ಪ್ರಕೃತಿ ಪುರುಷ

ಪ್ರಕೃತಿ ಪುರುಷ ಸ್ತ್ರೀ ಪುರುಷರ ಸಮಾಜದಲಿ,ಪುರುಷರೇ ಮೇಲುಗೈ ಒಂದು ಹಂತದಲಿ |ಸ್ತ್ರೀ ಕೆಲಸ ಮಾಡುತ್ತಿರೆ ತನ್ನ ಗೃಹದಲಿಪುರುಷ ನಿಪುಣ, ಹೊರಗೆ ದುಡಿವಲ್ಲಿ || “ಉದ್ಯೋಗಂ ಪುರುಷ ಲಕ್ಷಣಂ”ಎನ್ನುತಿದ್ದರು ಪುರಾತನ ಕಾಲದಲ್ಲಿ |“ಲಜ್ಜಾ ವಿನಯಂ ಸ್ತ್ರೀ ಲಕ್ಷಣಂ”ಎನ್ನುವರು ಸ್ತ್ರೀಗೆ ಸದಾ ಕಾಲದಲ್ಲಿ || ಬೇಕು ಶಕ್ತಿ ಸೃಷ್ಟಿಕರ್ತನ ಕಾರ್ಯಕೆಸ್ತ್ರೀ ಬೇಕು ಪುರುಷನ ಅಸ್ತಿತ್ವಕೆ |ಮಹಾಪುರುಷನೆನಿಸಿಕೊಳ್ಳುವುದಕೆಪುರುಷನ ಹಿಂದೇ ಇರುವಳು ಆಕೆ || ಸ್ತ್ರೀಯು ತಾಳಿ ಕಟ್ಟಿಸಿಕೊಳ್ಳುವಳುಪುರುಷನ ಕೈಯಲ್ಲಿ, ತಲೆ ಬಾಗಿಸಿರುವಳು |ಪುರುಷನ ಪುರುಷ ಸಿಂಹ ಎನ್ನುವರುಲಗ್ನ ಕಾಲದಿ ಸ್ತ್ರೀಯ ಧಾರೆ […]Read More

ಬೆಳವಣಿಗೆ ಯಾವುದು..!?

ಬೆಳವಣಿಗೆ ಯಾವುದು..!? ಪ್ರತಿಯೊಬ್ಬ ಮನುಜನ ಜೀವನದಲ್ಲೂ ಬಾಲ್ಯ, ಯೌವ್ವನ, ಮುಪ್ಪು ಎಂಬ ಮೂರು ಹಂತಗಳಿರುತ್ತವೆ. ಈ ಎಲ್ಲಾ ಹಂತದಲ್ಲಿನ ನಮ್ಮ ನಡೆಗೆಯ ಅಖೈರು ಮೊತ್ತವೆ ಸಾರ್ಥಕ ಜೀವನ. ಬಾಲ್ಯ ನಮ್ಮಿಡೀ ಜೀವನದ ಅಡಿಪಾಯ ಎಂದರೆ ತಪ್ಪಾಗಲಾರದು. ಬಾಲ್ಯದಲ್ಲಿ ನಾವು ಬೆಳೆಸಿಕೊಳ್ಳುವ ಹವ್ಯಾಸಗಳು, ಅಥವಾ ನಮ್ಮ ಪೋಷಕರು ನಮಗೆ ನೀಡುವ ಸಂಸ್ಕಾರ, ನಾವು ಬೆಳೆಯುವ ವಾತಾವರಣ, ಎಲ್ಲವೂ ನಮ್ಮ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿರುತ್ತವೆ. ಹಿಂದೆಲ್ಲ ಹೆತ್ತವರು ಈಗಿನ ರೀತಿ ಅಗತ್ಯಕ್ಕಿಂತ ಹೆಚ್ಚಿನ ಕಾಳಜಿ ಮಾಡಿ ಮಕ್ಕಳನ್ನ […]Read More

ಕಾಣೆಯಾದಾಗ ಕಂಡದ್ದು – ಶರ್ಮಿಳಾ. ಎಸ್

ಕಾಣೆಯಾದಾಗ ಕಂಡದ್ದು – ಶರ್ಮಿಳಾ. ಎಸ್ “ಕಾಣೆಯಾದಾಗ ಕಂಡದ್ದು ಎನ್ನುವ ಭಾವವೇ ವಿಶಿಷ್ಠವಾದ ಅನುಭವ. ಹಾಗೆ ಕಾಣಲು ನಾನು ನಾನಾಗಬೇಕು ,ನನ್ನೊಳಗಿನ ಭಾವ ನಿಷ್ಕಲ್ಮಶವಾಗಿರಬೇಕು”. ಕವಯತ್ರಿಯ ಮೊದಲ ಕವನ ಸಂಕಲನ ಇದು. ವಿವಿಧ ಕಾಲಘಟ್ಟಗಳಲ್ಲಿ ಹೊಮ್ಮಿದ ಭಾವಗಳನ್ನು ಪದಮಾಲೆ ಕಟ್ಟಿ ಬರಹವಾಗಿಸಿರುವ ಕವನಗಳ ಸಂಕಲನ ಇದು. ಶಮಾ ಎಂಬ ಕಾವ್ಯನಾಮದಲ್ಲಿ ಬರೆದಿರುವ ಎಲ್ಲಾ ಕವನಗಳೂ ಅಂತರಂಗದ ಅರಿವಿನ ಸುತ್ತಲೂ ಸುತ್ತುತ್ತಾ ಕಾಣೆಯಾದದ್ದನ್ನು ಕಾಣುವ ಪ್ರಯತ್ನದಲ್ಲಿ ಅರಿವಿನ ಆಡುಂಬೊಲವನ್ನು ಹುಡುಕುತ್ತವೆ. ಸಾವಿತ್ರಿ ಎಂದರೆ ಸೂರ್ಯನ ಕಿರಣ ಎಂಬ ಅರ್ಥವೂ […]Read More

ಸಾಲುಮರದ ತಿಮ್ಮಕ್ಕ

ಸಾಲುಮರದ ತಿಮ್ಮಕ್ಕ ಸಾಲುಮರದ ತಿಮ್ಮಕ್ಕ ಎಂದೇ ಹೆಸರುವಾಸಿಯಾಗಿರುವ ತಿಮ್ಮಕ್ಕ ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ವೃಕ್ಷ ಪ್ರೇಮಿ ಮತ್ತು ಪರಿಸರವಾದಿ ಎಂದರೆ ತಪ್ಪಾಗಲಾರದು. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆಯಾಗಿಯೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿರುವುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ತಿಮ್ಮಕ್ಕ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದ್ದಾರೆ. ಇವರು ಮಾಗಡಿ ತಾಲೂಕಿನ ಹುಲಿಕಲ್ […]Read More

ಅಕ್ಷತಾ ಪಾಂಡವಪುರ ಮನದಾಳದ ಮಾತು

ಅಕ್ಷತಾ ಪಾಂಡವಪುರ ಮನದಾಳದ ಮಾತು (ʼಲೀಕ್‌ ಔಟ್‌ʼ ನಾಟಕ ನೂರರ ಸಂಭ್ರಮದಲ್ಲಿ) ನಾಡಿನ ಹೆಸರಾಂತ ರಂಗ ಕಲಾವಿದೆ ಹಾಗೂ ಚಿತ್ರನಟಿ ಅಕ್ಷತಾ ಪಾಂಡವಪುರ ಅಭಿನಯದ ʼಲೀಕ್‌ ಔಟ್‌ʼ ನಾಟಕ ನೂರರ ಪ್ರದರ್ಶನಕ್ಕೆ ಸಜ್ಜಾಗಿದೆ. ಶಿವಮೊಗ್ಗದಲ್ಲಿ ಡಿಸೆಂಬರ್ 7ರ ಶನಿವಾರ ಈ ನಾಟಕದ 100ನೇ ಪ್ರದರ್ಶನವು ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ. ಆ ಮೂಲಕ ಶಿವಮೊಗ್ಗದ ಹವ್ಯಾಸಿ ರಂಗ ತಂಡಗಳ ಕಲಾವಿದರ ಒಕ್ಕೂಟವು ಜಿಲ್ಲೆಯ ರಂಗ ಇತಿಹಾಸಕ್ಕೆ ಹೊಸ ದಾಖಲೆಯೊಂದನ್ನು ಮುಡಿಗೇರಿಸಿಕೊಳ್ಳುವುದಕ್ಕೆ ಅಣಿಯಾಗಿದೆ. ಕಲಾವಿದರ ಒಕ್ಕೂಟದ ಮೂಲಕ […]Read More

ಯುವ ಉದ್ಯೋಗಕ್ಕಾಗಿ ಕೌಶಲ್ಯ ಅಭಿವೃದ್ಧಿ ಸಾಮಾಜಿಕ ಪಾಲು

ಯುವ ಉದ್ಯೋಗಕ್ಕಾಗಿ ಕೌಶಲ್ಯ ಅಭಿವೃದ್ಧಿ ಸಾಮಾಜಿಕ ಪಾಲು ಉದ್ಯೋಗ ಮಾರುಕಟ್ಟೆಯ ಕ್ಷಿಪ್ರ ವಿಕಸನವು ವಿಶೇಷ ಕೌಶಲ್ಯಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಸೃಷ್ಟಿಸಿದೆ, ಅವುಗಳಲ್ಲಿ ಹಲವು ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗಳ ವ್ಯಾಪ್ತಿಗೆ ಬರುವುದಿಲ್ಲ. ಇದರ ಪರಿಣಾಮವಾಗಿ, ಯುವ ಉದ್ಯೋಗದಲ್ಲಿ ನಿರ್ಣಾಯಕ ಅಂಶವಾಗಿ ಕೌಶಲ್ಯ ಅಭಿವೃದ್ಧಿಯತ್ತ ಗಮನ ಹರಿಸಲಾಗಿದೆ. ಆಧುನಿಕ ಕೌಶಲ್ಯ ಅಭಿವೃದ್ಧಿಯನ್ನು ರೂಪಿಸುವಲ್ಲಿ, ಮೌಲ್ಯಯುತ ತರಬೇತಿಗೆ ಪ್ರವೇಶವನ್ನು ಪ್ರಜಾಸತ್ತಾತ್ಮಕಗೊಳಿಸುವಲ್ಲಿ ಮತ್ತು ಯುವ ಸಬಲೀಕರಣವನ್ನು ವೇಗಗೊಳಿಸುವಲ್ಲಿ ತಾಂತ್ರಿಕ ಪ್ರಗತಿಗಳು ಪ್ರಮುಖ ಪಾತ್ರ ವಹಿಸಿವೆ. ಯುವ ಕೌಶಲ್ಯ ಅಭಿವೃದ್ಧಿಯಲ್ಲಿ ತಂತ್ರಜ್ಞಾನವು ಹೇಗೆ ಪರಿವರ್ತಕ […]Read More

ಬದುಕಿನ ಸುಂಕ

ಬದುಕಿನ ಸುಂಕ ಸುಮ್ಮನೆ ರೂಪಗೊಳ್ಳದೀ ಬದುಕುಸುಂಕ ಕಟ್ಟಲೇಬೇಕು ಪ್ರತೀ ಹೊತ್ತುನಮ್ಮ ನಮ್ಮ ವ್ಯವಹಾರಕ್ಕೆ ನಾವೇ ಹೊಣೆಗಾರರುದೂಷಿಸುವಂತಿಲ್ಲ ಯಾರಿಗೂ ತಪ್ಪಿಸಿಕೊಳ್ಳುವಂತಿಲ್ಲ ಸುಂಕದ ಬಾಬ್ತುಇಂದಿಲ್ಲ ನಾಳೆಯಾದರೂ ಕಟ್ಟಲೇಬೇಕು ದುಪ್ಪಟ್ಟು,ಜಾಣ್ಮೆಯ ನಡೆಗೆ ವಿನಾಯಿತಿಘೋಷಿಸಿದರು ಪರಿಶೀಲನೆಗೊಬ್ಬ ಲೆಕ್ಕಿಗನಿರುವ,ಬರೆದಿಟ್ಟುಕೊಂಡಿರುವ ಎಲ್ಲದರ ಎಲ್ಲರ ಲೆಕ್ಕಾಚಾರವ ಬದುಕೊಂದ ಬದುಕೋಣು ಬಾರಹೇಗಾದರೂ ಸರಿಯೇ ಬದುಕಿಬಿಡುವ ಎನ್ನುವಂತಿಲ್ಲ,ಗಮನಿಸುತಲೇ ಇದ್ದಾನೆ ಓರ್ವ ತೀರ್ಪುಗಾರ ಸುಂಕಕಂಜದಿರು ಮನವೇಸರಿಯಾದ ಸಮಯಕ್ಕೆ ಪಾವತಿಸಿದರೆಅದುವೇ ಪುರಸ್ಕಾರ… ಪವನ ಕುಮಾರ ಕೆ. ವಿ.ಬಳ್ಳಾರಿRead More

ಸುರಕ್ಷಾ ಜಾಗೃತಿ – 7

ಸುರಕ್ಷಾ ಜಾಗೃತಿ – 7(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು) ಅಪರಿಚಿತರನ್ನು ಅನುಮಾನಿಸು ಸುರಕ್ಷತೆಯ ಪಾಠದಲ್ಲಿ ಇದು ಕೂಡ ಒಂದು ಮುಖ್ಯವಾದ ವಾಕ್ಯವಾಗಿದೆ ಮತ್ತು ಇದನ್ನು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ನೆನಪಿನಲ್ಲಿಟ್ಟುಕೊಳ್ಳತಕ್ಕದ್ದು. ನಿಮಗೆಲ್ಲರಿಗೂ ನಿಮ್ಮ ಬಾಲ್ಯದಲ್ಲಿ ತಂದೆ ತಾಯಂದಿರು ನೀವು ಶಾಲೆಗೆ ಹೋಗುವಾಗ ಹೇಳುತ್ತಿದ್ದಂತಹ ಬುದ್ದಿಮಾತು ಇಂದಿಗೂ ನೆನಪಿದೆಯಲ್ಲವೇ? ಅದೇನಂದರೆ ಯಾರೇ ಆದರೂ ಏನಾದರೂ ಚಾಕೋಲೇಟ್ ಕೊಟ್ಟರೆ ತೆಗೆದುಕೊಳ್ಳಬಾರದು. ಯಾರಾದರೂ ಕರೆದರೆ ಅಥವಾ ಮನೆಗೆ ಬಿಡುತ್ತೇನೆ ಅಂದರೆ ಹೋಗಬಾರದು. ಇಂತಹ ಹಲವಾರು ಬುದ್ದಿಮಾತುಗಳನ್ನು ದಿನನಿತ್ಯ ನಮಗೆಲ್ಲರಿಗೂ […]Read More

ಕವಿತೆಯ ಸ್ಫೂರ್ತಿಸೆಲೆ

ಕವಿತೆಯ ಸ್ಫೂರ್ತಿಸೆಲೆ ಮನದ ಗೂಡಲಿ ಭಾವವು ಅವಿತಾಗಮನಸು ಆ ಭಾವದಲಿ ಬಂಧಿಯಾದಾಗಭಾವದುಯ್ಯಾಲೆಯಲಿ ಮನ ಜೀಕಿದಾಗ..ಕವಿತೆಯೊಂದು ಮನದಿ ಮೂಡಿದೆ!! ಕನಸುಗಳ ಚಿತ್ತಾರದಿ ಮನವಿರಲುಮನದ ಮಾತು ಹೃದಯವರಿತಿರಲುನೂರಾಸೆಯ ಭಾವವೇ ಕಣ್ಣಲಿರಲು..ಕಾವ್ಯವು ಮನದಾಗಸದಿ ಚಿತ್ತೈಸಿದೆ!! ಬಾಳಿನ ನವಭಾವಕೆ ನಾಂದಿಯ ಹಾಡಿಸಂತಸವದು ಕಂಗಳಲಿ ಮನೆಮಾಡಿಪದಭಂಡಾರವೇ ಮನೋನ್ಮಣಿಯಲಿ ಮೂಡಿಕವನವೊಂದು ಹೃದಯದಲಿ ಉದಯಿಸಿದೆ!! ಮನದ ಕಂಗಳಲಿ ನಲಿವಿನ ನೆಲೆಯಿರಲುನಿರ್ಜೀವದ ಭಾವಗಳಿಗೆ ಜೀವಸೆಲೆಯಿರಲುಸೋತ ಚಿಂತನೆಗೆ ಸವಿಸ್ಪೂರ್ತಿಯ ಅಮಲಿರಲು..ಕವಿತೆಯದು ಅಂತರಾಳವ ತೆರೆದಿದೆ!! ಸುಮನಾ ರಮಾನಂದಮುಂಬೈRead More

ಆಹಾ, ಇಲ್ಲೆ ಸ್ವರ್ಗ…!

ಆಹಾ, ಇಲ್ಲೆ ಸ್ವರ್ಗ…! ಬೆಳಗಿನ ವಾಯುವಿಹಾರ ಇಂದೇಕೋ ಬಹಳ ಆಪ್ತವೆನಿಸಿತು, ಬೆಚ್ಚಗಿನ ಸೂರ್ಯನ ಕಿರಣಗಳು, ವಿಶಾಲವಾದ ಹಸಿರಿನ ತೋಪನ್ನು ಸೀಳಿ, ನನ್ನ ಮೈಮನದ ಮೇಲೆ ಚೈತನ್ಯದ ಬೆಳಕು ಬೀರಿದವು, ಮುಖವೆತ್ತಿ, ಕಣ್ಣು ಮುಚ್ಚಿ, ಆ ಹಿತವನ್ನು ಸವಿದೆ, ಅಲ್ಲಲ್ಲಿ ಹಕ್ಕಿಗಳ ಕಲರವ, ಸಣ್ಣದಾಗಿ ಬೀಸುವ ಶೀತಗಾಳಿಗೆ ಕೈ ಚಾಚಿ, ಮೈ ಒಡ್ಡ ಬೇಕೆಂಬ ಬಯಕೆ ಮೂಡಿತು, ಹಾಕಿದ ‘ಹೂಡಿ’ ಬೇಡವಾಗಿತ್ತು….. ಇಂತಹ ಹಸಿರು ಸ್ವರ್ಗದಲ್ಲಿ ನಾ ಇರುವುವೆನೆಲ್ಲ ಎಂದು ಹೆಮ್ಮೆಯ ಭಾವ ಮೂಡಿತು. ಹೌದು ನಾನಿರುವ ಊರು, […]Read More