ಸಕಾರಾತ್ಮಕ – ಧನಾತ್ಮಕ

ಸಕಾರಾತ್ಮಕ – ಧನಾತ್ಮಕ ಶಿಖರಪುರ ಪಟ್ಟಣದಲ್ಲಿ ಜೋನಾರ್ಸ್ ಎಂಬ ಹೆಸರಿನ ಹೆಸರಾಂತ ಪಾದರಕ್ಷೆತಯಾರಿಸುವ ಕಂಪನಿಯು ಬಹಳ ವರ್ಷಗಳ ಕಾಲದಿಂದ ಮಹಿಳೆಯರು ಪುರುಷರು ಮತ್ತು ಮಕ್ಕಳ ಪಾದರಕ್ಷೆಗಳನ್ನು ತಯಾರಿಸುತ್ತಿತ್ತು. ತನ್ನ ಅತ್ಯಾಕರ್ಷಕ ವಿನ್ಯಾಸದ ಪಾದರಕ್ಷೆಗಳು ಮತ್ತು ಶೂಗಳ ಕಾರಣದಿಂದಾಗಿ ಅದು ಪ್ರಪಂಚದಾದ್ಯಂತ ತನ್ನದೇ ಆದ ಮಾರುಕಟ್ಟೆ ಜಾಲವನ್ನು ಹೊಂದಿತ್ತು. ಹಾಗಾಗಿ ಜೋನಾರ್ಸ್ ಸಂಸ್ಥೆಯ ಮಾಲೀಕನಾದ ದೇವೇಂದ್ರನಿಗೆ ತನ್ನ ಕಂಪನಿಯು ತಯಾರಿಸಿದ ಪಾದರಕ್ಷೆಗಳನ್ನು ಮಾರಾಟ ಮಾಡಲು ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ತನ್ನ ಕಂಪನಿಯು ವಾರ್ಷಿಕವಾಗಿ ತಯಾರಿಸುವ ಒಟ್ಟು ಪಾದರಕ್ಷೆಗಳ ಸಂಖ್ಯೆಗಿಂತ […]Read More

ಏಳು ಸುತ್ತಿನ ಮಲ್ಲಿಗೆ

ಏಳು ಸುತ್ತಿನ ಮಲ್ಲಿಗೆ ತಾರಸಿಯ ತೋಟದಲಿ ಬೆಳೆದ ಬಳ್ಳಿಯದುಸದಾ ಹಸಿರನ್ನು ಹೊದ್ದು ಮೆರೆಯುತಿಹುದುಆಗಸದ ನೀಲಾಂಬರದಿ ಮೋಡ ಮುಸುಕಿದಂತೆಆಗೀಗ ಈ ಬಳ್ಳಿಯಲಿ ಮಲ್ಲಿಗೆ ಅರಳುತಿಹುದು ಇರುವಂತಿಗೆಯು ಏಕಾಂಗಿಯಾಗಿ ಬೆಳೆವುದುಮೂರು ಸುಮಗಳ ಗುಚ್ಛವಾಗಿ ಬರುವುದುದಿನವಿಡೀ ಅರಳಿಸುವ ಘಮಲಿನ ಮಲ್ಲಿಗೆಮೊಂಡು ಎಲೆಗಳ ನಡುವೆ ಚೂಪಾಗಿಹುದು ದಿಂಡಿನಾಕಾರದಲ್ಲಿ ಮಾಲೆಯ ರೂಪದಲ್ಲಿಕಟ್ಟಿಹ ಮಲ್ಲಿಗೆ ರಾಶಿಯ ಪರಿಮಳ ಸೊಗಸುಇದರ ಸುಗಂಧಕ್ಕುಂಟು ಔಷಧೀಯ ಗುಣವುಏಳು ಸುತ್ತಿನ ಮಲ್ಲಿಗೆ ನಿನ್ನ ನೋಟ ಚೆಂದವು. ಸಿ.ಎನ್. ಮಹೇಶ್Read More

ನೀ ದೂರ ಹೋದಾಗ – ಫೌಝಿಯಾ ಸಲೀಂ

ನೀ ದೂರ ಹೋದಾಗ – ಫೌಝಿಯಾ ಸಲೀಂ ಪುಸ್ತಕ : ನೀ ದೂರ ಹೋದಾಗಲೇಖಕರು : ಫೌಝಿಯಾ ಸಲೀಂಬೆಲೆ : 220/- ರೂ.ಪ್ರಕಾಶಕರು : ವೀರಲೋಕ ಬುಕ್ಸ್ ಲೇಖಕರ ಪರಿಚಯ : ಮಂಗಳೂರಿನವರಾದ ಫೌಝಿಯಾ ಸಲೀಂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಳಿಸಿದ್ದಾರೆ. ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿ ಮಂಗಳೂರಿನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ದುಬೈನಲ್ಲಿ ವಾಸಿಸುತ್ತಿದ್ದು, ದುಬೈಯಲ್ಲಿರುವ ಕಂಪನಿಯೊಂದರ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನಸ್ಸಾರೆ, ನಿನ್ನನ್ನೇ ಪ್ರೀತಿಸುವೆ ಎಂಬ ಕಿರು ಕಾದಂಬರಿಗಳು, ಬಾಳ ಪಯಣ ಹಾಗು […]Read More

ಧರೆಯ ಸಿರಿಬೆಳಗು

ಧರೆಯ ಸಿರಿಬೆಳಗು ದಿನಕರನಿತ್ತ ಹೊಂಗಿರಣದಿಧರೆಗಿಂದು ದಿವ್ಯಬೆಳಗು!ದಿನದಿನವೂ ಅವ ಆಗಮಿಸಿರಲುಅನುಕ್ಷಣವೂ ಅರಿಯದ ಸಿರಿಸೊಬಗು!! ವಸುಧೆಯ ಹಸಿರ ಬನನಗುತಲಿದೆ ಕಿರಣದಾಲಿಂಗನದಿ!ಲೋಕದ ಜಡವದು ನೀಗಿಸಡಗರವು ತುಂಬಿದೆ ಮನದಿ!! ಕಾರ್ಗತ್ತಲ ಇರುಳು ಕಳೆದುನವಬೆಳಗು ಮೂಡಿದೆ ಧರೆಗಿಂದು!ಬಾಡಿದ ಮರ ನಳನಳಿಪುದು..ಕೊರಡಲಿ ಹಸಿರು ಚಿಗುರಿದಂದು!! ಹೊಸಭಾವದಿ ಹೊಸಹಾದಿಯಲಿಬದುಕು ಸಾಗಿರಲು ಸಂಭ್ರಮದಿ!ದಿನಪನಾಗಮನ ನೀಡಿದೆಬಾಳಿಗೆ ಬೆಳಗನು ಆನಂದದಿ!! ಸುಮನಾ ರಮಾನಂದRead More

ಬಂಗಾರದ ಹನಿಗಳು – ಕಂಸ

ಬಂಗಾರದ ಹನಿಗಳು – ಕಂಸ – ಕವನ ಸಂಕಲನ ಕವನ ಸಂಕಲನಲೇಖಕರು: ಕಂಚುಗಾರನಹಳ್ಳಿ ಸತೀಶ್ (ಕಂಸ)ಪ್ರಕಾಶಕರು: ಕಂಸ ಪ್ರಕಾಶನ ಲೇಖಕರ ಪರಿಚಯ ಕಂಚುಗಾರನಹಳ್ಳಿ ಸತೀಶ್ ಕವನಗಳು, ಚುಟುಕುಗಳು, ಕಥೆಗಳು, ಆಧುನಿಕ ವಚನಗಳು, ಶಿಶು ಗೀತೆಗಳು, ನ್ಯಾನೋ ಕಥೆಗಳು, ಹಾಯ್ಕುಗಳು, ಗಝಲ್ ಗಳು, ಟಂಕಾಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಂಚುಗಾರನಹಳ್ಳಿ ಇವರು ಹುಟ್ಟಿದ ಊರು. ಇವರ ಪ್ರಕಟಿತ ಕೃತಿಗಳು ಸ್ಯಾನಿಟರಿ ಪ್ಯಾಡ್, ಮತ್ತು ಬಂಗಾರದ ಹನಿಗಳು. ಕವಿತೆ ಎನ್ನುವುದು ಅಂತರಂಗದ ಪಿಸುಮಾತು.ನಾ ಮುಂದು ತಾ […]Read More

ರಘೋತ್ತಮ ತೀರ್ಥರು

ರಘೋತ್ತಮ ತೀರ್ಥರು ನಾರಾಯಣನ ಅವತಾರ ರೂಪಗಳೆಲ್ಲವೂ ದ್ವೈತ ಮತದ ಅನುನಾಯಿಗಳಿಗೆ ಮೋಕ್ಷ ಕೊಡುವ ರೂಪಗಳಾಗಿವೆ. ಸಾಮಾನ್ಯರನ್ನು ಪರಮಾತ್ಮನೆಡೆಗೆ ಕರೆದೊಯ್ಯುವ ಸಾಧನ, ಮಾಧ್ವ ಪರಂಪರೆಯಲ್ಲಿ ಬರುವ ಮಠಗಳು ಹಾಗೂ ಪೀಠಾಧಿಪತಿಗಳು, ನರಹರಿ ತೀರ್ಥರಿಂದ ಹಿಡಿದು ಶ್ರೀ ವಿಶ್ವೇಶತೀರ್ಥ ಶ್ರೀಪಾದರವರೆಗೆ ಅನೇಕ ಮಾಧ್ವ ಮಹಿಮಾನ್ವಿತ ಯತಿವರೇಣ್ಯರು ಪಾಮರರನ್ನು ಮೋಕ್ಷದೆಡೆಗೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ಅಂಥಹವರಲ್ಲಿ ಶ್ರೀಮಧ್ವಾಚಾರ್ಯರು, ಶ್ರೀರಾಘವೇಂದ್ರತೀರ್ಥರು, ಶ್ರೀಸತ್ಯಭೋದ ತೀರ್ಥರು, ಶ್ರೀವಾದಿರಾಜರು, ಶ್ರೀ ಸತ್ಯಪ್ರಮೋದ ತೀರ್ಥರು ಮುಂತಾದವರಿದ್ದಾರೆ. ಇಂಥಹ ಮಹಾಮಹಿಮರ ಸಾಲಿನಲ್ಲಿ ನಿಲ್ಲುವವರು ಸರ್ವ ಮಾಧ್ವರಿಂದ ಪೂಜೆಗೊಳ್ಳುವವರು ಆದ ಮತ್ತೊಬ್ಬರೆಂದರೆ […]Read More

ಒಲವೆಂಬ ಹಣತೆಯ ಮೆರುಗು

ಒಲವೆಂಬ ಹಣತೆಯ ಮೆರುಗು ಬದುಕೆಂಬ ಮನೆಯಂಗಳದಿಬೆಳಗಲಿ ಒಲವಿನ ಹಣತೆ!ಆಡುವ ಪ್ರತಿಮಾತುನಂತರಾಳದಿ..ಎಣಿಸದಿರಲು ಕುಂದುಕೊರತೆ!! ದಿನದಿನವೂ ಶುಭ್ರ ದಿಗಂತದಿಬೆಳಗುವಂತೆ ದಿನಪನ ಹಣತೆ!ಮನಗಳಿರಲು ಸವಿಭಾವದಿ…ಕಾಣುವುದು ಬಾಳಲಿ ಧನ್ಯತೆ!! ಸಂಕಟಗಳ ಅಂಧಕಾರ ನೀಗಿಸಲುಬೆಳಗುತಿರಲಿ ಸಂತಸದ ಹಣತೆ!ಇರಲು ಈ ಭಾವ ಪ್ರತಿಮನದಲು…ಬದುಕಲಿರದು ಜಡತೆಯ ನಡತೆ!! ಬದುಕಿನ ಸಾಗರದಿ ತೇಲಾಡುತಿರಲಿನಗುವೆಂಬ ದೋಣಿಯ ಹಣತೆ!ಕಾಡುವ ನೋವಿನಲೆಗಳಲದು ಓಲಾಡದೆ…ನೆಮ್ಮದಿಯ ದಡ ಮುಟ್ಟಲು ಸಾರ್ಥಕತೆ!! ಸುಮನಾ ರಮಾನಂದRead More

ತಾಯ್ತನ

ತಾಯ್ತನ ಎತ್ತರೆತ್ತರದ ಮರಗಳನರಸಿಚಿಗುರೆಲೆಗಳ ಹುಡುಕಿ ಉಂಡುಖನಿಜಾಂಶಗಳ ಬೆದಕಿ ತಿಂದುಮಂದಗಮನೆಯಂತೆ ನಿಂತಿರುವೆ ನೀಳ್ಗತ್ತನು ನೀಟಿ ದೂರದ ನೋಟ ನೋಡಿಅರಿಯ ಅರಿವನು ಅರಿತು ಬೆದರಿ ನೋಡಿಭೀತಿಯ ನೋಟವನು ಬೀರುತ ಓಡಿವಿಶಾಲ ಬಯಲನು ತಲುಪಿ ನಿಂತಿಹುದು ಮಾನವನೆತ್ತರಕ್ಕೆ ಬೆಳೆದ ಕಂದನು ಜೊತೆಗಿರಲುಹಸಿವಿನಿಂದ ಅವ ನನ್ನ ಸುತ್ತ ಸುತ್ತುತ್ತಿರಲುಜಗವ ಮರೆತು ನಾ ಅವಗೆ ಹಾಲೂಡಿಸಲುತಾಯ್ತನವು ಸಾರ್ಥಕವೆಂದು ಮನೆವೆನುತಿಹುದು. ಸಿ.ಎನ್. ಮಹೇಶ್Read More

ಕಠಿಣ ಪರಿಶ್ರಮದ ಕೆಲಸಕ್ಕಿದೆ ಕಿಮ್ಮತ್ತು

ಕಠಿಣ ಪರಿಶ್ರಮದ ಕೆಲಸಕ್ಕಿದೆ ಕಿಮ್ಮತ್ತು ದೇಶವು ಜಾಗತಿಕವಾಗಿ ಅಭಿವೃದ್ಧಿಯೆಡೆಗೆ ಸಾಗುತ್ತಿದ್ದಂತೆ ಮನುಷ್ಯನ ಆಯಸ್ಸು ಪ್ರತಿದಿನವೂ ಕಡಿಮೆಯಾಗುತ್ತಾ ಹೋಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಸಮರ್ಪಕ ಜೀವನಶೈಲಿ. ಸಾಮಾಜಿಕವಾಗಿ ಬೆಳೆದಂತೆ, ತಂತ್ರಜ್ಞಾನ ಕ್ಷೇತ್ರದಲ್ಲಿನ ಅಭಿವೃದ್ಧಿ ಮತ್ತು ದಿನ ದಿನವೂ ಬದಲಾಗುತ್ತಿರುವ ಹವಾಮಾನದ ಕಾರಣದಿಂದ ಮನುಷ್ಯನ ಆರೋಗ್ಯ ಮತ್ತು ಜೀವಿತಾವಧಿಯು ಕಡಿಮೆಯಾಗುತ್ತಿದೆ. ಹಿಂದೆ 40-50 ವರ್ಷ ದಾಟಿದವರು ತಮ್ಮ ಪೋಷಕರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಿದ್ದರೆ, ಇಂದು ಅದೇ ವಯಸ್ಸಿನ ಹೆತ್ತವರು ತಮ್ಮ ಮಕ್ಕಳನ್ನು ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಬರುವಂತಹ […]Read More

ದೇವರು ಅರೆಸ್ಟ್ ಆದ – ಶಿವಕುಮಾರ್ ಮಾವಲಿ

ದೇವರು ಅರೆಸ್ಟ್ ಆದ – ಕಥಾ ಸಂಕಲನ ಪುಸ್ತಕ: ದೇವರು ಅರೆಸ್ಟ್ ಆದಲೇಖಕರು : ಶಿವಕುಮಾರ್ ಮಾವಲಿಮುದ್ರಣ : ಮಾವಲಿ ಪಬ್ಲಿಕೇಷನ್ಸ್ ಲೇಖಕರ ಪರಿಚಯ ಬರಹಗಾರರಾದ ಶಿವಕುಮಾರ್ ಮಾವಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿ ಯವರು. ಸಾಹಿತ್ಯಕ್ಷೇತ್ರದ ಮಜಲುಗಳಾದ ಕಥೆ, ಕವಿತೆ, ನಾಟಕ ಗಳ ರಚನೆಯ ಮೂಲಕ ಪ್ರತಿಭಾವಂತ ಬರಹಗಾರರೆನಿಸಿಕೊಂಡಿದ್ದಾರೆ. ಸುಪಾರಿ ಕೊಲೆ (ನಾಟಕ), ಪ್ರೇಮಪತ್ರದ ಆಫೀಸು ಮತ್ತು ಅವಳು, ದೇವರು ಅರೆಸ್ಟ್ ಆದ, ಟೈಪಿಸ್ಟ್ ತಿರಸ್ಕರಿಸಿದ ಕಥೆ (ಕಥಾ ಸಂಕಲನಗಳು), ನೋ ಮೋರ್ ಇಂಗ್ಲಿಷ್, […]Read More