ಸಂಪ್ರದಾಯ ಆಚರಣೆ ಮತ್ತು ಮಹತ್ವ ಭಾರತವು ವಿವಿಧ ರಾಜ್ಯಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಹೊಂದಿದೆ. ಭಾರತೀಯ ಮೂಲದ ಧರ್ಮಗಳಾದ ಹಿಂದೂ ಧರ್ಮ, ಜೈನ ಮತ್ತು ಬೌದ್ಧ ಧರ್ಮಗಳೆಲ್ಲವೂ ಧರ್ಮ ಮತ್ತು ಕರ್ಮವನ್ನು ಆಧರಿಸಿವೆ. ಸಂಪ್ರದಾಯ ಎಂದರೆ ಆಚರಣೆ, ದೃಷ್ಟಿಕೋನಗಳು ಮತ್ತು ಧೋರಣೆಗಳ ಒಂದು ವ್ಯಾಪ್ತಿ. ಇಲ್ಲಿನ ಧರ್ಮ ಮತ್ತು ಸಂಪುದಾಯಗಳು ಬಹಳ ಆಳವಾದ ಬೇರುಗಳನ್ನು ಹೊಂದಿರುವ ನೆಲವಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಈ ಸಂಪ್ರದಾಯಗಳು ಮತ್ತು ಆಚರಣೆಗಳು ಪ್ರಾಚೀನ ಕಾಲದಿಂದ ಬಂದು ಆಧುನಿಕ […]Read More
ನಾಗಾರಾಧನೆಯ ನಾಗರ ಪಂಚಮಿ ನಾಗರ ಪಂಚಮಿ ಹಬ್ಬವನ್ನು ಕರ್ನಾಟಕ ರಾಜ್ಯದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನವನ್ನು (ಪಂಚಮಿ) ನಾಗರ ಪಂಚಮಿಯಾಗಿ ಆಚರಿಸಲಾಗುತ್ತದೆ. ಈ ದಿನ ನಾಗನಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿ ಆಗುವಂತೆ ನಾಗದೇವನನ್ನು ಬೇಡುವುದು ವಾಡಿಕೆ. ಈ ದಿನ ಶೇಷ ನಾಗ (ಆದಿಶೇಷ) ಮತ್ತು ಶ್ರೀ ವಿಷ್ಣುವನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದಿನ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸೆಂದು […]Read More
ಖಿನ್ನತೆಯೇತಕೆ ಕಾಡುವೆ… ಇತ್ತೀಚಿನ ದಿನಗಳಲ್ಲಿ ಜನರನ್ನು ಅತಿ ಹೆಚ್ಚು ಕಾಡುತ್ತಿರುವ ಸಮಸ್ಯೆಯೆಂದರೆ ಮಾನಸಿಕ ಖಿನ್ನತೆ. ಅದರಲ್ಲೂ ಈ ಸಮಸ್ಯೆಗೆ ಬೇಗ ಒಳಗಾಗುವವರು ಸ್ತ್ರೀಯರೇ ಹೆಚ್ಚು.ಈ ಮಾನಸಿಕ ಖಿನ್ನತೆ ಯಾಕಾಗಿ ಬರುತ್ತದೆ ? ಆಧುನಿಕ ಜೀವನ ಶೈಲಿ, ಒತ್ತಡ, ನಮಗಾಗಿ ನಾವು ಕೊಡಲಾಗದ ಒಂದಷ್ಟು ಸಮಯ, ಸೂಕ್ಷ್ಮ ಮನಃಸ್ಥಿತಿ, ಅತಿಯಾದ ನಿರೀಕ್ಷೆ, ಕ್ಷಣಿಕ ವಿಷಯ ಸುಖಗಳ ಹಂಬಲ, ಈ ಎಲ್ಲವೂ ಮಾನಸಿಕ ಖಿನ್ನತೆಗೆ ಕಾರಣವಾಗುತ್ತಿವೆ. ವಿಶೇಷವಾಗಿ ಸ್ತ್ರೀಯರಿಗಾದರೆ ಕಾಡುವ ತಿಂಗಳ ಸಮಸ್ಯೆಯಿಂದ ಹಾರ್ಮೋನ್ ಗಳ ವ್ಯತ್ಯಾಸ, ಜೊತೆಗೆ ಜವಾಬ್ದಾರಿಗಳ […]Read More
ಹೊಸ ಭಾವಲಾಸ್ಯ ತಾಳ ತಪ್ಪದ ಮೌನರಾಗಕೆಮನವು ಮೂಕಭಾವ ತಳೆದಿದೆ!ಕುಳಿರ್ಗಾಳಿಯ ದಾಳಿಯಲೂ…ಚಿಗುರಿದೆಲೆಗಳು ನಗುತಿವೆ!! ಬತ್ತಿದೆದೆಯಲಿ ಹೊಸ ಕನಸುಗರಿಗೆದರಿ ಚೈತನ್ಯವು ಮೂಡಿದೆ!ರೆಂಬೆಕೊಂಬೆಗಳಲಿ ನಂಬಿಕೆಯುಕ್ಕಿಸಿ..ಹಚ್ಚಹಸಿರು ತಾ ನಲಿದಿದೆ!! ದಿಕ್ಕು ತಪ್ಪಿಸುವ ಕತ್ತಲೆಯಲಿನಂದದ ಬೆಳಕು ಉಳಿಯಲಿ!ಅವನೆಣಿಸಿದಾಗ ಪಯಣ ನಿಲುವುದು..ಜಡ ಬದುಕಿನ ನಿಲ್ದಾಣದಲಿ!! ವಿಸ್ತರಿಸಿದ ಅಂಬರದ ಕ್ಷಿತಿಜದೊಳುಮುಚ್ಚಿದ ಕಂಗಳಲಿ ಅಡಗಿದೆ ಬೆಳಕು!ಸತ್ಯದ ನಿಲುವಿಗೆ ನಿಜದೊಳು..ಮನತೆರೆದು ನೋಡಲು ನಲ್ಮೆಯ ಬದುಕು!! ಸುಮನಾ ರಮಾನಂದ,ಕೊಯಮತ್ತೂರುRead More
ಸಲೋನಿ ಶಾಲೆಯಲ್ಲಿ ಬೆಳ್ಳಿ ಹಬ್ಬದ ಸಂಭ್ರಮ ಬೇಗೂರು ವಿಶ್ವಪ್ರಿಯ ಬಡಾವಣೆಯಲ್ಲಿ ಸಲೋನಿ ಶಾಲೆಯು 25 ವರ್ಷ ಪೂರೈಸಿ ತನ್ನ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವುದು ಸಂತಸದ ವಿಷಯ. ಈ ಸಂದರ್ಭದಲ್ಲಿ ದಿನಾಂಕ: 26-07-2025 ರಂದು ಶನಿವಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಖ್ಯಾತ ಕಲಾವಿದ ಗಣಪತಿ ಎಸ್. ಹೆಗಡೆ ಗೀತ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಣಪತಿ ಹೆಗಡೆಯವರು ಮಾತನಾಡಿ ಮಕ್ಕಳಿಗೆ ಶಿಕ್ಷಣದಲ್ಲಿ ಕಲೆಯ ಮಹತ್ವವನ್ನು ತಿಳಿಸಿದರು. ಗೀತ ಚಿತ್ರಕ್ಕೆ ಹಾಡಿನ ಮೂಲಕ ಅನೂಪ ಹೆಗಡೆ ಸಾಥ್ ನೀಡಿದರು. ನೂರಾರು […]Read More
ನನ್ನ ಅಪ್ಪ – ಕೆ ಎಸ್ ನ ಕೃತಿ : ನನ್ನ ಅಪ್ಪ – ಕೆ ಎಸ್ ನಲೇಖಕರು:ಕೆ ಎನ್ ಮಹಾಬಲಪ್ರಕಾಶಕರು:ಬಹುರೂಪಿಬೆಲೆ: 200/- ಕವಿಯ ಮನ ತಿಳಿಯಲು ಆತ್ಮಚರಿತ್ರೆಯನ್ನೋ ಅಥವಾ ಕುರಿತಾದ ಕೃತಿಗಳನ್ನೋ ಓದಬೇಕು. ಆದರೂ ಸಂಪೂರ್ಣವಾದ ವಿವರಗಳನ್ನು ತಿಳಿಯಬೇಕೆಂದರೆ ಕವಿಯ ಅತ್ಯಂತ ಹತ್ತಿರದವರು ಅದನ್ನು ಬರೆದಿರಬೇಕು. ಪ್ರಸ್ತುತ ಪುಸ್ತಕ “ನನ್ನ ಅಪ್ಪ -ಕೆ ಎಸ್ ನ” ಅಂತಹ ಪುಸ್ತಕಗಳಲ್ಲಿ ಒಂದು. ಮೈಸೂರು ಮಲ್ಲಿಗೆಯ ಕವಿ ಕೆ ಎಸ್ ನರಸಿಂಹಸ್ವಾಮಿಯವರ ಬಗ್ಗೆ ಗೊತ್ತಿಲ್ಲದ ಕನ್ನಡಿಗರು ಕಡಿಮೆ ಎಂದೇ […]Read More
ಮಾರ್ಕೋಲು ಹಾಗು ನೂತನ ಜಗದಾ ಬಾಗಿಲು ಕೃತಿಗಳ ಲೋಕಾರ್ಪಣೆ 20 ಜುಲೈ ಭಾನುವಾರದಂದು ‘ಉಪಾಸನ ಬುಕ್ಸ್’ ಪ್ರಕಾಶನ ಸಂಸ್ಥೆಯ ವತಿಯಿಂದ ನನ್ನ ರಚನೆಯ ‘ಮಾರ್ಕೋಲು’ ಕಾದಂಬರಿ ಹಾಗೂ ನನ್ನ ಸಂಪಾದನೆಯ, 58 ಕಥೆಗಾರರ ಕಥೆಗಳನ್ನು ಒಳಗೊಂಡ ‘ನೂತನ ಜಗದಾ ಬಾಗಿಲು’ ಕಥಾ ಸಂಕಲನವು ಬೆಂಗಳೂರಿನ ಮಲ್ಲೇಶ್ವರದ ‘ಗಾಂಧಿ ಸಾಹಿತ್ಯ ಸಂಘ’ದಲ್ಲಿ ಲೋಕಾರ್ಪಣೆಗೊಂಡಿತು. ಹಿರಿಯ ನಟರೂ ಲೇಖಕರೂ ಆದ ಶ್ರೀ ಶ್ರೀನಿವಾಸ ಪ್ರಭು ಅವರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ, ಶ್ರೀ ಲಿಂಗರಾಜ ಸೊಟ್ಟಪ್ಪನವರು ‘ಮಾರ್ಕೋಲು’ ಕಾದಂಬರಿಯನ್ನು ಪರಿಚಯಿಸಿದರೆ, […]Read More
ಭಾರತದ ನಯಾಗರ ಗೋಕಾಕ್ ಫಾಲ್ಸ್ ಕರ್ನಾಟಕದ ಎರಡನೇ ಅತೀ ದೊಡ್ಡ ಜಲಪಾತವೆಂದು ಗೋಕಾಕ್ ಜಲಪಾತವನ್ನು ಕರೆಯಲಾಗುತ್ತದೆ. ಇದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಈ ಜಲಪಾತವು ಘಟಪ್ರಭ ನದಿಯಿಂದ ಉಂಟಾಗುತ್ತದೆ. ಇದು ಕೆನಡಾ ಮತ್ತು ಅಮೇರಿಕ ದೇಶದ ನಡುವೆ ಇರುವ ನಯಾಗರ ಜಲಪಾತದಂತೆ ಕಾಣಿಸುವುದರಿಂದ ಇದನ್ನು ಭಾರತದ ನಯಾಗರವೆಂದು ಕರೆಯುತ್ತಾರೆ. ಸುಮಾರು 180 ಅಡಿ ಎತ್ತರದಿಂದ ಧುಮುಕುವ ನೀರು ಇಲ್ಲಿ ರಮಣೀಯವಾಗಿ ಕಾಣುತ್ತದೆ. ಮಳೆಗಾಲದ ಜೂನ್ ತಿಂಗಳಿನಿಂದ ಡಿಸೆಂಬರ್ ಅಂತ್ಯದವರೆಗೂ ಈ […]Read More
ಚಂದಿರನ ಹೊಂಬೆಳಕು ಬಂದಿಹನು ಚಂದಿರ ಚೆಂದದಿಆ ಕತ್ತಲ ಇರುಳಿನಲಿ !ತಂದಿಹನು ನಗುವನು ಸೊಗದಿ..ತನ್ನ ದಿವ್ಯ ಬೆಳದಿಂಗಳಲಿ!! ತನ್ನೊಳು ಕರಗದ ಕಲೆಯಿದ್ದರೂನೀಡುವಾ ಬೆಳಕಿಗೆ ರಾಜಿಯಿಲ್ಲ!ರಜನಿಯ ಆ ನೀರವತೆಯಲಿ..ಇಳೆಗೆ ಸುಂದರ ಬೆಳಕಾಯಿತಲ್ಲ !! ಕೌಸಲ್ಯ ರಾಮನಿಗೆ ತೋರಿದಮುದ್ದು ಚಂದಿರನಿವನು!ಗಣಪನ ಹೊಟ್ಟೆಯ ಕಂಡು ನಕ್ಕುಶಾಪಕೊಳಗಾದ ಶಶಾಂಕನಿವನು!! ದಿನದ ತಾಪವನು ನೀಗಿದಿನಕರ ತಂಪನು ತಂದಿಹನು!ಕೊಡುವ ಮನಸ್ಸಿರದ ಸ್ವಾರ್ಥಜನರ ನೋಡುತಾ ನಗುತಿಹನು!! ಸುಮನಾ ರಮಾನಂದRead More