ತಿ. ನರಸೀಪುರದ ಕುಂಭಮೇಳ – 2025 ಪ್ರಯಾಗ್ ರಾಜ್ ಗೆ ಪ್ರಯಾಣ ಬೆಳೆಸಿ ಪುಣ್ಯ ಸ್ನಾನ ಮಾಡುವ ಬಗ್ಗೆ ಇದೀಗ ಎಲ್ಲೆಲ್ಲೂ ಚರ್ಚೆ. ಇದೊಂದು ಸನಾತನ ಧರ್ಮದ ಅತಿ ದೊಡ್ಡ ಸಾಮೂಹಿಕ ತೀರ್ಥಯಾತ್ರೆ ಎಂದರೆ ತಪ್ಪಾಗಲಾರದು. ಇಲ್ಲಿನ ಪುಣ್ಯ ಸ್ನಾನದಿಂದ ಜೀವನದ ಪಾಪ ಕಳೆದು, ಮುಕ್ತಿ ಸಿಗುವುದೆಂದು ಭಕ್ತರ ನಂಬಿಕೆ. ಅದಕ್ಕೆಂದೇ ವಿಶ್ವದಲ್ಲಿನ ಎಲ್ಲಾ ಭಕ್ತರು ಒಂದೆಡೆ ಸೇರುವುದು. ಆದರೆ ಅಲ್ಲಿಗೆ ಹೋಗಲಾರದೇ ನಿರಾಸೆಗೊಂಡಿದ್ದರೆ ನಮ್ಮ ಮೈಸೂರು ಜಿಲ್ಲೆಯ ತಿ. ನರಸೀಪುರ ದಲ್ಲಿ ಫೆಬ್ರುವರಿ 10 ರಿಂದ […]
ಪುಸ್ತಕ ಬಿಡುಗಡೆ ಹಾಗು ಪುಸ್ತಕ ಮಳಿಗೆ ಪ್ರಾರಂಭೋತ್ಸವ ಪುಸ್ತಕ ಸಂಸ್ಕೃತಿ ಎಷ್ಟು ವ್ಯಾಪಕವಾಗಿ ಬೆಳೆಯುವುದೋ ಅಷ್ಟು ಮಾನವ ಸಂಸ್ಕೃತಿ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ಆಶಾ ರಘು ಅವರು ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ನಟ, ರಂಗ ನಿರ್ದೇಶಕ ಶ್ರೀನಿವಾಸ ಪ್ರಭು ಅವರು ಉಪಾಸನ ಬುಕ್ಸ್ ನ ಆರಂಭೋತ್ಸವದಲ್ಲಿ ಪಾಲ್ಗೊಂಡು ಅಭಿಪ್ರಾಯಪಟ್ಟರು. ದಿನಾಂಕ 07.02.2025, ಶುಕ್ರವಾರದಂದು ಆಶಾರಘು ಅವರು ಆರಂಭಿಸಿರುವ ಪುಸ್ತಕ ಮಳಿಗೆ “ಉಪಾಸನ ಬುಕ್ಸ್” ನ ಆರಂಭೋತ್ಸವವಿತ್ತು. ಇದೇ ಸಂದರ್ಭದಲ್ಲಿ ಆಶಾ ರಘು ಅವರ ಎರಡು […]Read More
ಮೈಸೂರು ಪಾಕ್ – ದಕ್ಷಿಣ ಭಾರತದ ಜಗತ್ಪ್ರಸಿದ್ಧ ಸಿಹಿ ತಿನಿಸು ಮೈಸೂರು ಪಾಕ್ ಎಂಬುದು ಕರ್ನಾಟಕದ ಮೈಸೂರು ನಗರದ ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಯಾಗಿದೆ. ಸಮೃದ್ಧವಾದ, ಬಾಯಿಯಲ್ಲಿ ಕರಗುವ ರಚನೆ ಮತ್ತು ಅವನತಿ ಹೊಂದುತ್ತಿರುವ ರುಚಿಗೆ ಹೆಸರುವಾಸಿಯಾದ ಈ ಮಿಠಾಯಿಯು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಸಿಹಿ ಉತ್ಸಾಹಿಗಳ ನಡುವೆ ಅಚ್ಚುಮೆಚ್ಚಿನ ಸಿಹಿತಿಂಡಿಯಾಗಿದೆ. ಮೂಲ ಹೆಸರು ಹೇಗೆ ಬಂತು ಮೈಸೂರು ಪಾಕಿನ ಮೂಲವು 19ನೇ ಶತಮಾನದಲ್ಲಿ ಮೈಸೂರು ಅರಮನೆಯ ಅಡಿಗೆಮನೆಯಲ್ಲಿ ಹುಟ್ಟಿಕೊಂಡಿತು. ದಂತಕಥೆಯ ಪ್ರಕಾರ, ಈ ಖಾದ್ಯವನ್ನು ಅಂದಿನ ಮೈಸೂರು […]Read More
ಕನ್ನಡ ಸಾಹಿತ್ಯ ಸಮ್ಮೇಳನ – 87 ಮಂಡ್ಯ ಕನ್ನಡ ಬರೀ ಒಂದು ಭಾಷೆಯಲ್ಲ. ಅದೊಂದು ಸಂಸ್ಕಾರ ಮತ್ತು ಸಂಸ್ಕೃತಿ. ಎಷ್ಟೇ ಸಂಖ್ಯೆಯಲ್ಲಿ ಬೇರೆ ಬೇರೆ ಭಾಷೆಗಳಿದ್ದರೂ, ಅಪ್ಪಟ ಕನ್ನಡಿಗರಿಗೆ ಕನ್ನಡವನ್ನ ದಿನ ನಿತ್ಯ ಬಳಸುವವರಿಗೆ ದಿನವೂ ಹಬ್ಬವೇ. ಇದೀಗ ಎಲ್ಲೆಡೆ ಕನ್ನಡ ಹಬ್ಬದ್ದೇ ಮಾತು. ಅಖಿಲ ಭಾರತ 87 ನೇ ಕನ್ನಡ ಸಮ್ಮೇಳನವು ನಮ್ಮೆಲ್ಲರ ಹೆಮ್ಮೆಯ ಸಕ್ಕರೆ ನಾಡು ಮಂಡ್ಯದಲ್ಲಿ ಡಿಸೆಂಬರ್ 20, 21,ಹಾಗೂ 22 ರಂದು ನೆಡೆಯುತ್ತಿದೆ. ಮಂಡ್ಯದ ಪ್ರಮುಖ ಬೀದಿಯಲ್ಲಿ ಕೆಂಪೇಗೌಡರ ಪ್ರತಿಮೆ ದೀಪಾಲಂಕಾರಗಳಿಂದ […]Read More
ವಿಭಿನ್ನ ಕರಕುಶಲ ಕಲಾವಿದ ಜಗದೀಶ್ ಭಾವಿಕಟ್ಟಿ ಜನಪದ ಕರಕುಶಲ ಕಲೆಗಳು ತಲೆತಲಾಂತರಗಳಿಂದ ನಡೆದುಕೊಂಡು ಬಂದಿದ್ದು, ಇವುಗಳನ್ನು ಪ್ರಯೋಜನ ಮೂಲ ಕಲೆಗಳು ಮತ್ತು ಆನಂದ ಮೂಲ ಕಲೆಗಳೆಂದು ವಿಂಗಡಿಸಲಾಗಿದೆ. ಕರಕುಶಲ ಕಲೆಗಳು ಪ್ರಯೋಜನ ಮೂಲ ಕಲೆ ಆಗಿದ್ದು, ದುಡಿಮೆಗಾಗಿ ಮತ್ತು ಆದಾಯದ ಉದ್ದೇಶದಿಂದ ಈ ಕಲೆಗಳನ್ನು ಬಳಸುತ್ತಾರೆ. ಇವು ಜೀವನೋಪಾಯಕ್ಕೆ ಆಧಾರವಾಗಿವೆ ಆದರೆ, ಆನಂದ ಮೂಲ ಕಲೆಗಳು ದುಡಿಮೆಯ ನಂತರದಲ್ಲಿ ವಿನೋದದ ಉದ್ದೇಶಕ್ಕಾಗಿ ನಿರ್ವಹಿಸಲಾಗುತ್ತದೆ. ಕರಕುಶಲ ಕಲೆಗಳು ಇಂದು ಪೂರ್ತಿ ಅವಸಾನದ ಹಂತದಲ್ಲಿ ಇದ್ದು, ಇದಕ್ಕೆ ಪುನಶ್ಚೇತನ ನೀಡುವ […]Read More
ಅಳಿವಿಲ್ಲದ ಕನ್ನಡ ಒಂದು ಭಾಷೆಯನ್ನು ಮಾತನಾಡಲು ಕಲಿತರೆ ಸಾಕು, ಪ್ರೀತಿಸಿದರೆ ಸಾಕು, ಅದರ ಬಗ್ಗೆ ತಿಳಿಯುವ, ಕಲಿಯುವ, ಬೆಳೆಸುವ ಹಂಬಲ ತಾನಾಗಿಯೇ ಮೊಳಕೆಯೊಡೆಯುತ್ತದೆ. ಕನ್ನಡಕ್ಕೆ ಬೇಕಾಗಿರುವುದೂ ಅದೇ ಪ್ರೀತಿಸುವ ಜನತೆ. ಪರಭಾಷಾ ವ್ಯಾಮೋಹ ಇರಬಾರದೆಂದಲ್ಲ, ಪ್ರಥಮ ಆದ್ಯತೆ ಮಾತೃಭಾಷೆ ಆಗಬೇಕು. ತಾನು ಜನ್ಮವೆತ್ತಿದ ನಾಡಿಗೆ ಒಬ್ಬ ಸಾಹಿತಿ, ಕಲಾವಿದ, ಶ್ರೀಸಾಮಾನ್ಯ ಕೂಡ ಸಲ್ಲಿಸಬೇಕಾದ ಸೇವೆಯುಂಟು, ಅದೇ ತಾಯ್ನುಡಿಯ, ನೆಲದ ಭಾಷೆಯ ಸೇವೆ ಅದು ನಮ್ಮದೇ ಮನೆಯಲ್ಲಿ, ಪರಿಸರದಲ್ಲಿ ಕನ್ನಡದಲ್ಲಿ ವ್ಯವಹರಿಸುವುದರಿಂದ ಆರಂಭಗೊಂಡರೆ ಸಾಕು, ಕನ್ನಡ ಸೇವೆಗೆ ಕಂಕಣ […]Read More
ವೀರಲೋಕ ಪುಸ್ತಕ ಸಂತೆ ‘ಒಬ್ಬ ಒಳ್ಳೆಯ ಓದುಗ ಮಾತ್ರ ಒಳ್ಳೆಯ ಬರಹಗಾರ’ ಆಗಲು ಸಾಧ್ಯ. ಹೇಗೆ ಒಬ್ಬ ಶಿಕ್ಷಕ, ಹಾಗೂ ಒಂದು ಪುಸ್ತಕ, ಮಗುವಿನ ಜೀವನದಲ್ಲಿ ಪ್ರಮುಖ ಪಾತ್ರವೋ ಹಾಗೆಯೇ ಪ್ರತಿಯೊಬ್ಬರಿಗೂ ಜೀವನದಲ್ಲಿ ಮಾರ್ಗದರ್ಶನದ ಅಗತ್ಯವಿದೆ. ಅದು ಒಳ್ಳೆಯ ಪುಸ್ತಕ ಓದುವುದರಿಂದ ಮಾತ್ರ ಸಾಧ್ಯ. ಇಂದಿನ ಜನತೆ ಒಳ್ಳೆಯ ಪುಸ್ತಕಗಳನ್ನು ಓದುವ ಅಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಕಾರಣ ಇಷ್ಟೇ, ಕೈಯಲ್ಲೇ ಸದಾ ಕಾಲ ರಾರಾಜಿಸುವ ಮೊಬೈಲ್, ಅದರಲ್ಲಿ ಇಡೀ ಪ್ರಪಂಚವನ್ನೇ ಕಾಣುವ ನಾವು ಯಾವುದೇ ಪುಸ್ತಕ ಓದುವುದು ಅಥವಾ […]Read More
ಕದ್ರಿ ಕಂಬಳ ಕದ್ರಿ ಕಂಬಳ ಅಥವಾ ಕದ್ರಿ ‘ಮಂಜುನಾಥ ದೇವರ ಕಂಬಳ’ ಎಂದರೆ ಇತಿಹಾಸ ಪ್ರಸಿದ್ಧವಾದುದು. ಕದ್ರಿಕಂಬಳವನ್ನು ‘ ಅರಸು ಕಂಬಳ’ ಎಂದರೆ ಮುನ್ನೂರು ವರುಷಗಳ ಹಿಂದೆ ಮಂಗಳೂರಿನ ಕುಲಶೇಖರದ ಆಳುಪ ರಾಜರು ಪೋಷಿಸಿದ ಕಾರಣ ಈ ಹೆಸರು ಬಂದಿತೆಂದೂ ಹೇಳಲಾಗುತ್ತದೆ. ಕಂಬಳ ನಾನು ಇಂದು ನನ್ನ ಹೆಸರಿನ ಜೊತೆಗೆ ಸೇರಿರುವ ಕದ್ರಿಕಂಬಳ ದ ಬಗ್ಗೆ ಅಂದರೆ ಕರಾವಳಿಯ ಜಾನಪದದ ಹೆಮ್ಮೆಯ ಕ್ರೀಡೆಯೆಂದು ಹೇಳಬಹುದಾದ ‘ ಕಂಬಳ’ ದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲು ಇಚ್ಚಿಸುತ್ತೇನೆ. […]Read More
ಬಹುಮುಖ ಪ್ರತಿಭೆಯ ಖನಿ ಶೋಭಿತಾ ತೀರ್ಥಹಳ್ಳಿ ಪ್ರತಿಭೆಯು ಎಲ್ಲರಲ್ಲೂ ಇರುತ್ತದೆ. ಆದರೆ ಆ ಪ್ರತಿಭೆಯನ್ನು ಒರೆಗೆ ಹಚ್ಚಿ ಅದನ್ನು ತಿದ್ದಿ ತೀಡಿ ಪ್ರದರ್ಶನಕ್ಕೆ ಇಡುವವರು ಕೆಲವೇ ಮಂದಿ ಮಾತ್ರ. ಹೆಚ್ಚಿನ ಪ್ರತಿಭೆಗಳು ಕೇವಲ ಒಂದೆರಡು ಕಲೆಗಳಿಗಷ್ಟೇ ಸೀಮಿತವಾಗಿರುತ್ತಾರೆ. ಆದರೆ ಇಲ್ಲೊಬ್ಬ ಹುಡುಗಿ ವೈವಿಧ್ಯಮಯವಾದ ಪ್ರತಿಭೆಗಳನ್ನು ಹೊಂದಿದ್ದಾಳೆ, ಆಕೆಯ ಹೆಸರು ಶೋಭಿತಾ ತೀರ್ಥಹಳ್ಳಿ. ಈಕೆ ಬರೋಬ್ಬರಿ ಹದಿನೈದು ಕಲೆಗಳನ್ನು ತನ್ನೊಳಗೆ ಕರಗತ ಮಾಡಿಕೊಂಡಿದ್ದಾಳೆ ಎಂದರೆ ನಂಬಲೇಬೇಕು. ಈಕೆಯು ಮೂಲತಃ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬೆಜ್ಜವಳ್ಳಿಯವರು. ಈಕೆಯ ತಂದೆ […]Read More
ಕನ್ನಡ ಭಾಷಾ ಅಭ್ಯುದಯಕ್ಕೆ ಯುವ ಜನಾಂಗದ ಪಾತ್ರ ‘ಕನ್ನಡ’ ಪ್ರಪಂಚದ ಅತಿ ಪುರಾತನ ಭಾಷೆ. ಕನ್ನಡ ಬರಹಗಾರರ ಮತ್ತು ಸಾಮಾಜಿಕ ಕ್ರಾಂತಿಕಾರರಿಂದ ಇದು ಶ್ರೀಮಂತವಾಗಿಯೂ ಬೆಳೆದಿದೆ. ಅತ್ಯಂತ ವೈಭವವಯುತ ಹಿನ್ನೆಲೆಯೊಡನೆ, ಆಧುನಿಕ ಕನ್ನಡವೂ ಶ್ರೀಮಂತವಾಗಿಯೇ ಇದೆ. ಅತಿ ಹೆಚ್ಚು ಅಂದರೆ ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆ ಎಂಬ ಹೆಗ್ಗಳಿಕೆಯೂ ಕನ್ನಡಕ್ಕಿದೆ. ಇಂತಹ ಭಾಷೆಗೆ ಇತ್ತೀಚೆಗೆ ಮನ್ನಣೆ ಸಿಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಯಾವುದೇ ಭಾಷೆಯಾದರೂ ಅದರ ಬಳಕೆಯಿಂದ ಮಾತ್ರ ಅದು ಬೆಳೆಯಲು ಸಾಧ್ಯ. ಅದನ್ನು […]Read More