ಪ್ರತ್ಯಗಾತ್ಮ ಚಿಂತನ (ನೇನಂಶಿ) – 41

ಸರ್ವರೊಳಗೊಂದೊಂದು ನುಡಿಗಲಿತು ಮಾನವನುಸರ್ವಜ್ಞನಾಗುವನು ಸಂದೇಹವಿಲ್ಲಸರ್ವರೊಳಗೊಂದಾಗಿ ನಗುನಗುತ ಮಾತಾಡುಸರ್ವಜನ ಮಾನ್ಯನಹೆ- || ಪ್ರತ್ಯಗಾತ್ಮ || ತಲೆ ಬಾಚಿ ಹೂ ಮುಡಿದು ಹಣೆಗೆ ತಿಲಕವನಿಟ್ಟುಮಲಿನವಲ್ಲದ ಸೀರೆ ಕುಪ್ಪಸವ ಧರಿಸಿಬಳಲಿ ಬಹ ಪತಿಯೆದಿರು ಸತಿ ಸುಳಿಯೆ ಪತಿಗಾಗಬಳಲಿಕೆಯು ಹಿಂಗುವುದು- || ಪ್ರತ್ಯಗಾತ್ಮ || ಜನುಮ ನೀಡಿದ ಜನನಿ ಜನಕರೇ ಪರದೈವಅನುನಯದೊಳವರನ್ನು ಮುಪ್ಪಿನಲಿ ಸಲಹು.ನಿನಗಾಗಿ ಅವರೆನಿತು ಕಷ್ಟಗಳ ಸಹಿಸಿದರೊ !ನೆನೆಯ ಬೇಡವೆ ನೀನು- || ಪ್ರತ್ಯಗಾತ್ಮ || ಹದಿ ಹರೆಯದ ಹೆಣ್ಣ ಹೊಳೆವ ಕಣ್ಣೇ ಚಂದಅದಕಿನಿತು ಕಾಡಿಗೆಯು ಮತ್ತಷ್ಟು ಚಂದಮುದಿತನದಲಿ ಮಂಜಾಗಿ ಸುಕ್ಕಾಗಿ […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 19

ಸದ್ದು ನಿನ್ನಕಾಲ್ಗೆಜ್ಜೆಯಮಧುರವಾದಸದ್ದುನನ್ನನ್ನುಗಾಢನಿದ್ದೆಯಿಂದಎಚ್ಚರಿಸಿತು!! ಖೈದಿ ಫಳ ಫಳಹೊಳೆವನಿನ್ನಸುಂದರಕಂಗಳ ನೋಟಕ್ಕೆಸೋತೆ ನಾನು!ದಯೆ ತೋರದೇಈ ಕ್ಷಣಬಂಧಿಸು ನನ್ನನ್ನು!! ಬೂದಿ ನಿನ್ನನೆನಪಲ್ಲಿನಾನುಸುಟ್ಟು ಬೂದಿಆದಾಗಲೇತಿಳಿಯಿತುಎಲ್ಲ ಬೆಂಕಿಯನ್ನೂನೀರುಆರಿಸಲಾರದೆಂದು!! ಒರತೆ ನಿನ್ನಕೊರತೆಅದಾಗಲೆಲ್ಲನನ್ನಕಣ್ಣಲ್ಲಿಕಣ್ಣೀರ ಒರತೆ!ಅದೇಕೆನನ್ನ ಬಿಟ್ಟುಇನ್ನೊಬ್ಬನಲ್ಲಿ ಬೆರೆತೆ!! ಡಾII ಪರಮೇಶ್ವರಪ್ಪ ಕುದರಿRead More

ಯಾರು ಸರಿ?

ಯಾರು ಸರಿ? ಇತರರು ಸರಿ ಇಲ್ಲ ಅಥವಾ ತಪ್ಪಿತಸ್ಥರು ಎನ್ನುವ ಅಧಿಕಾರ ನಮಗೆ ಎಂದೂ ಇರುವುದಿಲ್ಲ.ಯಾವಾಗಲೂ ನಾವು, ಅವರು ಸರಿ ಇಲ್ಲ, ಇವರು ಸರಿ ಇಲ್ಲ ಎಂದು ನಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಮತ್ತೊಬ್ಬರನ್ನು ದೂರುತ್ತಲೇ ಇರುತ್ತೇವೆ. ಆದರ ಬದಲಿಗೆ ನಾನೆಷ್ಟು ಸರಿ ಇದ್ದೇನೆ? ನಾನು ಸರಿ ಇದ್ದೇನೆಯೇ? ಎಂದು ನಮ್ಮನ್ನೇ ನಾವು ಪರೀಕ್ಷೆಯನ್ನು ಮಾಡಿಕೊಳ್ಳಬೇಕು. ಒಮ್ಮೆ ಲೋಟದ ಒಳಗಿದ್ದ ದಪ್ಪನೆಯ ಹಾಲು ನೀರನ್ನು ನೋಡಿ ‘ನೋಡು ನಾನೆಷ್ಟು ಬಿಳಿ ಬಿಳಿಯಾಗಿ ಸ್ವಚ್ಛ ಮತ್ತು ಶುಭ್ರವಾಗಿ ಇದ್ದೇನೆ, ನೀನಾದರೂ […]Read More

ವಾರಕ್ಕೊಂದು ಕಗ್ಗ – 5 (ಬಾಳಿಗೊಂದು ನಂಬಿಕೆ) – ಡಿ. ವಿ. ಜಿ

ಕಗ್ಗ ಮಾಲಿಕೆ – ಕಗ್ಗ 430 ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ ।ಇಬ್ಬರಾಗುವೆನೆಂದನಂತೆ ಪರಬೊಮ್ಮಂ ॥ಹೆಬ್ಬದುಕನೊಂಟಿತನದೊಳದೇನು ಬದುಕುವೆಯೊ? ।ತಬ್ಬಿಕೊಳೊ ವಿಶ್ವವನು – ಮಂಕುತಿಮ್ಮ ಒಬ್ಬನುಣುವೂಟದಲಿ=ಒಬ್ಬನು+ಉಣುವ+ಊಟದಲಿ,ಇಬ್ಬರಾಗುವೆನೆಂದನಂತೆ=ಇಬ್ಬರು+ಆಗುವೆ+ಎಂದನಂತೆ, ಹೆಬ್ಬದುಕನೊಂಟಿತನದೊಳದೇನು=ಹೆಬ್ಬದುಕನು+ಒಂಟಿತನದೊಳು+ಅದೇನು, ಉಣುವ=ತಿನ್ನುವ, ಹೆಬ್ಬದುಕನು=ದೊಡ್ಡದಾದ ಜೀವನವ, ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಒಬ್ಬಂಟಿ ಜೀವನದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ನಾವು ಒಬ್ಬರೇ ಕುಳಿತು ಊಟ ಮಾಡಿದರೆ ಅದರಲ್ಲಿ ಏನು ಸುಖವಿರುತ್ತದೆ? ಇಬ್ಬರಾದರೆ ಪರಸ್ಪರ ವಿಷಯಗಳನ್ನು, ಕಷ್ಟ ಸುಖಗಳನ್ನು ಹಂಚಿಕೊಳ್ಳಬಹುದು. ಒಬ್ಬನೇ ಊಟ ಮಾಡಿದರೆ ನಮ್ಮ ಹೊಟ್ಟೆ ತುಂಬಬಹುದು ಆದರೆ ನಮ್ಮ ಮನಸ್ಸು ತುಂಬುವುದಿಲ್ಲ. […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 23

ಹಿಂದಿನ ಸಂಚಿಕೆಯಿಂದ…. ರಟ್ಟಾ ಏನನ್ನಾದರೂ ಹೇಳುವುದಕ್ಕೆ ಮೊದಲೆ ಮಂತ್ರಿಯು ‘ಆದರೆ ಈಗಲೇ ತಮ್ಮ ದೌತ್ಯ ಮುಗಿದಿಲ್ಲ. ಹೀಗಿರುವಾಗ ತಾವು ಹೇಗೆ ಹೋಗುತ್ತೀರಿ? ಪತ್ರದ ಉತ್ತರ- ಎಂದು ಚಿತ್ರಕನಿಗೆ ಹೇಳಿದನು. ಚಿತ್ರಕನು ದೃಢವಾದ ಧ್ವನಿಯಲ್ಲಿ ‘ತಮ್ಮ ಉತ್ತರದ ಬಗೆಗೆ ನನಗೆ ರಾಜರಿಂದ ಯಾವ ಅಪ್ಪಣೆಯೂ ಆಗಿಲ್ಲ. ನಾನು ಶ್ರೀಮನ್ ಮಹಾರಾಜರ ಪತ್ರವನ್ನು ತಮಗೆ ಒಪ್ಪಿಸಿದ್ದೇನೆ. ಅಲ್ಲಿಗೆ ನನ್ನ ಜವಾಬ್ದಾರಿ ಮುಗಿಯಿತು’ ಎಂದು ಹೇಳಿ ಅನುಮತಿಗಾಗಿ ಮತ್ತೆ ರಟ್ಟಾಳ ಕಡೆ ನೋಡಿದನು. ಈಗ ರಟ್ಟಾ ಮಾತನಾಡಿದಳು. ಆಕೆ ಸಮಾಧಾನಕರವಾದ ದನಿಯಲ್ಲಿ‘ದೂತ […]Read More

ಪೀಸಾ ಗೋಪುರ ವಾಲಿದ್ದು ಏಕೆ?

ಪೀಸ್ ಫುಲ್ ನಗರಿ – ಪೀಸಾ ಕಾರ್ಯನಿಮಿತ್ತ ಡೆನ್ಮಾರ್ಕ್‍ಗೆ ಹೋಗುವ ಅವಕಾಶ ಸಿಕ್ಕಿತ್ತು, ಜಾಸ್ತಿ ಸಮಯವಿಲ್ಲದ ಕಾರಣ ಯೂರೋಪಿನ ನಾಲ್ಕ್ಯೆದು ದೇಶಗಳನ್ನಾದರೂ ಸುತ್ತೋಣಾ ಎಂದು ಡೆನ್ಮಾರ್ಕ್, ಫ್ರಾನ್ಸ್, ಇಟಲಿ ಹಾಗೂ ವ್ಯಾಟಿಕನ್ ಪ್ರವಾಸ ಕ್ಯೆಗೊಂಡಿದ್ದೆ, ಪ್ಯಾರಿಸ್‍ನಿಂದ ಹೋರಟು ಪೀಸಾದಲ್ಲಿ ಇಳಿಯುವ ಮೂಲಕ ಇಟಲಿಗೆ ಪಾದರ್ಪಣೆಮಾಡಿದ್ದೆ. ಪೀಸಾದ ಪಾರ್ಚಿಜಿಯೋ ವಿಮಾನ ನಿಲ್ದಾಣದಲ್ಲಿಳಿದಾಗ ಮಧ್ಯಾಹ್ನ ಮೂರು ಘಂಟೆಯಾಗಿತ್ತು, ಇಮಿಗ್ರೇಶನ್ ಚೆಕ್ ಮುಗಿಸಿ ಹೊರ ಬಂದಾಗ ಮಧ್ಯಾಹ್ನ ಮೂರುವರೆಯಾಗಿತ್ತು,ಯೂರೋಪಿನಲ್ಲಿ ಮೂರನೆ ದೇಶದಲ್ಲಿ ಕಾಲಿಟ್ಟ ಸಂತಸ ಒಂದುಕಡೆಯಾದರೆ ಹೊಟ್ಟೆ ಬೇರೆ ಚುರುಗುಡುತ್ತಿತ್ತು, ವಿಮಾನ […]Read More

ಭಾರತದ ಘೇಂಡಾಮೃಗಗಳು

ಭಾರತದ ಘೇಂಡಾಮೃಗಗಳು ನಮ್ಮ ಭಾರತದ ಘೇಂಡಾಮೃಗ ಅಳಿವಿನಂಚಿನಲ್ಲಿರುವ ಒಂದು ವಿಶಿಷ್ಟವಾದ ಪ್ರಾಣಿ. ಇದಕ್ಕಿರುವ ಒಂಟಿಕೊಂಬಿನಿಂದಾಗಿ ನೋಡಲು ವಿಶಿಷ್ಟವಾಗಿ ಕಾಣುತ್ತದೆ. ಏಷ್ಯಾದಲ್ಲಿರುವ ಮೂರು ಪ್ರಮುಖ ಘೇಂಡಾಮೃಗಗಳಲ್ಲಿ” ನಮ್ಮ ಭಾರತದ ಒಂಟಿಕೊಂಬಿನ ಘೇಂಡಾಮೃಗ ದೊಡ್ಡದು. ಇನ್ನುಳಿದೆರಡು “ಸುಮಾತ್ರಾ ಘೇಂಡಾಮೃಗ” ಸುಮಾತ್ರ ಹಾಗು ಬೊರ್ನಿಯೊ ದ್ವೀಪಗಳಲ್ಲಿ ಕಂಡುಬಂದರೆ, “ಜಾವಾ ಘೇಂಡಾಮೃಗ” ಇಂಡೋನೇಷ್ಯಾ ಹಾಗು ಜಾವಾ ದ್ವೀಪಗಳಲ್ಲಿ ಮಾತ್ರ ಕಂಡುಬರುತ್ತದೆ. ನಮ್ಮ ಭಾರತದಲ್ಲಿನ ಘೇಂಡಾಮೃಗಗಳು ಹೆಚ್ಚು ಕಡಿಮೆ ಆಫ್ರಿಕಾದ ಬಿಳಿ ಘೇಂಡಾಮೃಗದಷ್ಟೇ ಗಾತ್ರದಲ್ಲಿ ಸಮನಾಗಿವೆ. ಇದನ್ನು ಖಡ್ಗಮೃಗ ಎಂದು ಸಹ ಕರೆಯಲಾಗುತ್ತದೆ. ಇದರ […]Read More

ಓದಲೇಬೇಕಾದ ರೋಚಕ ಕಾದಂಬರಿ “ರೌದ್ರಾವರಣಂ”

ಓದಲೇಬೇಕಾದ ರೋಚಕ ಕಾದಂಬರಿ ರೌದ್ರಾವರಣಂ ಆಪ್ತ ಗೆಳೆಯ ಅನಂತನ ಮೊದಲ ಕಾದಂಬರಿ “ರೌದ್ರವರಣಂ” ಕೃತಿಯು ಬಹಳ ಬೇಗ ಓದಿಸಿಕೊಳ್ಳುತ್ತದೆ. ಏಕೆಂದರೆ ಪ್ರತೀ ಅಧ್ಯಾಯಗಳಲ್ಲಿಯೂ  ಕುತೂಹಲ ಮತ್ತು ರೋಚಕಭರಿತ ಪ್ರೇರಣೆಗಳು ಭರ್ಜರಿಯಾಗಿ ಇರುವುದರಿಂದ. ಸುನೀತವಾದ ಸ್ವಚ್ಛ, ಹಳ್ಳಿ ಸೊಗಡಿನ ಭಾಷೆ ಸುಲಲಿತವಾಗಿ ಆಸ್ವಾದಿಸಲಿಕ್ಕೆ ಸಹಾಯ ಮಾಡುತ್ತದೆ. ರೌದ್ರದ ಆವರಣ ಎಲ್ಲ ಪಾತ್ರಗಳಲ್ಲಿಯೂ ಬಹಳ ಆಚ್ಚುಕಟ್ಟಾಗಿ ಆಗಿದೆ. ಕೆಲವೊಮ್ಮೆ,  ಕೌತುಕದ  ಪತ್ತೇದಾರಿಯಲ್ಲಿ ಸಾಗುತ್ತಿರುವಂತೆ ಅನಿಸುತ್ತದೆ. ಅದನ್ನ ಪೋಷಿಸುವಂತೆ ತಕ್ಕ  ಪ್ರೆಶ್ನೆಗಳು, ಗೊಂದಲಗಳು, ವಿಭಿನ್ನವಾದ ತಿರುವುಗಳು ಕೂಡ ಅಡಗಿವೆ. ಚಂದ್ರ(ನಾಯಿ)ನೆಂಬ ಭಾವ […]Read More

ನೀರಿನಡಿಯಲ್ಲಿ ವಿಶ್ವದ ಅತೀ ದೊಡ್ಡ ಸಸ್ಯ

ನೀರಿನಡಿಯಲ್ಲಿ ವಿಶ್ವದ ಅತೀ ದೊಡ್ಡ ಸಸ್ಯ ಇತ್ತೀಚಿಗೆ ವಿಜ್ಞಾನಿಗಳು ನೀರಿನಡಿಯಲ್ಲಿ ಬೆಳೆಯುತ್ತಿರುವ ವಿಶ್ವದ ಅತೀ ದೊಡ್ಡ ಸಸ್ಯವನ್ನು ಪತ್ತೆ ಹಚ್ಚಿದ್ದು ಈ ಬಗ್ಗೆ ಅಧ್ಯಯನ ವರದಿಯೊಂದು ರಾಯಲ್ ಸೊಸೈಟಿ ‘ಬಿ’ ಯಲ್ಲಿ ಪ್ರಕಟಗೊಂಡಿದೆ.ಪಶ್ಚಿಮ ಆಸ್ಟ್ರೇಲಿಯಾದ ಶಾರ್ಕ್ ಕೊಲ್ಲಿಯಲ್ಲಿ ಪತ್ತೆಯಾದ ಈ ಸಸ್ಯವು ಒಂದೇ ಬೀಜದಿಂದ ಹರಡಿದ್ದು ಸುಮಾರು 4500 ವರ್ಷ ಹಳೆಯದಾಗಿದೆ ಹಾಗು ಸುಮಾರು 180 ಕಿಲೋ ಮೀಟರ್ ಉದ್ದವಿದೆ. ಈ ಒಂದೇ ಸಸ್ಯವು ಸುಮಾರು 200 ಚದರ ಕಿಲೋ ಮೀಟರ್ ವರೆಗೆ ವ್ಯಾಪಿಸಿದೆ !!! ಸರಳವಾಗಿ […]Read More

ಹರಿವು

ಹರಿವು ಮನಸ್ಸು ಮೀನಿನಂತೆ! ಬರುವುದೆಲ್ಲನಿಂತ ನೀರಲ್ಲ, ಅದು ಬಹುಷಃದುಮ್ಮಿಕ್ಕುವ ಜಲಪಾತದಂತೆ ,ಬೋರ್ಗೆವ ನದಿ,ಭೂರಮೆಯ ಅಪ್ಪಣೆ ಕೇಳೋಲ್ಲ!ಹರಿದು ಸಾಗರವ ದಡ ಮುಟ್ಟುತ್ತಾಳೆ. ಎಲ್ಲಾ ಅವನ / ಅವಳ ಅಪ್ಪಣೆಯಂತೆ,ಅಪ್ಪಣೆ – ಒಪ್ಪುಗೆ ಕೇಳಲು ಬಿಡುವೆಲ್ಲಿಅವಳಿಗೆ, ಬಿಡುವಾದರೂ ಎಲ್ಲಿ?ಹೇಳಿದ್ದು-ಕೇಳಿದ್ದುನೋಡಿದ್ದು-ಕೇಳಿದ್ದುಆ ಗುಡ್ಡ ಕಣಿವೆಗಳೇ ಹರಿದು ಹೋಗು, ನಮಗಾದರೂಇದೇ ದುಃಖ್ಖ ದುಃಮಾನಗಳುನಿನಗಿಲ್ಲ ಯಾಕೆ ವೈ-ರಾಗ್ಯನಮ್ಮ ಸೀಳಿ ಹೋಗಲುನಿನಗಿಲ್ಲ ಕಾರಣ!ಯಾಕೆಂದರೆ ಸಾಗರನೀನು ಬರಲು ಕಾಯುತ್ತಿದ್ದೆ ಬೋರ್ಗರೆಯಲು ಕು ಶಿ ಚಂದ್ರಶೇಖರ್Read More