ನಗರ ಕೇಂದ್ರ ಮಧ್ಯೆ…! ನಗರ ಕೇಂದ್ರ ಮಧ್ಯೆಮೊದಲಿಗೆದೊಡ್ಡ ಮಾರುಕಟ್ಟೆ ಮುಂಜಾನೆ ಎಚ್ಚರದಿಂದಮುಚ್ಚಳ ಮುಚ್ಚುವ ಕತ್ತಲೆವರೆಗೂಇದು ಗಡಿಬಿಡಿ ಕೋಲಾಹಲ ಕಟ್ಟೆ!ಇಲ್ಲಿ ಇರಬೇಕಾದುದೆಲ್ಲ ಇದೆಇರಲೇಬಾರದ ನಿಷಿದ್ಧ ಸಹ!ಹೇಳಿಕೊಳ್ಳಲು ಯಾವುದೂಇಲ್ಲ ಒಪ್ಪ ಓರಣಎಲ್ಲ ಒಡೆದು ಚೆಲ್ಲಾಪಿಲ್ಲಿಹಾಳಾದ ಹಸಿ ಮೊಟ್ಟೆ! ಕೋಕೋ ಕೂಗಿದ್ದೇ ಕೋಳಿದಿನಂಪ್ರತಿ ಯುದ್ಧೋಪಾದಿಹಾಜರು ನೂರಾರುಎಲ್ಲ ಊರಿನ ಎಲ್ಲ ನಮೂನೆ ಜನರುಹೊತ್ತು ಥರಾವರಿ ಸರಕುಮತ್ತು ಆಪ್ತ ಯೋಜನೆಗಳ ಚೂರುಪಾರುತಮ್ಮ ತಮ್ಮ ತುತ್ತಿಗಾಗಿಅವರವರ ಕಾಲು ಮಾತು ಕೇಳುವವರೆಗೆಅಥವ ಕೋಲು ಹಿಡಿವವರೆಗೆಮತ್ತು ಬರುತ್ತಲೇ ಇರುವರುಮತ್ತೆ ಮತ್ತೆ ಹೊಚ್ಚ ಹೊಸಬರುಮುಚ್ಚುವುದಂತೂ ಇಲ್ಲ ಎಂದೆಂದಿಗುಕೇಂದ್ರ ಮಾರುಕಟ್ಟೆ ಒಬ್ಬೊಬ್ಬರಿಗೊಂದೊಂದು […]Read More
ನಾಟಕ : ಮಿ. ಬೋಗೀಸ್ತಂಡ : ರಂಗಾಯಣದ ಹಿರಿಯ ಕಲಾವಿದರು ಮೈಸೂರು.ವಿನ್ಯಾಸ, ನಿರ್ದೇಶನ : ಹೆಚ್.ಕೆ. ದ್ವಾರಕಾನಾಥ್ಅವಧಿ: ೧. ೪೦ ಮೌಲ್ಯ ಅಪಮೌಲ್ಯಗಳ ನಡುವೆ ಮಿಸ್ಟರ್ ಬೋಗೀಸ್! ನಾಟಕದ ಕತೆಯೇ ವಿಭಿನ್ನ, ರಂಗವನ್ನು ದುಡಿಸಿಕೊಳ್ಳಲು ತಕ್ಕುದಾಗಿದೆ. ತನ್ನ ಸ್ವಾರ್ಥಕ್ಕಾಗಿ ಮಾಡುವ ಕೆಲಸಗಳನ್ನು, ಅಗತ್ಯಕ್ಕೆ ತಕ್ಕಂತೆ ರೂಪಾಂತರ ಹೊಂದುವ ತತ್ವಗಳು, ಕಾರಣಗಳು ಮತ್ತು ಸಮರ್ಥನೆಗಳ ಮೂಲಕ, ಅದಕ್ಕೊಂದು ಅನಿವಾರ್ಯತೆಯನ್ನು ಆರೋಪಿಸುವುದು ಮನುಷ್ಯನ ಮೂಲ ಸ್ವಭಾವದಲ್ಲೇ ಇದೆ. ಅದನ್ನು ಇಲ್ಲಿ ಹೇಳಲಾಗಿದೆ. ಹರಾಜು ಚಕ್ರವರ್ತಿ ಎಂಬ ಅನ್ವರ್ಥ ನಾಮವನ್ನು ಸಂಪಾದಿಸಿರುವ […]Read More
ಗಿಡದೊಳಗೆ ಹೂವಿರಲು ಕಂಡು ಆನಂದಪಡುಬಿಡದೆ ಪರಿಮಳ ಸೂಸೆ ಆಘ್ರಾಣಿಸದನುಗಿಡದಿ ಹೂವಿರಲಿ ಬಿಡು, ಕಿತ್ತು ಮುಡಿಯಲು ಬೇಡಬಿಡು ಸ್ವಾರ್ಥ ಭಾವನೆಯ- || ಪ್ರತ್ಯಗಾತ್ಮ || ಎದೆಯ ಬಡಿತವೆ ದೇಹದೆಲ್ಲ ಕ್ರಿಯೆಗಳ ಮೂಲಮದು ಮಕ್ಕಳೇ ಮೂಲ ಮದುವೆ ಮನೆಗೆಲ್ಲಸುದತಿಯರ ಸಂತಸಕೆ ಸಂತಾನವೇ ಮೂಲಮದವೆ ಕೆಡುಕಿನ ಮೂಲ- || ಪ್ರತ್ಯಗಾತ್ಮ || ಕ್ರಿಮಿ-ಕೀಟ-ಪಶು-ಪಕ್ಷಿ ಜೀವರಾಶಿಗಳೆಲ್ಲಸಮಯ ಸಮಯದಿ ಹೆಣ್ಣು ಗಂಡುಗಳು ಕೂಡಿತಮ್ಮ ಸಂತಾನವನು ಬೆಳೆಸಿಕೊಳುವೀ ಅರಿವುಅಮಮ! ಏಂ ದೈವಿಕವೊ !- || ಪ್ರತ್ಯಗಾತ್ಮ || ನೀರು ನೆಲ ಒಂದೆ ಬಗೆ; ಹಣ್ಣುಗಳ ರುಚಿ […]Read More
ಪರಿಚ್ಛೇದ – 7–ಬಿಡುಗಡೆ– ಕಳ್ಳನನ್ನು ಹಿಡಿದ ಉತ್ಸಾಹದಿಂದ ಸುಗೋಪಾಳಿಗೆ ರಾತ್ರಿ ನಿದ್ದೆ ಹತ್ತಲಿಲ್ಲ ಬೆಳಗಾದುದೇ ತಡ ಅವಳು ಅರಮನೆಗೆ ಬಂದಳು. ರಾಜಕುಮಾರಿ ರಟ್ಟಾ ಇನ್ನೂ ಹಾಸಿಗೆ ಬಿಟ್ಟು ಎದ್ದಿರಲಿಲ್ಲ. ಮಲಗುವ ಕೋಣೆಯ ಬಾಗಿಲಲ್ಲಿ ಯವನ ಸ್ತ್ರೀಯರ ಪಹರೆ. ಸುಗೋಪಾ ಆ ಪಹರೆಯವರ ನಿಷೇಧವನ್ನು ಉಪೇಕ್ಷಿಸಿ, ರಾಜಕುಮಾರಿಯ ಶಯನಗೃಹದೊಳಕ್ಕೆ ಪ್ರವೇಶಿಸಿ ‘ಸಖಿ! ಏಳು, ಏಳು. ಕುದುರೆಯ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಎಂದು ಒಂದೇ ಸಮನೆ ಕೂಗಿ ಅವಳನ್ನು ಎಬ್ಬಿಸಿದಳು. ರಾಜಕುಮಾರಿಯ ಕಣ್ಣುಗಳು ತೆರೆದವು. ಅವಳು ನಿದ್ದೆಗಣ್ಣಿನಲ್ಲಿ ‘ಏ ದೆವ್ವ […]Read More
ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಆಕಾಶದಲ್ಲಿ ರಣಕಲಿಯಂತೆ ಹೋರಾಡಿ ಹುತಾತ್ಮನಾದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ. ಪ್ರತೀ ವರ್ಷ ಅಕ್ಟೋಬರ್ 8ನ್ನು ಭಾರತೀಯ ವಾಯುಸೇನಾ ದಿವಸ್ ಎಂಬುದಾಗಿ ಆಚರಿಸಲಾಗುತ್ತದೆ. ಈ ದಿವಸವನ್ನು ಭಾರತೀಯ ವಾಯು ಸೇನೆಯು ದೇಶ ರಕ್ಷಣೆಯ ಮತ್ತು ಯುದ್ಧದ ಸಂದರ್ಭದಲ್ಲಿ ತೋರಿದ ಅಪ್ರತಿಮ ಸಾಹಸ ಮತ್ತು ತ್ಯಾಗದ ಧ್ಯೋತಕವಾಗಿ ಆಚರಿಸಲಾಗುತ್ತದೆ. 1965ರ ಭಾರತ ಪಾಕ್ ಯುದ್ಧದ ಸಮಯದಲ್ಲಿ ದೇಶದ ವಾಯುಸೇನೆಯ ಅತ್ಯಂತ ಹಳೆಯ ಡಕೋಟಾ ಎಕ್ಸ್‍ಪ್ರೆಸ್ ವಿಮಾನದಲ್ಲಿ ಪಾಕಿಸ್ತಾನಕ್ಕೆ ನುಗ್ಗಿ ಅಲ್ಲಿನ ಸೂಪರ್ ಸಾನಿಕ್ […]Read More
ಕೊನೇ ಬೆಂಚಿನ ಗೀಚು…! — 1 — ನಾವಿಬ್ಬರೂ ಒಂದೇ ಕೇರಿ ಕೆರೆಯಲ್ಲಿಕುಂಡಿ ತೊಳೆದುಅವನ ಚಡ್ಡಿ ನಾನುನನ್ನ ಚಡ್ಡಿ ಅವನುಮರೆತೋ ಏನೋ ಎನುವಂತೆಅದಲು ಬದಲುಮೇಲೇರಿಸಿ ಹಿಗ್ಗಿ ಹಿಗ್ಗಿ ಓಡಾಡಿದ್ದನಮ್ಮಿಬ್ಬರ ಆ ಆಪ್ತಎಳೆಯ ದಿನಗಳುನಮ್ಮ ಗುಂಡಿಗೆಗಳ ಗೋಡೆಗಳಲಿಗೀರಿದ್ದಆ ಮುಗ್ಧ ಮೈತ್ರಿಯ ಗೆರೆಗಳುಇಂದಿಗೂ ಉಳಿದಿವೆ ಅಳಿಯದೆ! ಅವನು ಬೆಳೆದು ಪ್ರಬುದ್ಧ ಹೊಸ್ತಿಲುಹತ್ತುವ ಹೊತ್ತಿಗೆನನ್ನ ಪ್ರೇರಣೆಗೆಸುಮ್ಮನೆ ಆರಂಭಿಸಿದ ಬರವಣಿಗೆದಿಢೀರಂತ ಎತ್ತೆತ್ತರ ಎತ್ತಿನಿಲ್ಲಿಸಿಬಿಟ್ಟಿತುಪ್ರಸಿದ್ಧಿಯ ಝಗಮಗ ರಂಗದಮಧ್ಯೆಆಗವನ ಅಹರ್ನಿಶಿ ಸುತ್ತುವರಿದಥರಹಾವರಿ ಮಾಧ್ಯಮಗಳುಮತ್ತು ಮತ್ತೂ ಮೇಲೆತ್ತುವ ಚಪ್ಪಾಳೆದಂಡುಮೆಜಾರಿಟಿ ವರ್ಗ ಎಂಬುದವನ ಠಸ್ಸೆಗುರುತು! ಅಂತೆಯೇಅವನಂತೆಯೇನನ್ನ ಓರಗೆಯಕೆಲಬಲದ ಇನ್ನೂ […]Read More
ಕಗ್ಗ ಮಾಲಿಕೆ – ಕಗ್ಗ ೨೭೮ ಆನೆಗಾರ್ ಇರುವೆಗಾರ್ ಕಾಗೆಗಾರ್ ಕಪ್ಪೆಗಾರ್ |ಕಾಣಿಸುವರನ್ನವನು? ಹಸಿವವರ ಗುರುವು ||ಮಾನವನುಮಂತುದರಶಿಷ್ಯನವನಾ ರಸನೆ |ನಾನಾವಯವಗಳಲಿ – ಮಂಕುತಿಮ್ಮ || ಗಾರ್= ಗೆ, ಯಾರು ಕಾಣಿಸುವರನ್ನವನು = ಕಾಣಿಸುವರು+ಅನ್ನವನು// ಹಸಿವವರ = ಹಸಿವು + ಅವರ//ಮಾನವನುಮಂತುದರಶಿಷ್ಯನವನಾ=ಮಾನವನುಂ+ಅಂತು+ಉದರ+ಶಿಷ್ಯನ್+ಅವನ+ಆ// ನಾನಾವಯವಗಳಲಿ=ನಾನಾ+ಅವಯವಗಳಲಿರಸನೆ = ನಾಲಿಗೆ// ಅವಯವಗಳು = ಅಂಗಾಂಗಗಳು. ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಬಹು ಮುಖ್ಯವಾದ ವಾಸ್ತವಿಕ ವಿಷಯವನ್ನು ಮುಂದಿಡುತ್ತಾರೆ. ಭೂಮಿಯ ಮೇಲಿರುವ ಸಕಲ ಜೀವಜಂತುಗಳಿಗೆ (ಆನೆ, ಇರುವೆ, ಕಾಗೆ, ಕಪ್ಪೆ ಇತ್ಯಾದಿ…) ಆಹಾರವನ್ನು ಯಾರು […]Read More
ಅಲೆಕ್ಸಾಂಡರ್ ಗ್ರಹಾಂ ಬೆಲ್ ಇತ್ತೀಚಿನ ದಿನಗಳಲ್ಲಿ ದೂರವಾಣಿ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಅಲ್ಲವೇ? ಅದು ನಿಸ್ತಂತು (Landline) ಆಗಿರಬಹುದು ಅಥವಾ ಸಂಚಾರಿ ದೂರವಾಣಿ ಆಗಿರಬಹುದು (ಮೊಬೈಲ್ ಫೋನ್) ಆಗಿರಬಹುದು. ಇವು ಇಲ್ಲದ ಜೀವನವನ್ನು ಊಹಿಸಿಕೊಳ್ಳುವುದೇ ಕಷ್ಟ! ಅಲ್ಲದೇ ದೂರವಾಣಿ ಅಥವಾ ಈ ಫೋನ್ ಗಳ ಮೂಲಕ ನಾವು ಸುಮಾರು ದೇಶ ಕಾಲದ ಎಲ್ಲೇ ಮೀರಬಹುದು. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಜನರೊಂದಿಗೆ ಸಂಪರ್ಕ ಸಾಧಿಸಬಹುದು. ದೂರವಾಣಿ ಕ್ಷೇತ್ರದಲ್ಲಿ ಇಷ್ಟೊಂದು ಕ್ರಾಂತಿಗೆ ಕಾರಣರಾದವರು ಒಬ್ಬರು ಇದ್ದಾರೆ. ಅವರೇ […]Read More
ಹಿಂದಿನ ಸಂಚಿಕೆಯಿಂದ…. ಬಹಳ ಹೊತ್ತಿನವರೆಗೂ ಯಾವ ಶಬ್ದವೂ ಇಲ್ಲ. ‘ಬರಿ ಕಾಲ್ಪನಿಕ ಶಬ್ದಕಿವಿಗೆ ಬಿತ್ತು. ಇದು ಕತ್ತಲು ಮಾಡಿದ ಯಕ್ಷಣಿ; ಮೋಸ ಎಂದು ಮನಸ್ಸಿನಲ್ಲಿ ಗುಣಾಕಾರ ಹಾಕುತ್ತಿದ್ದನು. ಅವನ ಸ್ನಾಯುಗಳಿಗೆ ಮತ್ತೆ ಶಕ್ತಿ ಬಂದಿತ್ತು.‘ಇದು ಎಂಥ ಮಾಯೆ! ಅಲೌಕಿಕ ಮಾಯೆ!’‘ನಾನು ಬಂದಿನೀ… ಸೆರೆಯಾಳು…’ಇಲ್ಲ, ಮನುಷ್ಯರ ಕಂಠಧ್ವನಿ- ಮೋಸವಿಲ್ಲ. ಮಾತುಗಳು ಸಂದೇಹಾಸ್ಪದವಾಗಿದ್ದರೂ ಸ್ಪಷ್ಟವಾಗಿವೆ. ಮಾತಾಡಿದ ವ್ಯಕ್ತಿ ಇನ್ನೂ ಹತ್ತಿರ ಬಂದಿರುವ ಹಾಗಿತ್ತು. ಚಿತ್ರಕನು ‘ಬಂದಿನೀ?… ನೀನು ಹೆಂಗಸೇ?’ ಎಂದು ಕೇಳಿದನು.‘ಹೌದು.’ ‘ಈಗ ಸಮಾಧಾನವಾಯಿತು. ನಿನ್ನನ್ನು ಪ್ರೇತವೆಂದು ಭಾವಿಸಿದ್ದೆ’.‘ನೀನು ಯಾರು?’‘ನಾನೂ […]Read More
ನನ್ನ ಮನೆಯಂಗಳದ ತಾರಸಿ ತೋಟದ ಹಸಿರು ಸುಂದರಿಯರು ಮುಂಗಾರು ಮಳೆಯಲ್ಲಿ ಮಿಂದು ಮುಂಜಾವಿನ ಎಳೆ ಬಿಸಿಲಿಗೆ ನಾಚಿದಂತೆ ಕಂಗೊಳಿಸುವಾಗ ಒಮ್ಮೆ ಆ ಇಬ್ಬನಿಯನ್ನು ಕೆನ್ನೆಗೆ ಸಿಡಿಸಿಕೊಳ್ಳಲ್ಲು ಸೊಗಸಾಗಿರುತ್ತದೆ. ಹೀಗೆ ತಾರಸಿ ತೋಟದಲ್ಲಿ ಅರಳಿದ ಬಣ್ಣ ಬಣ್ಣದ ಹೂಗಳನ್ನು ನೋಡುತ್ತಿರುವಾಗ ಒಂದು ಹೂಕುಂಡದಲ್ಲಿ ಗಿಡಕ್ಕೆ ಹಬ್ಬಿದ ಬಳ್ಳಿಯಲ್ಲಿ ಸ್ವಚ್ಛಂದ ಬಿಳಿಯ ಪುಷ್ಪವು ಕಣ್ಮನ ಸೆಳೆಯುತ್ತದೆ. ಎಲೆಗಳಲ್ಲಿ ನಾಚಿ ನಿಂತ ಹೆಣ್ಣಿನಂತೆ ಬಿಳಿಯ ಶಂಖ ಪುಷ್ಪವು ಕಂಡು ಬಂತು. ಅಲಂಕರಿಸಿದ ಹೆಣ್ಣಿಗೆ ದೃಷ್ಟಿ ಬೊಟ್ಟು ಇಟ್ಟಂತೆ ಹೂವಿನ ಎಡಬದಿಯಲ್ಲಿ ನೀಲಿಯ […]Read More