ಒಲವಿನ ಮಜಲುಗಳು ಬಾನಂಗಣದಿ ಮುಳುಗುತಾಹೊಳೆವ ನೇಸರನ ಬಣ್ಣದಲಿಕಣ್ಕೋರೈಸುವ ಕಾಮನಬಿಲ್ಲಿನಲಿಕಂಡೆ ನಿನ್ನ ಒಲವಿನ ರಂಗು!! ನೀಲಾಂಬರದ ಮೋಡಗಳುಕರಗುತಾ ಸುರಿದ ವರ್ಷಧಾರೆಯಲಿಅರಳುತಿಹ ಮಲ್ಲಿಗೆಯ ಘಮಲಲಿಸವಿದೆ ನಿನ್ನ ನೋಟದ ಗುಂಗು!! ಕಡಲಕಿನಾರೆಯ ದಾರಿಯುದ್ದಕೂಬಂಡೆಗಪ್ಪಳಿಸಿಹ ಅಲೆಅಲೆಗಳಲೂಮರಳಲಿ ಮೂಡಿಹ ಬೆರಳ ಚಿತ್ತಾರದಲೂಅರಿತೆ ನಿನ್ನ ಭಾವದ ರಂಗು!! ಮುಗಿಲೆತ್ತರಕೇರಿಹ ಮರದಲೂಬುವಿಯಾಳಕಿಳಿದಿಹ ಬೇರುಗಳಲೂಗಾಳಿಗದುರುವ ತರುಲತೆಗಳಲೂಕಂಡೆ ನಿನ್ನದೇ ಪ್ರೀತಿಯ ಗುಂಗು!! ನಿತ್ಯ ಮಿಡಿಯುವ ಮನಸಲೂಸತ್ಯ ಅಂತರಾಳದ ಕನಸಲೂಅರಿತೆ ನಿನ್ನ ಆಸರೆಯ ರಂಗುಬೇಕಿಲ್ಲ ಅದಕೆ ಯಾರ ಹಂಗು!! ಸುಮನಾ ರಮಾನಂದRead More
ಕೂಡಲ ಸಂಗಮ – ಬಸವಣ್ಣನವರ ಐಕ್ಯಸ್ಥಳ ಮಹಾಮಹಿಮ ಬಸವಣ್ಣನವರು ಪಾದವಿಟ್ಟ ಅವಿಮುಕ್ತ ಕ್ಷೇತ್ರವಾಗಿ, ಬಸವಣ್ಣನವರ ವಿದ್ಯಾಭೂಮಿಯಾಗಿ, ಐಕ್ಯ ಕ್ಷೇತ್ರವಾಗಿ ಮತ್ತು ಪುಣ್ಯಭೂಮಿಯಾಗಿ ಕೂಡಲಸಂಗಮವು ಗೋಚರಿಸುತ್ತದೆ. ಮುಸಲ್ಮಾನರಿಗೆ ಮೆಕ್ಕಾ, ಸಿಖ್ಖರಿಗೆ ಅಮೃತಸರ, ಬೌದ್ಧರಿಗೆ ಬುದ್ಧಗಯಾ ಇವೇ ಮೊದಲಾದ ಮಹತ್ವದ ಧರ್ಮಕ್ಷೇತ್ರಗಳಂತೆ ಬಸವ ಧರ್ಮೀಯರಾದ ಲಿಂಗಾಯತರಿಗೆ ಕೂಡಲ ಸಂಗಮ ಪವಿತ್ರಕ್ಷೇತ್ರ. ಕಲ್ಯಾಣದಲ್ಲಿ ಬಿಜ್ಜಳನ ಪ್ರಧಾನಿಯಾಗಿದ್ದ ಬಸವಣ್ಣನವರು ಕಲ್ಯಾಣ ಕ್ರಾಂತಿಯ ಬಳಿಕ ಸಂಗಮಕ್ಕೆ ಮರಳಿ ಇಲ್ಲಿಯೇ ಐಕ್ಯರಾದರೆಂದೂ ಇತಿಹಾಸ ತಿಳಿಸುತ್ತದೆ. ಕೂಡಲಸಂಗಮ ಗ್ರಾಮವು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿದ್ದು, ಆಲಮಟ್ಟಿ ಅಣೆಕಟ್ಟಿನಿಂದ […]Read More
ಆದಿ ಕವಿ ವಾಲ್ಮೀಕಿ ಮುನಿ ವಾಲ್ಮೀಕಿ ಎಂಬ ಕೋಗಿಲೇ,ಕವಿತೆಯಾ ಮರದ ಮೇಲೆ|ಮಧುರ ಮಧುರಾಕ್ಷರದಿಂದಲೇರಾಮ ರಾಮ ಎಂದು ಹಾಡಿತಾಗಲೇ!! ಆದಿ ಕವಿ ವಾಲ್ಮೀಕಿಯೇನಿಮಗೆ ವಂದನೇ|ಮಹಾಗ್ರಂಥ ರಾಮಾಯಣವೇನಿಮ್ಮ ಸಾಧನೇ| ಪೂರ್ವದಲ್ಲಿ ನೀವುಪ್ರಾಚೇತಸ ಮುನಿಯು|ಶಾಪದಿಂದ ಬೇಡರಾಗೀಬೆಳೆದು ಬಂದಿರೀ|| ದಾರಿಹೋಕರ ವಸ್ತುಗಳಾಕಸಿದು ಕೊಂಡಿರೀ!ಅದರಿಂದ ಬರೋ ಪಾಪಗಳಕಟ್ಟಿಕೊಂಡಿರೀ|| ಅಗಸ್ತ್ಯರೆಂಬ ಮುನಿಗಳಾ ಕೃಪೆಯು ನಿಮಗೆ ಆಯಿತು|ಅಂದಿನಿಂದ ನಿಮ್ಮ ಪಾಪಗಳು ಭಸ್ಮವಾಯಿತು|| ಅವರೇಳಿದ ಮರದ ಮಂತ್ರತಾರಕ ಮಂತ್ರವಾಯಿತು|ಜಪಿಸುತಲೀ ಆ ಮಂತ್ರಹುತ್ತ ಬೆಳೆಯಿತು|| ಆ ಹುತ್ತದ ಪರಿಣಾಮದಿ“ವಾಲ್ಮೀಕಿ”ಎಂಬಾ ಹೆಸರಾಯಿತು!ಕ್ರೌಂಚ ಪಕ್ಷಿ ಸಾವಿನಿಂದಲೀಸ್ತೋತ್ರ ಉದಿಸಿತು|| ಶಿವನಿಂದ ರಾಮಾಯಣಲಿಖಿತಕೆ ಆದೇಶವಾಯಿತು|ಬ್ರಹ್ಮದೇವನಿಂದ ನಿಮಗೆಲಘುವಾಗಿ […]Read More
ಕತ್ತಲ ಕಂಬನಿ ಅವತ್ತ ಸುಡು ಸುಡು ಬಿಸಿಲು ಇತ್ತು. ಬಿಸಿಲಿನ್ಯಾಗ ಮಂದಿಯೆಲ್ಲಾ ಬಿಸಿಲಿನ ತಾಪಕ್ಕ ರೋಸಿ ಹೋಗಿದ್ರು . ಅವತ್ತು ರವಿವಾರ ಬೇರೆ ಇತ್ತು. ಲಗೂನ ಕೆಲಸ ಮುಗಿಸಿ ದಾವಾಖಾನಿಯಿ೦ದ ಮನೆಗೆ ಹೋಗಬೇಕನ್ನೋ ಗಡಿಬಿಡಿಲಿದ್ರು ಡಾಕ್ಟರ್ ಸಂಜಯ್ ಅವರು ಹೆಂಡತಿ ಮಕ್ಕಳ ಜೊತೆ ಬಜಾರ್ ಸುತ್ತಬೇಕು ಹೆ೦ಡತಿ ಮಕ್ಕಳ ಜೊತೆ ಸಮಯ ಕಳಿಬೇಕು. ಈ ಡಾಕ್ಟರಕಿ ಕೆಲಸ ಸಾಕಾಗೇತಿನಂಗರ ಅಂತ ಗಡಿಬಿಡಿಲಿದ್ರು. ಅಷ್ಟರಲ್ಲಿ ನರ್ಸ್ ಬಂದ್ರು, ಸರ್ ಒಬ್ರು ಪೇಷಂಟ್ ಈದರ್ರೀ ಈಗ ಬ೦ದರ, ಅಯ್ಯೋ ದೇವಾ […]Read More
ಜೇನು ಹುಳದ ಮುಳ್ಳು ಹಿಂದೆಲ್ಲ ಜೇನುಹುಳಗಳಿಗೆ ಬೆನ್ನ ಹಿಂದೆ ಮುಳ್ಳು ಇರಲಿಲ್ಲ. ಅದಕ್ಕೆ ಮುಳ್ಳು ಹೇಗೆ ಬಂತು ಎಂದು ನಿಮಗೆ ಗೊತ್ತಾ? ಕಾಡಲ್ಲಿ ಆಲದ ಮರದ ಮೇಲೆ ಸಾವಿರಾರು ಜೇನುಗೂಡು ಕಟ್ಟಿತ್ತು. ಜೇನುಗಳು ನಿರುಪದ್ರವಿಯಾಗಿದ್ದವು. ಊರಿನ ಜನರೆಲ್ಲಾ ಮರದ ಬಳಿ ಬಂದು ತುಪ್ಪವನ್ನು ತೆಗೆದುಕೊಂಡು ಹೋಗುತ್ತಿದ್ದರು. ಜೇನುಗಳಿಗೆ ಮತ್ತೆ ಮತ್ತೆ ಗೂಡು ಕಟ್ಟಲು ಕಷ್ಟವಾಗುತಿತ್ತು. ಇದಕ್ಕೆ ಜೇನುಗಳ ರಾಣಿ ಪರಿಹಾರ ಹುಡುಕುತ್ತಾ ಕುಳಿತಿತು. ಅದೇ ಸಮಯಕ್ಕೆ ಮಂತ್ರಿ ಜೇನಿಗೆ ಒಂದು ಉಪಾಯ ಹೊಳೆಯಿತು. ಮಂತ್ರಿ ರಾಣಿ ಜೇನಿನ […]Read More
ಹೀಗೊಂದು ಪ್ರೇಮದ ಗಜ಼ಲ್ ಬಾಳಲಿ ನಿನ್ನಂತೆ ನಂಗೆ ಯಾರಿಲ್ಲಹಾಗಾಗಿ ನಿನ್ನಲೇ ನನ್ನ ಮನಸೆಲ್ಲಾ..! ಹೃದಯದ ತಂತಿಯ ನೀ ಮೀಟಿದೆಆ ಕ್ಷಣದಿಂದ ನಿನ್ನಲ್ಲೇ ಮನ ನಾಟಿದೆ..! ಮಳೆಬಿಲ್ಲಿನ ಬಣ್ಣವಿದೆ ನಿನ್ನ ಪ್ರೀತಿಯಲಿಅದಕೇ ನಿನ್ನ ಹೆಸರಿದೆ ನನ್ನ ಉಸಿರಿನಲಿ..! ಬುವಿಯಲಿ ಬಾನಲಿ ಎಲ್ಲೆಲ್ಲೂ ನೀನೇಸವಿಪ್ರೀತಿಯ ಹೆಸರು ಮತ್ತೆ ಇದಕೇ ತಾನೆ..! ಇಳಿಸಂಜೆಯ ಹೊತ್ತು ನೀ ಬರುವೆ ಕನಸಿನಲಿಶಾಶ್ವತದಿ ನಿ ನೆಲೆಸಿಹೆ ನನ್ನ ಮನಸಿನಲಿ..! ಅರಿವಾಗಿದೆ ಆತ್ಮಕೆ ನಿನ್ನ ಪ್ರೇಮದ ಬಂಧುರನೀನಾಗಿಹೆ ನನ್ನ ಬಾಳಲಿ ನಗುವ ಸಿಂಧೂರ..! ಚಿಗುರು ವೀಳ್ಯೆಯ ಸವಿ […]Read More
ಸಮಯ ನಿರ್ವಹಣಾ ತಂತ್ರ ಸಾಮಾನ್ಯವಾಗಿ ನಾವೆಲ್ಲರೂ ಹಣ ಅಥವಾ ವಿದ್ಯೆಯನ್ನು ಬದುಕಿನ ಅತ್ಯಂತ ದೊಡ್ಡ ಸಂಪತ್ತೆಂದು ಹೇಳುತ್ತೇವೆ. ಇದು ನಿಜವೂ ಹೌದು ಆದರೆ ಇವೆರಡರ ಜೊತೆ ಜೊತೆಗೆ ಬದುಕಿನ ಒಂದೊಂದು ಕ್ಷಣವೂ ಅತ್ಯಂತ ಅಮೂಲ್ಯವಾದುದ್ದು ಎನ್ನುವುದನ್ನು ನಾವೆಲ್ಲರೂ ಮರೆತೇ ಬಿಟ್ಟಿದ್ದೇವೆ. ಸಮಯವನ್ನು ಯಾರು ಅತ್ಯಂತ ಪರಿಪೂರ್ಣವಾಗಿ ಬಳಸಿಕೊಳ್ಳುತ್ತಾ ಸಾಗುತ್ತಾರೋ ಅವರು ನಿರಂತರವಾಗಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರುತ್ತಾ ಸಾಗುತ್ತಾರೆ. ಕೆಲವರು ದಿನವಿಡೀ ಸಮಯವನ್ನು ವ್ಯರ್ಥವಾಗಿ ಕಳೆಯುವುದರಲ್ಲೇ ವ್ಯಸ್ತರಾಗಿರುತ್ತಾರೆ. ಈ ಕ್ಷಣವನ್ನು ನಂತರ ಉಪಯೋಗಿಸಿಕೊಳ್ಳೋಣ ಎಂದು ಸಮಯವನ್ನು ಜೋಪಾನ […]Read More
ಓ ನನ್ನ ಬಾಲ್ಯದಾ ಗೆಳತೀ.. ಬಾಳ ಮುಸ್ಸಂಜೆಯಲಿಮನವು ಮಾಗಿರುವಾಗ,ಹೀಗೇಕೆ ಅಳುತಿರುವೆನನ್ನ ಅಂತರಂಗ ಸಖಿ! ಬದುಕಿನಲಿ ಬಂದಿದ್ದಕಷ್ಟ-ಸುಖಗಳನೆಲ್ಲಾನಾವು ಕಂಡುಂಡಾಗಿದೆಇನ್ನೇಕಳುವೆ ನೀ ಸಖಿ! ನಿನ್ನವರೇ ನಿನ್ನನರಿಯದೆತೊರೆದರೆಂದು ಈಅಶ್ರುಗಳ ಹರಿಸುತಿಹೆಯಾಓ ನನ್ನ ಜೀವಸಖಿ! ನೊಂದ ಮನದ ಭಾವನೊಂದು ಬೆಂದಿಹಮನವಷ್ಟೇ ಅರಿವುದುಕಣ್ಣೀರಿಡದಿರು ಸಖಿ! ನನಗೆ ನೀನು, ನಿನಗೆನಾನೆಂಬ ಭಾವದಿಬಾಳೋಣ ನೋಯದಿರುನನ್ನ ಬಾಲ್ಯದಾ ಗೆಳತಿ!! ಶ್ರೀವಲ್ಲಿ ಮಂಜುನಾಥRead More
ಒಂದು ಆನೆಯ ಕಥೆ ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನ ಸೇನೆಯಲ್ಲಿ ಸಾವಿರಾರು ಆನೆಗಳಿದ್ದವು. ಆದರಲ್ಲಿ ಒಂದು ಆನೆ ಮಾತ್ರ ರಾಜನಿಗೆ ಬಲು ಪ್ರಿಯ. ರಾಜನಿಗೆ ಏಕೆ ರಾಜ್ಯದ ಎಲ್ಲಾ ಜನರು ಅದನ್ನು ಇಷ್ಟಪಡುತ್ತಿದ್ದರು. ಅದರ ನಡೆ, ಗಾಂಭೀರ್ಯ, ಯುದ್ದ ಕೌಶಲ್ಯ, ವಿಧೇಯತೆ, ಶಕ್ತಿಗೆ ಹೆಸರಾಗಿತ್ತು. ಯುದ್ಧದಲ್ಲಿ ಅಪ್ರತಿಮವಾಗಿ ಹೋರಾಡುತ್ತಿತ್ತು. ಹಲವಾರು ಯುದ್ಧಗಳಿಗೆ ಈ ಆನೆಯನ್ನು ಕಳಿಸಿತ್ತು. ಎಲ್ಲಾ ಯುದ್ಧಗಳಲ್ಲೂ ಈ ಆನೆ ಜಯಶಾಲಿಯಾಗೆಯೇ ಹಿಂದಿರುಗುತ್ತಿತ್ತು. ಸೋಲು ಎಂಬ ಮಾತೆ ಇರಲಿಲ್ಲ. ಎಲ್ಲರೂ ಹೆಚ್ಚಾಗಿ ಇಷ್ಟಪಡುತ್ತಿದ್ದ ಆನೆಯಾಗಿತ್ತು. […]Read More