ಮೆರೆಯಲಿ ಕನ್ನಡತನ ನಮ್ಮ ನಾಡು ಕನ್ನಡ,ನಮ್ಮ ಭಾಷೆ ಕನ್ನಡ|ನಮ್ಮ ನುಡಿಯೂ ಕನ್ನಡನಮ್ಮ ಅಂಕೆಯೂ ಕನ್ನಡ|| ನೆರೆ ಹೊರೆಯವರು ಬರುತಿಹರುಕನ್ನಡವಾ ಕಲಿಯುತಿಹರು|ಪರರಿಗೂ ಕನ್ನಡವ ಕಲಿಸುತಿಹರುಕನ್ನಡದೀ ವ್ಯವಹರಿಸುತಿಹರು|| ಎಲ್ಲರಲೂ ಮೆರೆಯುತಿರಲಿ,ಕನ್ನಡತನ ಹಬ್ಬುತ್ತಿರಲೀ|ಕನ್ನಡದ ಸೌಗಂಧ ಸೂಸುತಿರಲೀ|ಕನ್ನಡ ಕಸ್ತೂರಿ ಘಮಘಮಿಸುತಲಿರಲೀ|| ದೇಗುಲಗಳಲೀ ಮಂತ್ರಗಳು ಕನ್ನಡದಲ್ಲಿರಲೀ!ನ್ಯಾಯಾಂಗದಲಿ ಕನ್ನಡವು ಸ್ಥಿರವಾಗಿರಲೀ|ವಕೀಲರು ಕನ್ನಡದಲ್ಲಿ ವಾದ ಮಂಡಿಸಲಿನಾಗಶಯನ ಒಲಿಯವ ಆಗಲೀ|| ನಾಗರಾಜು.ಹಬೆಂಗಳೂರುRead More
ಸಂಗೀತ – ಸಮರ್ಪಣೆ ಭಾಗ 2 ಒಮ್ಮೆಯಾದರೂ ತಮಗೆ ಇಷ್ಟವಾದ ಗೀತೆಯನ್ನು ಗುನುಗದೆ ಇರುವವರು ತುಂಬಾ ವಿರಳ. ಪ್ರತಿಯೊಂದು ಸಂದರ್ಭಕ್ಕೂ , ಪ್ರತಿಯೊಂದು ಭಾವನೆಗೂ ಅನುಗುಣವಾಗಿ ಒಬ್ಬೊಬ್ಬರಿಗೆ ಒಂದೊಂದು ಗೀತೆ ಯಾವುದೋ ಕಾರಣಕ್ಕೆ ಅಚ್ಚುಮೆಚ್ಚು ಆಗಬಹುದು. ಇನ್ನು ಗಾಯಕರಿಗೆ ಒಂದೇ ಕಾರ್ಯಕ್ರಮದಲ್ಲಿ ಹಲವಾರು ರೀತಿಯ ಪ್ರೇಕ್ಷಕರು ಇರುವುದರಿಂದ ಒಬ್ಬೊಬ್ಬರ ಮನಸ್ಥಿತಿ ಒಂದೊಂದು ತರಹದ್ದು ಆಗಿರುತ್ತದೆ. ಕೆಲವರಿಗೆ, ಪ್ರೀತಿ ವ್ಯಕ್ತ ಪಡಿಸುವ ಗೀತೆ ಇಷ್ಟವಾದರೆ, ಇನ್ನೂ ಕೆಲವರಿಗೆ ಸಂತೋಷದ ಗೀತೆ, ಮತೊಬ್ಬರಿಗೆ ದುಃಖದ ಗೀತೆ, ಇನ್ನೂ ಹಲವರಿಗೆ ಭಕ್ತಿ […]Read More
ಹಣತೆಯ ಜೀವಿ! ಕತ್ತಲ-ಬೆಳಕ ಮಿಣುಕು! ಕತ್ತಲು ಒಳಗೋ, ಹೊರಗೋ!?ಬೆಳಕು ಒಳಗೋ, ಹೊರಗೋ!? ಕಾಡ ಗಾಢಾಂಧಕಾರದಲ್ಲಿಸಾವಿರಾರು ಮಿಣುಕು ಹುಳುಗಳದ್ದೇದೀಪದ ಮೆರವಣಿಗೆ! ತನ್ನ ಮುಂದಿನ ಕತ್ತಲ ಸೀಳಿಕೊಂಡುಹಾರುವ ಈ ಪುಟ್ಟ ಹುಳುಹಿಂದುಳಿದವರಿಗೆ ಬೆಳಕಾಗಿದೆ! ವಿಜ್ಞಾನಿಗಳು ರೇಡಿಯಂ ಅನ್ನುಕಂಡು ಹಿಡಿಯುವ ಮುನ್ನವೇ…ಸೃಷ್ಟಿಕರ್ತನೇ ಜೀವ-ಜಂತುಗಳಲ್ಲಿಅದನ್ನು ಇಟ್ಟು ಕಳಿಸಿದ್ದಾನೆ! ಹುಲಿ, ಬೆಕ್ಕು, ನಾಯಿ, ನರಿತೋಳಗಳಂತಹ ಜೀವಿಗಳಲ್ಲಿಕಣ್ಣಾಲಿಯಲಿ ದೀಪ… ಕತ್ತಲಲ್ಲಿ ಬದುಕುವವರಿಗೆ ಕಣ್ಣ ಬೆಳಕಾಗಿ,ದಾರಿ ದೀಪವಾಗಿದೆ… ಈ ಜಗವು ಹೀಗಿದ್ದರೂ ಗೀಜಗವುತನ್ನ ಗೂಡಲ್ಲಿ ಬೆಳಕಾಗಿಸಿಕೊಂಡದ್ದುಈ ಮಿಣುಕು ಹುಳುವನ್ನೇ! ಶಕುನಿ ತಾ ತನ್ನ ತಂಗಿ ಗಾಂಧಾರಿಯಕತ್ತಲ ಭಯ […]Read More
ಪ. ಸ. ಕುಮಾರ್ ರವರ ಎಡಗೈ ಚಿತ್ರಕಲಾ ಪ್ರದರ್ಶನ ಪ್ರದರ್ಶನ: 10.11.2023 ರಿಂದ 27.11.2023ಸಮಯ: ಬೆಳಿಗ್ಗೆ 10.00 ರಿಂದ ಸಂಜೆ 6ರ ವರೆಗೆಸ್ಥಳ: ಆರ್ಟ್ ಹೌಜ್, ಪ್ಯಾಲೇಸ್ ರಸ್ತೆ,ವಸಂತನಗರ, (ಮೌಂಟ್ ಕಾರ್ಮೆಲ್ ಕಾಲೇಜು ಹತ್ತಿರ)ಬೆಂಗಳೂರು ಮಾಮೂಲಾಗಿ ಬಲಗೈ ಅಥವಾ ಅಪರೂಪಕ್ಕೆ ಎಡಗೈನಲ್ಲಿ ಚಿತ್ರ ಬರೆಯುವುದು ವಾಡಿಕೆ. ಆದರೆ ನಮ್ಮ ನಾಡಿನ ಹಿರಿಯ ಚಿತ್ರ ಕಲಾವಿದರಾದ ಪ ಸ ಕುಮಾರ್ ಅವರು ಎರಡೂ ಕೈಗಳಲ್ಲೂ ರೇಖಾಚಿತ್ರಗಳನ್ನು ಬರೆಯುವ ಸಾಮರ್ಥ್ಯವನ್ನು ರೂಢಿಸಿಕೊಂಡಿದ್ದಾರೆ. ಈ ವಿಷಯ ಬಹುಶಃ ಅವರ ಕಲಾ ಬಳಗದ […]Read More
ಕನ್ನಡದ ಮುತ್ತು- ಡಾ. ರಾಜ್ ಕನ್ನಡ ಭಾಷೆಯ ಅಸ್ಮಿತೆಗಾಗಿ, ಉಳಿವಿಗಾಗಿ ಬೆಳವಣಿಗೆಗಾಗಿ ಸದಾ ಮುಂಚೂಣಿಯಲ್ಲಿ ಕಾಣಿಸಿಕೊಂಡವರ ಪೈಕಿ ಡಾ. ರಾಜ್ ಪ್ರಮುಖರಲ್ಲಿ ಒಬ್ಬರು. ನಮ್ಮೆಲ್ಲಾ ಕನ್ನಡದ ಹೋರಾಟಗಾರರು ಅವರವರ ಕ್ಷೇತ್ರದಲ್ಲಿ ಕನ್ನಡ ಭಾಷೆ, ಕನ್ನಡದ ಜನಗಳಿಗಾಗಿ ಹೋರಾಟ ಮಾಡುತ್ತಿದ್ದಾಗ ಇಡೀ ಚಿತ್ರರಂಗವನ್ನು ತಮ್ಮ ಜೊತೆ ಹೋರಾಟಕ್ಕೆ ಸೆಳೆದುಕೊಂಡವರು ಡಾ. ರಾಜಕುಮಾರ್. ೧೯೬೦ ನೇ ಇಸವಿ, ಆಗ ಡಾ. ರಾಜ್ ಕೇವಲ ೧೪ ಚಲನಚಿತ್ರಗಳಲ್ಲಿ ನಟಿಸಿದ್ದರು. ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಸಾಕಷ್ಟು ಕಷ್ಟಗಳನ್ನು ಕಂಡಿದ್ದ ಡಾ. ರಾಜ್ […]Read More
ಕುಂಚದಲ್ಲಿ ಕನ್ನಡ ಸಾಹಿತಿಗಳು ಕನ್ನಡದ ಸಾಹಿತ್ಯ ಲೋಕದ ದಿಗ್ಗಜರಾದ ಅ ನ ಕೃ, ಕುವೆಂಪು, ತ ರಾ ಸು, ಎಸ್ ಎಲ್ ಭೈರಪ್ಪ, ತ್ರಿವೇಣಿ, ತೇಜಸ್ವಿ ಇನ್ನೂ ಮುಂತಾದವರು ಒಂದೇ ಮನೆಯಲ್ಲಿ ನೋಡಲು ಸಿಕ್ಕರೆ? ಆಹಾ ಎಂತಹ ಅದ್ಬುತ ದೃಶ್ಯ ಕಲ್ಪನೆ. ಕನ್ನಡದ ಖ್ಯಾತ ವ್ಯಂಗ್ಯ ಚಿತ್ರಕಾರರಾದ ವೈ. ಎಸ್. ನಂಜುಂಡಸ್ವಾಮಿಯವರು ಈ ತರಹದ ವಿಭಿನ್ನ ಅದ್ಭುತ ಕಲಾತ್ಮಕ ಕೊಡುಗೆಯನ್ನು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಾಪ್ರಿಯರಿಗೆ ಒದಗಿಸಿದ್ದಾರೆ. ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ […]Read More
ನಂಬಿಕೆ ಸತ್ಯಕ್ಕೆ ಸಾವಿಲ್ಲವೆಂಬನಂಬಿಕೆಯು ತಾನಿಂದುಕೊನೆಯುಸಿರೆಳೆಯುತಿದೆ! ಧರ್ಮಕ್ಕೆ ಜಯವೆಂಬನಂಬುಗೆಯ ಮಂತ್ರವಿಂದುಹುಸಿಯದೆನಿಸುತಿದೆ ! ಕಾಯಕವೇ ಕೈಲಾಸವೆಂಬಮಾತಿನ ನಂಬಿಕೆಯಿಂದುಮೈಗಳ್ಳತನ ತೋರುತಿದೆ! ನಮ್ಮನಾಳುವವರೇಗೋಮುಖ ವ್ಯಾಘ್ರರಾಗಿನಂಬಿಕೆಗನರ್ಹರಾಗಿದ್ದಾರೆ! ಹಣದೆದುರು ಸ್ನೇಹ,ಪ್ರೀತಿ, ವಿಶ್ವಾಸಗಳೆಂಬುದುನಂಬಿಕೆ ಕಳೆದುಕೊಳ್ಳುತಿದೆ ! ನಂಬಿಕೆಯೇ ನಂಬಿಕೆಯಮೇಲಿಟ್ಟ ನಂಬಿಕೆಯನುನಂಬದಿದ್ದರೂ; ಮಾನವೀಯತೆಯಿಂದುಗುಟುಕು ಜೀವಹಿಡಿದುನಂಬಿಕೆಯ ಕಾಯುತ್ತಿದೆ ! ಶ್ರೀವಲ್ಲಿ ಮಂಜುನಾಥRead More
ನನ್ನ ಪ್ರೀತಿಯ ಸರ್ಕಾರಿ ಶಾಲೆ ಸರ್ಕಾರಿ ಶಾಲೆಯಲ್ಲಿ ನಾನು ಓದುವೆಅಪ್ಪಾ ಅಮ್ಮನಿಗೆ ಹೆಸರನು ತರುವೆಈ ಶಾಲೆ ಅಂದರೆ ನನಗಿಷ್ಟ,,,ರಜೆಯು ಬಂದರೆ ಬಲುಕಷ್ಟ.!!೧!! ನಮ್ಮನ್ನು ಕಂಡರೆ ಗುರುಗಳಿಗಂತುತಮ್ಮ ಮಕ್ಕಳಂತೆ ಪ್ರೀತಿಯಿದೆ.ಜಾತಿ, ಧರ್ಮದ ಕೊಳಕಿನ ಬ್ರಾಂತುಕಿತ್ತು ಎಸೆಯುವ ಶಕ್ತಿಯಿದೆ.!!೨!! ಓದುತ ಬರೆಯುತ ದಿನವೆಲ್ಲಾ,,ಶಿಸ್ತು,ಸಂಯಮವ ಮರೆಯಲ್ಲಗುರುಗಳೆ ನಮಗೆ ಇಲ್ಲೆಲ್ಲಾ,,,ಜ್ಞಾನ ಹಂಚುವರು ನಮಗೆಲ್ಲ.!!೩!! ಹಲವು ರೀತಿಯ ಪಾಠವಿದೆಕುಣಿದು ಕುಪ್ಪಳಿಸೊ ಆಟವಿದೆನಮ್ಮ ಸಂಸ್ಕೃತಿಯ ಮಂತ್ರವಿದೆಬದುಕು ಗೆಲ್ಲುವ ತಂತ್ರವಿದೆ.!!೪!! ತಂದೆ ತಾಯಿಗೆ ನಮ್ಮ ಕಲಿಕೆಯತಿಳಿಸಿ ಹೇಳಲು ಸಭೆಗಳಿವೆ.ನಾವು ಮಾಡಿದರೆ ತರಲೆ ತೀಟೆಯತಿದ್ದಿ ತೀಡುವ ಮನಗಳಿವೆ.!!೫!! ಹಸಿವು […]Read More
ದಿನಕರನ ಸೋಜಿಗದಲಿ… ಕತ್ತಲು ಕವಿದಿಹ ಲೋಕದಲಿಸುತ್ತಲೂ ಬೆಳಕನು ನೀಡುತಾ!ಎತ್ತೆತ್ತಲೂ ಹಸಿರ ಚಿಗುರಿಸುತಲಿ..ಸೊಗದಿ ಆ ಅಹಸ್ಕರನು ಬಂದಿಹನಲ್ಲಾ!! ನೀಲಾಗಸದಿ ಹೊಂಗಿರಣವ ಬೀರಿಸರಾಗದಿ ಕೆಂಬಣ್ಣವ ಪಸರಿಸುತಾ!ಅನುರಾಗದಿ ಕಾಯ್ವ ಧರಣಿಯಲಿ..ತನ್ನೊಲವ ಅರುಹಲು ರವಿ ಆಗಮಿಸಿಹನಲ್ಲಾ!! ಕಾನನಕೆ ಹೊನ್ನಿನ ಚಾದರ ಹೊದಿಸಿಮನನ ಮಾಡುವಂತೆ ಬಾನಲಿ ಚಲಿಸುತಾ!ಶಮನ ಮಾಡಿ ಕಾರ್ಗತ್ತಲನು ಜಗದಲಿ..ನೇಸರನು ಸಕಲರ ಕಂಗಳ ತೆರೆಸಿಹನಲ್ಲಾ!! ದೊಡ್ಡ ನಕ್ಷತ್ರವಾದರೂ ಬ್ರಹ್ಮಾಂಡದಲಿಅಡ್ಡವಾದ ಮೋಡದ ಮರೆಯಲಿ ಅಡಗುತಾ!ಹೆಡ್ಡ ಮನುಜನಿಗೆ ಕರ್ತವ್ಯವ ತಿಳಿಸೇ ಮನದಲಿ..ದಿನಕರನು ತನ್ನ ಬೆಳಕಲಿ ಬಾಳ ಬೆಳಗಿಹನಲ್ಲಾ!! ಸುಮನಾ ರಮಾನಂದRead More
ತಾಯಗರ್ಭ ಅಮ್ಮಾ ನಿನ್ನಯ ಒಡಲಲಿಹುದುನನ್ನಯ ಜೀವ ನನ್ನಯ ಉಸಿರುಜತನ ಮಾಡು ತಾಯೆ ನನ್ನುಸಿರನುಉಳಿಸು ತಾಯೇ ನೀ ಮನುಕುಲವನು ಅದೆಷ್ಟು ಜೀವಿಗಳ ನೀ ಪೊರೆದೊರುವೆಉಸಿರು ಉಸಿರಿನಲಿ ನೀ ಉಸಿರಾಗಿರುವೆನೆಲಕ್ಕಂಟಿ ಬೆಟ್ಟ ತಬ್ಬಿ ಮಳೆ ಹಿಡಿದಿರುವೆಹಸಿರೇ ಉಸಿರೆಂದು ನೀ ಸಾರುತಿರುವೆ ವಿಷಗಳ ನೀನುಂಡು ಅಮೃತವನಿತ್ತಿರುವೆಇಂಗದ ಇಂಗದ ಇಂಗಾಲವ ನೀ ಹೀರಿರುವೆಪ್ರಾಣವಾಯುವ ನೀ ಹರಿಸಿ ಜನನಿಯಾಗಿರುವೆಅಮ್ಮಾ ನೀನಿದ್ದರೆ ನೆಲ ಜಲವು ಸಕಲವು ಸಿ.ಎನ್. ಮಹೇಶ್Read More