ್ರತ್ಯಗಾತ್ಮ || ಜೂಜಾಡಿ ಸಿರಿವಂತರಾದವರು ಇಹರೇನು?ಮೋಜಿನಲಿ ಜೂಜಾಡಿ ಸೋತವರೆ ಎಲ್ಲಜೂಜಾಟ ಒಂದು ಚಟ, ಅದು ಮತಿಯ ಕೆಡಿಸುವುದುಜೂಜಾಟ ಬಂಡಾಟ- || ಪ್ರತ್ಯಗಾತ್ಮ || ಜೂಜಿನಿಂದಲೆ ದ್ವೇಷ, ಜೂಜಿನಿಂದಲೆ ಕ್ರೋಧಜೂಜಿನಿಂದಲೆ ಕೊಲೆಯು, ವಂಚನೆಯು, ಮೋಸಜೂಜಿನಿಂದಲೆ ಸಕಲ ಸಂಸಾರಗಳ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 29

ಹಿಂದಿನ ಸಂಚಿಕೆಯಿಂದ… ಪೃಥಾ ಹಾಸಿಗೆಯಲ್ಲಿ ಅಲುಗಾಡದೆ ಮಲಗಿದ್ದಳು. ಗುಳಿ ಬಿದ್ದ ಕಣ್ಣುಗಳು. ಊರ್ಧ್ವದೃಷ್ಟಿ. ಚಿತ್ರಕನು ಸದ್ದು ಮಾಡದೆ ಆಕೆಯ ಹಾಸಿಗೆಯ ಬಳಿಗೆ ಬಂದು ನಿಂತುಕೊಂಡನು. ಪೃಥೆಯ ದೃಷ್ಟಿ ಅವನ ಕಡೆ ಹೊರಳಿತು. ಬಹಳ ಹೊತ್ತು ಅವನನ್ನೇ ದಿಟ್ಟಿಸಿ ನೋಡಿ ಕ್ಷೀಣ ಧ್ವನಿಯಲ್ಲಿ ‘ನೀನೇ ಏನು ಅವನು?’ ಎಂದು ಕೇಳಿದನು. ಸುಗೋಪಾ ಹಾಸಿಗೆಯ ಪಕ್ಕದಲ್ಲಿ ಮಂಡಿಯೂರಿ ಕುಳಿದು ಆಕೆಯ ಕೆನ್ನೆಯ ಮೇಲೆ ಕೈಯಿಟ್ಟು ಮೃದು ಮಧುರ ಧ್ವನಿಯಲ್ಲಿ ‘ಹೌದಮ್ಮಾ, ಇವರೇ ಅವನು’ ಎಂದು ಹೇಳಿದಳು. ಇನ್ನೂ ಸ್ವಲ್ಪ ಹೊತ್ತು […]Read More

ಸೌಜನ್ಯ ದತ್ತರಾಜ್ ಕೃತಿಗಳ ಲೋಕಾರ್ಪಣೆ – ಆಗಸ್ಟ್ -7

ಭಾವ ನೌಕೆಯನೇರಿ ಹಾಗು ಕಥೆಯೆಂಬ ಕನ್ನಡಿಯಲ್ಲಿ(ಕವನ ಹಾಗು ಕಥಾಸಂಕಲನಗಳ ಬಿಡುಗಡೆ) ಆಗಸ್ಟ್ 7 ರಂದು ಲೇಖಕಿ ಹಾಗು ಶಿಕ್ಷಕಿ ಶ್ರೀಮತಿ “ಸೌಜನ್ಯ ದತ್ತರಾಜ್” ರವರ “ಭಾವ ನೌಕೆಯನೇರಿ (ಕವನ ಸಂಕಲನ) ಹಾಗು ಕಥೆಯೆಂಬ ಕನ್ನಡಿಯಲ್ಲಿ” ಎಂಬ ಎರಡು ಕೃತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣ ದಲ್ಲಿ ಬಿಡುಗಡೆಯಾಗುತ್ತಿದೆ. ಲೇಖಕಿ – ಪರಿಚಯ ವೃತ್ತಿಯಲ್ಲಿ ಶಿಕ್ಷಕಿಯರಾದ ಶ್ರೀಮತಿ ಸೌಜನ್ಯ ದತ್ತರಾಜ್ ರವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ ಹಾಗು freelance ಬರಹಗಾರರೂ. ಇವರು […]Read More

ದೇಹದಲ್ಲಿ ಮೂಳೆ ಇಲ್ಲದ ಅಸಾಮಾನ್ಯ ಪ್ರತಿಭೆ ತನುಶ್ರೀ ಪಿತ್ರೋಡಿ

ತನುಶ್ರೀ ಪಿತ್ರೋಡಿ ಭಾರತ ದೇಶವು ವಿಶ್ವಕ್ಕೆ ವಿಜ್ಞಾನ, ಗಣಿತ, ವೈದ್ಯಕೀಯ ಮೊದಲಾದ ಕ್ಷೇತ್ರಗಳಲ್ಲಿ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದು, ಅವುಗಳ ಪೈಕಿ ಯೋಗಕ್ಕೂ ವಿಭಿನ್ನ ಕೊಡುಗೆ ನೀಡಿದೆ. ಪುರಾತನ ಕಾಲದಲ್ಲಿ ಋಷಿಗಳು ಪರಿಚಯಿಸಿದ ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆಧುನಿಕತೆಯ ಧಾವಂತದಲ್ಲಿ ಇಂದಿನ ಪೀಳಿಗೆಯು ಯೋಗದ ಮಹತ್ವವನ್ನು ಮರೆತಿದ್ದು, ಮತ್ತೆ ಪುನರುತ್ಥಾನಗೊಳಿಸುವ ಪ್ರಯತ್ನವು ನಡೆದಿದೆ. ಇಂತಹ ಸಂದರ್ಭದಲ್ಲಿ ಉಡುಪಿಯ ಬಾಲೆೆಯೊಬ್ಬಳು ಯೋಗಕ್ಕೆ ಹೊಸ ಆಯಾಮವನ್ನು ನೀಡುತ್ತಿದ್ದು, ಈಕೆಯೇ ಉಡುಪಿಯ ತನುಶ್ರೀ […]Read More

ಓಡುವ ಕುದುರೆಯ ಬಾಲದ ನೇತಾರರು

ಓಡುವ ಕುದುರೆಯ ಬಾಲದ ನೇತಾರರು ಓಡುವ ಕುದುರೆಯ ಬಾಲವ ಹಿಡಿಯುತಬಳಿರೇ ಬಳಿರೇ ಬಳಿರೇ ಎನ್ನುತಉಗಿದದ್ದನ್ನು ಪ್ರಸಾದವೆನ್ನುತಕಾಲಿನ ಉಗುರಿಗೆ ಓಹೋ ಎನ್ನುತಇಂದಿನ ದಿನವ ಇಂದಿಗೇ ಮುಗಿಸುತ..ಬದುಕುವ ಭಂಡ ಪ್ರಚಂಡರು.. ಕತ್ತೆಯ ತೋರಿಸಿ ಕುದುರೆಯಂದರೂಕುದುರೆಯ ತೋರಿಸಿ ಎಮ್ಮೆಯೆಂದರೂಹ್ಮೂ ಹ್ಮೂ ಹ್ಮೂ ಎನ್ನುತ ಸಾಗುವ ಬುದ್ದಿ ಜೀವಿಗಳು… ಏನೇ ಬರಲೀ ತಾ.. ತಾ… ತಾಯಾರೇ ಸಾಯಲೀ ತಾ.. ತಾ.. ತಾ.ಹುಟ್ಟಿಗೂ, ಸಾವಿಗೂ, ಸಂಭ್ರಮಿಸುವತದಾತ್ಮ ಜೀವಿಗಳೂ… ಅಯ್ಯೋ ಅಪ್ಪ ಅಣ್ಣಾ ಎನ್ನುತವಂಶೋದ್ದಾರಕ ಅಧಿಕಾರ..ಕೂಡು ಕುಟುಂಬ ರಾಜ್ಯಕ್ಕೇಮಾದರಿ ಎನಿಸಿಕೊಂಡಿಹರು ಇವ್ರ ಮೇಲೆ ವಿಶ್ವಾಸವಿರಸಿದೇಶದ ಭವಿಷ್ಯ […]Read More

ಹೋಪ್ – ಚಿತ್ರತಂಡದೊಂದಿಗೆ … ಅನಂತ್ ಕುಣಿಗಲ್

ಹೋಪ್ – ಭರವಸೆಯ ಬೆಳಕು ಸಿನೆಮಾ ನಿರ್ದೇಶಕನಾಗಬೇಕೆಂಬ ಕನಸು ಹೈಸ್ಕೂಲಿನಿಂದಲೇ ಚಿಗುರಿತ್ತಾದರೂ ಅದಕ್ಕೆ ಗೊಬ್ಬರ ಸಿಕ್ಕಿದ್ದು ಡಿಗ್ರಿಯಲ್ಲಿ. ಗೆಳೆಯರೆಲ್ಲ ಸೇರಿ ಕಿರುಚಿತ್ರ ಮಾಡಲು ಮುಂದಾದೆವು. ಹಾರರ್ ಥ್ರಿಲ್ಲರ್ ಕಥೆ ಮಾಡಿಕೊಂಡು ತಮಿಳುನಾಡಿನಲ್ಲಿರುವ ಗೆಳೆಯನ ಮನೆಯಲ್ಲಿ ಬೀಡುಬಿಟ್ಟೆವು. ಒಂದು ರಾತ್ರಿ ಮತ್ತು ಒಂದು ಬೆಳಿಗ್ಗೆಯಲ್ಲಿ ಚಿತ್ರೀಕರಣ ಮುಗಿಸಿ, ಒಂದು ವಾರದೊಳಗೆ ಎಡಿಟ್ ಮಾಡಿ ಯೂಟ್ಯೂಬಿನಲ್ಲಿ ಹರಿಯಬಿಟ್ಟು, ಅದನ್ನು ಕಾಲೇಜಿನಲ್ಲೆಲ್ಲಾ ಸುದ್ದಿ ಮಾಡಿಬಿಟ್ಟೆವು. ಈಗ ಆ ಕಿರುಚಿತ್ರ ನೋಡಿದರೆ ನನಗೇ ನಗು ಬರುತ್ತದೆ. ಏನೇನೆಲ್ಲ ಸರ್ಕಸ್ಸು ಮಾಡಿ, ಬಹಳ ಕಷ್ಟ […]Read More

ಅಪ್ಪುವಿನ ಪವರ್ ಸಿನಿಮಾ – ತಡೆಯಾಜ್ಞೆ- ಮದ್ಯೆ ನಾನು

ಪವರ್ ಸ್ಟಾರ್ ಅಪ್ಪುವಿನ ಅಕಾಲ ಮರಣ ಘಟಿಸಿ ಹಲವು ತಿಂಗಳುಗಳು ಕಳೆದು ವರ್ಷದತ್ತಿರ ಆಗುತ್ತಾ ಬಂದರು ನಮ್ಮ ನಡುವೆ ಅಪ್ಪು ಇಲ್ಲ ಎಂಬುವ ಸತ್ಯವನ್ನು ಎಷ್ಟೋ ಜನರಿಗೆ ಈಗಲೂ ಒಪ್ಪಲು ಕಷ್ಟ ಎಂಬುದು ಎಲ್ಲರಿಗೂ ತಿಳಿದಿರುವಂತದ್ದೇ. 2012 ರಲ್ಲಿ ಬಿಡುಗಡೆಯಾಗಿದ್ದ “ಯಾರೇ ಕೂಗಾಡಲಿ” ಚಿತ್ರದ ನಂತರ ಎರಡು ವರ್ಷದ ದೀರ್ಘ ಸಮಯದ ನಂತರ ಬಿಡುಗಡೆಗೊಂಡ ಅಪ್ಪುವಿನ “ನಿನ್ನಿಂದಲೇ” ಚಿತ್ರವು ಜನರನ್ನು ತಲುಪಲು ವಿಫಲವಾಗಿತ್ತು. ಆಗ ಅದೇ ವರ್ಷ 6 ತಿಂಗಳ ನಂತರ ತೆಲುಗು ಚಿತ್ರವಾದ ಮಹೇಶ್ ಬಾಬು […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 28

ಹಿಂದಿನ ಸಂಚಿಕೆಯಿಂದ…. ಇಬ್ಬರೂ ಕುಳಿತ ನಂತರ ರಟ್ಟಾ ಮುಖ ಮುಚ್ಚಿಕೊಂಡು ಸ್ವಲ್ಪ ನಕ್ಕಳು. ಕಂಚುಕಿಯನ್ನು ಚಿತ್ರಕನ ಜೊತೆಗೆ ಕಂಡು, ವಿಷಯವನ್ನು ಗ್ರಹಿಸಿ ಕೌತುಕ ಮಿಶ್ರಿತ ಧ್ವನಿಯಲ್ಲಿ ‘ಆರ್ಯ ಲಕ್ಶ್ಮಣ ಅವರು ಈ ಅಂತಃಪುರದ ಬಗ್ಗೆತೋರುತ್ತಿರುವ ಇಷ್ಟೊಂದು ಮುಂಜಾಗರೂಕತೆ, ಸ್ನೇಹ- ಮಮತೆ – ಕಾಳಜಿಯನ್ನು ತಾಯಂದಿರೂ ಕೂಡ ತಮ್ಮ ಮಕ್ಕಳ ಬಗ್ಗೆ ತೋರುವರೋ ಇಲ್ಲವೋ ತಿಳಿಯದು’ ಎಂದು ಹೇಳಿದಳು. ಲಕ್ಷ್ಮಣನು ಅಪ್ರತಿಭನಾದನು. ಚಿತ್ರಕನು ರಾಜಕುಮಾರಿಯ ಮಾತನ್ನು ಪುಷ್ಟೀಕರಿಸಿ ‘ಕಂಚುಕಿ ಮಹಾಶಯರು ನಮ್ಮ ಬಗ್ಗೆಯೂ ಕೂಡ ಬಹಳ ಸ್ನೇಹ ಶೀಲರು. […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 45

ಶಾಂತಿ ದೂತರ ತೆರದಿ ಶಾಂತಿ ಮಾತಾಡುವರುಮಂತಣದಿ ಹಠಮಾರಿತನವ ತೋರುವರುಎಂತಾದರೂ ಇವರ ಹಠವೆ ವಿಶ್ವಕೆ ಕುತ್ತುಎಂತಪ್ಪುದೈ ಶಾಂತಿ_ || ಪ್ರತ್ಯಗಾತ್ಮ || ಗೆದ್ದ ಎತ್ತಿನ ಬಾಲ ಹಿಡಿದ ಜನರೇ ಹೆಚ್ಚುಗೆದ್ದ ಮಂದಿಗೆ ಹಾರ; ಸೋತವಗೆ ಕಲ್ಲುಬಿದ್ದವನೆ ಮತ್ತೊಮ್ಮೆ ಗೆದ್ದು ಬರಬಹುದೇನೊ !ಗುದ್ದಾಟವೇಕಯ್ಯ? – || ಪ್ರತ್ಯಗಾತ್ಮ || ಸದ್ದುಗದ್ದಲ ಮಾಡಿ ಗುದ್ದಾಡಿ ಬಡಿದಾಡಿಉದ್ದನೆಯ ಜುಬ್ಬಗಳ ಹರಿದು ಹಾಕಿದರೆಉದ್ದುದ್ದ ಭಾಷಣವ ಮಾಡಿದರೆ ಈ ದೇಶಉದ್ಧಾರವಾಗುವುದೇ ?- || ಪ್ರತ್ಯಗಾತ್ಮ || ಧ್ವನಿವರ್ಧಕವ ಕಿತ್ತು ಬೀಸಿ ಹೊಡೆವವನೊಬ್ಬಮುನಿದು ಕುರ್ಚಿಯ ಮುರಿದು ಬಡಿವನಿನ್ನೊಬ್ಬಕನಿಕರವ […]Read More

“ಲೇಕ್ ಜಿನೀವಾ” – ಸಾಗರವಲ್ಲ ಇದು ಮಹಾಸರೋವರ

ಲೇಕ್ ಜಿನೀವಾ ಸ್ಫಿಡ್ಜರ್‌ಲ್ಯಾಂಡ್ ಎಂದರೆ ಸಾಕು ಎಲ್ಲರಿಗೂ ಥಟ್ಟನೆ ಅನ್ನಿಸುವುದು ಓಹ್ ಅದು ಪ್ರವಾಸಿಗರ ಸ್ವರ್ಗ ಎಂದು. ಹೌದು ಆ ನೆಲವೇ ಹಾಗೆ, ಸದಾ ಹಸಿರು ಮಂಜಿನ ನಡುವೆ ಪ್ರವಾಸಿಗರನ್ನು ತನ್ನೆಡೆಗೆ ಕೈಬೀಸಿ ಕರೆಯುವ ಸ್ವಿಡ್ಜರ್‌ಲ್ಯಾಂಡ್ ತನ್ನಲ್ಲಿ ಅನೇಕ ರಮಣೀಯ ಪ್ರವಾಸಿ ತಾಣಗಳನ್ನು ಅಡಗಿಸಿಕೊಂಡಿದೆ. ರಮಣೀಯ ಪ್ರವಾಸಿ ತಾಣಗಳಲ್ಲಿ ಸ್ವಿಡ್ಜರ್ ಲ್ಯಾಂಡಿನ ರಾಜಧಾನಿ ಜಿನೀವಾದ ಹೃದಯ ಭಾಗದಲ್ಲಿರುವ “ಲೇಕ್ ಜಿನೀವಾ” ಅಥವಾ ಜಿನೀವಾ ಸರೋವರ ಸಹ ಕೂಡ ಒಂದು. ಸಮುದ್ರ ಅಥವಾ ಸಾಗರವನ್ನು ನೋಡದವರೇನಾದರೂ ಈ ಸರೋವರವನ್ನು […]Read More