ಕವಿತೆ ಬೇಕಿತ್ತು! ಬೇಕಿತ್ತು ನಿಮ್ಮದೊಂದೆರಡುಕವಿತೆಗಳು ಸಾಲವಾಗಿಯೋಚಿಸಬೇಡಿ ಹಿಂತಿರುಗಿಸುತ್ತೇನೆ ಪಡೆದೆರಡನ್ನು ನಾಲ್ಕಾಗಿಸಿನಾಲ್ಕೇಕೆ ಆರಾಗಿಸುತ್ತೇನೆಬಡ್ಡಿ ಅಷ್ಟೇ ಏನುಚಕ್ರಬಡ್ಡಿಯನ್ನೂ ಸೇರಿಸಿಕೊಡುತ್ತೇನೆ ಬೇಕಿತ್ತು ನಿಮ್ಮದೊಂದೆರಡುಕವಿತೆಗಳು ಸಾಲವಾಗಿಯೋಚಿಸಿನೋಡಿ ಹಿಂತಿರುಗಿಸುತ್ತೇನೆ ಪದಗಳೊಡನೆ ಆಡುವುದುನನಗೂ ಅಷ್ಟಿಷ್ಟು ತಿಳಿದಿದೆಅದೇ ನೀವು ಮಾಡಿದ ಹಾಗೆಯೇಅಲ್ಲಷ್ಟು ಇಲ್ಲಿಷ್ಟು ಬದಲಾಯಿಸುವುದು ಬೇಕಿತ್ತು ನಿಮ್ಮದೊಂದೆರಡುಕವಿತೆಗಳು ಸಾಲವಾಗಿಒಮ್ಮೆ ಕೊಟ್ಟು ನೋಡಿನನ್ನ ಕೈಚಳಕ ತೋರಿಸುತ್ತೇನೆ ನಿಮ್ಮದೇ ಕವನಗಳಛಂದಸ್ಸು ಬದಲಿಸುತ್ತೇನೆನಗುವಿನ ಅಳುವಿನಅಲಂಕಾರ ಮಾಡುತ್ತೇನೆ ಬೇಕಿತ್ತು ನಿಮ್ಮದೊಂದೆರಡುಕವಿತೆಗಳು ಸಾಲವಾಗಿಯೋಚಿಸಲೇನಿದೆ ಒಮ್ಮೆ ಒಪ್ಪಿಬಿಡಿ ನಿಮ್ಮದೇ ಅಂಕಿತದೊಂದಿಗೆಹೊಸರಾಗ ಹೊಸೆಯುತ್ತೇನೆನಿಮಗರ್ಪಣೆ ಎಂದು ಹೇಳುತ್ತಲೇಎಲ್ಲರನೂ ಯಾಮಾರಿಸುತ್ತೇನೆ ನೀವು ಒಪ್ಪಿ ಅಥವಾ ಬಿಡಿಸೌಜನ್ಯಕ್ಕಾಗಿ ಕೇಳಿದ್ದೇನೆನಿಮ್ಮ ಮೌನವೇ ಸಮ್ಮತಿಯೆಂದುನಾನಾಗಲೇ […]Read More
— ತಪ್ಪಾಯಿತು ಕ್ಷಮಿಸಿಬಿಡಿ — ಮಕ್ಕಳು ಅಜ್ಜಿ-ತಾತನ ಮನೆಗೆ ಬೇಸಿಗೆ ರಜಕ್ಕೆ ಹೋಗಿದ್ದಾರೆ. ಅವರನ್ನು ಕರೆತರಲು ಪಾರು ಎಷ್ಟೋ ದಿವಸಗಳ ಬಳಿಕ ಕೆಂಪು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಳೆ. ಬಸ್ಸಿನಲ್ಲಿ ಕುಳಿತ ಪಾರುವಿನ ಕಣ್ಣಿಗೆ, ಸೀಟುಗಳ ಒರಗು ಹಾಸಿನ ಮೇಲೆ, ಹಾಯ್ ನಾನು ಸ್ನೇಹ, ಕಾಲ್ ಮೀ ವೆನ್ ಯುವರ್ ಫ್ರೀ ಎಂಬ ಬರವಣಿಗೆ ಮತ್ತು ನಂಬರ್ ಕಾಣಿಸಿತು. ಅದನ್ನು ಕಂಡ ಪಾರು ಮುಗುಳ್ನಕ್ಕಳು. ಪಾರು ಹೈಸ್ಕೂಲಿಗೆ ಹೋಗುತ್ತಿದ್ದ ದಿನಗಳು…. ಪಾರು ಸ್ಕೂಲಿಗೆ ತನ್ನ ಊರಿನಿಂದ ಪಕ್ಕದೂರಿಗೆ ಹೋಗಬೇಕಿತ್ತು. ದಿನಾಲು […]Read More
–ಕಚ್ಚಿ ಕೊಟ್ಟ ಮಾಂಸ– ಅಂದು ಕರ್ನಲ್ ಅಬ್ಷೀರ್ ಮನೆಯಿಂದ ಬಂದು, ನನ್ನ ಮಡದಿ, ಕಮಲಳಿಗೆ ವಿಷಯ ತಿಳಿಸಿದ ಮೇಲೆ ಸಹ ನನಗೇಕೋ ಮನಸ್ಸಿನಲ್ಲಿ ಒಂದು ರೀತಿಯ ಕಲ್ಲೋಲ. ಸದ್ಯ ಶಿಲ್ಲಿಂಗ್ ಮೌಲ್ಯ ಅತೀವವಾಗಿ ಕುಸಿದಿಲ್ಲ. ಅಲ್ಲದೆ, ನನಗೆ ಬರುವ ಸಂಬಳದ ಅರ್ಧದ ಜೊತೆಗೆ, ಅಬ್ದುಲ್ ಕಾದಿರ್ ಫಾರ್ಮಸಿಯಲ್ಲಿ ಕನ್ಸಲ್ಟೇಶನ್ನಿನಿಂದ ಬರುತ್ತಿದ್ದ ಹಣವನ್ನೂ ಸೇರಿಸಿಯೇ ಭಾರತಕ್ಕೆ ಡಾಲರ್ ಆಗಿ ಪರಿವರ್ತಿಸಿ ಕಳಿಸಲು ಸಾಧ್ಯ ಇತ್ತು. ಹಾಗಂತ ಸೆಂಟ್ರಲ್ ಬ್ಯಾಂಕಿನಲ್ಲಿದ್ದ ನನ್ನ ಆಪ್ತರೊಬ್ಬರು ಆಶ್ವಾಸನೆ ಕೊಟ್ಟಿದ್ದಲ್ಲದೆ, ಅಬ್ದುಲ್ ಕಾದಿರ್ ಸಹ […]Read More
ಹೂವಾದವು ಇಬ್ಬರ ನಡುವೆಮುನಿಸಿತ್ತುಪರಸ್ಪರ ಅರ್ಥಮಾಡಿಕೊಂಡೆವು!ನಮ್ಮ ನಮ್ಮ ತಪ್ಪುಗಳನ್ನುತಿದ್ದಿಕೊಂಡೆವುಜೀವನ ಹೂವಾಯಿತು!! ಜೋಡಿ ಜೀವ ಒಲಿದ ಜೀವಜೊತೆಗಿರಬೇಕುಸುಮಧುರವಾದ ಬದುಕಿಗೆ!ಅವಕಾಶವಿರಬೇಕುಸ್ವಚ್ಛಂದ ಪ್ರೀತಿಗೆ!!ಅರ್ಥೈಸಿಕೊಂಡುಬದುಕುವ ಜೋಡಿಜೀವಗಳಾಗಿರಬೇಕು!!! ಸುಂದರ ಲೋಕ ದೂರದಲ್ಲಿದೆಸುಂದರ ಲೋಕಅಲ್ಲಿ ನೀನು – ನಾನುಬರೀ ಆಟ ಕೂಟ!ನನಗೆ ನೀನುನಿನಗೆ ನಾನುಜೀವನ ಸಿಹಿ ಜೇನು!! ಆಡುತಿರಲು ನೀನು ನಾನಾಗಿನಾನು ನೀನಾಗಿಜೋಡಿ ಮೀನಾಗಿಆಡುತಿರಲುಹೊತ್ತು ಹೋದದ್ದೇತಿಳಿಯಲಿಲ್ಲ!ನಿನ್ನ ಸ್ನೇಹವೇಅಂತಹುದುಎಲ್ಲಾ ಮರೆಸುವಂತಹದು!! ಡಾII ಪರಮೇಶ್ವರಪ್ಪ ಕುದರಿಚಿತ್ರದುರ್ಗRead More
ಒಂದು ಕಾಲದಲ್ಲಿ ಗುಬ್ಬಿಗಳಿಲ್ಲದ ಮನೆಗಳನ್ನು ಊಹಿಸಲು ಸಾಧ್ಯವಿತ್ತೇ? ಮನೆ ಸದಸ್ಯರಂತೆ ಹಾಗು ನೆಂಟರ ಹಾಗೆ ಎಲ್ಲರ ಮನೆಗಳಲ್ಲಿ ಹೋಗಿ ಬಂದು ಮಾಡುತ್ತಿದ್ದವು. ಊರಲ್ಲಿನ ನಮ್ಮ ಅಜ್ಜಿಯ ಮನೆಯ ಪಡಸಾಲೆಯ ತುಂಬ ಹಾಗಾಗ ನಾನಾ ತರಹದ ಕಾಳುಗಳು, ಅಕ್ಕಿ ನುಚ್ಚು ಹಾಗೂ ಒಮ್ಮೊಮ್ಮೆ ಗೋದಿ ಕಾಳುಗಳನ್ನು ಒಣಗಲು ಹಾಕುತಿದ್ದಾಗ ಈ ಗುಬ್ಬಿಗಳು ತಮ್ಮ ಸೈನ್ಯದ ಸಮೇತ ದಾಳಿ ಇಡುತಿದ್ದವು. ಚಿಇಂಕ್-ಚಿಇಂಕ್ ಎಂದು ಎಡೆಬಿಡದೆ ಸದ್ದು ಮಾಡಿ ಕಾಳುಗಳನ್ನು ಹಾರಿಸಿಕೊಂಡೋಗುತಿದ್ದವು. ಅದೇನು ಸದ್ದು ಅವುಗಳದ್ದು, ಅಬ್ಬಬಾ! ಆದರು ಇವುಗಳ ಸದ್ದು […]Read More
ಕವಿ ಕಲಾವಿದ : ಸಿದ್ದಾಪುರ ಶಿವಕುಮಾರ್ಬಿಡುಗಡೆ : ಕಗ್ಗೆರೆ ಪ್ರಕಾಶನ ಪ್ರಕಾಶ್ ರವರ ಕಗ್ಗೆರೆ ಪ್ರಕಾಶನಕ್ಕೆ 20 ವರ್ಷ ತುಂಬಿದ ಸವಿನೆನಪಿನಲ್ಲಿ ಕವಿ ಹಾಗು ಕಲಾವಿದ ಸಿದ್ದಾಪುರ ಶಿವಕುಮಾರ್ ರವರ “ಭಾವ ರೇಖೆಗಳ ನಡುವೆ” ಹನಿಗವಿತೆಗಳ ಸಂಕಲನವು ಮಾರ್ಚ್ 19 ರ ಶನಿವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಚಾಮರಾಜಪೇಟೆಯ ಸಭಾಂಗಣದಲ್ಲಿ ಬಿಡುಗಡೆಯಾಯಿತು. ಕವಿ ಹಾಗು ಶಿಕ್ಷಕರಾದ ಡಾII ಪರಮೇಶ್ವರಪ್ಪ ಕುದರಿ ಯವರ ನಿರೂಪಣೆಯಲ್ಲಿ ಹಾಗು ಶ್ರೀ ಡಾII ಸಂತೋಷ್ ಸು ಹಾನಗಲ್ (ಕನ್ನಡ […]Read More
–ಮದಿರಾ ಭವನ– ಅರಮನೆಯಿಂದ ಹೊರಬಿದ್ದು ತೋರಣದ ಬಾಗಿಲ ಬಳಿ ಬಂದ ಸುಗೋಪಾ ನೋಡುತ್ತಾಳೆ ಬಾಗಿಲು ಮುಚ್ಚಿದೆ. ಅದು ದಿನ ನಿತ್ಯದ ವ್ಯಾಪಾರ ಇದರಿಂದ ಸುಗೋಪಾಳಿಗೆ ಏನೂ ತೊಂದರೆಯಿಲ್ಲ. ಅವಳು ಪ್ರತೀಹಾರಿಗೆ ಬಾಗಿಲು ತೆರೆಯುವಂತೆ ಹೇಳಿದಳು. ಏಕೋ ಏನೋ ಪ್ರತೀಹಾರಿಗೆ ಸ್ವಲ್ಪ ತಮಾಷೆ ಮಾಡಬೇಕೆಂದು ಅನ್ನಿಸಿತು. ಅವನು ಎರಡು ಭಾಗವಾಗಿ ಕವಲೊಡೆದಿದ್ದ ಗಡ್ಡವನ್ನು ನೀವಿಕೊಳ್ಳುತ್ತ ಶೃಂಗಾರಚೇಷ್ಟೆ ಮಾಡಲು ಪ್ರಾರಂಭಿಸಿದನು. ಅದೇ ರೀತಿ ಸುಗೋಪಾ ಕೂಡ ಉತ್ತರ ಕೊಡುತ್ತಿದ್ದಳು. ಆಗಿನ ಕಾಲದಲ್ಲಿ ಶೃಂಗಾರ ರಸವು ಗೋರಕ್ತ, ಬ್ರಾಹ್ಮಣ ರಕ್ತದ ಹಾಗೆ […]Read More
ಸಾವಧಾನದಿ ಕುಳಿತು ಉಣ್ಣುವರ ನಾ ಕಾಣೆಯಾವುದೋ ಧಾವಂತ ಯಾವುದೋ ಚಿಂತೆಯಾವ ಪುರುಷಾರ್ಥಕ್ಕೆ ಈ ಪರಿಯ ದುಡಿಮೆ!ಯಾವ ಕಾಲಕೆ ಬಿಡುವು_ || ಪ್ರತ್ಯಗಾತ್ಮ || ಎರಡು ಕೈಗಳ ಬಳಸಿ ಕೋತಿಗಳು ಮುಕ್ಕುವುವುಸರಸರನೆ ಹಕ್ಕಿಗಳು ಕುಕ್ಕಿ ತಿನ್ನುವುವುಗುರುಗುಟ್ಟಿ ಅತ್ತಿತ್ತ ನೋಡಿ ತಿಂಬುದು ನಾಯಿನರನಿದಕೆ ಹೊರತೇನು? || ಪ್ರತ್ಯಗಾತ್ಮ || ಹಕ್ಕಿಗಳು ತಮ್ಮವರನೊಂದು ಚಣವಗಲಿರವುಅಕ್ಕರೆಯೊಳೊಂದಾಗಿ ಒಲವ ತೋರುವುವುರೊಕ್ಕ ಸಂಪಾದನೆಗೆ ನರನು ಅಲೆಯುತ ಮಡದಿ-ಮಕ್ಕಳನು ಅಗಲುವನು- || ಪ್ರತ್ಯಗಾತ್ಮ || ಇರುಳಿನಲಿ ವಿಶ್ರಮಿಸಿ ಪ್ರಾಣಿ ಪಕ್ಷಿಗಳೆಲ್ಲಇರುವನಿತು ಕಾಲವನು ಸುಖಿಸಿ ಬಾಳುವುವುಇರುಳು ಹಗಲೆನ್ನದೆಯೆ ದುಡಿದು […]Read More
ಲೇಖಕರು: ಅನಂತ್ ಕುಣಿಗಲ್ಮುದ್ರಣ: ಅವ್ವ ಪುಸ್ತಕಾಲಯ ಬೇಟೆ – ಬೇಟೆಗಾರ – ಕಾನನ – ಹಳ್ಳಿಯ ವ್ಯವಸ್ಥೆ- ಹಾದರ – ಶೋಷಣೆ – ನಂಬಿಕೆ. ಇವಿಷ್ಟು ರೌದ್ರಾವರಣಂ ಕೃತಿಯ ಕುರಿತು ಒಂದು ಸಾಲಿನ ಮಾತು. ಲೇಖಕರ ಪರಿಚಯ: ತುಮುಕೂರು ಜಿಲ್ಲೆ ಕುಣಿಗಲ್ ತಾಲೂಕು ಕೆಂಚನಹಳ್ಳಿ ಗ್ರಾಮದವರಾದ ಶ್ರೀ ಅನಂತ್ ಕುಣಿಗಲ್ ತಮ್ಮ ಸಾಹಿತ್ಯ ಚಟುವಟಿಕೆಗಳಿಗೆ ಹೆಸರುವಾಸಿ. ಸ್ವತಃ ಯುವಬರಹಗಾರರಾದ ಇವರು ತಮ್ಮ ಅನೇಕ ಸಮವಯಸ್ಕರನ್ನು ಹಾಗು ಅನೇಕ ಬರಹಗಾರರನ್ನು ಉತ್ತೇಜಿಸಲು ಅವ್ವ ಪುಸ್ತಕಾಲಯದ ಉದಯಕ್ಕೆ ಕಾರಣರಾಗಿರುತ್ತಾರೆ. ಸದಾ […]Read More
ನಿಜವಾದ ಸಂಪತ್ತು ನೀ ನನ್ನವಳು / ನನ್ನವನು…..ಜಗದ ಸಾವಿರ ಜನ ಎದುರಾದರೂ ಕೈಬಿಡೆನುಎನ್ನುವ ಒಂದು ಜೀವ……ಅದು ಯಾರೇ ಆಗಿರಲಿ…ಅದೇ ನಿಜವಾದ ಸಂಪತ್ತು. ಒಂದು ಸಣ್ಣ ಕಾಳಜಿ..ತುಸು ಪ್ರೀತಿ,ಕಿಂಚಿತ್ತು ಅಕ್ಕರೆ…ಅಷ್ಟೇ ಸಾಕು…!! ನಮ್ಮ ಯಾವುದೇ ಭಾರ ಅವರು ಹೊರಬೇಕಿಲ್ಲ…ಹಿತವಾದ ಎರಡು ಮಾತು..ಎಲ್ಲಕ್ಕೂ ಮಿಗಿಲು..ಅಂತಹ ಒಬ್ಬರು ಜೊತೆಗಿದ್ದರೆ ಇರದು ದಿಗಿಲು… ಸುಕೃತಿ ಕಂದRead More