ಹೀಗಿರಲಿ ನಮ್ಮ ಸಾಮಾಜಿಕ ನಿಯಮಗಳು

ಹೀಗಿರಲಿ ನಮ್ಮ ಸಾಮಾಜಿಕ ನಿಯಮಗಳು ಪ್ರಸ್ತುತ ಸಾಮಾಜದಲ್ಲಿ ಮಾನವೀಯ ಸಂಬಂಧಗಳು ನಶಿಸುತ್ತಿವೆ. ಯುವಪೀಳಿಗೆಯು ಯಾಂತ್ರಿಕ ಬದುಕಿಗೆ ಜೋತುಬಿದ್ದಿದ್ದು, ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಸಾಮಾಜಿಕ ಸಾಮರಸ್ಯ ಮತ್ತು ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬೇಕಾದರೆ ಯುವಪೀಳಿಗೆಯು ಪಠ್ಯದ ಹುಳುವಾಗುವ ಬದಲು ಪಠ್ಯೇತರ ಚಟುವಟಿಕೆಗಳತ್ತ ಗಮನಹರಿಸಿ ಸಮಾಜದೊಂದಿಗೆ ಬೆರೆಯುವ ಪ್ರಯತ್ನವನ್ನು ಮಾಡಬೇಕು. ಸಮಾಜದ ಎಲ್ಲಾ ಸ್ತರಗಳ ಜನರೊಂದಿಗೆ ಸಮಾನವಾಗಿ ಬೆರೆಯಬೇಕೆಂದರೆ ಕೆಲವೊಂದು ನಿಯಮಗಳತ್ತ ಗಮನಹರಿಸುವುದು ಉತ್ತಮ. ಅವುಗಳೆಂದರೆ,ಯಾರಿಗಾದರೂ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಫೋನ್ ಕರೆ ಮಾಡಬಾರದು. ಕರೆ ಮಾಡಿರುವ ವ್ಯಕ್ತಿಯು […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 22

ಹಿಂದಿನ ಸಂಚಿಕೆಯಿಂದ… ಚತುರಾನನ- ‘ಸರಿ. ಅದಾದ ಮೇಲೆ ಹಿಂದಿನ ದಿನ ರಾತ್ರಿ ತಾವು ತಮ್ಮ ಪರಿಚಯ ಹೇಳಿಕೊಂಡಿದ್ದಿದ್ದರೆ!… ಚಿತ್ರಕ- ಯಾರ ಮುಂದೆ ಪರಿಚಯ ಹೇಳಿಕೊಳ್ಳಬೇಕಾಗಿತ್ತು? ರಾತಿ ವೇಳೆ ಊರೊಳಗೆ ಗಸ್ತು ತಿರುಗುವ ಭಟರ ಮುಂದೆ? ತೋರಣದ್ವಾರದ ಕಾವಲುಗಾರರ ಮುಂದೆ?’ ಚತುರಾನನು ಚಿತ್ರಕನನ್ನು ಒಂದು ಬಾರಿ ನೋಡಿ ನಿಟ್ಟುಸಿರು ಬಿಟ್ಟನು. ‘ಹೋಗಲಿ ಬಿಡಿ. ಏನೇನು ಆಗಬೇಕಾಗಿತ್ತೊ ಎಲ್ಲವೂ ಆಗಿ ಹೋಯಿತು- ನಿರ್ವಾಣ ದೀಪೇ ಕಿಮು ತೈಲದಾನಮ್? (ಆರಿ ಹೋಗಿರುವ ದೀಪಕ್ಕೆ ಎಣ್ಣೆ ಹಾಕಿದರೆ ಪ್ರಯೋಜನವೇನು?) ಈಗ ನಿಮ್ಮ ವಿಶ್ರಾಂತಿಯ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 40

ಹನಿಗೂಡಿದರೆ ಹಳ್ಳ ತೆನೆಗೂಡಿದರೆ ಬಳ್ಳಅಣುವಿನಿಂದೇನೆಂದು ಸಲ್ಲದು ಉಪೇಕ್ಷೆಇನಿತಾದರೂ ಉಳಿಸಿ ಹಣವನೊಂದಡೆ ಇರಿಸುಘನ ನಿಧಿ ಭವಿಷ್ಯಕ್ಕೆ- || ಪ್ರತ್ಯಗಾತ್ಮ || ಇರುಳ ಕಾರ್ಗತ್ತಲಲಿ ದಾರಿ ತಪ್ಪಿದವಂಗೆಸರಿದಾರಿ ತೋರುವುದು ಕೋಲ್ಮಿಂಚು ಬೆಳಗಿಕೊರಗದಿರು ನೀಗೈದ ಸೇವೆ ಅಲ್ಪವದೆಂದುಕಿರಿದೆ ಅಳಿಲಿನ ಸೇವೆ ?- || ಪ್ರತ್ಯಗಾತ್ಮ || ಕೊಳಲಿನಿಂಚರ ಕೇಳಿ ತಲೆದೂಗದವರುಂಟೆ ?ಉಲಿವ ವೀಣೆಯ ದನಿಗೆ ಸೋಲದವರುಂಟೆ ?ಎಳೆಯ ಮಕ್ಕಳ ಮುದ್ದು ತೊದಲು ಮಾತನು ಕೇಳಿನಲಿಯದವರುಂಟೇನು ?- || ಪ್ರತ್ಯಗಾತ್ಮ || ಬಲಿಕೊಡುವರೇ ಹೇಳು ಆನೆ ಕುದುರೆಗಳನ್ನುಹುಲಿಯನೆಂದಾದರೂ ಬಲಿಕೊಟ್ಟುದುಂಟೆ ?ಬಲಿ ಪಶುವು ಕುರಿ-ಮೇಕೆ, […]Read More

ಏಕವ್ಯಕ್ತಿ ಕಲಾ ಪ್ರದರ್ಶನ – ನಿಸರ್ಗದ ಮಧ್ಯೆ ಚೌಗಲೆ!

ಏಕವ್ಯಕ್ತಿ ಕಲಾ ಪ್ರದರ್ಶನ – ನಿಸರ್ಗದ ಮಧ್ಯೆ ಚೌಗಲೆ! ಡಾ. ಡಿ ಎಸ್ ಚೌಗಲೆ ಅವರ ಕಲಾಕೃತಿಗಳ ಪ್ರದರ್ಶನವು ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಮೇ 23 ರಿಂದ 31 ರವರೆಗೆ ಕೆ ಎಂ ಎಫ್ ಅವರ ಆಯೋಜಕತ್ವದಲ್ಲಿ ನಡೆಯುತ್ತಿದೆ. ‘ದಿ ನೇಚರ್ ವಿಥಿನ್‘ ಎಂಬ ಶೀರ್ಷಿಕೆಯಲ್ಲಿ ತಮ್ಮ ನೆಲೆಗಟ್ಟಿನ ಹಿನ್ನೆಲೆಯನ್ನು ತಮ್ಮ ಕಲಾಕೃತಿಗಳ ಮೂಲಕ ಚಿತ್ರಿಸಿದ್ದಾರೆ. ಗುಡ್ಡಗಳು ಅದರ ಮೇಲೆ ಮನೆಗಳನ್ನು ವರ್ಣರಂಜಿತವಾಗಿಸಿದ್ದಾರೆ. ತಮ್ಮೂರಿನ ಮಣ್ಣಿನ ಬಣ್ಣವನ್ನು ಕಲಾಕೃತಿಗಳಲ್ಲಿ ಹಿಡಿದಿಟ್ಟಿದ್ದಾರೆ. ದೇವಾಲಯದ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 39

ಕರೆಯದಿರೆ ಹೋಗದಿರು ಶುಭಕಾರ್ಯವೆಂದನಲುಪರಿಣಾಮ ರಮಣೀಯವಲ್ಲವದು ಕಾಣಮರಣ ವಾರ್ತೆಯ ಕೇಳಿ ಚಣಕಾಲನಿಲ್ಲದಿರುಮರುಕವೇ ಕರೆಯೋಲೆ- || ಪ್ರತ್ಯಗಾತ್ಮ || ಕರೆಯದಿದ್ದರೂ ಕೂಡ ದಕ್ಷ ಯಜ್ಞಕೆ ತೆರಳಿಕೆರಳಿ ದಾಕ್ಷಾಯಣಿಯು ಮರಣವಪ್ಪಿದಳುಕರೆಯದೆಯೆ ಹೋಗುವುದು ಮರ್ಯಾದೆಗದು ಕುಂದುನೆರೆ ವಿಚಾರಿಸಿ ನೋಡು- || ಪ್ರತ್ಯಗಾತ್ಮ || ಗಾಂಧಿ ನಿಧನದ ವಾರ್ತೆ ಕೇಳಿ ಕಂಗಾಲಾಗಿಮಂದಿ ಲಕ್ಷಕು ಮೀರಿ ದಿಲ್ಲಿ ಸೇರಿದರುನೊಂದು ದರ್ಶನ ಪಡೆದು ಅಶ್ರುಸುರಿಸಿದರವರನಂದು ಕರೆದವರಾರು ?- || ಪ್ರತ್ಯಗಾತ್ಮ || ತಂತಿಯನು ಅತಿ ಬಿಗಿದರದು ಕಡಿದು ತುಂಡಹುದುತಂತಿ ಸಡಿಲವ ಮಾಡೆ ನಾದ ಹೊರಬರದುತಂತಿ ಹದವಾಗಿರಲು ಸುಶ್ರಾವ್ಯ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 21

ಹಿಂದಿನ ಸಂಚಿಕೆಯಿಂದ…. ಚಿತ್ರದ ಬೊಂಬೆಗಳ ಹಾಗೆ ಇನ್ನೂ ಎಷ್ಟು ಹೊತ್ತು ಇರುತ್ತಿದ್ದರೋ ಏನೋ, ಆದರೆ ಅಷ್ಟರಲ್ಲಿ ದೈವಯೋಗದಿಂದ ರಾಜ್ಯದ ಪ್ರಧಾನಮಂತ್ರಿ ಚತುರಾನನ ಭಟ್ಟ ಕಾಣಿಸಿಕೊಂಡನು. ಚತುರಾನನ ವರ್ಣಾಶ್ರಮದಲ್ಲಿ ಬ್ರಾಹ್ಮಣ. ಚತುರ; ಸ್ಥಿರಬುದ್ಧಿಯ ವ್ಯಕ್ತಿ. ಆ ಕಾಲದಲ್ಲಿ ಭಾರತಭೂಮಿಯಲ್ಲಿ ಅನೇಕ ಸಣ್ಣಪುಟ್ಟ ರಾಜ್ಯಗಳಲ್ಲಿ ಬಹುಜಾತೀಯ ಹಾಗೂ ಬಹುಧರ್ಮೀಯ ರಾಜರುಗಳು ರಾಜ್ಯವಾಳುತ್ತಿದ್ದರು. ಉತ್ತರದಲ್ಲಿ ಶಕರೂ ಹೂಣರೂ ಇದ್ದರು. ದಕ್ಷಿಣದಲ್ಲಿ ದ್ರಾವಿಡರೂ ಗುರ್ಜರರೂ ಇದ್ದರು. ಮಂತ್ರಿಯ ಕಾರ್ಯನಿರ್ವಹಿಸುತ್ತಿದ್ದವರು ಮಾತ್ರ ಬಡಕಲು ಶರೀರದ, ಯಜ್ಞೋಪವೀತಧಾರಿಗಳಾದ ಬ್ರಾಹ್ಮಣರೇ ಆಗಿದ್ದರೆಂಬುದು ಒಂದು ಆಶ್ಚರ್ಯದ ಸಂಗತಿ. ಪ್ರಧಾನಿ […]Read More

ಬೆಂಕಿಯಲ್ಲಿ ಅರಳಿದ ಪಾರಿಜಾತ

ಬೆಂಕಿಯಲ್ಲಿ ಅರಳಿದ ಪಾರಿಜಾತ ರಾಜೇನಹಳ್ಳಿ ಎಂಬ ಊರಿನಲ್ಲಿ ಗುಣಶೇಖರ ಮತ್ತು ರಾಜಶೇಖರ ಎಂಬ ಇಬ್ಬರು ಸಹೋದರರು ಒಟ್ಟಿಗೇ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಗುಣಶೇಖರನು ಸಣ್ಣ ದಿನಸಿ ಅಂಗಡಿಯನ್ನು ನಡೆಸುತ್ತಿದ್ದನು. ಇವನ ಪತ್ನಿ ಸತ್ಯಾ ಅತ್ಯಂತ ಮೃದು ಸ್ವಭಾವದ ಎಲ್ಲರೊಂದಿಗೂ ಹೊಂದಿಕೊಂಡು ಹೋಗುವ ಗೃಹಿಣಿಯಾಗಿದ್ದಳು. ಗುಣಶೇಖರನಿಗೆ ಪಾರಿಜಾತ ಎಂಬ ಒಬ್ಬಳೇ ಮಗಳಿದ್ದು, ಅತ್ಯಂತ ಚತುರೆ ಮತ್ತು ಓದಿನಲ್ಲೂ ಎಲ್ಲರಿಗಿಂತ ಮುಂದಿದ್ದಳು. ಈಕೆ ಚೆನ್ನಾಗಿ ಓದಿ ಪ್ರತೀ ಬಾರಿಯೂ ತರಗತಿಗೆ ಪ್ರಥಮ ಸ್ಥಾನವನ್ನು ಪಡೆಯುತ್ತಿದ್ದಳು. ರಾಜಶೇಖರನು ರಿಯಲ್ ಎಸ್ಟೇಟ್ ವ್ಯವಹಾರವನ್ನು […]Read More

ಆಮೆಗಳು

ಆಮೆಗಳು ಆಮೆಗಳು ‘ಅನಪ್ಸಿಡಾ’ ಉಪವರ್ಗದ ‘ಕೆಲೋನಿಯಾ’ ಗಣಕ್ಕೆ ಸೇರಿವೆ. ಇವುಗಳಿಗೆ ‘ಟೊರ್ಟಾಯಿಜ್ ‘ ‘ಟರ್ಟಲ್’ ಮತ್ತು ‘ಟೆರಾಪಿನ್ ‘ ಎಂದು ಕರೆಯುವುದುಂಟು ಇವೆಲ್ಲ ಒಂದೇ ಅರ್ಥ ನೀಡಿದರೂ ಆಮೆಗಳು ಆಶ್ರಯಿಸಿರುವ ಸ್ಥಳಗಳ ಮೇಲಿಂದ ಈ ಶಬ್ದಗಳನ್ನು ಬಳಸುವರು. ಭೂ ವಾಸಿಗಳಾದರೆ ಟೊರ್ಟಾಯಿಜ್(tortoise) ಎಂದು,ಸಿಹಿ ನೀರು, ಸಾಗರ ಸಮುದ್ರಗಳಲ್ಲಿದ್ದರೆ ಟರ್ಟಲ್(turtle) ಎಂದುಹಾಗೂ ಅಮೆರಿಕಾದ ಸಿಹಿ ನೀರು ಹಾಗೂ ಜವುಗಿನ ಆಮೆಗಳಿಗೆ ಟೆರಾಪಿನ್(terrapin) ಎಂದು ಕರೆವರು.ಆಮೆಗಳಲ್ಲಿ 300ಕ್ಕೂ ಹೆಚ್ಚು ಪ್ರಬೇದಗಳಿದ್ದು ಸರೀಸೃಪಗಳ ಗುಂಪಿಗೆ ಸೇರುತ್ತವೆ, ಇವು ಸಸ್ಯಹಾರಿ, ಮಾಂಸಾಹಾರಿ ಮಿಶ್ರ […]Read More

ನನ್ನೊಳಗಿನ ಪ್ರೇಮ

ನನ್ನೊಳಗಿನ ಪ್ರೇಮ ಮೌನರಾಗಕ್ಕೆಸಂಗೀತದ ಹಂಗೇಕೆಕಲ್ಪನೆಯ ಕೂಸನ್ನುಕಾಪಾಡುವ ಕಷ್ಟವೇಕೆನನ್ನೊಳಗೆ ಮಾತ್ರವೇಹುಟ್ಟಿದ ಪ್ರೇಮಕ್ಕೆಕಾರಣಗಳ ಕೊಡುವಜಂಜಾಟವೇಕೆ! ಇದು ಏಕಮುಖ ಪ್ರೇಮದಒಲವೋ, ಬಲವೋಅಥವಾ ಸೋಲಿರದಗೆಲುವೂ ಅಲ್ಲದ ಗೆಲುವೋಸ್ವಾಭಿಮಾನ ಬಿಟ್ಟು ಕೊಡದಅಹಂಕಾರದ ಮದವೋಬೆಚ್ಚಗೆ ಕಟ್ಟಿಕೊಂಡ ಅಥವಾಸಿಕ್ಕಿಕೊಂಡ ಬಲೆಯೋ? ಆದರೂ ಕಪ್ಪೆ ಚಿಪ್ಪೊಳಗಿನಮುತ್ತಿನ ಬೆಲೆಯೇ ಬೇರೆಮುತ್ತು ಪಕ್ವವಾಗದೇಚಿಪ್ಪು ತೆರೆದರೆ, ಸುಮ್ಮನೆ ಹೊರೆಪ್ರೇಮ ನಿವೇದಿಸಿದರಷ್ಟೇತೊಡಕು, ತೊಂದರೆಅದು ನಮ್ಮದೇ ಕನಸುಹೇಳದೇ ಸುಮ್ಮನಿದ್ದರೆ! ಸೌಜನ್ಯ ದತ್ತರಾಜRead More

ನೋವು ನಲಿವುಗಳ ಅಸ್ಮಿತೆ “ಚಿರಸ್ಮಿತ”

ನೋವು ನಲಿವುಗಳ ಅಸ್ಮಿತೆ “ಚಿರಸ್ಮಿತ” ನನಗನಿಸಿದ ಹಾಗೇ, ಚಿರಸ್ಮಿತ ಕಾದಂಬರಿಯಲ್ಲಿ ಬರುವ ಸುಹಾಸಿನಿಯ ಮೃದು ಹಾಗೂ ಸರಳ ಸ್ವಭಾವಕ್ಕೆ ಪ್ರೇರಣೆಯೇ ಲೇಖಕರಾದ “ಯತಿರಾಜ್ ವೀರಾಂಬುಧಿ” ಅವರ ವ್ಯಕ್ತಿತ್ವ. ಕೆಲ ದಿನಗಳ ಹಿಂದೆ ಲೇಖಕರನ್ನು ಭೇಟಿಯಾಗಿ ನನ್ನ ನಗುವಿನಲ್ಲಿ ಅವರ ಖುಷಿ ಹುಡುವ ಮಗು ಮನಸ್ಸನ್ನು ಕಂಡು ಬಂದಿದ್ದೆ. ನಲವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಪರಿಪೂರ್ಣ ವ್ಯಕ್ತಿತ್ವದ ಲೇಖಕರೊಬ್ಬರನ್ನು ಭೇಟಿಯಾಗಿ ಹರಟಿಸುವ ಅದೃಷ್ಟ ನನ್ನ ಪೀಳಿಗೆಯ ಎಷ್ಟು ಜನರಿಗೆ ಸಿಗುತ್ತದೆ ಹೇಳಿ?? ಭೇಟಿಯಾಗಿ ಬಂದ ದಿನದಿಂದಲೂ ಓದಿಸಿಕೊಳ್ಳದೆಯೇ ಚಿರಸ್ಮಿತ […]Read More