ಕನ್ನಡ ಭಾಷಾ ಅಭ್ಯುದಯಕ್ಕೆ ಯುವ ಜನಾಂಗದ ಪಾತ್ರ

ಕನ್ನಡ ಭಾಷಾ ಅಭ್ಯುದಯಕ್ಕೆ ಯುವ ಜನಾಂಗದ ಪಾತ್ರ ‘ಕನ್ನಡ’ ಪ್ರಪಂಚದ ಅತಿ ಪುರಾತನ ಭಾಷೆ. ಕನ್ನಡ ಬರಹಗಾರರ ಮತ್ತು ಸಾಮಾಜಿಕ ಕ್ರಾಂತಿಕಾರರಿಂದ ಇದು ಶ್ರೀಮಂತವಾಗಿಯೂ ಬೆಳೆದಿದೆ. ಅತ್ಯಂತ ವೈಭವವಯುತ ಹಿನ್ನೆಲೆಯೊಡನೆ, ಆಧುನಿಕ ಕನ್ನಡವೂ ಶ್ರೀಮಂತವಾಗಿಯೇ ಇದೆ. ಅತಿ ಹೆಚ್ಚು ಅಂದರೆ ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆ ಎಂಬ ಹೆಗ್ಗಳಿಕೆಯೂ ಕನ್ನಡಕ್ಕಿದೆ. ಇಂತಹ ಭಾಷೆಗೆ ಇತ್ತೀಚೆಗೆ ಮನ್ನಣೆ ಸಿಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಯಾವುದೇ ಭಾಷೆಯಾದರೂ ಅದರ ಬಳಕೆಯಿಂದ ಮಾತ್ರ ಅದು ಬೆಳೆಯಲು ಸಾಧ್ಯ. ಅದನ್ನು […]Read More

ಕಲ್ಪವೃಕ್ಷದ ನಾಡು ಕರುನಾಡು…

ಕಲ್ಪವೃಕ್ಷದ ನಾಡು ಕರುನಾಡು… ಕಪ್ಪು ಮಣ್ಣಿನ ಕಲ್ಪವೃಕ್ಷದ ನಾಡುಮಲೆನಾಡ ಸೊಬಗಿನ ಶ್ರೀಗಂಧದ ಬೀಡುಹಲವು ಕವಿರತ್ನರು ಇರುವ ಗೂಡುಕೇಳಿ ಆನಂದಿಸಿ ಕನ್ನಡ ನುಡಿಯ ಹಾಡು ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯುಎಂಟು ಜ್ಞಾನಪೀಠ ಪಡೆದ ನಲ್ಮೆಯ ಹಿರಿಮೆಯುಬೇಲೂರು ಹಳೇಬೀಡು ಹಂಪಿಯ ಶಿಲ್ಪಕಲೆಯುವಿವಿಧತೆಯಲಿ ಏಕತೆಯ ಸಂಸ್ಕೃತಿಯ ಪರಂಪರೆಯು ಬಳಸಿದಷ್ಟು ಬೆಳೆಯುವ ಭಾಷೆ ಕನ್ನಡಮಾತನಾಡಿದಷ್ಟು ಮೆರುಗು ಬರುವ ಭಾಷೆ ಕನ್ನಡಬರೆದಷ್ಟು ಭಾವನೆ ಹೆಚ್ಚಾಗುವ ಭಾಷೆ ಕನ್ನಡಓದಲು ಬಾರದವರಿಗೂ ಅರ್ಥವಾಗುವ ಭಾಷೆ ಕನ್ನಡ ಕರುನಾಡಿನ ನೀರು ದೇವರ ತೀರ್ಥದಂತೆಈ ನೆಲದ ಅನ್ನ ಪವಿತ್ರ ಪ್ರಸಾದದಂತೆಕರ್ನಾಟಕದಲಿ […]Read More

ರಮ್ಯ ರಮಣೀಯ ತಾಣ – ಗೋಪಾಲಸ್ವಾಮಿ ಬೆಟ್ಟ

ರಮ್ಯ ರಮಣೀಯ ತಾಣ – ಗೋಪಾಲಸ್ವಾಮಿ ಬೆಟ್ಟ ಧಾರ್ಮಿಕ ಹಾಗೂ ಐತಿಹಾಸಿಕ ಪರಂಪರೆ ಹೊಂದಿರುವ ನಿಸರ್ಗಗಳ ತಾಣ ಹಾಗೂ ದ್ವಾಪರ ಕೃಷ್ಣನ ದೇವಾಲಯವೇ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಲೇ ಬೇಕೆನಿಸುವ ಕರ್ನಾಟಕದ ರಮಣೀಯ ಸ್ಥಳ. ಗರ್ಭಗುಡಿಯ ಬಾಗಿಲಿನ ಮೇಲ್ಭಾಗದಿಂದ ಸತತವಾಗಿ ಹಿಮದನೀರು ಸುರಿಯುತ್ತದೆ, ಅದಕ್ಕಾಗಿಯೇ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಬಂದಿದೆ. ವರ್ಷಪೂರ್ತಿ ಹಿಮಗಳಿಂದಲೇ ಆವರಿಸಿರುವ ಬೆಟ್ಟವು ಮಂಜು ಮುಸುಕಿದ ದೃಶ್ಯಗಳ ಬಿಂಬಿಸುವ ಹಿತವಾದ ವಾತಾವರಣ, ತಂಗಾಳಿಯು ಇಲ್ಲೇ ಹುಟ್ಟಿದ್ದು […]Read More

ಹಣತೆಯ ಜೀವಿ!

ಹಣತೆಯ ಜೀವಿ! ಕತ್ತಲ-ಬೆಳಕ ಮಿಣುಕು! ಕತ್ತಲು ಒಳಗೋ, ಹೊರಗೋ!?ಬೆಳಕು ಒಳಗೋ, ಹೊರಗೋ!? ಕಾಡ ಗಾಢಾಂಧಕಾರದಲ್ಲಿಸಾವಿರಾರು ಮಿಣುಕು ಹುಳುಗಳದ್ದೇದೀಪದ ಮೆರವಣಿಗೆ! ತನ್ನ ಮುಂದಿನ ಕತ್ತಲ ಸೀಳಿಕೊಂಡುಹಾರುವ ಈ ಪುಟ್ಟ ಹುಳುಹಿಂದುಳಿದವರಿಗೆ ಬೆಳಕಾಗಿದೆ! ವಿಜ್ಞಾನಿಗಳು ರೇಡಿಯಂ ಅನ್ನುಕಂಡು ಹಿಡಿಯುವ ಮುನ್ನವೇ…ಸೃಷ್ಟಿಕರ್ತನೇ ಜೀವ-ಜಂತುಗಳಲ್ಲಿಅದನ್ನು ಇಟ್ಟು ಕಳಿಸಿದ್ದಾನೆ! ಹುಲಿ, ಬೆಕ್ಕು, ನಾಯಿ, ನರಿತೋಳಗಳಂತಹ ಜೀವಿಗಳಲ್ಲಿಕಣ್ಣಾಲಿಯಲಿ ದೀಪ… ಕತ್ತಲಲ್ಲಿ ಬದುಕುವವರಿಗೆ ಕಣ್ಣ ಬೆಳಕಾಗಿ,ದಾರಿ ದೀಪವಾಗಿದೆ… ಈ ಜಗವು ಹೀಗಿದ್ದರೂ ಗೀಜಗವುತನ್ನ ಗೂಡಲ್ಲಿ ಬೆಳಕಾಗಿಸಿಕೊಂಡದ್ದುಈ ಮಿಣುಕು ಹುಳುವನ್ನೇ! ಶಕುನಿ ತಾ ತನ್ನ ತಂಗಿ ಗಾಂಧಾರಿಯಕತ್ತಲ ಭಯ […]Read More

ಚಿಕ್ಕಬಳ್ಳಾಪುರದ ಶಿವ ದೇವಾಲಯ – ಈಶಾ ಫೌಂಡೇಶನ್

ಚಿಕ್ಕಬಳ್ಳಾಪುರದ ಶಿವ ದೇವಾಲಯ – ಈಶಾ ಫೌಂಡೇಶನ್ ನಮ್ಮ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿರುವ ಈಶಾ ಫೌಂಡೇಶನ್ ಶಿವ ದೇವಾಲಯ ಒಂದು ಮಹತ್ವದ ಆಧ್ಯಾತ್ಮಿಕ ಮತ್ತು ವಾಸ್ತುಶಿಲ್ಪದ ಹೆಗ್ಗುರುತಾಗಿದ್ದು, ಈ ಪ್ರದೇಶದಾದ್ಯಂತ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ದೇವಾಲಯವು ಪ್ರಸಿದ್ಧ ಯೋಗಿ, ಆಧ್ಯಾತ್ಮಿಕ ಮತ್ತು ಆಧ್ಯಾತ್ಮಿಕ ನಾಯಕ ಸದ್ಗುರು “ಜಗ್ಗಿ ವಾಸುದೇವ್” ಸ್ಥಾಪಿಸಿದ ಈಶಾ ಫೌಂಡೇಶನ್ ನ ಭಾಗವಾಗಿದೆ. ಈ ದೇವಾಲಯವು ಆಂತರಿಕ ಯೋಗಕ್ಷೇಮ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸುವ ಇಶಾ ಪ್ರತಿಷ್ಠಾನದ ತತ್ವಗಳನ್ನು ಸಾಕಾರಗೊಳಿಸುತ್ತದೆ. ವಾಸ್ತುಶಿಲ್ಪದ ಅದ್ಭುತ […]Read More

ಸುರಕ್ಷಾ ಜಾಗೃತಿ – 6

ಸುರಕ್ಷಾ ಜಾಗೃತಿ – 6ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು ಕಳೆದ ಕೆಲವಾರು ಅಂಕಣಗಳಿಂದ ಸುರಕ್ಷಾ ಜಾಗೃತಿಯ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡು ಬಂದಿರುವೆ. ಇನ್ನು ಮುಂದಿನ ಕೆಲವಾರು ಸಂಚಿಕೆಗಳಲ್ಲಿ ಈ ಸುರಕ್ಷೆಯ ತಾಂತ್ರಿಕ ಅಂಶಗಳನ್ನು ತಿಳಿಯಲು ಪ್ರಯತ್ನಿಸೋಣವೇ? ಹಾಗಾದರೆ ಮೊದಲಿಗೆ SAFE ಎಂಬ ಪದದ ಅರ್ಥವನ್ನು ತಿಳಿದುಕೊಳ್ಳೋಣ. SAFE ಇದನ್ನು ನಾನು Staying Accident Free Everywhere ಅಂತ ಹೇಳ ಬಯಸುತ್ತೇನೆ. ಅಂದರೆ ಯಾವುದೇ ಸಂದರ್ಭದಲ್ಲಿಯೂ ಯಾವುದೇ ಜಾಗದಲ್ಲಿರುವಾಗಲೂ ಅಪಘಾತಗಳಿಂದ ಮುಕ್ತ ವಾಗಿರುವುದೇ ನಿಜವಾದ ಸುರಕ್ಷೆ ಅಂತ […]Read More

ಸರಿದ ತೆರೆ

ಸರಿದ ತೆರೆ ಮುಚ್ಚಿಟ್ಟ ಕೊಟ್ಟಡಿಯಲಿವಾಸ ಮಾಡಲುಬಹುದೆಅಂತೆಯೇ ಮನವನ್ನುಬಂಧಿಸಲು ಬಾರದು! ಮನದೊಳಗೆ ತುಂಬಿರುವನೋವು ಸಂಕಟವನ್ನು ,ಕಣ್ಣೆಂಬ ಕಿಟಕಿಯಲಿಒಮ್ಮೆಲೇ ತೂರಿಬಿಡು! ಬಚ್ಚಿಟ್ಟ ನೋವುಗಳೇಹಾವುಗಳಾದೀತು,ವಿಷವ ಹರಿಸುತ್ತ ನಿನಮನವ ಕೊಂದೀತು ! ತೆರೆದ ಕಿಟಕಿಯ ತೆರದಿ,ತೆರೆ ಮನದ ಕಿಟಕಿಯನುಗಾಳಿ, ಬೆಳಕಿನ ತೆರದಿಹೊಸ ಹೊಳವು ಬರಲಿ! ಶ್ರೀವಲ್ಲಿ ಮಂಜುನಾಥRead More

ಕುಟುಂಬ ವ್ಯವಸ್ಥೆಯ ಅಳಿವು ಉಳಿವು

ಕುಟುಂಬ ವ್ಯವಸ್ಥೆಯ ಅಳಿವು ಉಳಿವು ಮನುಷ್ಯರಲ್ಲಿ ಒಂದು ಕುಟುಂಬವು ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿ ವಾಸಿಸುತ್ತಿರುವ ಜನರ ಒಂದು ಗುಂಪು ಎನ್ನಬಹುದು. ಕುಟುಂಬವು ಸಮಾಜ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಒಂದು ಅಂಗವಾಗಿದ್ದು, ಬಹಳ ಸಂದರ್ಭಗಳಲ್ಲಿ ಮಕ್ಕಳು ಜನರ ಜೊತೆಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬವು ಒಂದು ಅಗತ್ಯ ವ್ಯವಸ್ಥೆಯಾಗಿ ನಿಲ್ಲುತ್ತದೆ. ಭಾರತದ ಇತಿಹಾಸ ಮತ್ತು ಇಲ್ಲಿನ ಸಂಸ್ಕೃತಿಯನ್ನು ವಿಮರ್ಶಿಸಿದಾಗ ಕುಟುಂಬ ವ್ಯವಸ್ಥೆಯನ್ನು ಅವಿಭಕ್ತ ಹಾಗೂ ವಿಭಕ್ತ ಕುಟುಂಬ ಎಂದು ವರ್ಗೀಕರಣ ಮಾಡಬಹುದು. ವಿದೇಶಿ ಸಂಸ್ಕೃತಿಯ ಅನುಕರಣೆಯ […]Read More

ಮುಗ್ಧ ಮಾನವ

ಮುಗ್ಧ ಮಾನವ ನಮ್ಮೊಳಗೂ ಇರುವನೊಬ್ಬ ಮಾನವಮರೆತರೆ ಅವನಾಗುವ ದಾನವಸದಾ ಇರುವನು ಜಾಗೃತ ಅವನೀನೇ ನೀನೇ ಕೇಳು ಮಾನವ ಸಕಲ ಜೀವರಾಶಿಗಳಲ್ಲಿ ಮುಖ್ಯ ನೀನೇಜೀವಸಂಕುಲದ ಆಧಾರವೂ ನೀನೇಪ್ರಕೃತಿ ಮಾತೆಯ ಸುಂದರ ಸೃಷ್ಟಿ ನೀನೇಮಾತೆಯ ಮರೆತ ಮೂಢನೂ ನೀನೇ ಮರೆಯದಿರು ನೀ ಅಮೋದ ಭಾವವಾಉಸಿರಾಗಿಸು ನೀ ಇಳೆಯ ಜೀವವಾಹೆಚ್ಚೆಚ್ಚು ಬೆಳಸು ನೀ ಗಿಡಮರವಾಪ್ರಕೃತಿಯೂ ನಮ್ಮೆಲ್ಲರ ನಿಜ ಮಾತೆಯಲ್ಲವಾ… ಮಹೇಶ್ ಸಿ.ಎನ್.Read More

ರತನ್ ಟಾಟಾ ದೂರದೃಷ್ಟಿಯ ನಾಯಕ

ರತನ್ ಟಾಟಾ ದೂರದೃಷ್ಟಿಯ ನಾಯಕ ರತನ್ ಟಾಟಾ, ಭಾರತೀಯ ವ್ಯವಹಾರದಲ್ಲಿ ಅಪ್ರತಿಮ ವ್ಯಕ್ತಿಯಾಗಿದ್ದು, ಭಾರತದ ಅತಿದೊಡ್ಡ ಮತ್ತು ಅತ್ಯಂತ ಗೌರವಾನ್ವಿತ ಸಂಘಟಿತ ಉದ್ಯಮಗಳಲ್ಲಿ ಒಂದಾದ ಟಾಟಾ ಗ್ರೂಪಿನ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷರಾಗಿ ಅವರ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ. 1937ರ ಡಿಸೆಂಬರ್ 28ರಂದು ಗುಜರಾತಿನ ನವಸಾರಿಯಲ್ಲಿ ಜನಿಸಿದ ಟಾಟಾ, ಟಾಟಾ ಸಮೂಹವನ್ನು ಜಾಗತಿಕ ಶಕ್ತಿಯಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ಅವರದು. ರತನ್ ಟಾಟಾ ರವರು ಶ್ರೀಮಂತ ಪರಂಪರೆಯನ್ನು ಹೊಂದಿದ್ದ ಕುಟುಂಬದಲ್ಲಿ ಜನಿಸಿದರು. ಆತ ಟಾಟಾ […]Read More